For Quick Alerts
ALLOW NOTIFICATIONS  
For Daily Alerts

ರಕ್ತದೊತ್ತಡವನ್ನು ಹದ್ದು ಬಸ್ತಿನಲ್ಲಿಡುವ ಟಾಪ್ ಫುಡ್

|

ನಾಗರಿಕತೆ ಹಲವು ಸೌಲಭ್ಯಗಳಿಂದ ನಮಗೆ ಅನುಕೂಲತೆ ಕಲ್ಪಿಸಿಕೊಟ್ಟಿದೆಯಾದರೂ ಜೊತೆಜೊತೆಗೇ ನಮ್ಮನ್ನು ಸೋಮಾರಿಗಳನ್ನಾಗಿಯೂ ಮಾಡಿದೆ. ಜಡತ್ವ ಹಲವು ರೋಗಗಳಿಗೆ ಆಹ್ವಾನ ನೀಡಿದೆ.

ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳು ಮೊದಲಾದವು ಚಿಕ್ಕವಯಸ್ಸಿನಲ್ಲಿಯೇ ಧಾಳಿಯಿಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡದ ಕಾರಣ ಇನ್ನೂ ಹಲವು ಕಾಯಿಲೆಗಳು ಕೇಳದೇ ದೇಹದ ಕದತಟ್ಟುತ್ತಿವೆ. ಇದರಲ್ಲಿ ಪ್ರಮುಖವಾದುದು ಏರಿದ ರಕ್ತದೊತ್ತಡ.

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯವಾದ ಆರೋಗ್ಯದ ಸಮಸ್ಯೆಯಾಗಿದ್ದು, ಇದು ಅಧಿಕ ಸಂದರ್ಭಗಳಲ್ಲಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡದಿಂದ ನರಳುವ ಸುಮಾರು ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳು ಕಂಡು ಬಂದಿರುವುದಿಲ್ಲ. ರಕ್ತವು ರಕ್ತ ನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಉಂಟು ಮಾಡುವ ಒತ್ತಡವೇ ರಕ್ತದೊತ್ತಡ.

A leading factor in the fluctuating blood pressure of today’s generation is stress. Hence, one of the leading ways to keep pressure in check is to keep stress in control. However, to keep stress in control, there are many things that revolve around it. Just by saying that one has to control stress does not fulfill the purpose. So boldsky suggest such kind of food which should help to reduce blood preasure naturally

ಅಂದರೆ ಯಾವಾಗ ಒಬ್ಬ ವ್ಯಕ್ತಿಯು ತಾನು ಅಧಿಕ ರಕ್ತದೊತ್ತಡದಿಂದ ನರಳುತ್ತಿದ್ದೇನೆ ಎಂದು ಹೇಳುತ್ತಾನೋ, ಆಗ ಅವನ ಅಪಧಮನಿಯ ಗೋಡೆಗಳು ಹೃದಯದಿಂದ ಪಂಪ್ ಆಗಿ ಬರುವ ರಕ್ತದ ಅಧಿಕವಾದ ಒತ್ತಡವನ್ನು ಸ್ವೀಕರಿಸುತ್ತಿವೆ ಎಂದು ಭಾವಿಸಿ. ಸಾಮಾನ್ಯವಾದ ರಕ್ತದೊತ್ತಡವು 140/80mmHg ಇರುತ್ತದೆ. ಯಾವಾಗ ಇದು 140/90mmHg ಆಗುತ್ತದೋ, ಆಗ ನೀವು ಅದಕ್ಕಾಗಿ ಪರೀಕ್ಷೆಯನ್ನು ನಡೆಸಿ ಕಾರಣವನ್ನು ತಿಳಿದು ಕೊಳ್ಳಬಹುದು.

ಆದರೆ ಇದು ವಯಸ್ಸು ಮತ್ತು ಮಾನಸಿಕ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತ ಹೋಗುತ್ತದೆ. 30 ವರ್ಷ ಮೇಲ್ಪಟ್ಟವರು ಯಾರೇ ಆಗಿರಲಿ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಬನ್ನಿ ಇಂತಹ ಮಾರಕ ಕಾಯಿಲೆ ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ನಿಯಂತ್ರಿಸುವ ಬಗೆ ಹೇಗೆ ಎಂಬುದನ್ನು ನೋಡೋಣ..

ಅಗಸೆ ಬೀಜ
ಅಗಸೆ ಬೀಜ ಅಥವಾ ನಾರಗಸೆಯು ಪ್ರಮುಖ ಒಮೆಗಾ -3 ಕೊಬ್ಬಿನ ಆಮ್ಲವನ್ನು ಹೊಂದಿದ್ದು, ಆಲ್ಫಾ ಲಿನೋಲೆನಿಕ್ ಆಸಿಡ್ ನ ಸಂಯುಕ್ತ ಸಮೃದ್ಧತೆಯನ್ನು ಹೊಂದಿದೆ. ಹಲವಾರು ಅಧ್ಯಯನಗಳು ಪ್ರಸ್ತುತ ಪಡಿಸಿರುವಂತೆ ಅಗಸೆ ಬೀಜವನ್ನು ರಕ್ತದೊತ್ತಡ ಇರುವವರು ತಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಒತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕೂಡ ಕಡಿಮೆಯಾಗುತ್ತದೆ. ಎಚ್ಚರ: ರಕ್ತದೊತ್ತಡ ಅಧಿಕವಾಗುತ್ತಿದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು!

