For Quick Alerts
ALLOW NOTIFICATIONS  
For Daily Alerts

ಮೊಸರನ್ನ ತಿಂದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ

|

ದಕ್ಷಿಣ ಭಾರತದ ಆಹಾರಶೈಲಿಯಲ್ಲಿ ಮೊಸರನ್ನಕ್ಕೆ ಅಗ್ರಸ್ಥಾನ. ಎಂಥದ್ದೇ ಮೃಷ್ಟಾನ್ನ ಭೋಜನವಿರಲಿ, ಕೊನೆಯಲ್ಲಿ ಸ್ವಲ್ಪ ಮೊಸರನ್ನ ಇರಲೇಬೇಕು. ಆಗ ಮಾತ್ರ ಸಮಧಾನ. ಇನ್ನು ನಮ್ಮಲ್ಲಿ ಎಷ್ಟೋ ಜನರಿಗೆ ಮೊಸರನ್ನಇಲ್ಲ ಅಂದ್ರೆ ಆಗುವುದೇ ಇಲ್ಲ, ಅಷ್ಟರ ಮಟ್ಟಿಗೆ ಮೊಸರನ್ನ ಪ್ರಿಯರಾಗಿರುತ್ತಾರೆ. ಮೊಸರನ್ನ ತಿಂದ ಬಳಿಕ ಹೊಟ್ಟೆ ಭಾರವಾಗಿ ಕಣ್ಣಿಗೆ ಸವಿ ನಿದ್ದೆ ಹತ್ತುವುದು.

ಈ ಮೊಸರನ್ನ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತು. ಆದರೆ ಇದರಲ್ಲಿರುವ ಅದ್ಭುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲ್ಲ. ನಾವು ಈ ಲೇಖನದಲ್ಲಿ ಮೊಸರನ್ನ ನಮ್ಮ ಯೌವನ ಹಾಗೂ ಆರೋಗ್ಯ ಕಾಪಾಡುವಲ್ಲಿ ಹೇಗೆಲ್ಲಾ ಸಹಕಾರಿ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ.

1. ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು

1. ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು

ಮೊಸರಿನಲ್ಲಿ ಪ್ರೊಬಯೋಟಿಕ್ (ಇದರಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾ ಇರುತ್ತದೆ) ಅಂಶ ಇರುತ್ತದೆ. ಇದು ಕರುಳಿನ ಆರೋಗ್ಯ ವೃದ್ಧಿಸುತ್ತದೆ, ಅಲ್ಲದೆ ಹೊಟ್ಟೆ ಆರೋಗ್ಯ ವೃದ್ಧಿಸುತ್ತದೆ.

 2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದು ಹೊಟ್ಟೆ ನೋವಿಗೆ ಕಾರಣವಾಗುವ ಸೂಕ್ಷ್ಮಾಣುಗಳನ್ನು ನಾಶ ಮಾಡಿ ಹೊಟ್ಟೆಯ ಆರೋಗ್ಯ ವೃದ್ಧಿಸುತ್ತದೆ. ಒಂದು ಕಪ್ ಮೊಸರು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆ ಹೇಳಿದೆ.

3. ತ್ವಚೆ ಆರೋಗ್ಯ ವೃದ್ಧಿಸುತ್ತದೆ

3. ತ್ವಚೆ ಆರೋಗ್ಯ ವೃದ್ಧಿಸುತ್ತದೆ

ನಿಮ್ಮ ತ್ವಚೆ ರಕ್ಷಣೆಗೂ ಮೊಸರು ತುಂನಬಾನೇ ಸಹಕಾರಿ. ಹೆಚ್ಚಿನವರು ಮೊಡವೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊಸರು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ, ಇದರಿಂದ ಹಾರ್ಮೋನ್ ಸಮತೋಲನದಲ್ಲಿರುವುದು ಹಾಗೂ ಮೊಡವೆ ಕಡಿಮೆಯಾಗುವುದು. ಅಲ್ಲದೆ ಮುಖದಲ್ಲಿ ಯೌವನದ ಕಳೆ ಕಾಪಾಡಲು ಕೂಡ ಮೊಸರು ಸಹಕಾರಿಯಾಗಿದೆ.

 4. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

4. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಮೊಸರು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾನೇ ಪರಿಣಾಮಕಾರಿ, ಮೊಸರು ತಿನ್ನದವರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಶೆ. 31ರಷ್ಟು ಅಧಿಕ ಎಂದು ಎಹೆಚ್‌ ಎ (High Blood Pressure Research Scientific Sessions of the American Heart Association)ಹೇಳಿದೆ.

5. ಜನನೇಂದ್ರೀಯ ಸೋಂಕು ತಡೆಗಟ್ಟುತ್ತದೆ:

5. ಜನನೇಂದ್ರೀಯ ಸೋಂಕು ತಡೆಗಟ್ಟುತ್ತದೆ:

ಯೀಸ್ಟ್‌ ಸೋಂಕುನಿಂದಾಗಿ ಮಹಿಳೆಯರಿಗೆ ಜನನೇಂದ್ರೀಯದಲ್ಲಿ ತುರಿಕೆ ಕಂಡು ಬರುತ್ತದೆ. ಮೊಸರು ಯೀಸ್ಟ್ ಸೋಂಕು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ದಿನಾ ಒಂದು ಕಪ್ ಮೊಸರು ಸೇವನೆ ಅವರಿಗೆ ದೇಹಕ್ಕೆ ಅಗ್ಯತವಿರುವ ಕ್ಯಾಲ್ಸಿಯಂ ಒದಗಿಸುತ್ತದೆ.

6. ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು

6. ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು

250ಗ್ರಾಂ ಮೊಸರಿನಲ್ಲಿ 275ಮಿಗ್ರಾಂನಷ್ಟು ಕ್ಯಾಲ್ಸಿಯಂ ಇರುತ್ತದೆ. ಪ್ರತಿದಿನ ಮೊಸರು ತಿನ್ನುವುದರಿಂದ ಮೂಳೆಗೆ ಆರೋಗ್ಯ ಕಾಪಾಡುವುದು ಮಾತ್ರವಲ್ಲ ಮೂಳೆಯನ್ನು ಬಲವಾಗಿಸುತ್ತದೆ.

 7. ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತೆ

7. ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತೆ

ಮೊಸರಿಗೆ ಈರುಳ್ಳಿ ಕತ್ತರಿಸಿ ಹಾಕಿ ಸೇವಿಸುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುವುದು. ಇದು ಮುದಿತನ ಮುಂದೂಡುವುದು ಹಾಗೂ ದೇಹದ ಆರೋಗ್ಯವನ್ನು ಕಾಪಾಡುತ್ತೆ, ಅದರಲ್ಲೂ ಮೊಸರು ಪುರುಷರಿಗೆ ತುಂಬಾ ಒಳ್ಳೆಯದು. ಮೊಸರು ಹೃದಯ ರೋಗಿಗಳ ಆರೋಗ್ಯಕ್ಕೂ ಒಳ್ಳೆಯದು.

English summary

Health Benefits Of Eating Curd Rice In Kannada

Here are health benefits of eating curd rice, have a look...
Story first published: Wednesday, December 2, 2020, 10:25 [IST]
X
Desktop Bottom Promotion