For Quick Alerts
ALLOW NOTIFICATIONS  
For Daily Alerts

ಮಸಲ್‌ ಕ್ಯಾಚ್‌ ಸಮಸ್ಯೆಯೇ? ಈ 10 ಆಹಾರಗಳನ್ನು ಸೇವಿಸಿ

|

ಮಸಲ್ ಕ್ಯಾಚ್ ಅಥವಾ ಸ್ನಾಯು ಸೆಳೆತ ನೀಡುವ ನೋವು ಎಂಥದ್ದು ಎಂಬುವುದು ಅದು ಅನುಭವಿಸಿದವರಿಗೆ ಗೊತ್ತು. ಈ ಮಸಲ್ ಕ್ಯಾಚ್‌ ಎನ್ನುವುದು ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಿ ಬರುತ್ತದೆ. ಮಸಲ್‌ ಕ್ಯಾಚ್‌ ಹೆಚ್ಚಾಗಿ ವಯಸ್ಸಾದವರಲ್ಲಿ, ಗರ್ಭಿಣಿಯರಲ್ಲಿ, ಸ್ಪೋರ್ಟ್ಸ್‌ ಆಟಗಾರರಲ್ಲಿ ಹಾಗೂ ಅತೀ ಹೆಚ್ಚು ವ್ಯಾಯಾಮ ಮಾಡುವವರಲ್ಲಿಯೂ ಕಂಡು ಬರುವುದು.

Top 10 Foods That Can Help Ease Muscle Cramps | Boldsky Kannada
Foods That Can Help Ease Muscle Cramps

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ, ನರಗಳು ಬಳಲಿದಾಗ, ತುಂಬಾ ಹೊತ್ತು ನಿಂತು ಮಾಡುವ ಕೆಲಸ ಹೀಗೆ ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಇನ್ನು ವಿಟಮಿನ್ಸ್ ಮೆಗ್ನಿಷ್ಯಿಯಂ, ವಿಟಮಿನ್ ಡಿ, ಪೊಟಾಷ್ಯಿಯಂ, ಸೋಡಿಯಂ, ಕ್ಯಾಲ್ಸಿಯಂ ಕೊರತೆ ಇರುವವರಲ್ಲಿಯೂ ಮಸಲ್‌ ಕ್ಯಾಚ್‌ ಕಂಡು ಬರುತ್ತದೆ.

ಆಗಾಗ ಮಸಲ್ ಕ್ಯಾಚ್‌ಸಮಸ್ಯೆ ಕಾಡುತ್ತಿದ್ದರೆ ಮಲಗುವ ಮುನ್ನ ಕಾಲಿಗೆ ಲೈಟ್ ಮಸಾಜ್ ಮಾಡಿ ಹಾಗೂ ನಿಮ್ಮ ಆಹಾರಕ್ರಮದಲ್ಲಿ ಇವುಗಳನ್ನು ಸೇರಿಸುವುದರಿಂದ ಮಸಲ್ ಕ್ಯಾಚ್‌ ತಡೆಗಟ್ಟಬಹುದು:

1. ಎಳನೀರು

1. ಎಳನೀರು

ಎಳನೀರಿನಲ್ಲಿ ಎಲೆಕ್ಟ್ರೋಲೈಟ್ಸ್ , ಸೋಡಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ ಅಂಶಗಳಿರುತ್ತದೆ. ಎಲೆಕ್ಟ್ರೋಲೈಟ್ಸ್‌ ಅಂಶವಿರುವ ಪಾನೀಯ ಮಸಲ್‌ ಕ್ಯಾಚ್‌ ಕಡಿಮೆ ಮಾಡುವಲ್ಲಿ ಸಹಕಾರಿ. ಆದ್ದರಿಂದ ಸ್ಪೋರ್ಟ್ಸ್ ಆಟಗಾರರಿಗೆ ಎಲೆಕ್ಟ್ರೋಲೈಟ್ಸ್ ಇರುವ ಪಾನೀಯ ನೀಡಲಾಗುವುದು. ದಿನದಲ್ಲಿ 1-2 ಎಳನೀರು ಕುಡಿದರೆ ರಾತ್ರಿ ಹೊತ್ತು ಮಸಲ್‌ ಕ್ಯಾಚ್‌ ಕಡಿಮೆಯಾಗುವುದು.

