For Quick Alerts
ALLOW NOTIFICATIONS  
For Daily Alerts

ಕೋವಿಡ್-19 ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ನೀಡಬೇಕಾದ ಆಹಾರಗಳಿವು

|

ಭಾರತದಲ್ಲಿ 5 ತಿಂಗಳ ಹಿಂದೆ 500-1000ದ ಒಳಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 30 ಲಕ್ಷ ತಲುಪಿದೆ. ಕರ್ನಾಟಕದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಎರಡು ಲಕ್ಷ ಮೀರಿದೆ. ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ಆದರೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯೂ ಭಾರತದಲ್ಲಿ ಅಧಿಕವಿದೆ.

ಯಾರು ಕೊರೊನಾ ಸೋಂಕಿಗೆ ಒಳಗಾಗಿರುತ್ತಾರೋ ಅವರಿಗೆ ಔಷಧಿಯ ಜೊತೆಗೆ ಬೇಗನೆ ಚೇತರಿಸಿಕೊಳ್ಳಲು ಪೌಷ್ಠಿಕ ಆಹಾರಗಳ ಸೇವನೆಯೂ ಅಷ್ಟೇ ಮುಖ್ಯ. ಇದಕ್ಕಾಗಿ ಕರ್ನಾಟಕ ಸರ್ಕಾರವೂ ಜುಲೈನಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ಆಹಾರದ ಮೆನು ಹೇಗಿರಬೇಕು ಎಂಬ ಮಾರ್ಗ ಸೂಚಿಯನ್ನು ಕೂಡ ನೀಡಿತ್ತು.

 immunity boost foods to serve corona patient

ಇದೀಗ ಹೆಚ್ಚಿನ ರೋಗ ಲಕ್ಷಣಗಳು ಇಲ್ಲದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೂಡ ಆಹಾರ ಕ್ರಮದ ಕಡೆ ಗಮನ ನೀಡುವುದು ಒಳ್ಳೆಯದು. ಇದರಿಂದ ಬೇಗನೆ ಚೇತರಿಸಿಕೊಳ್ಳಬೇಕಾಗಿದೆ.

ಸರ್ಕಾರಕ್ಕೆ ತಜ್ಞರು ನೀಡಿರುವ ಸಲಹೆ ಆಧಾರದ ಮೇಲೆ ನಾವಿಲ್ಲಿ ಕೊರೊನಾ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ನೀಡಬೇಕಾದ ಆಹಾರಕ್ರಮದ ಬಗ್ಗೆ ಹೇಳಿದ್ದೇವೆ ನೋಡಿ:

7 ಗಂಟೆಗೆ ಬ್ರೇಕ್‌ಫಾಸ್ಟ್

7 ಗಂಟೆಗೆ ಬ್ರೇಕ್‌ಫಾಸ್ಟ್

ಕೊರೊನಾ ಸೋಂಕಿತರಿಗೆ ಬೆಳಗ್ಗೆ 7 ಗಂಟೆಗೆ ಆಹಾರ ನೀಡಬೇಕು

ಬೆಳಗ್ಗೆ 7 ಗಂಟೆಗೆ ಬಿಸಿ ಉಪಾಹಾರ ನೀಡಬೇಕು. ಉಪಾಹಾರಕ್ಕೆ ರವೆ ಇಡ್ಲಿ, ಪೊಂಗಲ್ , ದೋಸೆ, ಕಿಚಡಿ, ಉಪ್ಪಿಟ್ಟು ಈ ರೀತಿಯ ಆಹಾರಗಳನ್ನು ನೀಡಬಹುದು. 10 ಗಂಟೆಗೆ ಹಣ್ಣಿನ ಜ್ಯೂಸ್ ಅಥವಾ ಗಂಜಿ ನೀಡಬೇಕು.

ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟ

ಮಧ್ಯಾಹ್ನ ಬಿಸಿ ಬಿಸಿಯಾದ ಅನ್ನ ಅಥವಾ ಚಪಾತಿ ತಿನ್ನಬಹುದು. ಇನ್ನು ಆಹಾರದಲ್ಲಿ ಮೊಸರು, ಮೊಟ್ಟೆ, ಪಲ್ಯ ಇವುಗಳನ್ನು ನೀಡಬೇಕು. ಮೊಟ್ಟೆ ತಿನ್ನದವರು ಮೊಟ್ಟೆಯ ಬದಲಿಗೆ ಬಾಳೆಹಣ್ಣು ಸೇವಿಸುವುದು ಒಳ್ಳೆಯದು.

 ಸಂಜೆ

ಸಂಜೆ

ಸಂಜೆ ಹಣ್ಣುಗಳು, ಏಲಕ್ಕಿ ಬಾಳೆಹಣ್ಣು, ಪ್ರೊಟೀನ್ ಬಿಸ್ಕೆಟ್, ಖರ್ಜೂರ, ವಿಟಮಿನ್ ಸಿ ಅಧಿಕವಿರುವ ಹಣ್ಣುಗಳನ್ನು ನೀಡಬೇಕು..

ರಾತ್ರಿ

ರಾತ್ರಿ

ರಾತ್ರಿ ಚಪಾತಿ, ಪಲ್ಯ, ಬೇಳೆ ಸಾರು, ಬೇಕಿದ್ದರೆ ಸ್ವಲ್ಪ ಅನ್ನ ಇವುಗಳನ್ನು ನೀಡಬೇಕು. ರೋಗಿಗೆ ಕೊಡುವ ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಿರಲಿ. ಇದರಿಂದ ಪೌಷ್ಠಿಕಾಂಶಗಳು ದೊರೆಯುತ್ತದೆ. ಪಪ್ಪಾಯಿ ಹಣ್ಣು, ಕಿವಿ ಹಣ್ಣು, ಮೂಸಂಬಿ, ಕಿತ್ತಳೆ ಇವೆಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಆಹಾರಗಳನ್ನು ನೀಡಿದರೆ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ.

ಸರ್ಕಾರ ನೀಡಿರುವ ಫುಡ್‌ ಮೆನು

ಸರ್ಕಾರ ನೀಡಿರುವ ಫುಡ್‌ ಮೆನು

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರ ನೀಡಿರುವ ಫುಡ್‌ ಮೆನು ಹೀಗಿದೆ:

ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್‌ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿ ಬೇಳೆಬಾತ್, ಶನಿವಾರ ಉಪ್ಪಿಟ್ಟು , ಭಾನುವಾರ ಸೆಟ್‌ ದೋಸೆ ಬ್ರೇಕ್‌ಫಾಸ್ಟ್‌ಗೆ ನೀಡಲಾಗುವುದು.

ಇನ್ನು ಕಲ್ಲಂಗಡಿ, ಪಪ್ಪಾಯಿ, ಕರ್ಬೂಜ, ತರಕಾರಿ ಸೂಪ್ ಇವುಗಳನ್ನು ಬೆಳಗ್ಗೆ 10 ಗಂಟೆಗೆ ಹಾಗೂ ಪಾಪಾಕ್, ಟೊಮೆಟೊ, ಕ್ಯಾರೆಟ್ ಸೂಪ್, ರಾಂಗಿ ಗಂಜಿ ಇವುಗಳನ್ನು ನೀಡುವಂತೆ ಸೂಚಿಸಲಾಗಿದೆ.

English summary

Foods To Boost Immunity in Coronavirus Patients

Here are immunity boosting food menu to serve corona patient, this will help them for fast recovery.
X
Desktop Bottom Promotion