For Quick Alerts
ALLOW NOTIFICATIONS  
For Daily Alerts

  ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ

  By Manu
  |

  ಕಾಲ ಬದಲಾದಂತೆ ಸವಲತ್ತುಗಳೂ ಹೆಚ್ಚುತ್ತಿವೆ. ನಮ್ಮ ದಿನಚರಿಗಳೂ ಬದಲಾಗುತ್ತಿವೆ. ದೈಹಿಕ ಶ್ರಮ ಹಿಂದೆ ಇದ್ದ ಹತ್ತರಲ್ಲಿ ಒಂದು ಅಂಶವೂ ಈಗ ಇಲ್ಲ. ಅಲ್ಲದೇ ಸಿದ್ಧ ಆಹಾರಗಳೊಂದಿಗೇ ದೇಹದಲ್ಲಿ ಕೊಬ್ಬು ಹೆಚ್ಚಿಸುವ, ಸ್ಥೂಲಕಾಯ ಪಡೆದಿರುವುದನ್ನೂ ಗಮನಿಸಬಹುದು. ಹೆಚ್ಚಿದ ಮಾನಸಿಕ ಒತ್ತಡ, ಕಡಿಮೆಯಾದ ದೈಹಿಕ ಚಟುವಟಿಕೆ ಮೊದಲಾದವು ನಮ್ಮ ದೇಹದ ಅಂಗಗಳನ್ನೂ ಅವು ಯಾವುದಕ್ಕೆ ತಯಾರಾಗಿದ್ದವೋ ಅಷ್ಟು ಪ್ರಮಾಣದಲ್ಲಿ ಕೆಲಸ ಮಾಡದೇ ಹಲವು ತೊಂದರೆಗಳಿಗೆ ಸುಲಭವಾಗಿ ತುತ್ತಾಗುತ್ತವೆ.

  ಇದರಲ್ಲಿ ಪ್ರಮುಖವಾದುದು ಎಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದು, ಮಧುಮೇಹ ಮತ್ತು ಹೃದಯ ಸಂಬಂಧಿ ತೊಂದರೆಗಳು. ಒಂದು ವೇಳೆ ನಿಮಗೆ ಹೃದಯ ಸಂಬಂಧಿ ತೊಂದರೆ ಇದ್ದರೆ ಆಲೋಪಥಿ ವಿಧಾನವನ್ನು ಅನುಸರಿಸುವ ಮುನ್ನ ನೈಸರ್ಗಿಕವಾದ ಆಯುರ್ವೇದ ಪದ್ಧತಿಯ ವಿಧಾನವನ್ನು ಅನುಸರಿಸುವುದು ಉತ್ತಮ.

  ಈ ಗಿಡಮೂಲಿಕೆಗಳು ಕೊಂಚ ನಿಧಾನವಾಗಿ ಪರಿಣಾಮ ಬೀರಿದರೂ ಇವು ಯಾವುದೇ ಅಡ್ಡಪರಿಣಾಮವಿಲ್ಲದೇ ಆರೋಗ್ಯವನ್ನು ಮತ್ತೆ ಮೊದಲಿನಂತಾಗಿಸಲು ನೆರವಾಗುತ್ತವೆ. ಒಂದು ವೇಳೆ ನಿಮ್ಮ ಹೃದಯದಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಿರುವ ತಡೆ (ಅಥವಾ ಬ್ಲಾಕ್) ಇದ್ದರೆ ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿರುವ ವಿಧಾನಗಳು ಅದ್ಭುತ ಪರಿಣಾಮ ಬೀರಬಲ್ಲವು...

  ಅರ್ಜುನ ಮರದ ತೊಗಟೆ

  ಅರ್ಜುನ ಮರದ ತೊಗಟೆ

  ಗ್ರಂಥಿಗೆ ಅಂಗಡಿಯಲ್ಲಿ ಅರ್ಜುನ ಮರದ ತೊಗಟೆಯ ಪುಡಿ ಸಿಗುತ್ತದೆ. ಈ ಪುಡಿ ರಕ್ತದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ರಕ್ತನಾಳಗಳ ಒಳಭಾಗದಲ್ಲಿ ಜಿಡ್ಡು ತುಂಬಿಕೊಂಡು ತಡೆ ಉಂಟಾಗಿರುವುದು, ಹೃದಯದ ಪ್ರಮುಖ ರಕ್ತನಾಳದ ತೊಂದರೆ ಮೊದಲಾದ ತೊಂದರೆಗೆ ಸೂಕ್ತವಾದ ಔಷಧಿಯಾಗಿದೆ. ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಿಸಲು ನೆರವಾಗುವ ಈ ಪುಡಿಯನ್ನು ರಕ್ತಪರಿಚಲನೆಗೆ ತಡೆ ಇರುವ ಹೃದಯವನ್ನು ಸುಗಮಗೊಳಿಸಲು ಆಯುರ್ವೇದ ಶಿಫಾರಸ್ಸು ಮಾಡುತ್ತದೆ. ಈ ಪುಡಿಯಲ್ಲಿ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣವೂ ಇದ್ದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

