For Quick Alerts
ALLOW NOTIFICATIONS  
For Daily Alerts

ಇಂಥವರಿಗೆ ವಾಲ್ನಟ್‌ ಹಾಗೆ ತಿನ್ನುವುದಕ್ಕಿಂತ ನೆನೆ ಹಾಕಿ ತಿಂದ್ರೆ ಹೆಚ್ಚು ಪ್ರಯೋಜನಕಾರಿ, ಹೇಗೆ?

|

ವಾಲ್ನಟ್‌ ತಿನ್ನಲು ಅಷ್ಟು ರುಚಿ ಅನಿಸದಿದ್ದರೂ ಆರೋಗ್ಯದ ದೃಷ್ಟಿಯಿಂದ ಇದು ಸೂಪರ್ ಫುಡ್‌. ಇದರ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಇದನ್ನು ಹಾಗೇ ತಿನ್ನಬೇಕಾ? ನೆನೆ ಹಾಕಿ ತಿನ್ನಬೇಕಾ ಎಂದು ತಿಳಿಯೋಣ ಬನ್ನಿ:

Walnut Benefits

ವಾಲ್ನಟ್‌ನಲ್ಲಿರುವ ಪೋಷಕಾಂಶಗಳು
* ಅತ್ಯಧಿಕ ಕಾರ್ಬೋಹೈಡ್ರೇಟ್
* ಪ್ರೊಟೀನ್
* ಆರೋಗ್ಯಕರ ಕೊಬ್ಬಿನಂಶ
* ನಾರಿನಂಶ
* ವಿಟಮಿನ್‌ಗಳು
* ಕ್ಯಾಲ್ಸಿಯಂ
*ಕಬ್ಬಿಣದಂಶ
ಪೊಟಾಷ್ಯಿಯಂ
ಈ ಎಲ್ಲಾ ಅಂಶಗಳು ಇರುವುದರಿಂದ ಆರೋಗ್ಯಕರವಾಗಿ ಮೈ ತೂಕ ಕಡಿಮೆಮಾಡಬೇಕೆಂದು ಬಯಸುವವರಿಗೆ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ.

ಇದರಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಬಿ5 ಇದೆ, ಇದರಿಂದಾಗಿ ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ನೆನೆ ಹಾಕಿದ ವಾಲ್ನಟ್ VS ಹಸಿ ವಾಲ್ನಟ್
ಯಾರಿಗೆ ಜೀರ್ಣಕ್ರಿಯೆಗೆ ಸ್ವಲ್ಪ ತೊಂದರೆಯಿದೆಯೋ ಅಂದರೆ ಯಾರಿಗೆ ಪದೇ ಪದೇ ಅಜೀರ್ಣ ಸಮಸ್ಯೆ ಉಂಟಾಗುವುದೋ ಅವರಿಗೆ ನೆನೆಹಾಕಿದ ವಾಲ್ನಟ್ ಒಳ್ಳೆಯದು, ಏಕೆಂದರೆ ವಾಲ್ನಟ್‌ ಹಾಗೇ ತಿಂದರೆ ಅದು ಜೀರ್ಣವಾಗಲು ಸ್ವಲ್ಪ ಕಷ್ಟವಾಗಬಹುದು.

ವಾಲ್ನಟ್‌ ನೆನೆ ಹಾಕಿ ತಿಂದರೆ ದೊರೆಯುವ ಪ್ರಯೋಜನಗಳು
* ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ
ಯಾರಿಗೆ ಉರಿಯೂತದ ಸಮಸ್ಯೆ ಇದೆಯೋ ಅವರು ವಾಲ್ನಟ್ ತಿನ್ನಬೇಕು, ಇದು ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಿದೆ. ಉರಿಯೂತದ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ದೊಡ್ಡ ಆರೋಗ್ಯ ಸಮಸ್ಯೆ ಬರಬಹುದು. ವಾಲ್ನಟ್‌ನಲ್ಲಿರುವ ಫಾಲಿಫೀನೋಲಿಕ್‌ ಅಂಶ ಉರಿಯೂತ ಕಡಿಮೆ ಮಾಡುವುದು.

