For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದಾ? ಮೊಟ್ಟೆ ತಿಂದರೆ ಮೈ ಉಷ್ಣತೆ ಹೆಚ್ಚುವುದಾ

|

ಎಲ್ಲಾ ಫಿಟ್‌ನೆಸ್‌ ಪ್ರಿಯರ ನೆಚ್ಚಿನ ಆಹಾರವೆಂದರೆ ಅದು ಮೊಟ್ಟೆ. ಆಮ್ಲೆಟ್‌ ಅಥವಾ ಬೇಯಿಸಿದ ರೂಪದಲ್ಲಿ ತಿನ್ನಬಹುದಾದ ಪ್ರೋಟೀನ್‌ ಭರಿತ ಮೊಟ್ಟೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉತ್ತಮ ಆಹಾರವಾಗಿದೆ. ಈಗಂತೂ ಸೆಕೆಗಾಲ. ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ ಮೊಟ್ಟೆಯ ಹಳದಿ ಭಾಗವಂತೂ ತುಂಬಾ ಹೀಟ್‌ ಎನ್ನುವವರಿದ್ದಾರೆ. ಹಾಗಾದರೆ ಮೊಟ್ಟೆ ಬೇಸಿಗೆಯಲ್ಲಿ ತಿನ್ನುವುದು ಒಳ್ಳೆಯದಲ್ಲವೇ.. ತಿಂದರೆ ಸಮಸ್ಯೆಯೇ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ ನೋಡಿ.

ಮೊಟ್ಟೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಸುಮಾರು 90ಪ್ರತಿಶತದಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಒಂದು ಮೊಟ್ಟೆಯ ಸೇವನೆಯಿಂದ ದೇಹಕ್ಕೆ ಸಿಗುತ್ತದೆ. ಮೊಟ್ಟೆಯ ಬಿಳಿಭಾಗ ಇತರ ಆಹಾರಕ್ಕೆ ಹೋಲಿಸಿದರೆ ಅರ್ಧದಷ್ಟು ಪ್ರೋಟೀನ್‌ ಹೊಂದಿರುತ್ತೆ. ಹಾಗಾಗಿ ಆರೋಗ್ಯಕರ ದಿನಚರಿಗೆ ಮೊಟ್ಟೆಯನ್ನು ನಮ್ಮ ಡಯಟ್‌ನಲ್ಲಿ ಸೇರಿಸಿದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದೇ ಎನ್ನುವುದಾದರೆ..ನಿಸ್ಸಂದೇಹವಾಗಿ ಸೇವಿಸಬಹುದು.. ಆದರೆ ಮಿತವಾಗಿ ತಿನ್ನಬೇಕು ಎನ್ನುವುದು ಎಚ್ಚರಿಕೆಯ ಮಾತು.

