For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್, ಮಧುಮೇಹ ರೋಗಗಳಿಗೆ ಇನ್ನು ಗುಡ್ ಬೈ ಹೇಳಿ!

|

ನೈಸರ್ಗಿವಾಗಿರುವ ಉತ್ಪನ್ನ ಪ್ರತಿಯೊಂದು ರೋಗಕ್ಕೂ ರಾಮಬಾಣವಿದ್ದಂತೆ. ವೈದ್ಯಕೀಯವಾಗಿ ನೋಡಿದಾಗ ಪ್ರಕೃತಿಯೇ ಮೂಲ ವೈದ್ಯರು ಎಂಬ ಮಾತಿದೆ, ವೈದ್ಯ ಲೋಕವೂ ಪ್ರಕೃತಿಗೆ ಶಿರಬಾಗಿದೆ ಎಂದೇ ಹೇಳಬಹುದು. ಇಂದು ನೈಸರ್ಗಿಕವಾದ ಚಿಕಿತ್ಸಾ ವಿಧಾನವೇ ವಾಡಿಕೆಯಲ್ಲಿದೆ.

ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಈ ಚಿಕಿತ್ಸಾ ಕ್ರಿಯೆ ರೋಗವನ್ನು ಶಾಶ್ವತವಾಗಿ ಉಪಶಮನ ಮಾಡುತ್ತದೆ. ಇಂದು ನಾವಿಲ್ಲಿ ನೀಡುತ್ತಿರುವ ಒಂದು ಚಿಕಿತ್ಸಾ ಪದ್ಧತಿ ಉತ್ತಮ ಪೇಯವೂ ಹೌದು ರೋಗನಿರ್ಮೂಲಕವೂ ಹೌದು.

Say goodbye for Cancer and Diabetes

ಗುಯಾಬನೋ ಎಂಬ ಕಾಯಿ ಎಲೆಯ ಟೀ ಹೇಗೆ ಕ್ಯಾನ್ಸರ್, ಮಧುಮೇಹ ಸಂಧಿವಾತ ಹಾಗೂ ಇತರ ಪ್ರಚೋದನಕಾರಿ ರೋಗಗಳಿಗೆ ರಾಮಬಾಣವಾಗಿದೆ ಎಂಬುದನ್ನು ಅದರ ತಯಾರಿ ವಿಧಾನದೊಂದಿಗೆ ತಿಳಿಸುತ್ತಿದ್ದೇವೆ.

ನಿಮಗೆ ಬೇಕಾಗಿರುವುದು ಇಷ್ಟೇ ಗುಯಾಬನೋ ಎಲೆಗಳು - 40

ಸ್ವಚ್ಛ ನೀರು - 1 ಲೀಟರ್

ಗಮನಿಸಿ: ಚಿಗುರು ಎಲೆಗಳು ಹಾಗೂ ಹಣ್ಣಾದ ಎಲೆಗಳಿಗಿಂತ ಸ್ವಲ್ಪ ಪ್ರೌಢ ಎಲೆಗಳನ್ನು ಬಳಸಿ. ಇಂತಹ ಎಲೆಗಳು ತಾಜಾ ಎಲೆಗಳಿಗಿಂತ ಉತ್ತಮವಾಗಿರುತ್ತವೆ ಏಕೆಂದರೆ ಇದರಲ್ಲಿರುವ ವೈದ್ಯಕೀಯ

ಅಂಶಗಳು ಚಿಗುರು ಎಲೆಗಳಿಗಿಂತ ಹೆಚ್ಚು ಸತ್ವಕಾರಿಯಾಗಿರುತ್ತವೆ ಮತ್ತು ಇದು ಪರಿಣಾಮಕಾರಿ. ಬಿಸಿಲಲ್ಲಿ ಹಾಗೂ ಓವನ್‌ನಲ್ಲಿ ಈ ಎಲೆಗಳನ್ನು ಹೆಚ್ಚು ಬಾಡಿಸಬೇಡಿ ಹೀಗೆ ಬಾಡಿಸುವುದು ಎಲೆಗಳಲ್ಲಿರುವ ನ್ಯೂಟ್ರಿಶನಲ್ ಮೌಲ್ಯವನ್ನು ಮಂಕಾಗಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಧೂಮಪಾನದಿಂದ ಶ್ವಾಸಕೋಶದಲ್ಲಿ ಉಂಟಾಗುವ ಪರಿಣಾಮಗಳೇನು?

ಮಾಡುವ ವಿಧಾನ:

1.ಸಾಸ್ ಮಾಡುವ ಪ್ಯಾನ್‌ನಲ್ಲಿ 1 ಲೀಟರ್‌ನಷ್ಟು ನೀರು ಇಡಿ.

2.ಅದು ಕುದಿಯುತ್ತಿದ್ದಂತೆ, ಎಲೆಗಳನ್ನು ಪ್ಯಾನ್‌ಗೆ ಹಾಕಿ ಉರಿಯನ್ನು ಕಡಿಮೆ ಮಾಡಿ.