ಎಳ್ಳು
ಇತ್ತೀಚಿನ ಅಧ್ಯಯನದ ಪ್ರಕಾರ, ಅಕ್ಕಿಹೊಟ್ಟಿನ ಎಣ್ಣೆ ಹಾಗೂ ಎಳ್ಳೆಣ್ಣೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗೆ ಯಾವುದೇ ಔಷಧಕ್ಕಿಂತ ಹೆಚ್ಚಿನ ಪರಿಣಾಮವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ನೆಲ್ಲಿಕಾಯಿ
ಸಾಂಪ್ರದಾಯಿಕವಾಗಿ, ನೆಲ್ಲಿಕಾಯಿಯನ್ನು ರಕ್ತದೊತ್ತಡ ಇರುವವರು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಆಮ್ಲದಲ್ಲಿರುವ ವಿಟಮಿನ್ ಸಿ ರಕ್ತನಾಳಗಳ ವಿಸ್ತರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ತ್ರಿಫಲಾ ಮಿಶ್ರಣದ ಆಮ್ಲ ಎಲ್ಲಾ ಆರ್ಯುವೇದ ಅಂಗಡಿಗಳಲ್ಲಿ ಲಭ್ಯ. ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಉಪ್ಪು ಸೇವನೆ ಕಡಿಮೆಗೊಳಿಸಿ

ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಆಹಾರಗಳಲ್ಲಿ ಸೋಡಿಯಂ ಹೆಚ್ಚಿರುತ್ತದೆ. ಈ ಆಹಾರಗಳನ್ನು ತ್ಯಜಿಸಿ. ಏಕೆಂದರೆ ಸೋಡಿಯಂ ದೇಹಕ್ಕೆ ಆಗಮಿಸಿದಷ್ಟೂ ಅದನ್ನು ಹೊರಹಾಕಲು ಪ್ರತಿ ಜೀವಕೋಶ ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ರಕ್ತಸಂಚಾರ ಅಗತ್ಯವಿದ್ದು ಹೃದಯ ಅಗತ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ರಕ್ತಸರಬರಾಜು ಮಾಡಬೇಕಾಗಿರುವುದರಿಂದ ಒತ್ತಡ ಹೆಚ್ಚುತ್ತದೆ. ಉಪ್ಪಿಗಿಂತ ರುಚಿಯಿಲ್ಲ ಎಂಬುದೇನೋ ಸರಿ, ಆದರೆ ಆದಷ್ಟು ಉಪ್ಪು ನಿಮ್ಮ ಆಹಾರದಲ್ಲಿ ಕಡಿಮೆ ಇರಲಿ.

ನುಗ್ಗೆ ಕಾಯಿ

ನುಗ್ಗೆಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳು ಸಾದರಪಡಿಸಿರುವಂತೆ, ಈ ಸಸ್ಯದ ಎಲೆಗಳಲ್ಲಿರುವ ಸಾರವು ರಕ್ತದೊತ್ತಡದ ಸಂಕೋಚನ (systolic) ಮತ್ತು ವ್ಯಾಕೋಚನವನ್ನು (diastolic) ಕಡಿಮೆಗೊಳಿಸಲು ಸಹಾಯಕಾರಿಯಾಗುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ
ಇವೆಲ್ಲದರ ಜೊತೆಗೆ, ನಿಮ್ಮ ದಿನಚರಿ ಎಷ್ಟೇ ಬಿಗಿಯಾಗಿದ್ದರೂ ನಿಮಗಾಗಿ ದಿನದ ಕೊಂಚ ಸಮಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಒಂದು ವೇಳೆ ಸಮಯ ನೀಡದೇ ಇದ್ದರೆ ಮುಂದೊಂದು ದಿನ ನಿಮ್ಮ ಆರೋಗ್ಯ ನಿಮಗೆ ಸಮಯವನ್ನೇ ನೀಡದು. ಪ್ರತಿದಿನ ಸಾಧ್ಯವಾಗದಿದ್ದರೆ ವಾರಕ್ಕೆ ಐದು ದಿನವಾದರೂ ವ್ಯಾಯಾಮ ಮಾಡಿ. ಈ ಅವಧಿ ಪ್ರತಿದಿನ ಒಂದೇ ರೀತಿ ಇರಲಿ.

English summary

Foods to keep your Blood Pressure Naturally

A leading factor in the fluctuating blood pressure of today’s generation is stress. Hence, one of the leading ways to keep pressure in check is to keep stress in control. However, to keep stress in control, there are many things that revolve around it. Just by saying that one has to control stress does not fulfill the purpose. So boldsky suggest such kind of food which should help to reduce blood preasure naturally
Story first published: Monday, August 24, 2015, 19:27 [IST]
X
Desktop Bottom Promotion