For Quick Alerts
ALLOW NOTIFICATIONS  
For Daily Alerts

ರಕ್ತ ಸಂಚಾರ ವೃದ್ಧಿಸುವುದು ಹೇಗೆ ?

By Super
|

ಪರಿಚಲನಾ ವ್ಯವಸ್ಥೆಯು ಮನುಷ್ಯನ ಅಂಗ ವ್ಯವಸ್ಥೆಯಲ್ಲಿ ತುಂಬಾ ಪ್ರಮುಖವಾದದ್ದು. ರಕ್ತ ಸಂಚಾರದ ಅಸ್ತವ್ಯಸ್ತತೆಯು ಹಲವು ಸಮಸ್ಯೆಗಳಿಗೆ, ರೋಗಗಳಿಗೆ ಕಾರಣವಾಗುತ್ತದೆ. ರಕ್ತ ಪರಿಚಲನಾ ವ್ಯವಸ್ಥೆಯ ಅಸ್ತವ್ಯಸ್ತತೆಯಿಂದಾಗಿ ಹೃದಯದ ತೊಂದರೆ, ಸ್ಟ್ರೋಕ್‌ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ತಲೆನೋವು, ಕೈ ಮತ್ತು ಕಾಲುಗಳು ಆಗಾಗ ಕೋಲ್ಡ್‌ ಆಗುವುದು, ಹಿಮ್ಮಡಿ ಒಡೆಯುವುದು, ಮಾಂಸಖಂಡಗಳು ಬಿಗಿದುಕೊಳ್ಳುವುದು, ತೆಳ್ಳಗಾಗುವುದು, ಆದ ಗಾಯಗಳು ಬೇಗ ಗುಣವಾಗದಿರುವುದು, ನೆನಪಿನ ಶಕ್ತಿ ಕಡಿಮೆಯಾಗುವುದು... ಇಂತಹ ಸಮಸ್ಯೆಗಳು ಕಂಡುಬಂದರೆ ಇದಕ್ಕೆ ಕಾರಣ ಬೇರೇನೂ ಅಲ್ಲ. ಅದು ರಕ್ತ ಪರಿಚಲನೆ ವ್ಯವಸ್ಥೆಯಲ್ಲಿ ದೋಷವೇ ಕಾರಣ. ಒಂದೊಮ್ಮೆ ಇವನ್ನು ನೀವು ನಿರ್ಲಕ್ಷಿಸಿದರೆ ಪರಿಣಾಮ ಖಂಡಿತ ಗಂಭೀರ. ರಕ್ತದೊತ್ತಡ, ಸ್ಟ್ರೋಕ್‌, ಕಿಡ್ನಿ ವೈಫಲ್ಯ, ಡಯಾಬಿಟೀಸ್‌ ಸಮಸ್ಯೆ, ನಿಶ್ಶಕ್ತಿ ಮತ್ತು ಹೃದಯಾಘಾತ ಸಂಭವಿಸುವುದನ್ನು ತಪ್ಪಿಸಲು ಕಷ್ಟ. ಅಷ್ಟೇ ಅಲ್ಲ, ಈ ಎಲ್ಲಾ ಸಮಸ್ಯೆಗಳಲ್ಲಿ ಯಾವುದೇ ಒಂದು ಸಮಸ್ಯೆ ಅತಿರೇಕದ ಹಂತ ತಲುಪಿದರೆ ಸಾವೂ ಸಂಭವಿಸಬಹುದು.

ಇದಕ್ಕೆಲ್ಲಾ ಒಂದೇ ಒಂದು ಮುನ್ನೆಚ್ಚರಿಕೆ ಕ್ರಮ ಮತ್ತು ಪರಿಹಾರವೆಂದರೆ ನಮ್ಮ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳುವುದು. ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಇರುವ ಆಹಾರ ಸೇವಿಸಬಹುದು. ನಾರಿನ ಅಂಶಗಳನ್ನು ಸೇವಿಸುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಮತ್ತು ರಕ್ತ ಸಂಚಾರಕ್ಕೆ ಅನುಕೂಲವಾಗುವಂಥ ಆಹಾರವನ್ನೇ ಸೇವಿಸುವುದು.

