For Quick Alerts
ALLOW NOTIFICATIONS  
For Daily Alerts

Health tips: ವೈವಾಹಿಕ ಜೀವನದ ಒತ್ತಡ ಇದ್ದರೆ ಹೃದಯಾಘಾತ ಆಗುತ್ತದೆ ಎಚ್ಚರ...!

|

ಕಷ್ಟ, ನೋವು, ಒತ್ತಡ ಇರದ ಸರಳ ಮತ್ತು ಸುಂದರವಾದ ಜೀವನ.... ಇದು ಎಲ್ಲರ ಕನಸು.ಆದರೆ ಇದು ಸಿನಿಮಾಗಳಷ್ಟೇ ಸಾಧ್ಯ. ನಿಜ ಜೀವನದಲ್ಲಿ ಒತ್ತಡಗಳು ಸಹಜ. ಅದರಲ್ಲೂ ಸಂಬಂಧಗಳಲ್ಲಿ ಬಂಧಿತರಾದವರಿಗೆ ಇದರ ಅನುಭವ ಹೆಚ್ಚು. ಒತ್ತಡಗಳಿಂದ ತೊಂದರೆ ಅನುಭವಿಸುದಷ್ಟೇ ಅಲ್ಲದೆ, ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಾರೆ. ವೈವಾಹಿಕ ಜೀವನದಿಂದ ಕಲಹ, ವಿರಸಗಳಷ್ಟೇ ಉಂಟಾಗುವುದಿಲ್ಲ, ಎಷ್ಟೋ ಬಾರಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನೂ ತಂದೊಡ್ಡುತ್ತವೆ. ಅದರಲ್ಲೂ ಹೃದಯಾಘಾತದಿಂದ ಚೇತರಿಸಿ ಕೊಳ್ಳುವವರಿಗೆ ಇದು ಇನ್ನೂ ಹೆಚ್ಚಿನ ಸಮಸ್ಯೆ ಯಾಗಿದೆ ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅಧ್ಯಯನಗಳ ಮೂಲಕ ಸಾಬೀತು ಪಡಿಸಿದೆ.

1. ಹೃದಯಾಘಾತದಿಂದ ಚೇತರಿಸಿಕೊಳ್ಳುವುದಕ್ಕೂ ವೈವಾಹಿಕ ಜೀವನದ ಒತ್ತಡಕ್ಕೂ ಏನು ಸಂಬಂಧ?

1. ಹೃದಯಾಘಾತದಿಂದ ಚೇತರಿಸಿಕೊಳ್ಳುವುದಕ್ಕೂ ವೈವಾಹಿಕ ಜೀವನದ ಒತ್ತಡಕ್ಕೂ ಏನು ಸಂಬಂಧ?

ಅಧ್ಯಯನಗಳ ಪ್ರಕಾರ, ದಾಂಪತ್ಯ ಜೀವನದಲ್ಲಿ ಹೆಚ್ಚಾಗಿ ಒತ್ತಡವಿಲ್ಲದವರಿಗೆ ಹೋಲಿಸಿದಾಗ, ವೈವಾಹಿಕ ಒತ್ತಡದಲ್ಲಿ ಸಿಲುಕಿದ 18-55 ವಯಸ್ಸಿನವರಲ್ಲಿ ಹೃದಯಾಘಾತದ ನಂತರ ಚೇತರಿಸಿಕೊಳ್ಳುವ ಸಮಸ್ಯೆಗಳು ಎದುರಾಗುವುದು ಹೆಚ್ಚಾಗಿದೆ. ಹೀಗಾಗಿ, ದಾಂಪತ್ಯ ಜೀವನದಲ್ಲಿರುವ ಒತ್ತಡಗಳಿಂದ ಹೃದಯಾಘಾತದ ನಂತರ ಚೇತರಿಸಿಕೊಳ್ಳುವುದು ಸಮಸ್ಯೆಯಾಗಿ ತಲೆದೋರಿದೆ.