2. ಪಪ್ಪಾಯಿ

2. ಪಪ್ಪಾಯಿ

ಪಪ್ಪಾಯಿಯಲ್ಲಿ ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಅಧಿಕವಿದ್ದು ಇವುಗಳು ಸ್ನಾಯುಗಳ ಕಾರ್ಯ ನಿರ್ವಹಿಸುವಲ್ಲಿ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಹೃದಯ ಬಡಿತ ಸರಿಯಾದ ರೀತಿಯಲ್ಲಿ ನಡೆಯಲು ಕೂಡ ಈ ವಿಟಮಿನ್ಸ್ ಅವಶ್ಯಕ. ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಒಂದು ಬೌಲ್‌ ಪಪ್ಪಾಯಿ ತಿನ್ನುವುದು ಒಳ್ಳೆಯದು.

3. ಮೀನು

3. ಮೀನು

ಬುತಾಯಿ, ಬಂಗುಡೆ, ಸಾಲಮೋನ್‌ ಇಂಥ ಮೀನುಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ, ಸೋಡಿಯಂ ಅಧಿಕವಿರುತ್ತದೆ. ಇದು ಮಸಲ್‌ ಕ್ಯಾಚ್‌ತಡೆಗಟ್ಟುವಲ್ಲಿ ಸಹಕಾರಿ.

ವಾರದಲ್ಲಿ 2-3 ಬಾರಿ ಮೀನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಅವಶ್ಯಕ ಪೋಷಕಾಂಶ ದೊರೆಯುವುದು ಹಾಗೂ ಇವುಗಳಲ್ಲಿರುವ ಒಮೆಗಾ3 ಕೊಬ್ಬಿನಂಶ ಕೂಡ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿ.

4. ಕಲ್ಲಂಗಡಿ ಹಣ್ಣು

4. ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಇದ್ದು ಈ ಹಣ್ಣಿನಲ್ಲಿ ನೀರಿನಂಶ ಕೂಡ ಅಧಿಕವಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶಗಳು ಸ್ನಾಯುಗಳು ಬಲವಾಗಲು ಅವಶ್ಯಕವಾಗಿರುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುವುದು. ನಿಮ್ಮ ಆಹಾರಕ್ರಮದಲ್ಲಿ ಕಲ್ಲಂಗಡಿ ಹಣ್ಣು ಸೇರಿಸಿ.

 5. ಸಿಹಿ ಗೆಣಸು

5. ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿಅನೇಕ ವಿಟಮಿನ್ಸ್ ಇವೆ. ಇದರಲ್ಲಿ ಖನಿಜಾಂಶಗಳಾದ ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಇದ್ದು ಸ್ನಾಯುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅವಶ್ಯಕ. ಕ್ಯಾಲ್ಸಿಯಂ ಕಡಿಮೆಯಾದರೂ ಸ್ನಾಯು ಸೆಳೆತ ಉಂಟಾಗುವುದು. ವಯಸ್ಸಾದಂತೆ ಕ್ಯಾಲ್ಸಿಯಂ ಕಡಿಮೆಯಾಗುವುದು ವಯಸ್ಸಾದವರಲ್ಲಿ ಈ ತೊಂದರೆ ಕಾಣಿಸಲು ಒಂದು ಕಾರಣವಾಗಿದೆ.

ವಾರದಲ್ಲಿ 2-3 ಬಾರಿ ಸಿಹಿ ಗೆಣಸು ತಿನ್ನಿ. ದಿನಾ ಒಳ್ಳೆಯದೇ...

 6. ಚಮೋಯಲ್ ಟೀ

6. ಚಮೋಯಲ್ ಟೀ

ಇದನ್ನು ಹಿಂದಿನಿಂದಲೂ ಔಷಧಿಯಾಗಿ ಬಳಸಲಾಗುತ್ತಿದೆ. ಇದನ್ನು ಕುಡಿಯುವುದರಿಂದ ಸ್ನಾಯು ಸೆಳೆತ, ಉರಿಯೂತ, ಮುಟ್ಟಿನ ಸಮಸ್ಯೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಬಹುದು.

7. ಬೆಣ್ಣೆಹಣ್ಣು

7. ಬೆಣ್ಣೆಹಣ್ಣು

ಬೆಣ್ಣೆ ಹಣ್ಣು ಅತ್ಯಧಿಕ ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಹೊಂದಿರುವ ಹಣ್ಣಾಗಿದ್ದು ಇದು ಸ್ನಾಯುಗಳ ಸೆಳೆತ ಕಡಿಮೆ ಮಾಡುವಲ್ಲಿ ಸಹಕಾರಿ. ದಿನ ಸ್ವಲ್ಪ ಬೆಣ್ಣೆಹಣ್ಣು ತಿನ್ನುವುದು ಅಥವಾ ಬೆಣ್ಣೆ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯುವುದು ಒಟ್ಟು ಮೊತ್ತು ಆರೋಗ್ಯಕ್ಕೆ ಒಳ್ಳೆಯದು.

