Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಸಮಂತಾ ಮಯೋಸೈಟಿಸ್‌ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
ಸಮಂತಾ ಈ ನಟಿಯೆಂದರೆ ದಕ್ಷಿಣ ಭಾರತದ ಸಿನಿ ಪ್ರಿಯರಿಗೆ ತುಂಬಾನೇ ಪ್ರೀತಿ. ಮುದ್ದು ಮುಖದ ಈ ನಟಿ ಕನ್ನಡದಲ್ಲಿ ಯಾವುದೇ ಚಿತ್ರದಲ್ಲಿ ನಟಿಸದಿದ್ದರೂ ಕೂಡ ಸಮಂತಾ ಚಿರಪರಿಚಿತ. ಅವರಿಗೆ ಮಯೋಸೈಟಿಸ್ ಎಂಬ ಕಾಯಿಲೆ ಇರುವುದರ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೇ ಹೇಳಿದ್ದರು.

ಮಯೋಸೈಟಿಸ್ ಎಂಬುವುದು ಅಟೋಇಮ್ಯೂನೆ ಕಾಯಿಲೆಯಾಗಿದ್ದು ಈ ಕಾಯಿಲೆ ಬಂದರೆ ಮೈಯಲ್ಲಿ ಉರಿಯೂತ ಉಂಟಾಗಿ ಈ ಕಾಯಿಲೆ ಬಂದರೆ ನಡೆದಾಡಲು ಕೂಡ ಕಷ್ಟವಾಗುವುದು, ಬೆಡ್‌ನಿಂದ ಏಳಲು ಕೂಡ ಕಷ್ಟವಾಗುವುದು. ಈ ಕಾಯಿಲೆ ಸಮಂತಾ ತುಂಬಾನೇ ಬಳಲಿದ್ದಾರೆ, ಒಂದು ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ.
ಅವರು ಈ ಕಾಯಿಲೆಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಈಗ ಅವರು ಪೋಸ್ಟ್ ಮಾಡಿ ತಾವು ಕಠಿಣವಾದ ಆಹಾರಕ್ರಮ ಅನುಸರಿಸುವ ಮೂಲಕ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಅವರು ವ್ಯಾಯಾಮ ಕೂಡ ಮಾಡುತ್ತಿರುವ ವೀಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಶೀಘ್ರದಲ್ಲಿಯೇ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಫುಲ್ ಅಪ್ ವ್ಯಾಯಾಮ ಮಾಡುತ್ತಿರುವ ಸಮಂತಾ
ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು. ಸುಸ್ತು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತಿ. ಅವರು ಸಂದರ್ಶನವೊಂದರಲ್ಲಿ ನನಗೆ ಕೆಲವೊಮ್ಮೆ ಬೆಡ್‌ನಿಂದ ಏಳಲು ಕೂಡ ಕಷ್ಟವಾಗುವುದು, ಅಷ್ಟೊಂದು ಸುಸ್ತಾಗುವುದು ಎಂಬುವುದಾಗಿ ಹೇಳಿದ್ದರು. ಇದೀಗ ಪುಲ್ ಅಪ್ ಮಾಡುತ್ತಿರುವ ವೀಡಿಯೋ ಶೇರ್ ಮಾಡುವ ಮೂಲಕ ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂಬುವುದನ್ನು ತಿಳಿಸಿದ್ದಾರೆ.

ಅಟೋಇಮ್ಯೂನೆ ಡಯಟ್ ಫಾಲೋ ಮಾಡುತ್ತಿರುವ ಸಮಂತಾ
ಸಮಂತಾ ಅವರು ತುಂಬಾ ಕಟ್ಟುನಿಟ್ಟಿನ ಅಟೋಇಮ್ಯೂನೆ ಡಯಟ್ ಫಾಲೋ ಮಾಡುತ್ತಿದ್ದಾರೆ. ತಜ್ಞರ ಪ್ರಕಾರ ಈ ಡಯಟ್ ಸಂಧಿವಾತ, ತೈರಾಯ್ಡ್, ಉರಿಯೂತ, celiac ಕಾಯಿಲೆ ಇರುವವರು ಪಾಲಿಸಿದರೆ ಚೇತರಿಸಿಕೊಳ್ಳಲು ತುಂಬಾನೇ ಒಳ್ಳೆಯದು.

ಅಟೋಇಮ್ಯೂನೆ ಡಯಟ್ ಎಂದರೇನು?
ಅಟೋಇಮ್ಯೂನೆ ಡಯಟ್ ಅಂದರೆ ಪಲಿಯೋ ಡಯಟ್‌ಗೆ ಸಮವಾಗಿದೆ. ಈ ಡಯಟ್‌ನಲ್ಲಿ ಉರಿಯೂತ ಉಂಟು ಮಾಡುವ ಆಹಾರ ಸೇವಿಸಲೇಬಾರದು.
ಅಟೋಇಮ್ಯೂನೆ ಡಯಟ್ ಎಂದರೇನು?
ಅಟೋಇಮ್ಯೂನೆ ಡಯಟ್‌ನಲ್ಲಿ ಧಾನ್ಯಗಳು, ಕಾಳುಗಳು, ಬೀಜಗಳು, ನಟ್ಸ್, ಮೊಟ್ಟೆ ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸುವಂತೆಯೇ ಇಲ್ಲ. ಮದ್ಯ, ತಂಬಾಕು, ಕಾಫಿ, ಎಣ್ಣೆ ಪದಾರ್ಥಗಳು, ಸಂಸ್ಕರಿಸಿದ ಆಹಾರ, ಸಕ್ಕರೆ ಈ ಬಗೆಯ ಆಹಾರಗಳನ್ನು ಬಳಸುವಂತಿಲ್ಲ.
ಈ ಡಯಟ್‌ನಲ್ಲಿ ತಾಜಾ ಹಣ್ಣುಗಳನ್ನು ಸೇವಿಸಲಾಗುವುದು, ತೆಳು ಕೊಬ್ಬಿನಂಶದ ಮಾಂಸ, ಹುದುಗು ಬರಿಸಿದ ಆಹಾರ, ಮೂಳೆ ಸೂಪು ಇವುಗಳನ್ನು ಬಳಸಬಹುದು.
ಇದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ಚೆನ್ನಾಗಿ ನಿದ್ದೆ ಮಾಡಬೇಕು ಹಾಗೂ ದೈಹಿಕ ವ್ಯಾಯಾಮ ಮಾಡಬೇಕು.

ಆಹಾರವನ್ನು ಮತ್ತೆ ಪರಿಚಯಿಸುವುದು
ಚೇತರಿಸಿಕೊಂಡ ಮೇಲೆ ಅಟೋಇಮ್ಯೂನೆ ಡಯಟ್‌ನಲ್ಲಿ ಬಳಸದೇ ಇದ್ದ ಯಾವುದೇ ಆಹಾರವನ್ನು ನಿಧಾನಕ್ಕೆ ಪರಿಚಯಿಸಬಹುದು.
* ನೀವು ಮೊದಲಿಗೆ 1 ಚಮಚದಷ್ಟು ತಿಂದು 15 ನಿಮಿಷ ಏನಾದರೂ ರಿಯಾಕ್ಷನ್ ಆಗುವುದೇ ನೋಡಬೇಕು. ಒಂದು ವೇಳೆ ಏನಾದರೂ ರಿಯಾಕ್ಷನ್ ಕಂಡು ಬಂದರೆ ಮತ್ತೆ ಬಳಸಬಾರದು. ನೀವು ಆಹಾರವನ್ನು ತಿಂದ 4-5 ದಿನ ಯಾವುದೇ ರಿಯಾಕ್ಷನ್ ಕಂಡು ಬರದಿದ್ದರೆ ಆ ಆಹಾರಗಳನ್ನು ಸೇವಿಸಬಹುದು.

ಅಟೋಇಮ್ಯೂನೆ ಡಯಟ್‌ನಲ್ಲಿ ಯಾವ ಬಗೆಯ ಆಹಾರ ಸೇವಿಸಬಾರದು?
* ಅಕ್ಕಿ, ಗೋಧಿ, ಓಟ್ಸ್, ಬಾರ್ಲಿ, ಪಾಸ್ತಾ, ಬ್ರೆಡ್, ಬ್ರೇಕ್‌ಫಾಸ್ಟ್ ಸೆರೆಲ್ಸ್ ಬಳಸಬಾರದು.
* ಬೀನ್ಸ್, ಬಟಾಣಿ, ನೆಲಗಡಲೆ , ಟೋಫು, ಪೀನಟ್ ಬಟರ್ ಈ ಬಗೆಯ ಆಹಾರ ಸೇವಿಸಬಾರದು.
* ಬದನೆಕಾಯಿ, ದುಂಡು ಮೆಣಸು, ಆಲೂಗಡ್ಡೆ, ಟೊಮೆಟೊ ಈ ಬಗೆಯ ಆಹಾರ ಸೇವಿಸಬಾರದು.
* ಕೊತ್ತಂಬರಿ, ಜೀರಿಗೆ , ನಕ್ಷತ್ರ ಮೊಗ್ಗು, ಸೋಂಪು, ಮೆಂತೆ, ಸಾಸಿವೆ, ನಟ್‌ಮಗ್ ಈ ಬಗೆಯ ಆಹಾರ ಬಳಸಬಾರದು.
* ಬೀಟ್ ಶುಗರ್, ಕಾರ್ನ್ ಸಿರಪ್, ಬ್ರೌನ್ ರೈಸ್ ಸಿರಪ್, ಬಾರ್ಲಿ ಮಾಲ್ಟ್ ಸಿರಪ್, ಸ್ವೀಟ್, ಸೋಡಾ, ಕ್ಯಾಂಡಿ, ಫ್ರೋಝನ್ ಡೆಸರ್ಟ್, ಚಾಕೋಲೆಟ್ ಇವುಗಳನ್ನು ಸೇವಿಸಬಾರದು
* ಟ್ರ್ಯಾನ್ಸ್‌ಫ್ಯಾಟ್, ಕೃತಕ ಸಿಹಿ ಇವುಗಳನ್ನು ಬಳಸಬಾರದು.



Click it and Unblock the Notifications