ಯಾರ ವೈವಾಹಿಕ ಜೀವನದ ಒತ್ತಡವು ಮಧ್ಯಮ ಅಥವಾ ತೀವ್ರವಾಗಿರುವುದೊ, ಅವರಲ್ಲಿ 67 ಪ್ರತಿಶತ ಜನರು ಎದೆ ನೋವು ಅನುಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ಸುಮಾರು 50 ಪ್ರತಿಶತದಷ್ಟು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧ್ಯಯನಗಳ ಮೂಲದಿಂದ ತಿಳಿದುಬಂದಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ವೈವಾಹಿಕ ಜೀವನದ ಒತ್ತಡವಷ್ಟೇ ಅಲ್ಲದೆ ಉತ್ತಮ ಜೀವನಶೈಲಿಯೂ ಕಂಡುಬಂದಿಲ್ಲ.

ಇಂತಹ ಅಧ್ಯಯನಗಳಿಂದ ಮಾನಸಿಕ ಆರೋಗ್ಯವು ಎಷ್ಟು ಮುಖ್ಯ ಎಂಬುದು ತಿಳಿದು ಬರುತ್ತದೆ. ವೈವಾಹಿಕ ಜೀವನದ ಒತ್ತಡಗಳಿಂದ ಮಹಿಳೆಯರಲ್ಲಿ ಹೆಚ್ಚಿನ ದುಷ್ಪರಿಣಾಮ ಕಂಡುಬರುತ್ತವೆ. ವೈವಾಹಿಕ ಜೀವನದಲ್ಲಿ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅತ್ಯಗತ್ಯ. ಅದಕ್ಕಾಗಿ ಬೇಕಾದ ಕೆಲವು ಸೂಕ್ತ ಸಲಹೆಗಳನ್ನು ನುರಿತ ತಜ್ಞರು ನೀಡಿದ್ದಾರೆ.

2. ಆರ್ಥಿಕ ಸ್ಥಿತಿಯನ್ನು ಚರ್ಚಿಸಿ

2. ಆರ್ಥಿಕ ಸ್ಥಿತಿಯನ್ನು ಚರ್ಚಿಸಿ

ಸಾಮಾನ್ಯವಾಗಿ ಹಣಕಾಸಿನ ಮುಂಗಟ್ಟುಗಳೇ ವೈವಾಹಿಕ ಜೀವನದಲ್ಲಿ ಹೆಚ್ಚಿನ ತೊಡುಕು ಉಂಟು ಮಾಡುತ್ತದೆ. ಖರ್ಚು ವೆಚ್ಚಗಳಿಗಾಗಿ ಪ್ರತ್ಯೇಕ ಖಾತೆ ಸೂಕ್ತವೇ ಅಥವಾ ಜಂಟಿ ಖಾತೆಯೇ ಎಂದು ನಿಮ್ಮ ಸಂಗಾತಿಯ ಜೊತೆ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಿ. ಇದರಿಂದ ಅವರಿಗೆ ನೀವು ಗೌರವ ಕೊಟ್ಟಿದ್ದೀರಿ ಎಂಬ ಭಾವ ಉಂಟಾಗುತ್ತದೆ, ಕಲಹಗಳಿಗೆ ಅವಕಾಶ ಇರುವುದಿಲ್ಲ. ಅಂತೆಯೇ ಎಷ್ಟು ಖರ್ಚಾಗುತ್ತಿದೆ,ಎಷ್ಟು ಉಳಿಯುತ್ತಿದೆ, ಕೂಡಿಡಲು ಸಾಧ್ಯವಾಗುತ್ತಿರುವುದು ಎಷ್ಟು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವುದರಿಂದ ಮುಂದೆ ಅನಿರೀಕ್ಷಿತ ಸಂದರ್ಭದಲ್ಲಿ ಹಣದ ಅವಶ್ಯಕತೆ ಬಂದಾಗ ಈ ಲೆಕ್ಕಾಚಾರ ಸಹಾಯಮಾಡುತ್ತದೆ.

