For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧ ಹೋರಾಡಬೇಕೆ? ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿ

|

ಇದೀಗ ಮತ್ತೆ ಕೊರೊನಾ ಆತಂಕ ಹೆಚ್ಚಿದೆ, ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಗಮನ ನೀಡಬೇಕಾಗಿದೆ, ಏಕೆಂದರೆ ರೋಗ ನಿರೋಧಕ ಶಕ್ತಿ ಚೆನ್ನಾಗಿರುವವರಿಗೆ ಕೊರೊನಾ ಸೋಂಕು ತಗುಲುವುದಿಲ್ಲ, ಆದ್ದರಿಂದ ಆಹಾರಕ್ರಮದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಆರೋಗ್ಯಕರ ದೇಹಕ್ಕೆ ಪ್ರೊಟೀನ್ ಬೇಕು, ಅದರಲ್ಲೂ ಈ ಕೊರೊನಾವೈರಸ್‌ ಸಮಯದಲ್ಲಿ ಪ್ರೊಟೀನ್‌ ನಮ್ಮ ದೇಹಕ್ಕೆ ತುಂಬಾನೇ ಅತ್ಯವಶ್ಯವಾಗಿದೆ.

ಡಯಟ್‌ನಲ್ಲಿ ಪ್ರೊಟೀನ್ ಅವಶ್ಯಕ

ಡಯಟ್‌ನಲ್ಲಿ ಪ್ರೊಟೀನ್ ಅವಶ್ಯಕ

ಡಯಟ್‌ ಅಂದ್ರೆ ಆಹಾರಕ್ರಮದಲ್ಲಿ ಪ್ರೊಟೀನ್‌ ಸೇರಿಸುವುದರಿಂದ ಕೊರೊನಾವೈರಸ್‌ ವಿರುದ್ಧ ಹೋರಾಡಲು ಸಹಕಾರಿಯಾಗಿದೆ, ಇಲ್ಲಿ ಪ್ರೊಟೀನ್‌ ನಿಮ್ಮ ಕೋವಿಡ್‌ ತಡೆಗಟ್ಟುವ ಡಯಟ್‌ನಲ್ಲಿ ಅತ್ಯವಶ್ಯಕ ಏಕೆ ಎಂದು ಹೇಳಲಾಗಿದೆ ನೋಡಿ:

ಸಮತೋಲನ ಆಹಾರ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ

ಸಮತೋಲನ ಆಹಾರ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ

ನಮ್ಮ ಪ್ಲೇಟ್‌ನಲ್ಲಿರುವ ಹೊಟ್ಟೆ ತುಂಬುವಂತೆ ಇದ್ದರೆ ಸಾಲದು ದೇಹಕ್ಕೆ ಬೇಕಾಗುವಂತೆ ಇರಬೇಕು, ಅಸಮತೋಲನ ಆಹಾರಕ್ರಮ ಸೇವಿಸಿದರೆ ಅಂದರೆ ಪಿಜ್ಜಾ, ಬರ್ಗರ್‌ ಮುಂತಾದ ಆಹಾರ ಸೇವಿಸುವುದು, ತಂಪು ಪಾನೀಯಗಳ ಸೇವನೆ ಇವೆಲ್ಲಾ ದೇಹಕ್ಕೆ ಶಕ್ತಿಯನ್ನು ನೀಡುವುದಿಲ್ಲ, ಆದ್ದರಿಂದ ಪೋಷಕಂಶಗಳಿರುವ ಆಹಾರ ಸೇವನೆ ಮಾಡಬೇಕು.

ಪ್ರೊಟೀನ್‌ ಏಕೆ ಬೇಕು?

ಪ್ರೊಟೀನ್‌ ಏಕೆ ಬೇಕು?

ಮಾನವ ದೇಹದ ಪ್ರತಿಯೊಂದು ಜೀವ ಕಣಗಳಿಗೂ ಪ್ರೊಟೀನ್‌ ಅವಶ್ಯಕ, ಪ್ರೊಟೀನ್ ಹೊಸ ಜೀವ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಆರೋಗ್ಯಕರ ಜೀವನ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಲು ಪ್ರೊಟೀನ್ ಅವಶ್ಯಕವಾಗಿದೆ. ನಮ್ಮ ದೇಹವೂ ಪ್ರೊಟೀನ್‌ ಅನ್ನು ಉತ್ಪಾದಿಸುವುದಿಲ್ಲ, ಅವುಗಳನ್ನು ನಾವು ಆಹಾರದ ಮೂಲಕ ಸೇವಿಸಬೇಕು.

ಪ್ರೊಟೀನ್ ಹಾಗೂ ಕೋವಿಡ್

ಪ್ರೊಟೀನ್ ಹಾಗೂ ಕೋವಿಡ್

ಯಾರಿಗೆ ಪ್ರೊಟೀನ್ ಕೊರತೆ ಇದೆಯೋ ಅವರಿಗೆ ಕೊರೊನಾ ವೈರಸ್‌ ಅಪಾಯ ಹೆಚ್ಚು ಎಂಬುವುದಾಗಿ ಸಂಶೋಧನೆಯಿಂದ ತಿಳಿದು ಬಂದಿದೆ. ಪ್ರೊಟೀನ್ ಕಡಿಮೆ ತಿಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಇದರಿಂದ ಕೊರೊನಾ ವೈರಸ್‌ ದಾಳಿ ಮಾಡುವ ಸಾಧ್ಯತೆ ಹೆಚ್ಚು.

ಯಾವ ವೆಜ್‌ ಆಹಾರಗಳಲ್ಲಿ ಪ್ರೊಟೀನ್ ಅಧಿಕವಿದೆ?

ಯಾವ ವೆಜ್‌ ಆಹಾರಗಳಲ್ಲಿ ಪ್ರೊಟೀನ್ ಅಧಿಕವಿದೆ?

ಧಾನ್ಯಗಳು

ಬೀನ್ಸ್

ಹಸಿ ಬಟಾಣಿ

ಕಾಳುಗಳು

ಹಾಗೂ ಕೆಲವೊಂದು ಗಿಡಗಳಲ್ಲಿ ಪ್ರೊಟೀನ್‌ ಅಧಿಕವಿರುತ್ತದೆ

ಯಾವ ನಾನ್‌ವೆಜ್‌ನಲ್ಲಿ ಪ್ರೊಟೀನ್‌ ಅಧಿಕವಿರುತ್ತದೆ?

ಯಾವ ನಾನ್‌ವೆಜ್‌ನಲ್ಲಿ ಪ್ರೊಟೀನ್‌ ಅಧಿಕವಿರುತ್ತದೆ?

ಎಲ್ಲಾ ಮಾಂಸಾಹಾರಗಳಲ್ಲಿ ಪ್ರೊಟೀನ್ ಇರುತ್ತದೆ, ಚಿಕನ್, ಫೋರ್ಕ್‌, ಬೀಫ್ , ಮತ್ತಿ ಮೀನು, ಸೀಗಡಿ ಇವುಗಳಲ್ಲಿ ಪ್ರೊಟೀನ್ ಅಧಿಕವಿರುತ್ತದೆ.

ಆದ್ದರಿಂದ ಪ್ರೊಟೀನ್ ಇರುವ ಆಹಾರ ಸೇವಿಸಿ ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಿ.

English summary

Importance Of Protein In Your Diet To Prevent Coronavirus in Kannada

If you want to fight against coronavirus have protein rich foods, here are more informaton in kannada,
Story first published: Saturday, August 13, 2022, 12:00 [IST]
X
Desktop Bottom Promotion