For Quick Alerts
ALLOW NOTIFICATIONS  
For Daily Alerts

ಗಂಟಲು ಕೆರೆತವನ್ನು ಬೇಗನೆ ಕಡಿಮೆ ಮಾಡುವ 8 ಆಹಾರಗಳು

|

ವಾತಾವರಣದಲ್ಲಿ ಬದಲಾವಣೆ ಉಂಟಾದಾಗ ಚಿಕ್ಕದಾಗೊ ಶೀತ,ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಹಿಂದೆಯೆಲ್ಲಾ ಈ ರೀತಿಯ ಚಿಕ್ಕ ಶೀತ-ಕೆಮ್ಮು ಬಂದಾಗ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದೀಗ ಚಿಕ್ಕದಾಗಿ ಅಕ್ಷಿ.... ಬಂದರೂ ಸಾಕು ಜನರು ಭಯ ಬೀಳುತ್ತಾರೆ.

ಅದರಲ್ಲೂ ಈಗ ರಾಜ್ಯದ ಹಲವು ಕಡೆ ಮಳೆಯ ಆರ್ಭ ಹೆಚ್ಚಾಗಿದೆ, ಮಳೆ ಕಡಿಮೆಯಾದರೂ ಚಳಿ ಶುರುವಾಗುವುದರಿಂದ ನಾವು ನಮ್ಮ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನವಹಿಸಬೇಕು.

ನಾವಿಲ್ಲಿ ಗಂಟಲು ಕಿರಿಕಿರಿ ಅನಿಸುತ್ತಿರುವಾಗ ಯಾವ ಆಹಾರ ಸೇವಿಸಬೇಕೆಂದು ಹೇಳಿದ್ದೇವೆ ನೋಡಿ:

1. ಜೇನು

1. ಜೇನು

ಗಂಟಲು ಕಿರಿಕಿರಿ ಅನಿಸುತ್ತಿದೆಯೇ, ಧ್ವನಿ ಬದಲಾದಂತೆ ಅನಿಸುತ್ತಿದೆಯೇ ಜೇನು ಸೇವಿಸಿ ಕಡಿಮೆಯಾಗುವುದು. 2017ರಲ್ಲಿ ನಡೆಸಿದ ಅಧ್ಯಯನದಲ್ಲಿ 200 ಜನರು ಒಳಪಟ್ಟಿದ್ದರು. ಇದರಲ್ಲಿ ಅರ್ಧ ಜನರಿಗೆ ಜೇನು ಜೊತೆಗೆ ಔಷಧಿ ನೀಡಲಾಯಿತು, ಇನ್ನರ್ಧ ಜನರಿಗೆ ಹಾಗೇ ಔಷಧಿ ನೀಡಲಾಯಿತು. ಜೇನು ಜೊತೆ ಔಷಧಿ ಸೇವಿಸಿದವರು ಬೇಗನೆ ಚೇತರಿಸಿಕೊಂಡಿದ್ದು ಗಮನಕ್ಕೆ ಬಂತು.

 2. ವೆಜ್ ಸೂಪ್

2. ವೆಜ್ ಸೂಪ್

ತರಕಾರಿಗಳನ್ನು ಹಾಕಿ ಮಾಡುವ ಬಿಸಿ ಬಿಸಿಯಾದ ಸೂಪ್ ಕೂಡ ಗಂಟಲು ಕೆರೆತ ಕಡಿಮೆ ಮಡಲು ಸಹಕಾರಿ. ಈರುಳ್ಳಿ, ಬೆಳ್ಳುಳ್ಳಿ, ಸೆಲರಿ, ಕ್ಯಾರೆಟ್, ಬೀನ್ಸ್ ಮುಂತಾದ ತರಕಾರಿ ಹಾಕಿ ತಯಾರಿಸಿ ಕುಡಿಯಿರಿ. ಈ ಸೂಪ್ ಕುಡಿಯಲೂ ರುಚಿಕರವಾಗಿರುತ್ತದೆ, ದೇಹಕ್ಕೆ ತರಕಾರಿಯಲ್ಲಿರುವ ವಿಟಮಿನ್ ಸಿ ಮತ್ತು ಪೌಷ್ಠಿಕಾಂಶ ದೊರೆಯುವುದರಿಂದ ಬೇಗನೆ ಚೇತರಿಸಿಕೊಳ್ಳುವಿರಿ.

3. ಮೊಟ್ಟೆ

3. ಮೊಟ್ಟೆ

ಗಂಟಲು ಕೆರೆತ ಇರುವಾಗ ಯಾವ ಆಹಾರ ತಿನ್ನಬೇಕೆಂಬುವುದರ ಬಗ್ಗೆ ಎಚ್ಚರವಹಿಸಬೇಕು. ಬೇಯಿಸಿದ ಮೊಟ್ಟೆ ತಿನ್ನುವುದು ಅಥವಾ ಎಗ್‌ಬುರ್ಜಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ, ವಿಟಮಿನ್ ಬಿ, ಅಯೋಡೊಯನ್, ಸೆಲೆನಿಯಮ್, ಚೋಲಿನ್ ಇದ್ದು ಸುಸ್ತು ಕಡಿಮೆ ಮಾಡುತ್ತದೆ. ನೀವು ಬೇಕಾದರೆ ಎಗ್‌ ಬುರ್ಜಿ ಮಾಡಿಯೂ ತಿನ್ನಬಹುದು.