ಬಿಸಿ ಮತ್ತು ತಂಪು ಚಿಕಿತ್ಸೆ

ಬಿಸಿ ಮತ್ತು ತಂಪು ಚಿಕಿತ್ಸೆ

ಬಿಸಿ ಮತ್ತು ತಂಪು ನೀರಿನ ಸ್ನಾನದಿಂದ ಅಥವಾ ಹೈಡ್ರೋಥೆರಪಿಯಿಂದ ರಕ್ತ ಪರಿಚಲನೆಯನ್ನು ವೃದ್ಧಿಸಬಹುದು. ರಕ್ತ ಹೆಪ್ಪುಗಟ್ಟಿದ ಅಥವಾ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತಿಲ್ಲದ ಭಾಗದ ಮೇಲೆ ಬಿಸಿ ನೀರನ್ನು ಹುಯ್ದುಕೊಂಡಲ್ಲಿ ರಕ್ತ ನಿಧಾನವಾಗಿ ಸಂಚಲನೆ ನಡೆಸುತ್ತದೆ. ಅಲ್ಲದೇ ಹಲವು ಸಮಯದವರೆಗೆ ನಿರಂತರವಾಗಿ ಶೀತ ಚಿಕಿತ್ಸೆ ಮಾಡುವುದರಿಂದಲೂ ರಕ್ತ ಪರಿಚಲನೆಗೆ ಅನುವು ಮಾಡಿಕೊಡಬಹುದು. ದೇಹ ಕಂಪಿಸಿದರೆ ರಕ್ತವು ಪರಿಚಲನೆ ನಡೆಸುತ್ತಿದೆ ಎಂದು ಅರ್ಥ. ಬಿಸಿ ಮತ್ತು ಶೀತ ಚಿಕಿತ್ಸೆಯನ್ನು ನಿರಂತರವಾಗಿ ನಡೆಸಿದರೆ ಮಾತ್ರ ಸೂಕ್ತ ಪರಿಣಾಮವನ್ನು ಕಾಣಲು ಸಾಧ್ಯ. ನೀರು ಅತಿಯಾಗಿ ಬಿಸಿ ಇಲ್ಲ ಎಂಬುದನ್ನು ಚಿಕಿತ್ಸೆ ನೀಡುವ ಮೊದಲೇ ಖಚಿತಪಡಿಸಿಕೊಳ್ಳಿ. ಅತಿಯಾದ ಬಿಸಿ ನೀರು ಚರ್ಮವನ್ನು ಸುಡುತ್ತದೆ.

ಮೆಣಸಿನಕಾಯಿ

ಮೆಣಸಿನಕಾಯಿ

ಮೆಣಸಿನಕಾಯಿ ಹೃದಯಕ್ಕೆ ಸೂಕ್ತವಾಗಿ ರಕ್ತ ಸಂಚಲನ ನಡೆಯುವಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳು ತೀಕ್ಷ್ಣವಾಗುವಂತೆ ಮೆಣಸಿನಕಾಯಿಯಲ್ಲಿನ ರಾಸಾಯನಿಕಗಳು ನೆರವು ನೀಡುತ್ತದೆ. ಆದರೆ ಕೇವಲ ಮೆಣಸಿನಕಾಯಿ ಮಾತ್ರ ರಕ್ತ ಪರಿಚಲನೆಗೆ ನೆರವಾಗುವುದಿಲ್ಲ. ಆದರೆ ಇದರಿಂದ ಶೇ 25ರಷ್ಟು ಸಮಸ್ಯೆಗೆ ಇದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಉಸಿರಾಟ

ಉಸಿರಾಟ

ನಮ್ಮಲ್ಲಿ ಬಹುತೇಕರ ಉಸಿರಾಟದ ಶೈಲಿ ಅಸಮರ್ಪಕವಾಗಿರುತ್ತದೆ. ಶ್ವಾಸಕೋಶದ ಕೇವಲ ಒಂದು ಭಾಗವನ್ನು ಮಾತ್ರ ಈ ಉಸಿರಾಟ ಒಳಗೊಂಡಿರುತ್ತದೆ. ರಕ್ತ ಪರಿಚಲನೆಯನ್ನು ವೃದ್ಧಿಸಲು ನೀವು ದೀರ್ಘ ಉಸಿರಾಟ ಪ್ರಕ್ರಿಯೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಶ್ವಾಸಕೋಶ ಸಂಪೂರ್ಣವಾಗಿ ಕೆಲಸ ಮಾಡಿದಂತಾಗುತ್ತದೆ. ರಕ್ತಕ್ಕೆ ಹೆಚ್ಚಿನ ಆಮ್ಲಜಕ ಪೂರೈಕೆ ಇದರಿಂದ ಸಾಧ್ಯವಾಗುತ್ತದೆ. ಅಲ್ಲದೇ ರಕ್ತದಲ್ಲಿನ ಕಲ್ಮಶಗಳನ್ನು ತೊಡೆದು ಪರಿಶುದ್ಧವನ್ನಾಗಿಸುತ್ತದೆ. ಈ ಮೂಲಕ ರಕ್ತಪರಿಚಲನೆ ಅತ್ಯಂತ ಸುಲಭ ಸಾಧ್ಯ.

ಟೆನ್ಷನ್‌ ಮಾಡ್ಕೋಬೇಡಿ

ಟೆನ್ಷನ್‌ ಮಾಡ್ಕೋಬೇಡಿ

ರಕ್ತ ಪರಿಚಲನೆಗೆ ಮಾತ್ರವಲ್ಲ, ಹಲವು ಸಮಸ್ಯೆಗೆ ನಮ್ಮ ಮಾನಸಿಕ ಒತ್ತಡ ಕಾರಣವಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಿದಾಗೆ ದೇಹದ ಕೆಲವೇ ಅಂಗಗಳಿಗೆ ರಕ್ತ ಪರಿಚಲನೆ ಕೇಂದ್ರೀಕರಣಗೊಳ್ಳುತ್ತದೆ. ಇದರಿಂದ ದೇಹದ ಇತರ ಭಾಗಗಳಿಗೆ ಸೂಕ್ತ ರಕ್ತ ಲಭ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೈ ಮತ್ತು ಕಾಲುಗಳಿಗೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಆದ್ದರಿಂದ ಕೈ ಮತ್ತು ಕಾಲನ್ನು ಬೆಚ್ಚಗಿಟ್ಟುಕೊಳ್ಳುವುದಕ್ಕಾದರೂ ತಲೆಗೆ ಹೆಚ್ಚು ಕೆಲಸ ಕೊಡಬೇಡಿ. ದೀರ್ಘ ಉಸಿರಾಟ ಪ್ರಕ್ರಿಯೆ ಮತ್ತು ಧ್ಯಾನದಿಂದ ರಕ್ತ ಪರಿಚಲನೆಯ ಸುವ್ಯವಸ್ಥೆಗೆ ನೀವು ಅನುವು ಮಾಡಿಕೊಟ್ಟಂತಾಗುತ್ತದೆ.