ಪ್ರೋಟೀನ್‌ ಖನಿಜಾಂಶಗಳ ಆಗರ ಮೊಟ್ಟೆ

ಪ್ರೋಟೀನ್‌ ಖನಿಜಾಂಶಗಳ ಆಗರ ಮೊಟ್ಟೆ

ದೇಹದಲ್ಲಿ ನಿಶ್ಯಕ್ತಿ ಅಥವಾ ದೇಹದ ತೂಕ ಕಡಿಮೆ ಇದ್ದರೆ, ಕ್ಯಾಲ್ಸಿಯಂ ಕೊರತೆ ಇದ್ದರೆ ದಿನಕ್ಕೊಂದಾದರೂ ಮೊಟ್ಟೆ ತಿನ್ನಿ ಎಂದು ಹೇಳುತ್ತಾರೆ. ಯಾಕೆಂದರೆ ಮೊಟ್ಟೆಯಲ್ಲಿ ಮೂಳೆಗಳನ್ನು ಬಲಪಡಿಸಲು ಅಗತ್ಯವಾದ ವಿಟಮಿನ್‌ ಎ ಮತ್ತು ವಿಟಮಿನ್‌ ಡಿ ಸಮೃದ್ಧವಾಗಿರುತ್ತದೆ. ಇದರ ಜೊತೆಗೆ ಫಾಸ್ಪರಸ್‌, ಸತು, ಅಯೋಡಿನ್‌, ಅಗತ್ಯ ಕೊಬ್ಬಿನಾಮ್ಲಗಳು, ಕಬ್ಬಿಣಾಂಶವಿರುತ್ತದೆ. ಇದು ನಮ್ಮ ದೇಹಕ್ಕೆ ಬೇಕಾಗುವ ಅಗತ್ಯ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಸೇವನೆ ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ಇದಲ್ಲಿರುವ ಸಲ್ಫರ್‌, ಅಮೈನೋ ಆಮ್ಲ, ವಿಟಮಿನ್‌ ಮತ್ತು ಖನಿಜಾಂಶಗಳು ಆರೋಗ್ಯಕರ ಬೆಳವಣಿಗೆಗೆ ಸಹಕಾರಿ.

ಮಿತವಾದ ಸೇವನೆ ದೇಹಕ್ಕೆ ಒಳ್ಳೆಯದು

ಮಿತವಾದ ಸೇವನೆ ದೇಹಕ್ಕೆ ಒಳ್ಳೆಯದು

ಮೊಟ್ಟೆ ಸಾಮಾನ್ಯವಾಗಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಪ್ರೋಟೀನ್‌ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ತಾಪವೂ ಹೆಚ್ಚಾಗಿರುವುದರಿಂದ ಹೆಚ್ಚು ಮೊಟ್ಟೆಯ ಸೇವನೆ ಅಜೀರ್ಣ ಮತ್ತು ಅಸ್ವಸ್ಥತೆಯನ್ನುಂಟುಮಾಡಬಹುದು. ಆದರೆ ಮಿತವಾಗಿ ಸೇವಿಸಿದರೆ ಅತ್ಯುತ್ತಮ.

ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಾರದೆನ್ನುವುದೇಕೆ..?

ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಾರದೆನ್ನುವುದೇಕೆ..?

ಈ ಮೇಲೆ ವಿವರಿಸಿದಂತೆ ಪೋಷಕಾಂಶ ಭರಿತ ಮೊಟ್ಟೆಯನ್ನು ಸೇವಿಸಿದರೆ ದೇಹಕ್ಕೆ ಜೀರ್ಣಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿಯೇ ಮೊಟ್ಟೆ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುವುದು. ನಾಆವು ಸೇವಿಸುವ ಆಹಾರವು ಸರಳ ಮತ್ತು ಸುಲಭವಾಗಿ ದೇಹವು ಹೀರಿಕೊಳ್ಳುವ ರೂಪದಲ್ಲಿರಬೇಕು ಎನ್ನುತ್ತಾರೆ. ಮೊಟ್ಟೆ ಜೀರ್ಣವಾಗಲು ಹೆಚ್ಚು ಸಮಯ ತೆಗದುಕೊಳ್ಳುವುದರಿಂದ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಹಾಗಾಗಿಯೇ ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ, ಮೊಟ್ಟೆ ತಿಂದರೆ ಅಜೀರ್ಣವಾಗುತ್ತದೆ ಎನ್ನುತ್ತಾರೆ.

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು..?

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು..?

ಸಾಮಾನ್ಯವಾಗಿ ಡಯಟ್‌ ಮಾಡುವವರು, ವರ್ಕ್‌ಔಟ್‌ ಮಾಡುವವರು ಎರಡಕ್ಕಿಂತ ಹೆಚ್ಚು ಮೊಟ್ಟೆಯ ಸೇವನೆ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ನಿಮ್ಮ ಡಯಟ್‌ನಲ್ಲಿ ಸ್ವಲ್ಪ ಚೇಂಜಸ್‌ ಇರಲಿ. ದಿನಕ್ಕೆ ಎರಡು ಮೊಟ್ಟೆಯ ಸೇವನೆ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚು ಮಾಡದು. ನೀವು ಎಗಿಟೇರಿಯನ್‌ ಆಗಿದ್ದರೆ ದಿನಕ್ಕೆ ಎರಡು ಮೊಟ್ಟೆಯ ಸೇವನೆ ಮಾಡಬಹುದು. ಆದರೆ ನೀವು ಮೊಟ್ಟೆಯ ಜೊತೆಗೆ ದಿನದಲ್ಲಿ ಇತರ ಮಾಂಸಾಹಾರ ಸೇವಿಸುವುದಾದರೆ ಒಂದು ಮೊಟ್ಟೆಯನ್ನು ಸೇವಿಸಿದರೆ ಉತ್ತಮ.

ಸೂಕ್ಷ್ಮಶರೀರ ಇರುವವರು ಅಥವಾ ಜೀರ್ಣಾಂಗ ಸಮಸ್ಯೆ ಇರುವವರು ಬೇಸಿಗೆಯಲ್ಲಿ ವಾರದಲ್ಲಿ ಎರಡು ಬಾರಿ ನಿಮ್ಮ ಆಹಾರ ಪದ್ಧತಿಯಲ್ಲಿ ಮೊಟ್ಟೆಯನ್ನು ಸೇರಿಸಿ. ನಿಮ್ಮ ದೇಹದ ಸಾಮರ್ಥ್ಯ ನಿಮಗೆ ತಿಳಿದಿರುತ್ತದೆ. ಎಷ್ಟು ಆಹಾರ ಸೇವಿಸಬೇಕೆನ್ನುವುದು ಕೂಡಾ. ಹಾಗಾಗಿ ನಿಮ್ಮ ದೇಹ ಬಯಸಿದರೆ ನಿಮ್ಮ ಡಯಟ್‌ನಲ್ಲಿ ಮೊಟ್ಟೆಯನ್ನು ಅಗತ್ಯವಾಗಿ ಸೇರಿಸಿಕೊಳ್ಳಿ. ಆದರೆ ಅತಿಯಾದ ಮೊಟ್ಟೆಯ ಸೇವನೆ ದೇಹದ ಉಷ್ಣತೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಬಹುದು. ಮಾತ್ರವಲ್ಲ, ಕರುಳಿನ ಸಮಸ್ಯೆಗೂ ಕಾರಣವಾಗಬಹುದು.

ಮಕ್ಕಳಿಗೆ ಮೊಟ್ಟೆ ಕೊಡಬಹುದೇ.?

ಮಕ್ಕಳಿಗೆ ಮೊಟ್ಟೆ ಕೊಡಬಹುದೇ.?

ಅಗತ್ಯವಾಗಿ ಮಕ್ಕಳಿಗೆ ಮೊಟ್ಟೆಯನ್ನು ಕೊಡಬಹುದು. ಬೇಸಿಗೆಯಲ್ಲಿ ಮಕ್ಕಳಿಗೆ ಮೊಟ್ಟೆ ಸೇವಿಸಲು ಕೊಡುವುದರಿಂದ ಯಾವುದೇ ಸಮಸ್ಯೆಯಾಗದು. ಸೆಕೆಗಾಲದಲ್ಲಿ ಮೊಟ್ಟೆಯ ಸೇವನೆ ಮಕ್ಕಳಲ್ಲಿ ದ್ರವದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಆಯಾಸವನ್ನು ಪರಿಹರಿಸಿ, ಹೆಚ್ಚಿನ ಶಕ್ತಿ ನೀಡುತ್ತದೆ. ಮಗುವಿಗೆ ದೇಹದ ಉಷ್ಣತೆಯ ಸಮಸ್ಯೆ ಇಲ್ಲದಿದ್ದಲ್ಲಿ ದಿನಕ್ಕೆ ಒಂದು ಮೊಟ್ಟೆ ಕೊಡಬಹುದು.

ನಿಮ್ಮ ಮಗು ಅತಿಯಾದ ದೇಹದ ಉಷ್ಣತೆ ಹೊಂದಿದ್ದರೆ ಅಥವಾ ನೀವಿರುವ ಪ್ರದೇಶದಲ್ಲಿನ ವಾತಾವರಣ ಹೆಚ್ಚು ಬಿಸಿಯಾಗಿದ್ದರೆ ವಾರದಲ್ಲಿ ಎರಡು ಮೂರು ದಿನ ಮೊಟ್ಟೆ ಕೊಡಬಹುದು. ಮೊಟ್ಟೆಯನ್ನು ಆಮ್ಲೆಟ್‌ ಅಥವಾ ಬೇಯಿಸಿ ಅಥವಾ ಪ್ಯಾನ್ ಕೇಕ್‌ಗಳಿಗೆ ಸೇರಿಸಿಯೂ ನೀಡಬಹುದು. ಹೆಚ್ಚು ಮೊಟ್ಟೆಯ ಸೇವನೆ ಮಕ್ಕಳಲ್ಲಿ ಮಲಬದ್ಧತೆ, ಅಜೀರ್ಣ, ಇತರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಕೊನೆಯದಾಗಿ

ಕೊನೆಯದಾಗಿ

ಯಾವುದೇ ಆಗಲಿ ಅತಿಯಾದರೆ ವಿಷವೆನ್ನುತ್ತಾರೆ. ಇದರಲ್ಲಿ ಆಹಾರವೂ ಹೊರತಾಗಿಲ್ಲ. ಅತಿಯಾಗಿ ತಿಂದರೆ ನಮ್ಮ ಜೀರ್ಣಾಂಗಕ್ಕೆ ಜೀರ್ಣಿಸಿಕೊಳ್ಳುವುದು ಕಷ್ಟವೇ. ಮೊಟ್ಟೆಯೂ ಕೂಡಾ ಪ್ರೋಟೀನ್‌, ಪೋಷಕಾಂಶ ಭರಿತ ಆಹಾರವಾಗಿರುವುದರಿಂದ ಜೀರ್ಣಿಸಿಕೊಳ್ಳಲು ಮತ್ತು ದೇಹ ಹೀರಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಯಾವುದೇ ಪ್ರೊಟೀನ್‌ಭರಿತ ಆಹಾರವಾಗಲಿ ಜೀರ್ಣವಾಗುವಾಗ ಹೆಚ್ಚು ಶಾಖವನ್ನು ಉತ್ಪಾದಿಸುತ್ತದೆ. ಆದ್ದರಿಂದ ಮೊಟ್ಟೆಯ ಸೇವನೆಯ ಪ್ರಮಾಣ ಮಿತಿಯಾಗಿರಲಿ. ಯಾವುದೇ ಕಾಲವಾಗಲಿ ಮೊಟ್ಟೆಯನ್ನು ಸೇವಿಸಬಹುದು, ಬೇಸಿಗೆಯಲ್ಲೂ ಮೊಟ್ಟೆಯ ಸೇವನೆ ಸುರಕ್ಷಿತ. ಇನ್ನೊಂದು ಮಾತೆಂದರೆ ಬೇಸಿಗೆಯಲ್ಲಿ ದೇಹದ ಉಷ್ಣತೆ ಸ್ಥಿರವಾಗಿ ಕಾಪಾಡಿಕೊಳ್ಳಲು ಹೆಚ್ಚು ದ್ರವಾಹಾರ, ನೀರಿನ ಸೇವನೆ ಮಾಡುವುದನ್ನು ಮರೆಯದಿರಿ.

English summary

Should You Avoid Eating Eggs In summer

Can we eat eggs during summer and here are the benefits of eating eggs in kannada,
X
Desktop Bottom Promotion