ಹೃದಯದ ಸಮಸ್ಯೆ ತಡೆಗಟ್ಟುತ್ತದೆ
ಇತ್ತೀಚೆಗೆ ಹೃದಯದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ನಮ್ಮ ಹೃದಯದ ಆರೋಗ್ಯ ಹೆಚ್ಚಿಸಲು ನಮ್ಮ ಜೀವನಶೈಲಿ ಹಾಗೂ ಆಹಾರಕ್ರಮ ಸಹಾಯ ಮಾಡುತ್ತದೆ, ವಾಲ್ನಟ್‌ ಹೃದಯದ ಆರೋಗ್ಯ ವೃದ್ಧಿಸುವುದರ ಜೊತೆಗೆ ಸ್ಟ್ರೋಕ್‌ ಕೂಡ ತಡೆಗಟ್ಟುತ್ತದೆ.
ನೀವು ದಿನಾ ಎರಡು ವಾಲ್ನಟ್‌ ತಿಂದರೆ ಈ ಪ್ರಯೋಜನಗಳನ್ನು ಪಡೆಯಬಹುದು.

ಮಧುಮೇಹಿಗಳಿಗೂ ತುಂಬಾನೇ ಒಳ್ಳೆಯ ಆಹಾರ
ವಾಲ್ನಟ್‌ ನೆನೆಹಾಕಿ ತಿಂದರೆ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಇದರಲ್ಲಿರುವ ನಾರಿನಂಶ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳು ಇದನ್ನು ಸ್ನ್ಯಾಕ್ಸ್ ಆಗಿ ಬಳಸುವುದರಿಂದ ಹಸಿವು ಕೂಡ ನಿಯಂತ್ರಿಸಬಹುದು, ಲವಲವಿಕೆಯಿಂದಿರಬಹುದು.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ನೀವು ನೆನೆಹಾಕಿ ತಿನ್ನಿ ಅಥವಾ ಹಾಗೇ ತಿನ್ನಿ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ವಿಟಮಿನ್‌ ಇ ಮೆದುಳನ್ನು ಮತ್ತಷ್ಟು ಚುರುಕುಗೊಳಿಸುವುದು, ಅಲ್ಲದೆ ನೆನೆಪಿನ ಶಕ್ತಿ ಕಾಪಾಡುವಲ್ಲಿ ಸಹಕಾರಿ. ವಯಸ್ಸಾದಾಗ ಕಾಡುವ ಅಲ್ಜೈಮರ್ಸ್ ತಡೆಗಟ್ಟಲು ಸಹಕಾರಿ.

ನೆನೆಹಾಕಿದ ವಾಲ್ನಟ್‌ ಯಾವಾಗ ತಿಂದರೆ ಹೆಚ್ಚು ಪ್ರಯೋಜನ
ಬೆಳಗ್ಗೆ ನೀರು ಕುಡಿದ ಬಳಿಕ ಇದನ್ನು ತಿನ್ನಿ. ಇನ್ನು ಊಟವಾಗಿ ಎರಡು ಗಂಟೆಯ ಬಳಿಕ ಸ್ನಾಕ್ಸ್ ಆಗಿಯೂ ತೆಗೆದುಕೊಳ್ಳಬಹುದು.

ಬರೀ ವಾಲ್ನಟ್‌ ತಿನ್ನು ಇಷ್ಟವಾಗದಿದ್ದರೆ ಇತರ ನಟ್ಸ್‌ ಜೊತೆ ಮಿಕ್ಸ್ ಮಾಡಿ ತಿನ್ನಿ, ಆಗ ತಿನ್ನಲು ರುಚಿ ಅನಿಸುವುದು.

English summary

Walnut Soaked One Or Raw, Which One More Benefits In Kannada

Walnut Benefits: Walnut Soaked one is healthy for these people, how read on...
Story first published: Monday, December 19, 2022, 9:15 [IST]
X
Desktop Bottom Promotion