ಕಾಲನ್ನು ಎತ್ತರದಲ್ಲಿಡಿ

ಕಾಲನ್ನು ಎತ್ತರದಲ್ಲಿಡಿ

ಸಾಮಾನ್ಯವಾಗಿ ಮಲಗಿದಾಗ ನಾವು ತಲೆಗೆ ದಿಂಬನ್ನು ಇಟ್ಟುಕೊಳ್ಳುವುದು ರೂಢಿ. ಆದರೆ ಆರೋಗ್ಯಯುತ ರಕ್ತ ಪರಿಚಲನೆಗೆ ಅನುಕೂಲವಾಗಲು ಕಾಲಿನಡಿ ದಿಂಬು ಇಟ್ಟುಕೊಳ್ಳುವುದು ಅತ್ಯಂತ ಉತ್ತಮ ಪರಿಪಾಠ. ಹೀಗಾಗಿ ಮಲಗುವಾಗ ಕಾಲಿನಡಿ ದಿಂಬು ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ಕಾಲಿನ ಭಾಗಕ್ಕೆ ರಕ್ತ ಸಂಚಾರ ಸುಲಭವಾಗಿ ಸಾಗುತ್ತದೆ. ಹೀಗೆ ಮಾಡಿ: ನೆಲದ ಮೇಲೆ ಅಥವಾ ಹಾಸಿಗೆ ಮೇಲೆ ಮಲಗಿ. ನಿಮ್ಮ ಕಾಲನ್ನು ಸೋಫಾ ಮೇಲೆ ಅಥವಾ ಕುರ್ಚಿಯ ಮೇಲೆ ಇಡಿ. ಇದರಿಂದ ರಕ್ತ ಸುಲಭವಾಗಿ ಕಾಲಿನಿಂದ ಇಳಿಯಲು ಅನುಕೂಲ ಮಾಡಿಕೊಡುತ್ತದೆ.

ವ್ಯಾಯಾಮ

ವ್ಯಾಯಾಮ

ರಕ್ತ ಪರಿಚಲನೆಯನ್ನು ಸರಾಗಗೊಳಿಸಲು ಅತ್ಯುತ್ತಮ ವಿಧಾನವೆಂದರೆ ದೈಹಿಕ ವ್ಯಾಯಾಮವನ್ನು ಕೈಗೊಳ್ಳುವುದು. ಯುವಪೀಳಿಗೆ ಅದರಲ್ಲೂ ನಗರಗಳಲ್ಲಿ ವಾಸಿಸುತ್ತಿರುವವರಲ್ಲಿ ಹೆಚ್ಚಿನವರ ದೈಹಿಕ ಚಟುವಟಿಕೆ ಅತ್ಯಂತ ಕಡಿಮೆ. ಹೀಗಾಗಿ ದಿನನಿತ್ಯದ ವ್ಯಾಯಾಮ, ನಡೆಯುವುದು, ಈಜುವುದು ಮತ್ತು ಓಡುವುದರಿಂದ ಇಡೀ ದೇಹದಲ್ಲಿ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ದೂರದವರೆಗೆ ಒಂದೇ ವೇಗದಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಿ.

ಪಥ್ಯ

ಪಥ್ಯ

ರಕ್ತ ಸಂಚಾರದ ವೃದ್ಧಿಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಪಥ್ಯ. ಆರೋಗ್ಯಕರ ಆಹಾರ ಸೇವನೆಯು ಸರಾಗ ರಕ್ತ ಸಂಚಾರಕ್ಕೆ ಅನುವು ಮಾಡುತ್ತದೆ. ಕೊಬ್ಬಿನ ಅಂಶ ಕಡಿಮೆ ಇರುವ ಆಹಾರವು ರಕ್ತ ಸಂಚಾರವನ್ನು ಸರಾಗವಾಗಿಸುತ್ತದೆ. ಕಡಿಮೆ ಕೊಬ್ಬಿನಂಶವು ರಕ್ತವನ್ನು ಚಲನಶೀಲವಾಗಿಸುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯುತ್ತದೆ. ನಾರಿನಂಶದ ಆಹಾರವನ್ನು ಹೆಚ್ಚು ಸ್ವೀಕರಿಸುವುದರಿಂದ ರಕ್ತದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು. ಈ ಮೂಲಕ ರಕ್ತ ಪರಿಚಲನೆ ಹೆಚ್ಚು ಸರಾಗವಾಗುತ್ತದೆ.

English summary

How To Improve Blood Circulation | Tips For Health | ರಕ್ತ ಸಂಚಾರ ವೃದ್ಧಿಸುವುದು ಹೇಗೆ ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

The circulatory system is one of the most important organ systems. Disruption of blood circulation can cause various diseases. Various emerging disease caused by circulatory disorders, such as heart disease, stroke, etc.
 
X
Desktop Bottom Promotion