  ದಾಲ್ಚಿನ್ನಿ ಚೆಕ್ಕೆ

  ದಾಲ್ಚಿನ್ನಿ ಚೆಕ್ಕೆ

  ದಾಲ್ಚಿನ್ನಿಯ ಚೆಕ್ಕೆ ಅಥವಾ ಸಾಮಾನ್ಯ ಅಡುಗೆಯಲ್ಲಿ ಬಳಸುವ ಚೆಕ್ಕೆಯನ್ನು ಹಲವು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಸಹಾ ಬಳಸಬಹುದು. ಇದರ ಹಲವು ಉಪಯೋಗಗಳಲ್ಲಿ ಹೃದಯದ ನಾಳಗಳನ್ನು ಸ್ವಚ್ಛಗೊಳಿಸುವ ಕ್ಷಮತೆಯೂ ಸೇರಿದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಅತಿ ಶೀಘ್ರವಾಗಿ ಕಡಿಮೆಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಇದರ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣ ಕೆಲಸಕ್ಕೆ ಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ದಾಲ್ಚಿನ್ನಿ ಚೆಕ್ಕೆ

  ದಾಲ್ಚಿನ್ನಿ ಚೆಕ್ಕೆ

  ನಿಯಮಿತವಾಗಿ ಚೆಕ್ಕೆಯ ಪುಡಿಯನ್ನು ಸೇವಿಸುತ್ತಾ ಬರುವ ಮೂಲಕ ಉಸಿರಾಟ ಕಷ್ಟಕರವಾಗಿರುವುದನ್ನು ಸುಗಮಗೊಳಿಸುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಕಫವನ್ನು ಸಡಿಲಗೊಳಿಸಿ ಉಸಿರಾಟ ಸರಾಗ ಮತ್ತು ನಿರಾಳವಾಗಿಸಲು ನೆರವಾಗುತ್ತದೆ.

  ಅಗಸೆ ಬೀಜಗಳು: (Flax Seeds)

  ಅಗಸೆ ಬೀಜಗಳು: (Flax Seeds)

  ಹಿಂದಿಯಲ್ಲಿ ಅಲ್ಸಿ ಎಂದೂ ಕರೆಯಲ್ಪಡುವ ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಈ ಆಮ್ಲಗಳು ರಕ್ತನಾಳಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಿರುವ 'ಆಮ' ಅಥವಾ ತಡೆಯನ್ನು ನಿವಾರಿಸಿ ಹೃದಯದ ಕ್ಷಮತೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಬೆಳ್ಳುಳ್ಳಿಯ ಉತ್ತಮ ಗುಣವೆಂದರೆ ದೇಹದ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯ. ಇದರಿಂದ ರಕ್ತಕ್ಕೆ ಈ ಕೆಲಸಕ್ಕಾಗಿ ಹೆಚ್ಚಿನ ಒತ್ತಡದಿಂದ ರಕ್ತವನ್ನು ಕಳುಹಿಸುವ ಅಗತ್ಯ ತಲೆದೋರದೇ ಅಷ್ಟರ ಮಟ್ಟಿಗೆ ಒತ್ತಡದಿಂದ ದೂರವಾಗುತ್ತದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಅಲ್ಲದೇ ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಪ್ರತಿದಿನ ಬಿಟ್ಟು ದಿನ ರಾತ್ರಿ ಊಟದ ಬಳಿಕ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಟ್ಟಕ್ಕೆ ಬರುತ್ತದೆ.

  ಏಲಕ್ಕಿ

  ಏಲಕ್ಕಿ

  ಏಲಕ್ಕಿಯನ್ನು ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಲು ಕೇವಲ ಇದರ ಸುವಾಸನೆ ಮಾತ್ರ ಕಾರಣವಲ್ಲ, ಇದರ ಆರೋಗ್ಯಕರ ಗುಣಗಳೂ ಇದಕ್ಕೆ ಕಾರಣವಾಗಿವೆ. ಆಯುರ್ವೇದದಲ್ಲಿ ಹೃದಯಸಂಬಂಧಿ ತೊಂದರೆಗಳಿಗೆ ಏಲಕ್ಕಿಯನ್ನು ಬಳಸುವಂತೆ ಸಲಹೆ ಮಾಡಲಾಗಿದೆ.

  ಕೆಂಪು ಮೆಣಸಿನ ಪುಡಿ

  ಕೆಂಪು ಮೆಣಸಿನ ಪುಡಿ

  ನಿಮಗೆ ನಂಬಲಿಕ್ಕೆ ಕಷ್ಟವಾಗಬಹುದು, ಆದರೆ ಮೆಣಸಿನ ಪುಡಿ ಆಹಾರಕ್ಕೆ ಖಾರವಾದ ರುಚಿ ನೀಡುವ ಜೊತೆಗೇ ಔಷಧಿಯಂತೆಯೂ ಕೆಲಸ ಮಾಡುತ್ತದೆ. ಆದರೆ ಇದಕ್ಕೆ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಇದರಿಂದ ರಕ್ತದಲ್ಲಿ ಸಂಗ್ರಹವಾಗಿದ್ದ ಜಿಡ್ಡು ಸಡಿಲವಾಗಿ ಹೊರಹೋಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ, ತನ್ಮೂಲಕ ಹಲವು ಇತರ ತೊಂದರೆಗಳಿಂದಲೂ ರಕ್ಷಿಸುತ್ತದೆ.

   

  English summary

  Ayurvedic Remedies To Cure Heart Blockage

  With the change in time, our lifestyles have also changed. A healthy lifestyle of the yore has changed into the sedentary lifestyle of now. A sedentary lifestyle coupled with high stress, excessive amount of junk food, too less of an exercise, etc, has given rise to many lifestyle-related diseases. Today, we at Boldsky will present you with Ayurvedic remedies if you are facing the problem of heart blockage, have a look at these.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more