For Quick Alerts
ALLOW NOTIFICATIONS  
For Daily Alerts

ಕೋವಿಡ್ 3ನೇ ಅಲೆ ಹಾಗೂ ಲಸಿಕೆ ಬಗ್ಗೆ ಪ್ರಸಿದ್ಧ ವೈರಾಲಾಜಿಸ್ಟ್ ವಿ ರವಿ ಏನು ಹೇಳಿದ್ದಾರೆ ನೋಡಿ

|

ದೇಶದ ಪ್ರಸಿದ್ಧ ವೈರಾಲಾಜಿಸ್ಟ್‌ ಆಗಿರುವ ಬೆಂಗಳೂರಿನ ನಿಮ್ಯಾನ್ಸ್‌ನಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಡಾ. ವಿ. ರವಿ ಅವರು ಮೂರನೇ ಅಲೆ, ಲಸಿಕೆ ಇವುಗಳ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ.

Famous Virologist Dr V. Ravi

ಇವರು ಭಾರತದಲ್ಲಿ ಮೊದಲನೇ ಅಲೆ ಬಂದಾಗ ಎರಡನೇ ಅಲೆ ಫ್ರೆಬ್ರವರಿ-ಮಾರ್ಚ್‌ ಸಮಯದಲ್ಲಿ ಬರಲಿದೆ, ಇದು ಮೂರು ತಿಂಗಳವರೆಗೆ ಇರಲಿದೆ ಎಂದು ಹೇಳಿದ್ದರು. ಆದರೆ ತಜ್ಷರು ಎಚ್ಚರಿಸಿದ್ದರೂ ಜನರಾಗಲಿ, ಸರ್ಕಾರವಾಗಲಿ ಎಚ್ಚೆತ್ತುಕೊಂಡಿರಲಿಲ್ಲ, ಅದರ ಪರಿಣಾಮ 2ನೇ ಅಲೆಯಲ್ಲಿ ತೀವ್ರ ಸ್ವರೂಪವನ್ನು ಎದುರಿಸಬೇಕಾಯಿತು.

ಇವರು 3ನೇ ಅಲೆಯಿಂದ ಪಾರಾಗಲು ಏನು ಮಾಡಬೇಕು, ಮಾಸ್ಕ್ ಧರಿಸುವುದು ಏಕೆ ಅವಶ್ಯಕ ಮುಂತಾದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ನೋಡಿ:

 ಕೊರೊನಾ 3ನೇ ಅಲೆ ಡಾ. ವಿ. ರವಿ ವರ ಅನಿಸಿಕೆ ಏನು?

ಕೊರೊನಾ 3ನೇ ಅಲೆ ಡಾ. ವಿ. ರವಿ ವರ ಅನಿಸಿಕೆ ಏನು?

ಕೊರೊನಾ 3ನೇ ಅಲೆ ಬರಲಿದೆ. ಇತಿಹಾಸವನ್ನು ನೋಡಿದಾಗ ಯಾವುದೇ ಫ್ಲೂ ಆಗಿರಲಿ ಅದು ಮೂರು ಅಲೆಗಳಾಗಿ ಬಂದಿರುವುದನ್ನು ಕಾಣಬಹುದು. ಭಾರತದಲ್ಲಿ ಒಂದನೇ ಅಲೆ ಇರುವಾಗಇಟಲಿ, ಜರ್ಮನಿ, ನೆದರ್‌ಲ್ಯಾಂಡ್, ಯುಕೆ, ಸ್ವೀಡನ್, ಸ್ಪೇನ್‌ನಲ್ಲಿ ಹೀಗೆ ಅನೇಕ ದೇಶಗಳಲ್ಲಿ 3ನೇ ಅಲೆ ಬಂದಿದೆ, ಅಮೆರಿಕದಲ್ಲಿ 3ನೇ ಅಲೆ ಮುಗಿದು ಇದೀಗ ಅಲ್ಪ ಪ್ರಮಾಣದಲ್ಲಿ 4ನೇ ಅಲೆ ಕಾಣಬಹುದು, ಆದ್ದರಿಂದ ಮೂರನೇ ಅಲೆ ಬರಲ್ಲ ಅಂತ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಸಿದ್ದಾರೆ.

ಮೂರನೇ ಅಲೆಯಲ್ಲಿ ಈಗಾಗಲೇ ಸೊಂಕು ತಗುಲಿದವರಿಗೆ ಹಾಗೂ ಲಸಿಕೆ ಪಡೆದವರಿಗೆ ಸೋಂಕು ತಗುಲುವುದಿಲ್ಲ, ಉಳಿದವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ 3ನೇ ಅಲೆಗೆ ಮುನ್ನ ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.

ಯಾರು ಮಾಸ್ಕ್ ಧರಿಸಿದರೆ ಎಷ್ಟು ಪರಿಣಾಮಕಾರಿ?

ಯಾರು ಮಾಸ್ಕ್ ಧರಿಸಿದರೆ ಎಷ್ಟು ಪರಿಣಾಮಕಾರಿ?

ಸೋಂಕು ಇರುವವರು ಹಾಗೂ ಬೇರೆಯವರು ಮಾಸ್ಕ್‌ ಹಾಕದಿದ್ದರೆ ರೋಗ ಹರಡುವ ಸಾಧ್ಯತೆ ಶೇ.90ರಷ್ಟು.

ಸೋಂಕು ಇರುವವರು ಮಾಸ್ಕ್ ಧರಿಸಿದೆ ಮತ್ತೊಬ್ಬರು ಸೋಂಕು ಧರಿಸಿದರೆ ಸೋಂಕು ಹರಡುವ ಸಾಧ್ಯತೆ ಶೇ. 30ರಷ್ಟು. ಸೋಂಕಿತರು, ಇತರರು ಮಸ್ಕ್‌ ಧರಿಸಿದರೆ ಸೋಂಕು ಹರಡುವ ಸಾಧ್ಯತೆ ಶೇ. 1ರಷ್ಟು.

ಆದ್ದರಿಂದ ಕೊರೊನಾದ ಅಲೆ ಸಂಪೂರ್ಣ ಕಡಿಮೆಯಾಗುವರೆಗೆ ಸೋಂಕಿತರು, ಇತರರು ಮಾಸ್ಕ್ ಧರಿಸುವುದು ಅವಶ್ಯಕವಾಗಿದೆ.

 ರೂಪಾಂತರವೈರಸ್‌ 3ನೇ ಅಲೆ ಮಕ್ಕಳಿಗೆ ಅಪಾಯಕಾರಿಯೇ?

ರೂಪಾಂತರವೈರಸ್‌ 3ನೇ ಅಲೆ ಮಕ್ಕಳಿಗೆ ಅಪಾಯಕಾರಿಯೇ?

3ನೇ ಅಲೆ ಮಕ್ಕಳಿಗೆ ಅಪಾಯಕಾರಿಯೇ? ಇದು ನನಗೆ ಗೊತ್ತಿಲ್ಲ, ಆದರೆ 3ನೇ ಅಲೆ ಸಮರ್ಥವಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಎಂದು ಎಚ್ಚರಿಸಿದ್ದಾರೆ.

ಕಳೆದ ಮಾರ್ಚ್‌ನಿಂದ ಈ ಮಾರ್ಚ್‌ವರೆಗಿನ ಅಂಕಿ ಅಂಶ ನೋಡಿದಾಗ ಇದುವರೆಗೆ ಸುಮಾರು 9000 ಮಕ್ಕಳಿಗೆ ಕೋವಿಡ್ 19 ತಗುಲಿದೆ. ಭಾರತದಲ್ಲಿ ಮೊದಲ ಹಾಗೂ 2ನೇ ಅಲೆಯಲ್ಲಿ ಮಕ್ಕಳಲ್ಲಿ ರೋಗ ತೀವ್ರತೆ ಕಡಿಮೆ ಕಾಣಿಸಿಕೊಂಡಿದೆ.

ಬ್ರೆಜಿಲ್‌ನಲ್ಲಿ 3ನೇ ಅಲೆಯಲ್ಲಿ 2500 ಮಕ್ಕಳು ಸಾವನ್ನಪ್ಪಿದ್ದಾರೆ. ಆದ್ದರಿಂದ ಎಲ್ಲಿಯೂ ಬಂದಿಲ್ಲ, ಇಲ್ಲಿ ಬರಲ್ಲ ಎಂಬ ಮೊಂಡುವಾದ ಬೇಡ, 3ನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಬರುತ್ತೆ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ, ಒಂದು ವೇಳೆ ಬಂದರೆ ಅವರನ್ನು ರಕ್ಷಿಸಲು ಈಗಾಗಲೇ ಸೂಕ್ತ ಸಿದ್ಧತೆ ಮಾಡಿರಬೇಕು ಎಂದು ಎಚ್ಚರಿಸಿದ್ದಾರೆ.

ಎರಡನೇ ಅಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಲು ಅದರ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದು ಹಾಗೂ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಕಾರಣ ಎಂಬುವುದು ನಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಆದ್ದರಿಂದ ಮೂರನೇ ಅಲೆ ಬಗ್ಗೆ ಪ್ರತಿಯೊಬ್ಬರು ಮುನ್ನೆಚ್ಚರಿಕೆವಹಿಸಬೇಕಾಗಿದೆ. ಮೊದಲಿಗೆ ಎಲ್ಲರು ಲಸಿಕೆ ಪಡೆಯಬೇಕಾಗಿದೆ.

 ಲಸಿಕೆ ಪಡೆದ ಮೇಲೂ ಕೋವಿಡ್‌ 19 ನಿಯಮಗಳನ್ನು ಪಾಲಿಸಬೇಕು ಏಕೆ?

ಲಸಿಕೆ ಪಡೆದ ಮೇಲೂ ಕೋವಿಡ್‌ 19 ನಿಯಮಗಳನ್ನು ಪಾಲಿಸಬೇಕು ಏಕೆ?

ಕೊರೊನಾ ಲಸಿಕೆ ಪಡೆದವರಲ್ಲಿಯೂ ಸೋಂಕು ಕಂಡು ಬರುವುದು, ಆದರೆ ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ, ಆದ್ದರಿಂದ ಲಸಿಕೆ ಪಡೆಯುವುದು ಮುಖ್ಯವಾಗಿದೆ. ಇನ್ನು ಲಸಿಕೆ ಪಡೆದವರಲ್ಲಿ ಸೋಂಕು ಬಂದು ಅವರಿಂದ ಲಸಿಕೆ ಪಡೆಯದೇ ಇರುವವರಿಗೆ ಸೋಂಕು ಬಂದರೆ ಲಸಿಕೆ ಪಡೆಯದವರ ಆರೋಗ್ಯ ಸ್ಥಿತಿ ಗಂಭೀರವಾಗುವುದು, ಆದ್ದರಿಂದ ಕೋವಿಡ್‌ 19 ಲಸಿಕೆ ಪಡೆದ ಬಳಿಕವೂ ಮಾಸ್ಕ್‌ ಧರಿಸಬೇಕು, ಕೋವಿಡ್ 19 ನಿಯಮಗಳನ್ನು ಪಾಲಿಸಬೇಕು.

ಡಾ. ರವಿಯವರ ಪ್ರಕಾರ ಇನ್ನೂ ಒಂದರಿಂದ ಒಂದೂವರೆ ವರ್ಷ ಮಾಸ್ಕ್‌ ಧರಿಸಬೇಕು, ಕೋವಿಡ್‌ 19 ನಿಯಮಗಳನ್ನು ಪಾಲಿಸಬೇಕು, ಆಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ಕೂಡಲೇ ಲಸಿಕೆ ಪಡೆಯಬಾರದು ಏಕೆ?

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ಕೂಡಲೇ ಲಸಿಕೆ ಪಡೆಯಬಾರದು ಏಕೆ?

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ನೈಸರ್ಗಿಕವಾಗಿ ಆ್ಯಂಟಿಬಾಡಿ ಉತ್ಪತ್ತಿಯಾಗುವುದರಿಂದ ಈ ಸಮಯದಲ್ಲಿ ಲಸಿಕೆ ಪಡೆದರೆ ಅದು ಲಸಿಕೆಯನ್ನು ನ್ಯೂಟ್ರಿಲೈಸ್ ಮಾಡುವುದರಿಂದ ಈ ಸಮಯದಲ್ಲಿ ಲಸಿಕೆ ಪಡೆಯುವುದರಿಂದ ಏನೂ ಪ್ರಯೋಜವಿಲ್ಲ, ಆದ್ದರಿಂದ ಸೋಂಕಿನಿಂದ ಗುಣಮುಖರಾದವರು 3 ತಿಂಗಳ ಬಳಿಕ ಲಸಿಕೆ ಪಡೆಯಬೇಕು.

 3ನೇ ಅಲೆ ಯಾವಾಗ ಬರಬಹುದು?

3ನೇ ಅಲೆ ಯಾವಾಗ ಬರಬಹುದು?

2ನೇ ಅಲೆ ತಗ್ಗಿದ 3-5 ತಿಂಗಳಿನಲ್ಲಿ 3ನೇ ಅಲೆ ಬರಬಹುದು. ಆದ್ದರಿಂದ ಮೂರನೇ ಅಲೆಯನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ, ಆದ್ದರಿಂದ ಅವರ ಬಗ್ಗೆ ಎಚ್ಚರವಹಿಸಬೇಕು.

English summary

Famous Virologist Dr V. Ravi Explained about How to Protect Yourself from Coronavirus 3rd wave and Importance of Covid-19 Vaccine

Famous Virologist Dr V. Ravi explained about how to protect yourself from coronavirus 3rd wave and importance of covid-19 vaccine
X
Desktop Bottom Promotion