3. ಪರಸ್ಪರ ಸಂಭಾಷಣೆ-ಒಡನಾಟ ಅತ್ಯಗತ್ಯ

3. ಪರಸ್ಪರ ಸಂಭಾಷಣೆ-ಒಡನಾಟ ಅತ್ಯಗತ್ಯ

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ತಾಳ್ಮೆ, ಪ್ರೀತಿಯಿಂದ ಪರಸ್ಪರ ಮಾತುಕತೆ ನಡೆಸಿಕೊಂಡು ನಡೆಯುವುದೇ ಸುಖ ಸಂಸಾರಕ್ಕೆ ಸೂತ್ರ. ಮನ ಬಿಚ್ಚಿ ಮಾತನಾಡುವುದರಿಂದ, ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಯಾವುದೇ ರೀತಿಯ ಸಂಶಯಕ್ಕೆ ಆಸ್ಪದ ಇರುವುದಿಲ್ಲ. ಇಲ್ಲದಿದ್ದರೆ ಅನಾವಶ್ಯಕವಾಗಿ ಕಲಹಗಳು ಉಂಟಾಗುತ್ತವೆ, ಅಪಾರ್ಥಗಳಿಗೆ ಎಡೆ ಮಾಡಿಕೊಡುತ್ತವೆ. ಒಬ್ಬರಿಗೊಬ್ಬರು ಸಮಯ ಕೊಟ್ಟು ತಮ್ಮ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳದೆ ಹೋದಲ್ಲಿ ಅನ್ಯೋನ್ಯತೆ ಬೆಳೆಯಲು ಅವಕಾಶವೇ ಇರುವುದಿಲ್ಲ, ಬದಲಿಗೆ ಪರಸ್ಪರ ದೂರವಾದಂತೆ ಅನಿಸುತ್ತದೆ. ಅವಶ್ಯಕವಾದದ್ದನ್ನು ಮಾತ್ರ ಹಂಚಿಕೊಳ್ಳಬೇಕು, ಅನವಶ್ಯಕವಾದದ್ದು ಏಕೆ ಎಂದು ಮಾತನಾಡಲೂ ಲೆಕ್ಕ ಹಾಕುವ ಅಗತ್ಯವಿಲ್ಲ. ಪ್ರತಿ ದಿನದ ಕೊನೆಯಲ್ಲಿ ಚಿಕ್ಕ ಪುಟ್ಟದ್ದನ್ನೂ ಹಂಚಿಕೊಳ್ಳುವುದರಿಂದ ಸಂಬಂಧದಲ್ಲಿ ಬೆಸುಗೆ ಹೆಚ್ಚಾಗುತ್ತದೆ, ಒಬ್ಬರಿಗೆ ಒಬ್ಬರ ಸಾಂಗತ್ಯ ಒಡನಾಟದ ಪ್ರಾಮುಖ್ಯತೆ ತಿಳಿದು ಬರುತ್ತದೆ.

4. ಜವಾಬ್ದಾರಿ ಹಂಚಿಕೊಳ್ಳುವುದು ಹೇಗೆ?

4. ಜವಾಬ್ದಾರಿ ಹಂಚಿಕೊಳ್ಳುವುದು ಹೇಗೆ?

ಇಂದಿಗೂ ನಮ್ಮ ಸಮಾಜದಲ್ಲಿ ಮಹಿಳೆಯರಿಂದ ಅತಿಯಾಗಿ ನಿರೀಕ್ಷಿಸುತ್ತಾರೆ. ಮಹಿಳೆಯರು ಹೊರಗಡೆ ಹೋಗಿ ದುಡಿಯಲಿ ಅಥವಾ ಇಲ್ಲದಿರಲಿ, ಅವರ ಕಷ್ಟ ಸುಖಗಳನ್ನು ಅರಿಯಬೇಕು. ಅವರೇನು ಯಂತ್ರವಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಕೆಲಸಗಳಲ್ಲಿ ಕೈ ಜೋಡಿಸಿದಾಗ, ಅವರಿಗೆ ದೈಹಿಕವಾಗಿ ಸಹಾಯವಾಗುವುದಷ್ಟೇ ಅಲ್ಲದೆ ಮಾನಸಿಕವಾಗೂ ಸಂತೋಷಗೊಳ್ಳುತ್ತಾರೆ. ಇದು ಅತಿ ಮುಖ್ಯವಾಗುತ್ತದೆ. ಪರಸ್ಪರ ಪ್ರೀತಿ ಮತ್ತು ಹೊಂದಾಣಿಕೆ ಇದ್ದಾಗ, ಸಾಮರ್ಥ್ಯಗಳಿಗೆ ಒತ್ತು ಕೊಡಬೇಕೇ ವಿನಹ ಅವರ ದೌರ್ಬಲ್ಯಗಳಿಗೆ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.ಎಂತಹ ಸಂದರ್ಭಗಳಲ್ಲೂ ಒಬ್ಬರಿಗೊಬ್ಬರು ಬೆಂಬಲಿಸಿದಾಗ ಆತ್ಮೀಯ ಸ್ನೇಹಿತರೆಂಬ ಭಾವ ಉಂಟಾಗುತ್ತದೆ.

