ಅಧ್ಯಯನ ವರದಿ: ಕುಳಿತಲ್ಲೇ ಕೆಲಸ ಮಾಡುತ್ತಿರುವಿರಾದರೆ ಎಚ್ಚರ!

By: manu
Subscribe to Boldsky

ಇಂದಿನ 4ಜಿ ಯುಗದಲ್ಲಿ ಪ್ರತಿಯೊಂದು ಕೆಲಸವು ಕುಳಿತಲ್ಲಿಂದಲೇ ಆಗುತ್ತಿರುವಾಗ ಎದ್ದು ಮೈಕೈಗೆ ಶ್ರಮ ನೀಡಬಲ್ಲ ಕೆಲಸ ಕಡಿಮೆಯಾಗುತ್ತಾ ಇದೆ. ಕಂಪ್ಯೂಟರ್ ಮುಂದೆ ಕುಳಿತರೆ ಪ್ರತಿಯೊಂದು ಕೆಲಸವೂ ನಡೆಯುತ್ತಾ ಇರುತ್ತದೆ. ಆದರೆ ಇಂತಹ ಕೆಲಸಗಳಿಂದ ಹೃದಯದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ. ನೀವು ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುವವರಾದರೆ ಪ್ರತೀ ಅರ್ಧ ಗಂಟೆಗೊಮ್ಮೆ ಎದ್ದು ಎರಡು ನಿಮಿಷ ಕಾಲ ನಡೆದಾಡಬೇಕು.

Heart Disease Risk

ಇದರಿಂದ ಅಪಧಮನಿಗಳನ್ನು ಮುಚ್ಚಿ ಹಾಕುವಂತಹ ಕೊಬ್ಬಿನಾಮ್ಲದ ಮಟ್ಟವು ಕಡಿಮೆಯಾಗುವುದು. ಕುಳಿತುಕೊಂಡೇ ಕೆಲಸ ಮಾಡುವಂತಹ ಜನರು ಹೃದಯದ ಕಾಯಿಲೆ, ಮಧುಮೇಹ ಮತ್ತು ಎಲ್ಲಾ ರೀತಿಯ ಸಾವಿಗೆ ಒಳಗಾಗುವುದು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ. 

ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ

ಆಗಾಗ ನಡೆದಾಡುತ್ತಾ ಕೆಲಸದಿಂದ ವಿರಾಮ ಪಡೆದರೆ ದೈಹಿಕವಾಗಿ ಕೆಲಸ ಮಾಡಿದಂತಾಗುವುದು. ಇದೆರಡು ಸಂಯೋಜನೆಯಾದಾಗ ಜನರ ಚಯಾಪಚಾಯ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ ಎಂದು ಜರ್ನಲ್ ಆಫ್ ಕ್ಲಿನಿಕಲ್ ಲಿಪಿಡೊಲೊಜಿಯಲ್ಲಿ ಪ್ರಕಟಗೊಂಡಿದೆ. 

ಹೃದಯ ರೋಗದ ಲಕ್ಷಣಗಳಿವು..ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಇಲ್ಲಿ ಅತೀ ಮುಖ್ಯವಾದ ಸಂದೇಶವಿದೆಯೆಂದು ನಮಗನಿಸುತ್ತದೆ. ಅರ್ಧ ಗಂಟೆ ಕೆಲಸದ ಬಳಿಕ ಸಿಗುವಂತಹ ವಿರಾಮವು ತುಂಬಾ ಮುಖ್ಯವಾಗಿರುತ್ತೆ. ಸಣ್ಣ ಸಣ್ಣ ವಿರಾಮದ ವೇಳೆ ನಡೆದಾಡುತ್ತಾ ಇದ್ದರೆ ಅದು ದೀರ್ಘವಾಗಿ ಕುಳಿತುಕೊಂಡು ಕೆಲಸ ಮಾಡುವ ಅವಧಿಯನ್ನು ಕಡಿಮೆ ಮಾಡಲಿದೆ ಎಂದು ನ್ಯೂಜಿಲ್ಯಾಂಡ್‌ನ ಒಟಾಗೊ ವಿಶ್ವವಿದ್ಯಾನಿಲಯದ ಲೇಖಕ ಮೆರೆಡಿಟ್ ಪೆಡ್ಡಿ ತಿಳಿಸಿದರು. 

ಹೃದಯ ಆರೋಗ್ಯವಾಗಿ ಇರಬೇಕೆಂದರೆ, 'ಆಹಾರ ಪಥ್ಯ' ಹೀಗಿರಲಿ... 

walking

ದೀರ್ಘ ಕಾಲದ ತನಕ ಕುಳಿತುಕೊಂಡು ಕೆಲಸ ಮಾಡುವಂತಹ ಕಚೇರಿ ಉದ್ಯೋಗಿಗಳು ಪ್ರತೀ ಅರ್ಧ ಗಂಟೆಗೊಮ್ಮೆ ಎದ್ದು ವೇಗವಾಗಿ ನಡೆದಾಡಿದರೆ ಆಗ ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟವು ಸರಿಯಾಗಿರುತ್ತದೆ. ಈ ನಿಯಮವನ್ನು ತಿಂಗಳುಗಳು ಅಥವಾ ವರ್ಷಗಳ ತನಕ ಮುಂದುವರಿಸಿದರೆ ಆಗ ದೀರ್ಘ ಸಮಯ ಕುಳಿತುಕೊಳ್ಳುವುದರಿಂದ ವಿರಾಮ ಪಡೆಯುವಂತಹವರ ಹೃದಯದ ಆರೋಗ್ಯವು ಒಳ್ಳೆಯ ರೀತಿಯಲ್ಲಿರುತ್ತದೆ ಎಂದು ಪೆಡ್ಡಿ ತಿಳಿಸಿದರು.

English summary

This Is One Best Way To Cut Heart Disease Risk

Do you spend your day sitting for long hours? Beware, it may increase the risk of cardiovascular disease. Getting up and taking brisk walks for two minutes every half an hour may significantly lower the level of fatty acids that lead to clogged arteries, researchers say. The study found that people who spend increasing time sitting may be at an increased risk of cardiovascular disease, diabetes or death from all causes.
Subscribe Newsletter