8. ಹಸಿರು ಸೊಪ್ಪು ಮತ್ತು ತರಕಾರಿ

8. ಹಸಿರು ಸೊಪ್ಪು ಮತ್ತು ತರಕಾರಿ

ಪಾಲಾಕ್, ಕಳೆ, ಬ್ರೊಕೋಲಿ, ಲೆಟ್ಯೂಸೆ, ಸಾಸಿವೆ ಸೊಪ್ಪು ಇವುಗಳಲ್ಲಿ ಮೆಗ್ನಿಷ್ಯಿಯಂ ಅಂಶವಿರುವುದರಿಂದ ಮಸಲ್‌ ಕ್ಯಾಚ್‌ ತಡೆಗಟ್ಟುವಲ್ಲಿ ಸಹಕಾರಿ. ನೀವು ತಿನ್ನುವ ಆಹಾರದಲ್ಲಿ ಈ ಸೊಪ್ಪಿನಂಶ ಸ್ವಲ್ಪವಾದರೂ ಇರುವಂತೆ ನೋಡಿಕೊಳ್ಳಿ.

9. ನಟ್ಸ್

9. ನಟ್ಸ್

ನಟ್ಸ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಾ ಸ್ವಲ್ಪ ನಟ್ಸ್‌ ತಿನ್ನುವುದರಿಂದ ಮೆಗ್ನಿಷ್ಯಿಯಂ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು. ಇದನ್ನು ಸ್ನ್ಯಾಕ್ಸ್‌ ಆಗಿ ಬಳಸಿದರೆ ಇತರ ಅನಾರೋಗ್ಯಕರ ಸ್ನ್ಯಾಕ್ಸ್ ತಿನ್ನುವುದು ಕಡಿಮೆಯಾಗುವುದು, ಆಕರ್ಷಕ ಮೈ ತೂಕ, ಆರೋಗ್ಯ, ಹೊಳೆಯುವ ತ್ವಚೆ ಎಲ್ಲವನ್ನೂ ಹೊಂದಬಹುದು.

10. ಧಾನ್ಯಗಳು

10. ಧಾನ್ಯಗಳು

ಬೀನ್ಸ್, ಬಟಾಣಿ, ಕಡಲೆ, ಬೇಳೆ, ಸೋಯಾಬೀನ್ ಇವುಗಳನ್ನು ತಿನ್ನಿ. ಇವುಗಳಲ್ಲಿರುವ ಮೆಗ್ನಿಷ್ಯಿಯಂ ಕ್ಯಾಲ್ಸಿಯಂ ಜೊತೆ ನಿಮ್ಮ ಬಳಲಿದ ಸ್ನಾಯುಗಳನ್ನು ಪುನಶ್ಚೇತನಗೊಳಿಸುತ್ತದೆ, ಇದರಿಂದಾಗಿ ಸ್ನಾಯು ಸೆಲೆತ ಕಡಿಮೆಯಾಗುವುದು.

ಇತರ ಟಿಪ್ಸ್

  • ಸ್ನಾಯುಗಳ ಮೇಲೆ ತುಂಬಾ ಒತ್ತಡ ಹಾಕಬೇಡಿ, ವ್ಯಾಯಾಮ ನಡುವೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.
  • ನೋವು ಬಂದಾಗ ಕಾಲುಗಳನ್ನು ಮೆಲ್ಲನೆ ಉದ್ದ ಮಾಡಿ, ಸ್ವಲ್ಪ ಹೊತ್ತು ಹೆಬ್ಬಟ್ಟನ್ನು ಒತ್ತಿ ಹಿಡಿಯುವುದರಿಂದ ನೋವು ಕಡಿಮೆಯಾಗುವುದು.
  • ಸ್ನಾಯು ಸೆಳೆತ ಇರುವ ಕಡೆ ಮೆಲ್ಲನೆ ಮಸಾಜ್ ಮಾಡಿ
  • ಹಾಟ್‌ ಕಂಪ್ರೆಸ್‌ ಅಥವಾ ಕೋಲ್ಡ್‌ ಕಂಪ್ರೆಸ್‌ ಕೂಡ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.
English summary

Foods That Can Help Ease Muscle Cramps

It is important to consume nutrient-dense foods rich in particular vitamins and minerals that will help reduce muscle cramps. