For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ರಕ್ತದ ಗುಂಪಿಗೆ ಅನುಗುಣವಾಗಿ ಹೃದಯಾಘಾತ!

By Hemanth
|

ಹೃದಯಾಘಾತವೆನ್ನುವುದು ಯಾರಿಗೆ ಬೇಕಾದರೂ ಬರಬಹುದು. ಅದು ವ್ಯಕ್ತಿಯನ್ನು ನೋಡಿ ಬರುವುದಿಲ್ಲವೆಂದು ನಾವು ಅಂದುಕೊಂಡಿರುತ್ತೇವೆ. ಆದರೆ ಇದು ಖಂಡಿತವಾಗಿಯೂ ನಮ್ಮಲ್ಲಿರುವಂತಹ ತಪ್ಪು ಭಾವನೆಯಾಗಿದೆ. ಯಾಕೆಂದರೆ ಎ, ಬಿ ಮತ್ತು ಎಬಿ ರಕ್ತಗುಂಪಿನವರು ಒ ರಕ್ತಗುಂಪಿನವರಿಗಿಂತ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಹೇಳಿವೆ.

ರಕ್ತದಲ್ಲಿರುವ ಹೆಪ್ಪುಗಟ್ಟುವ ಪ್ರೋಟೀನ್ ವಾನ್ ವಿಲ್ಲೆಬ್ರಾಂಡ್ ನ ಸಾಂದ್ರತೆ ಹೆಚ್ಚಾಗಿರುವ ಕಾರಣದಿಂದ ಹೀಗಾಗುತ್ತದೆ. ಎ ರಕ್ತಗುಂಪನ್ನು ಹೊಂದಿರುವಂತವರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿರುತ್ತದೆ. ಇದು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಂಶೋಧನೆಗಳು ಹೇಳಿವೆ.

Blood Group

ಒ ರಕ್ತಗುಂಪು ಅಲ್ಲದೆ ಇರುವವರಲ್ಲಿ ಗಾಲೆಕ್ಟಿನ್-3 ಎನ್ನುವ ಪ್ರೋಟೀನ್ ಇರುತ್ತದೆ. ಇದು ಉರಿಯೂತವನ್ನು ನಿರ್ಮಿಸುತ್ತದೆ. ಇದರಿಂದ ಹೃದಯಾಘಾತಗೊಂಡ ರೋಗಿಗಳ ಪರಿಸ್ಥಿತಿಯು ಮತ್ತಷ್ಟು ಕೆಟ್ಟದಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!

ಒ ರಕ್ತಗುಂಪನ್ನು ಹೊಂದಿರುವ ವ್ಯಕ್ತಿಗಳ ಪರಿಧಮನಿಯಲ್ಲಿ ಶೇ.9ರಷ್ಟು ಅಪಾಯ ಹೆಚ್ಚಿರುತ್ತದೆ ಮತ್ತು ಹೃದಯರಕ್ತನಾಳಗಳಲ್ಲಿ ಶೇ.9ರಷ್ಟು ಹೆಚ್ಚುವರಿ ಅಪಾಯವಿರುತ್ತದೆ ಎಂದು ಅಧ್ಯಯನ ನಡೆಸಿರುವಂತಹ ನೆದರ್ಲೆಂಡ್‌ನ ಗ್ರೊನಿಂಗೆನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಭಾಗದ ವಿದ್ಯಾರ್ಥಿಯಾಗಿರುವ ತೆಸ್ಸಾ ಕೊಳೆ ಹೇಳಿದ್ದಾರೆ.

2017ರ ಹೃದಯಾಘಾತ ಮತ್ತು 4ನೇ ವಿಶ್ವ ಹೃದಯಾಘಾತ ಕಾಂಗ್ರೆಸ್‌ನಲ್ಲಿ ಈ ಅಧ್ಯಯನ ವರದಿಯನ್ನು ಮಂಡಿಸಲಾಗಿದೆ. ಒ ರಕ್ತ ಗುಂಪು ಮತ್ತು ಒ ರಕ್ತದ ಗುಂಪು ಅಲ್ಲದೆ ಇರುವವಂತಹ ವ್ಯಕ್ತಿಗಳನ್ನು ಅಧ್ಯಯನ ತಂಡವು ಮೆಟಾ ವಿಶ್ಲೇಷಣೆಗೆ ಒಳಪಡಿಸಿದೆ. ಇದರಲ್ಲಿ ಹೃದಯಾಘಾತ, ಪರಿಧಮನಿ ಕಾಯಿಲೆ, ಹೃದಯ ವೈಫಲ್ಯ, ಹೃದಯರಕ್ತನಾಳದ ಸಮಸ್ಯೆಯನ್ನು ಪರೀಕ್ಷೆಗೊಳಪಡಿಸಲಾಯಿತು. ಹೃದಯರಕ್ತನಾಳದ ತಡೆಗೆ ರಕ್ತದ ಗುಂಪು ಪ್ರಮುಖ ಅಪಾಯವಾಗಿದೆ. ಇದರೊಂದಿಗೆ ಕೊಲೆಸ್ಟ್ರಾಲ್, ವಯಸ್ಸು, ಲಿಂಗ ಮತ್ತು ರಕ್ತದೊತ್ತಡ ಕೂಡ ಪ್ರಮುಖ ಕಾರಣವಾಗಿದೆ ಎಂದು ಕೊಳೆ ತಿಳಿಸಿದರು.

ಇನ್ನು ಟೀ ಕುಡಿಯುವ ಮೊದಲು 'ರಕ್ತದ ಗುಂಪು' ತಿಳಿದಿರಲಿ!

English summary

How Blood Group Can Predict Risk Of Heart Attack?

People having a non-O blood group A, B, AB may be at 9 per cent higher risk of suffering a heart attack and overall cardiovascular mortality compared to those with O-blood group, a research has showed. The findings revealed that the higher risk may be due to having greater concentrations of von Willebrand factor - a blood clotting protein which has been associated with thrombotic events. People with A blood group are known to have higher cholesterol, which is a leading risk factor for heart attack.
Story first published: Thursday, May 18, 2017, 19:47 [IST]
X
Desktop Bottom Promotion