4. ಚಿಕನ್ ಸೂಪ್

4. ಚಿಕನ್ ಸೂಪ್

ನೀವು ನಾನ್‌ವೆಜಿಟೇರಿಯನ್ ಆದರೆ ಕೆಮ್ಮು, ಶೀತ, ಜ್ವರ ಇದ್ದಾಗ ಚಿಕನ್ ಸೂಪ್ ಮಾಡಿ ಕುಡಿದು ನೋಡಿ, ಬೇಗನೆ ಸುಸ್ತು ಕಡಿಮೆಯಾಗುವುದು. ಚಿಕನ್ ಸೂಪ್‌ಗೆ ಇತರ ತರಕಾರಿ ಹಾಕಿ ಮಾಡುವುದರಿಂದ ಚಿಕನ್‌ನಲ್ಲಿರುವ ಪ್ರೊಟೀನ್ ಜೊತೆಗೆ ಇತರ ಎಲ್ಲಾ ಪೋಷಕಾಂಶಗಳು ದೊರೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನೀವು ಚಿಕನ್ ಸೂಪ್ ಮಾಡುವಾಗ ಈರುಳ್ಳಿ, ಸೆಲರಿ, ಕ್ಯಾರೆಟ್, ಬೀನ್ಸ್, ಸೆಲೆರಿ, ಪಾರ್ಸಲೆ ಹೀಗೆ ವಿವಿಧ ತರಕಾರಿ ಹಾಕಿ ಮಾಡಿ.

 5. ಅರಿಶಿಣ

5. ಅರಿಶಿಣ

ನಮ್ಮ ಭಾರತೀಯ ಅಡುಗೆಯಲ್ಲಿ ಅರಿಶಿಣವನ್ನು ಹೆಚ್ಚಾಗಿ ಬಳಸುತ್ತೇವೆ. ಅರಿಶಿಣ ಆರೋಗ್ಯಕ್ಕೆ ತುಂಬಾನ ಒಳ್ಳೆಯದು. ಗಂಟಲು ಕೆರೆತ ಇದ್ದಾಗ ಅಡುಗೆಯಲ್ಲಿ ಬಳಸುವುದು ಹೊರತು ಪಡಿಸಿ ಅದನ್ನು ಬಿಸಿ ನೀರಿನಲ್ಲಿ ಅಥವಾ ಬಿಸಿ ಬಿಸಿಯಾದ ಹಾಲಿನಲ್ಲಿ ಹಾಕಿ ಕುಡಿಯಿರಿ. ಇದರಿಂದ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

6. ಚಮೋಮೈಲ್ ಟೀ

6. ಚಮೋಮೈಲ್ ಟೀ

ಚಮೋಮೈಲ್ ಟೀ ಮಾಡಿ ಕುಡಿಯುವುದರಿಂದ ಇದರಲ್ಲಿ ಆ್ಯಂಟಿ ಸ್ಪಾಸ್‌ಮೋಡಿಕ್ ಅಂಶ ಗಂಟಲು ಕೆರೆತ ಕಡಿಮೆ ಮಾಡುವುದು. ಇದರಿಂದಾಗಿ ಕೆಮ್ಮು ಕೂಡ ಕಡಿಮೆಯಾಗುವುದು.

7. ಶುಂಠಿ

7. ಶುಂಠಿ

ಶುಂಠಿ ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ತುಂಬಾನೇ ಪರಿಣಾಮಕಾರಿ. ಶುಂಠಿ ಟೀ ಮಾಡಿ ಕುಡಿಯಬಹುದು, ಶುಂಠಿ ರಸ ತೆಗೆದು ಅದನ್ನು ಜೇನು ಜೊತೆ ಬೆರೆಸಿ ಆಗಾಗ ನೆಕ್ಕುತ್ತಿದ್ದರೆ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

8. ಚಕ್ಕೆ

8. ಚಕ್ಕೆ

ಚಕ್ಕೆಯಲ್ಲಿ ಆ್ಯಂಟಿಬ್ಯಾಕ್ಟಿರಿಯಾ ಅಂಶವಿದ್ದುಚಕ್ಕೆ ಪುಡಿಯನ್ನು ಆ್ಯಪಲ್ ಸಿಡರ್ ವಿನೆಗರ್ ಅಥವಾ ಓಟ್‌ಮೀಲ್ ಅಥವಾ ಬಿಸಿ ಬಿಸಿ ನೀರಿನಲ್ಲಿ ಹಾಕಿ ಕುಡಿಯಿರಿ. ಇದರಿಂದ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

English summary

Soothing Foods to Eat When You Have a Sore Throat

Here are soothing foods to eat when you have a sore throat, have a look.............
X
Desktop Bottom Promotion