Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದಿನಕ್ಕೊಂದು ಸೇಬು ಬಿಪಿ -ಹೃದಯ ಕಾಯಿಲೆಗಳನ್ನು ದೂರವಿಡುವುದು
ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಕಾಡುವ ಅಧಿಕ ರಕ್ತದೊತ್ತಡ ಅಥವಾ ಬಿಪಿಯ ಸಮಸ್ಯೆಯು ಹಲವು ತೊಂದರೆಗಳಿಗೆ ಕಾರಣಾಗಬಹುದು ಇದರಲ್ಲಿ ಪ್ರಮುಖವಾದುದು ಹೃದಯದ ಕಾಯಿಲೆಗಳು ಮತ್ತು ಮೂತ್ರಪಿಂಡದ ಕಾಯಿಲೆ. ಆದ್ದರಿಂದ ಬೀಪಿಯನ್ನು 120/80 mm Hg ರ ಮಟ್ಟದಲ್ಲಿಯೇ ಇರಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳಲು ಅತಿ ಅಗತ್ಯ.
ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಂತುಲಿತ ಆಹಾರ ಮತ್ತು ಸೂಕ್ತಮಟ್ಟದ ವ್ಯಾಯಾಮ ಎರಡೂ ಅಗತ್ಯ. ಆದರೂ ಅಧಿಕ ರಕ್ತದೊತ್ತಡ ಕೆಲವೊಮ್ಮೆ ತಹಬಂದಿಗೆ ಬರುವುದೇ ಇಲ್ಲ. ಆಗ ವೈದ್ಯರು ಕೆಲವು ಔಷಧಿಗಳನ್ನು ಬರೆದು ನೀಡುತ್ತಾರೆ. ಆದರೆ ಔಷಧಿಗೆ ಗುಲಾಮರಾಗುವ ಮುನ್ನ ನಿಸರ್ಗ ನೀಡಿರುವ ಈ ಅದ್ಭುತ ಔಷಧಿಯನ್ನೇಕೆ ಪ್ರಯತ್ನಿಸಬಾರದು? ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ

ಇದೇ ಎಲ್ಲರ ನೆಚ್ಚಿನ ಸೇಬು ಹಣ್ಣು. ಸರಿಸುಮಾರು ವರ್ಷವಿಡೀ ಲಭ್ಯವಿರುವ ಈ ಸೇಬು ಹಣ್ಣು ಒಂದು ಔಷಧದ ರೂಪದಲ್ಲಿ ನಿತ್ಯವೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಒಂದು ಕಪ್ ಸೇಬುಹಣ್ಣಿನ ತಿರುಳಿನಲ್ಲಿ 117 mg ಪೊಟ್ಯಾಶಿಯಂ ಇದ್ದು ದೇಹದ ದ್ರವಕ್ಕೆ ಅಗತ್ಯವಾಗಿ ಬೇಕಾದ ಎಲೆಕ್ಟ್ರೋಲೈಟುಗಳ ಕೊರತೆಯನ್ನು ತುಂಬಿಸುತ್ತದೆ. ಇದೊಂದು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರದ ಪ್ರಮಾಣ ಹೆಚ್ಚಿಸುವ ಮೂಲಕ ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತದೆ. ನೈಸರ್ಗಿಕವಾಗಿ ಬಿಪಿ ತಗ್ಗಿಸುವ ವಿಧಾನಗಳು
ಸೇಬಿನಲ್ಲಿರುವ ಪೋಷಕಾಂಶಗಳು ನಮ್ಮ ರಕ್ತದಲ್ಲಿನ ಉಪ್ಪಿನ ಅಂಶ ಅಥವಾ ವಿಶೇಷವಾಗಿ ಸೋಡಿಯಂ ಲವಣದ ಪ್ರಮಾಣವನ್ನು ತಗ್ಗಿಸುತ್ತವೆ. ಕಠಿಣವಾಗಿ ನಿವಾರಿಸಬೇಕಾದ ಸೋಡಿಯಂ ಅನ್ನು ಸುಲಭವಾಗಿ ನಿವಾರಿಸುವ ಮೂಲಕ ದೇಹದಲ್ಲಿ ದ್ರವದ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಸೇಬಿನ ಗ್ಲೈಸೆಮಿಕ್ ಇಂಡೆಕ್ಸ್ ಅಥವಾ ಜೀರ್ಣಗೊಂಡು ರಕ್ತಕ್ಕೆ ಬರುವ ಕೋಷ್ಟಕದ ಸಂಖ್ಯೆ 40, ಅಂದರೆ ತಿಂದ ಬಳಿಕ ಆರಾಮವಾಗಿ ರಕ್ತಕ್ಕೆ ಬರುತ್ತದೆ.
ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸಂಖ್ಯೆಯಾಗಿದ್ದು ಸೇಬು ಮಧುಮೇಹಿಗಳಿಗೆ ತಕ್ಕ ಆಹಾರವಾಗಿದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಗ್ರಹಿಸಿ ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ.
ನಿತ್ಯವೂ ಸೇಬುಹಣ್ಣೊಂದನ್ನು ತಿನ್ನಲು ಕೆಲವು ಸಲಹೆಗಳು
* ಪ್ರತಿದಿನ ನಿಮ್ಮ ಮಧ್ಯಾಹ್ನದ ಊಟದ ಡಬ್ಬಿಯಲ್ಲಿ ಸೇಬುಹಣ್ಣೊಂದನ್ನು ಸೇರಿಸಿ. ಈ ಹಣ್ಣನ್ನು ಆಫೀಸ್‌ನಲ್ಲಿ ಮುಂಜಾನೆಯ ಮತ್ತು ಮಧ್ಯಾಹ್ನದ ಊಟದ ನಡುವೆ ಹಸಿವಾದಾಗ ತಿನ್ನಲು ಅಥವಾ ಉಪಾಹಾರದ ಬಳಿಕ ತಿನ್ನಲು ಉಪಯೋಗಿಸಿ. ಬೆಳಿಗ್ಗೆ ತಿಂದರೇ ಸೇಬುಹಣ್ಣಿನ ಹೆಚ್ಚು ಫಲಗಳನ್ನು ಪಡೆದಂತಾಗುತ್ತದೆ.
* ಇನ್ನೊಂದು ವಿಧಾನವೆಂದರೆ ನಿಮ್ಮ ನಿತ್ಯದ ಸಾಲಾಡ್‌ನೊಂದಿಗೆ ಚಿಕ್ಕ ತುಂಡುಗಳನ್ನಾಗಿಸಿ ಸೇರಿಸಿ ಸೇವಿಸಿ.
* ಸೇಬು ಹಣ್ಣನ್ನು ಇಡಿಯಾಗಿಯೇ ಸೇವಿಸುವುದೇ ಉತ್ತಮ. ಇದರ ರಸ ಅಷ್ಟೊಂದು ಉತ್ತಮವಲ್ಲ. ಮಾರುಕಟ್ಟೆಯಲ್ಲಿ ಸೇಬಿನ ರಸ ಎಂದು ಸಿಗುವ ಜ್ಯೂಸ್ ಸಹಾ ನಿಜವಾದ ಸೇಬಿನ ರಸ ಅಲ್ಲವೇ ಅಲ್ಲ, ಕೇವಲ ಐದೋ ಹತ್ತು ಶೇಖಡಾ ಸೇಬಿನ ರಸವಿದ್ದು ಉಳಿದದ್ದೆಲ್ಲಾ ಕೃತಕ ರುಚಿಕಾರಕ (flavour) ಗಳನ್ನು ಸೇರಿಸಿದ ಜ್ಯೂಸ್ ಕೆಟ್ಟದ್ದನ್ನೇ ಮಾಡುವುದು ಹೆಚ್ಚು.
* ಸೇಬು ಹಣ್ಣನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಜ್ಯೂಸ್ ಮಾಡುವುದೂ ಸರಿಯಲ್ಲ, ಈ ಸಂದರ್ಭದಲ್ಲಿ ಕೆಲವು ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ* ಸೇಬು ಹಣ್ಣನ್ನು ಸಿಪ್ಪೆ ಸಹಿತವೇ ತಿನ್ನಬೇಕು. ಏಕೆಂದರೆ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಫೈಟೋ ಕೆಮಿಕಲ್ಸ್ ಕಣಗಳಿದ್ದು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