5. ಜೊತೆಗೂಡಿ ಸಮಯ ಕಳೆಯುವುದು ಮುಖ್ಯ

5. ಜೊತೆಗೂಡಿ ಸಮಯ ಕಳೆಯುವುದು ಮುಖ್ಯ

ಮನೆ,ಮಕ್ಕಳು, ಸಂಸಾರದ ತಾಪತ್ರಗಳು, ಕೆಲಸ ಕಾರ್ಯಗಳು ಮುಂತಾದ ಜವಾಬ್ದಾರಿಗಳಿಂದ ನಮ್ಮನ್ನು ನಾವೇ ಮರೆತು ಬಿಟ್ಟಿರುತ್ತೇವೆ. ಅದೆಷ್ಟೇ ಸಮಯದ ಅಭಾವವಿದ್ದರೂ, ಸಂಗಾತಿಯೊಡನೆ ಪ್ರತ್ಯೇಕವಾಗಿ ಕಾಲ ಕಳೆಯಲು ಪ್ರತಿನಿತ್ಯ ಸಮಯವನ್ನು ಮೀಸಲಿಡುವುದು ಅತಿ ಮುಖ್ಯ. ದಿನನಿತ್ಯದ ಜಂಜಾಟಗಳಲ್ಲಿ ಸಿಲುಕಿ ಒತ್ತಡ ತೆಗೆದುಕೊಳ್ಳುವ ಬದಲು ಸಂಗಾತಿಯೊಡನೆ ಅದೇ ಕಷ್ಟಗಳನ್ನು ಹಂಚಿಕೊಳ್ಳುವುದು ಮನಸ್ಸನ್ನು ಹಗುರಾಗಿಸುತ್ತದೆ. ಪರಸ್ಪರ ಸಾನಿಧ್ಯದ ಮೌಲ್ಯವು ತಿಳಿದು ಬರುತ್ತದೆ. ಜೊತೆಯಾಗಿ ಕುಳಿತು ಮಾತನಾಡುವುದು, ಮೋಜು ಮಸ್ತಿ ಮಾಡುವುದರಿಂದ ಒತ್ತಡ ಕಮ್ಮಿಯಾಗುವುದಷ್ಟೇ ಅಲ್ಲದೆ ಸಂಸಾರದಲ್ಲಿ ವಿರಸಗಳಿಗೆ ಆಸ್ಪದ ಇರುವುದಿಲ್ಲ ಬದಲಿಗೆ ಸರಸದ ಕ್ಷಣಗಳನ್ನು ಆಸ್ವಾದಿಸಬಹುದು.

6. ಏಕಾಂಗಿಯಾಗಿ ಕಾಲಹರಣ ಮಾಡಿ

6. ಏಕಾಂಗಿಯಾಗಿ ಕಾಲಹರಣ ಮಾಡಿ

ಎಲ್ಲಾ ಸಂದರ್ಭಗಳಲ್ಲೂ ನಿಮ್ಮ ಸಂಗಾತಿಯಿಂದ ಪ್ರತಿಯೊಂದು ನಿರೀಕ್ಷಿಸುವ ಬದಲು ಅವರಿಗೂ ಅವರದ್ದೇ ಆದ ಸಮಯವನ್ನು ಕಳೆಯಲು ಎಡೆ ಮಾಡಿ ಕೊಟ್ಟು, ನೀವೂ ಸಹ ನಿಮ್ಮದೇ ಆದ ಸಮಯವನ್ನು ಎಂಜಾಯ್ ಮಾಡಿ. ಹಾಡು ಕೇಳುವುದು, ಪುಸ್ತಕ ಓದುವುದು ಅಥವಾ ಯಾವುದೇ ರೀತಿಯ ಹವ್ಯಾಸಗಳಿಂದ ಮನಸ್ಸನ್ನು ತಿಳಿಯಾಗಿಸಿ. ನಿಮ್ಮ ಸಂಗಾತಿ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅವಕಾಶವಾದಾಗ, ನೀವು ನಿಮ್ಮ ಸಮಯವನ್ನು ಹೊರಗೆ ಕಳೆಯಿರಿ.ಈ ಮೂಲಕ ಒತ್ತಡವು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು.

7. ಮನಸ್ಸಿಗೆ ಭಾರವೆನಿಸುವುದನ್ನು ಬಿಟ್ಟು ಬಿಡುವುದನ್ನು ರೂಢಿಸಿಕೊಳ್ಳಿ

7. ಮನಸ್ಸಿಗೆ ಭಾರವೆನಿಸುವುದನ್ನು ಬಿಟ್ಟು ಬಿಡುವುದನ್ನು ರೂಢಿಸಿಕೊಳ್ಳಿ

ವರಟಾದ ಹಗ್ಗವನ್ನು ಕೈಯಲ್ಲಿ ಒಂದೇ ಸಮ ಹಿಡಿದಿಟ್ಟುಕೊಂಡಲ್ಲಿ ಕೈ ಗಾಯವಾಗುವುದು ನೋವಾಗುವುದು ಸಹಜ ಅಲ್ಲವೇ? ಅಂತೆಯೇ ಸಂಗಾತಿಯಿಂದ ಉಂಟಾಗಿರಬಹುದಾದ ಅಸಮಾಧಾನ, ನೋವು, ಬೇಸರವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಸಾಧಿಸುವ ಬದಲು ಬಿಟ್ಟು ಬಿಡುವುದೇ ಕ್ಷೇಮ. ಮನಸ್ಸಿನಲ್ಲಿ ಇಟ್ಟುಕೊಂಡಷ್ಟು ಮನಸ್ಸು ಭಾರವಾಗಿ ಒತ್ತಡ ಹೆಚ್ಚಾಗುತ್ತದೆ ವಿನಹ ಉಪಯೋಗವೇನಿಲ್ಲ. ಬಹಳ ಕಷ್ಟವೆನಿಸಿದಲ್ಲಿ ಸಂಗಾತಿಯೊಡನೆ ಕುಳಿತು ತಾಳ್ಮೆಯಿಂದ, ಮೃದುವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಸಿಟ್ಟು,ಕೋಪ,ಅಹಂ ಭಾವಗಳನ್ನು ಎಂದಿಗೂ ಬೆಳೆಯಲು ಬೇಡಿ. ನಿಜವಾದ ಪ್ರೀತಿ ಇದ್ದಲ್ಲಿ, ಇವುಗಳನ್ನು ಪೋಷಿಸಬಾರದು ಬದಲಿಗೆ ಬುಡ ಸಮೇತ ಕಿತ್ತುಹಾಕಿ ನಿಮ್ಮ ಮನಸೇ ಹಗುರವಾಗುತ್ತದೆ.ಒತ್ತಡವು ತಾನಾಗೇ ದೂರವಾಗುತ್ತದೆ. ಇನ್ನೂ ಪರಿಹಾರ ದೊರಕದ ಪಕ್ಷದಲ್ಲಿ ನುರಿತ ಸಲಹೆಗಾರರೊಂದಿಗೆ ಕೂಡಿ ಮಾರ್ಗದರ್ಶನ ಪಡೆದುಕೊಳ್ಳಿ. ಕಷ್ಟದ ಬಲೆಯಿಂದ ಬಿಡಿಸಿಕೊಳ್ಳುವುದಕ್ಕೆ ದಾರಿ ಹುಡುಕಬೇಕೆ ವಿನಹ ಬಲೆಯಲ್ಲೇ ಸಿಲುಕಿ ನರಳುವುದರಲ್ಲಿ ಅರ್ಥವಿಲ್ಲ.

English summary

How Marital stress can slow down recovery from heart attack in kannada

Here we are discussing about how marital stress can slow down the recovery from heart attack. Tips to mitigate the risk and how to deal with stress.
Story first published: Monday, November 28, 2022, 15:05 [IST]
X
Desktop Bottom Promotion