3.20 ನಿಮಿಷಗಳಷ್ಟು ಕಾಲ ಸಣ್ಣಗೆ ಕುದಿಯಲಿ. ಕಂದು ಮಿಶ್ರತ ಚಿನ್ನದ ಬಣ್ಣಕ್ಕೆ ನೀರಿನ ಬಣ್ಣ ತಿರುಗಿದ್ದಂತೆ ಅಂದರೆ ನಮ್ಮ ದೈನಂದಿನ ಚಹಾದ ಬಣ್ಣಕ್ಕೆ ನೀರು ಬಂದರೆ ಗ್ಯಾಸ್ ಆಫ್ ಮಾಡಿ.

4.ತಣ್ಣಗಾದ ನಂತರ ಅದನ್ನು ಕುಡಿಯಿರಿ.

30 ದಿನಗಳಷ್ಟು ಸಮಯ ಗುಯಾಬನೋ ಚಹಾವನ್ನು ಸೇವಿಸಬೇಕು ದಿನದಲ್ಲಿ ಮೂರು ಸಲ, ಊಟಕ್ಕಿಂತ ಮುಂಚಿತವಾಗಿ ಒಂದು ಗ್ಲಾಸ್ ತೆಗೆದುಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಈ ಚಹಾ ಸೇವನೆ ಕೂಡಲೇ

ಪರಿಣಾಮಕಾರಿಯಾಗಿರುತ್ತದೆ.

30 ದಿನಗಳಿಗೆ ಮಾತ್ರ ಇದನ್ನು ಸೇವಿಸಬೇಕು. ಅದಕ್ಕಿಂತ ಹೆಚ್ಚು ಸಮಯ ಸೇವಿಸಿದರೆ, ಸಾಮಾನ್ಯವಾಗಿರುವ ಪ್ರೊಟೀನ್ ವಿಟಮಿನ್ ನಾಶಗೊಳ್ಳುತ್ತದೆ.

30 ದಿನಗಳ ನಂತರ, ನಿಮ್ಮ ಕಾಯಿಲೆ ಇನ್ನೂ ಇದೆಯೇ ಎಂಬುದನ್ನು ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ. ರೋಗಲಕ್ಷಣ ಇನ್ನೂ ಇದ್ದರೆ, ನೀವು ತೆಗೆದುಕೊಳ್ಳುವ ಚಹಾವನ್ನು ಮೇಂಟೆನೆನ್ಸ್ ಡೋಸ್ (ನಿರ್ವಹಣಾ ಡೋಸ್) ಆಗಿ ಬದಲಾಯಿಸಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತವನ್ನು ತಡೆಗಟ್ಟಲು ಕೆಲವೊಂದು ಸಲಹೆಗಳು

30 ದಿನಕ್ಕಿಂತ ಮುಂಚಿತವಾಗಿ ರೋಗಲಕ್ಷಣಗಳು ಮಾಯವಾದರೆ, ಒಂದೇ ಒಂದು ರೋಗ ಕೋಶ ಕೂಡ ಬಾಕಿ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಚಹಾ ಸೇವಿಸುವುದನ್ನು ಮುಂದುವರಿಸಿ.

30 ದಿನದ ಚಿಕಿತ್ಸೆ, ದಿನಕ್ಕೆ ಮೂರು ಸಲ, ಊಟಕ್ಕಿಂತ 30 ನಿಮಿಷಗಳು ಮುಂಚಿತವಾಗಿ ಒಂದು ಲೋಟ ಈ ಚಹಾ ಸೇವಿಸುವುದನ್ನು ತಪ್ಪಿಸಬಾರದು.

ಮೇಂಟೆನೆನ್ಸ್ ಡೋಸ್:

ಶನಿವಾರ ಭಾನುವಾರವನ್ನು ಹೊರತುಪಡಿಸಿ 5 ದಿನಗಳ ಕಾಲ ಊಟಕ್ಕಿಂತ 30 ನಿಮಿಷಗಳು ಮುಂಚಿತವಾಗಿ ಪ್ರತೀ ದಿನ ಒಂದು ಲೋಟ ಚಹಾ ಸೇವಿಸಬೇಕು. ಒಂದು ವಾರದಲ್ಲಿ ಕನಿಷ್ಟಪಕ್ಷ 2 ದಿನಗಳು

ವಿಶ್ರಾಂತಿ ಅವಧಿಯನ್ನು ಪಡೆದುಕೊಳ್ಳಿ.

ಹೊಂದಾಣಿಕೆಯನ್ನು ತಪ್ಪಿಸಲು ಚಹಾದೊಂದಿಗೆ ಇತರ ಚಿಕಿತ್ಸಾ ವಸ್ತುಗಳನ್ನು ಸೇರಿಸಬೇಡಿ.

ಚಹಾವನ್ನು ಅತಿಯಾಗಿ ಬಳಸಬೇಡಿ. ವಿಧಾನವನ್ನು ಅನುಸರಿಸಿ.

English summary

Say goodbye for Cancer and Diabetes

GUYABANO (SOUR SOP) TEA FOR CANCER, DIABETES, ARTHRITIS AND OTHER INFLAMMATORY DISEASES . COME AND LETS TALK ABOUT IT
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more