Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೊಲೆಸ್ಟ್ರಾಲ್ ಕಡಿಮೆ ಮಾಡುವ 10 ಬೆಸ್ಟ್ ಆಹಾರ
ಮಧ್ಯವಯಸ್ಸು ದಾಟಿದರೆ ಸಾಕು ಹೆಚ್ಚಿನವರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕಂಡು ಬರುತ್ತದೆ. ಆರೋಗ್ಯವಾಗಿರಬೇಕೆಂದರೆ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಸರಿಯಾದ ಪ್ರಮಾಣದಲ್ಲಿರಬೇಕು. ವ್ಯಾಯಾಮ ಮಾಡದಿರುವುದು, ಕೊಬ್ಬಿನಂಶದ ಆಹಾರಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿಯಿಂದ ಕೊಲೆಸ್ಟ್ರಾಲ್ ಉಂಟಾಗಬಹುದು, ಮತ್ತೆ ಕೆಲವರಿಗೆ ವಂಶಪಾರಂಪರ್ಯವಾಗಿ ಕೂಡ ಬರಬಹುದು.
ಕೊಲೆಸ್ಟ್ರಾಲ್ ಬಂದರೆ ಸಾಕು ಅದರೊಂದಿಗೆ ನಾನಾ ರೋಗಗಳೂ ಪ್ರಾರಂಭವಾಗುತ್ತದೆ. ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ, ರಕ್ತ ಗಟ್ಟಿಗೊಳ್ಳುವುದು ಮುಂತಾದ ಗಂಭೀರ ಸಮಸ್ಯೆಗಳನ್ನು ತರುತ್ತದೆ. ಕೊಲೆಸ್ಟ್ರಾಲ್ ಬಂದರೆ ಯಾವುದೇ ಪಥ್ಯದ ಊಟ ಮಾಡಬೇಕಾಗಿಲ್ಲ, ಆದರೆ ಆಹಾರಕ್ರಮದ ಎಚ್ಚರಿಕೆವಹಿಸಬೇಕು. ಬಾಯಿ ರುಚಿಗಾಗಿ ಕೊಬ್ಬಿನಂಶದ ಆಹಾರ ತಿಂದರೆ ದೇಹದ ಆರೋಗ್ಯ ಹಾಳಾಗುವುದು. ಉತ್ತಮ ಆಹಾರಕ್ರಮ ಪಾಲಿಸಿದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಅದರಲ್ಲೂ ಈ ಕೆಳಗಿನ ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ:

1. ಓಟ್ಸ್:
ಓಟ್ಸ್ ನಲ್ಲಿ ಬೀಟಾ ಗ್ಲೂಕೋನ್ ಇದ್ದು ಇದು ದೇಹವು ಬೇಡದ ಕೊಲೆಸ್ಟ್ರಾಲ್ ನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

2. ಬೆಣ್ಣೆ ಹಣ್ಣು :
ಬೆಣ್ಣೆ ಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಲ್ಲಿ ಬೆಣ್ಣೆ ಹಣ್ಣು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಬೀಟಾ ಸೈಟೊಸ್ಟಿರೋಲ್ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

3. ಆಲೀವ್ ಎಣ್ಣೆ:
ಕೊಲೆಸ್ಟ್ರಾಲ್ ಇರುವವರು ಆಲೀವ್ ಎಣ್ಣೆಯನ್ನು ಬಳಸಿ ಪದಾರ್ಥವನ್ನು ತಯಾರಿಸುವುದು ಒಳ್ಳೆಯದು. ಸಲಾಡ್ ನಲ್ಲಿ ಇದನ್ನು ಬಳಸಿ.

4. ಫಿಶ್ ಆಯಿಲ್:
ಮೀನಿನಲ್ಲಿ ಒಮೆಗಾ 3 ಎಂಬೊಳ್ಳೆಯ ಕೊಲೆಸ್ಟ್ರಾಲ್ ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ವಾರದಲ್ಲಿನ ಎರಡು ಭಾರಿ ಮೀನು ತಿನ್ನುವುದು, ಫಿಶ್ ಆಯಿಲ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.

5. ಬೀನ್ಸ್:
ಬೀನ್ಸ್ ನಲ್ಲಿ ತಿನ್ನಬಹುದಾದ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

6. ಸೋಯಬೀನ್:
ಸೋಯಾಬೀನ್ ನಲ್ಲಿರುವ ಪ್ರೊಟೀನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

7. ಬೆಂಡೆಕಾಯಿ:
ಬೆಂಡೆಕಾಯಿಯಲ್ಲಿ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾ ಸಹಕಾರಿಯಾಗಿದೆ.

8. ಬೆಳ್ಳುಳ್ಳಿ:
ದಿನದಲ್ಲಿ 2-3 ಎಸಳು ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಹಾಗೂ ಹೃದಯ ಸ್ವಾಸ್ಥ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಇದು ದೇಹದ ಬೊಜ್ಜನ್ನು ಕರಗಿಸುವಲ್ಲಿ ಕೂಡ ಸಹಕಾರಿಯಾಗಿದೆ.

9. ಟೊಮೆಟೊ:
ಟೊಮೆಟೊದಲ್ಲಿ ಲೈಕೋಪೆನೆ, ಚಿಟಮಿನ್ ಸಿ ಮತ್ತು ನಾರಿನಂಶವಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

10. ಕಪ್ಪುದ್ರಾಕ್ಷಿ:
ಪ್ರತಿದಿನ ಬೆಳಗ್ಗೆ ಒಂದು ಲೋಟ ಕಪ್ಪು ದ್ರಾಕ್ಷಿಯ ಜ್ಯಸ್ ಕುಡಿಯುತ್ತಾ ಬಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ಗ್ರೀನ್ ಟೀ ಕೂಡ ತುಂಬಾ ಒಳ್ಳೆಯದು.



Click it and Unblock the Notifications
