For Quick Alerts
ALLOW NOTIFICATIONS  
For Daily Alerts

ಪುರುಷರೇ, ಬೆಡ್‌ನಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಬೇಕೆ?

|

ಬೆಡ್‌ನಲ್ಲಿ ಸೋಲಲು ಯಾವ ಗಂಡಸು ಇಷ್ಟಪಡಲ್ಲ, ತನ್ನಲ್ಲಿರುವ ಗುಪ್ತ ಸಮಸ್ಯೆ ಗೆಲ್ಲಲು ಹಾಗೂ ತನ್ನ ಸಂಗಾತಿಯನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತಾನೆ. ಪುರುಷನ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ಈ ರೀತಿಯ ಮಾತ್ರೆಗಳಿಂದ ಅಡ್ಡಪರಿಣಾಮಗಳಿರುತ್ತವೆ.

Best Ways to Improve Male Sexual Performance In Kannada

ಅಲ್ಲದೆ ಲೈಂಗಿಕ ಅಸಾಮರ್ಥ್ಯ ಖಿನ್ನತೆಗೂ ಕಾರಣವೆಂದಾಗಿ ಅಧ್ಯಯನಗಳು ಹೇಳುತ್ತವೆ. ಮಾನಸಿಕ ಒತ್ತಡ, ಅಧಿಕ ಮೈ ತೂಕ, ಕಾಯಿಲೆ ಮುಂತಾದ ಸಮಸ್ಯೆಯಿಂದ ಲೈಂಗಿಕ ಸಾಮರ್ಥ್ಯ ಕುಂದುವುದು.

ಅದೇ ಕೆಲವೊಂದು ಅಭ್ಯಾಸಗಳು ಲೈಂಗಿಕ ಸಾಮರ್ಥ್ಯ ಹೆಚ್ಚಲು ಸಹಾಯ ಮಾಡುತ್ತವೆ, ಅವುಗಳು ಯಾವುವು ಎಂದು ನೋಡೋಣ:

1. ಚಟುವಟಿಕೆಯಿಂದ ಇರುವುದು

1. ಚಟುವಟಿಕೆಯಿಂದ ಇರುವುದು

ದಿನಾ ವ್ಯಾಯಾಮ ಮಾಡುವುದು ಅದರಲ್ಲೂ ಕಾರ್ಡಿಯೋ ಸಂಬಂಧಿತ ವ್ಯಾಯಾಮಗಳು ಪುರುಷರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನದಲ್ಲಿ ಅರ್ಧ ಗಂಟೆ ಬೆವರು ಹರಿಸಿ ವ್ಯಾಯಾಮ ಮಾಡಿದರೆ ನಿಮ್ಮ ಪುರುಷ ಸಾಮರ್ಥ್ಯ ಕೂಡ ಹೆಚ್ಚುವುದು.

2. ಈ ಹಣ್ಣು ಹಾಗೂ ತರಕಾರಿ ಸೇವಿಸಿ

2. ಈ ಹಣ್ಣು ಹಾಗೂ ತರಕಾರಿ ಸೇವಿಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ

ಈ ಆಹಾರಗಳನ್ನು ತಿಂದಾಗ ಬಾಯಿ ದುರ್ವಾಸನೆ ಬೀರುವುದು ಆದರೆ ಇವುಗಳು ರಕ್ತ ಸಂಚಾರಕ್ಕೆ ಸಹಾಯ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಇರುವುದರಿಂದ ರಕ್ತದೊತ್ತಡ ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚುವುದು.

ಹಸಿ ಮೆಣಸು ಮತ್ತು ಕಾಳು ಮೆಣಸು: ಈ ಆಹಾರಗಳು ಹೈಪರ್ ಟೆನ್ಷನ್ ಮತ್ತು ಉರಿಯೂತ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ.

ಒಮೆಗಾ 3 ಕೊಬ್ಬಿನಂಶ: ಒಮೆಗಾ 3 ಕೊಬ್ಬಿನಂಶ ನಿಮಗೆ ಬೆಣ್ಣೆ ಹಣ್ಣು, ಆಲೀವ್‌ ಎಣ್ಣೆಯಲ್ಲಿ ಹಾಗೂ ಮೀನಿನಲ್ಲಿ ಸಿಗುವುದು.

ವಿಟಮಿನ್ ಬಿ-1: ಇದು ನರಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ತುಂಬಾನೇ ಸಹಕಾರಿ. ಹಂದಿ ಮಾಂಸ, ನೆಲಗಡಲೆ, ಕಿಡ್ನಿ ಬೀನ್ಸ್ ಇವುಗಳಲ್ಲಿ ವಿಟಮಿನ್‌ ಬಿ1 ಅಂಶವಿದೆ.

ಮೊಟ್ಟೆ: ಮೊಟ್ಟೆಯಲ್ಲಿ ವಿಟಮಿನ್ ಬಿ ಇದ್ದು ಹಾರ್ಮೋನ್‌ ಸಮತೋಲನ ಕಾಪಾಡುತ್ತದೆ, ಆದ್ದರಿಂದ ದಿನಕ್ಕೊಂದು ಮೊಟ್ಟೆ ಕೂಡ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದು.

3. ಮಾನಸಿಕ ಒತ್ತಡ ಕಡಿಮೆ ಮಾಡಿ

3. ಮಾನಸಿಕ ಒತ್ತಡ ಕಡಿಮೆ ಮಾಡಿ

ಮಾನಸಿಕ ಒತ್ತಡ ಇದು ನಿಮ್ಮ ಲೈಂಗಿಕ ಸಾಮರ್ಥ್ಯ ಕುಗ್ಗಿಸುವುದು ಮಾತ್ರವಲ್ಲ ಒಟ್ಟು ಮೊತ್ತ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಹೊರದಬ್ಬುವುದು ಒಳ್ಳೆಯದು.

 4. ಕೆಟ್ಟ ಅಭ್ಯಾಸ ದೂರವಿಡಿ

4. ಕೆಟ್ಟ ಅಭ್ಯಾಸ ದೂರವಿಡಿ

ಧೂಮಪಾನ, ಅತ್ಯಧಿಕ ಮದ್ಯಪಾನ ಇವೆಲ್ಲಾ ಲೈಂಗಿಕ ಸಾಮರ್ಥ್ಯ ಕುಗ್ಗಿಸುವುದು. ರೆಡ್‌ವೈನ್‌ ದೇಹಕ್ಕೆ ಒಳ್ಳೆಯದೇ ಆದರೂ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಕೆಟ್ಟ ಚಟಗಳು ರಕ್ತನಾಳಗಳು ಕುಗ್ಗುವಂತೆ ಮಾಡುತ್ತದೆ, ಇದರಿಂದ ಪುರುಷರಲ್ಲಿ ಬಂಜೆತನ ಸಮಸ್ಯೆ ಕಾಡುವುದು.

 5. ಸೂರ್ಯನ ಬೆಳಕು ಪಡೆಯಿರಿ

5. ಸೂರ್ಯನ ಬೆಳಕು ಪಡೆಯಿರಿ

ಸೂರ್ಯ ಪ್ರತಿ ಉದಯಿಸುತ್ತಾನೆ, ಆದರೆ ಬೆಳಕು ಮೈಗೆ ತಾಗಿಸಲು ಹೆಚ್ಚಿನವರಿಗೆ ಸಾಧ್ಯವೇ ಆಗುವುದಿಲ್ಲ, ನೈಟ್‌ ಶಿಪ್ಟ್ ಕೆಲಸ ಮಾಡಿ ಸೂರ್ಯ ಉದಯಿಸುವ ಹೊತ್ತಿನಲ್ಲಿ ನಿದ್ದೆ ಮಾಡುವುದು, ಸ್ವಲ್ಪ ಸೂರ್ಯನ ಬೆಳಕಿಗೆ ಮೈಯೊಡ್ಡದೆ ಇರುವುದು ಇವೆಲ್ಲಾ ವಿಟಮಿನ್ ಡಿ ಕೊರತೆಗೆ ಕಾರಣವಾಗಿದೆ. ಇದು ಕೂಡ ಪುರುಷರಲ್ಲಿ ಸಾಮರ್ಥ್ಯ ಕಡಿಮೆಯಾಗಲು ಒಂದು ಕಾರಣ. ಪ್ರತಿದಿನ ಸ್ವಲ್ಪ ಹೊತ್ತು ಸೂರ್ಯನ ಬೆಳಕಿಗೆ ಮೈಯಿಡ್ಡುವ ಅಭ್ಯಾಸ ರೂಢಿಸಿಕೊಳ್ಳಿ.

6. ಹಸ್ತ ಮೈಥುನ

6. ಹಸ್ತ ಮೈಥುನ

ನಿಮಗೆ ಬಯಸಿದಷ್ಟು ಸಮಯ ಹಾಸಿಗೆಯಲ್ಲಿ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದಕ್ಕೆ ಅಭ್ಯಾಸ ಕೂಡ ಅವಶ್ಯಕ. ಹಸ್ತಮೈಥುನ ಲೈಂಗಿಕ ಕ್ರಿಯೆ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

7. ನಿಮ್ಮ ಸಂಗಾತಿಯತ್ತ ಗಮನ ಕೊಡಿ

7. ನಿಮ್ಮ ಸಂಗಾತಿಯತ್ತ ಗಮನ ಕೊಡಿ

ನಿಮ್ಮ ಸಂಗಾತೊಯತ್ತ ಗಮನ ಹರಿಸುವುದು ಅವರಿಗೆ ಖುಷಿ ಕೊಡುವುದು ಮಾತ್ರವಲ್ಲ ನಿಮಗೂ ಖುಷಿ ಸಿಗುವುದು. ಸರಸದ ಮಧ್ಯದಲ್ಲಿ ಬ್ರೇಕ್‌ ತೆಗೆದು ಸಂಗಾತಿ ಜೊತೆ ರೊಮ್ಯಾಂಟಿಕ್‌ ಸಂಭಾಷಣೆಯಲ್ಲಿ ತೊಡಗುವುದರಿಂದ ಕೂಡ ನೀವು ಹೆಚ್ಚು ಹೊತ್ತು ಸರಸದಲ್ಲಿ ತೊಡಗಿಕೊಳ್ಖಬಹುದು.

8. ಲೈಂಗಿಕ ತಜ್ಞರ ಭೇಟಿ ಮಾಡಿ

8. ಲೈಂಗಿಕ ತಜ್ಞರ ಭೇಟಿ ಮಾಡಿ

ಶೀಘ್ರ ಸ್ಖಲನ, ಶಿಶ್ನ ನಿಮಿರುವಿಕೆಯಲ್ಲಿ ತೊಂದರೆ ಮುಂತಾದ ಸಮಸ್ಯೆ ಇದ್ದರೆ ಖಿನ್ನತೆ ಅಥವಾ ಕೀಳೆರಿಮೆಯಿಂದ ಬಳಲುವ ಬದಲಿಗೆ ಲೈಂಗಿಕ ತಜ್ಞರನ್ನು ಕಂಡು ಚಿಕಿತ್ಸೆ ಪಡಿದರೆ ಲೈಂಗಿಕ ತೃಪ್ತಿ ಪಡೆಯಬಹುದಾಗಿದೆ.

English summary

Best Ways to Improve Male Sexual Performance In Kannada

If you’re looking to maintain sexual activity in bed all night,Here is tips to improve male sexual performance, read on,
X
Desktop Bottom Promotion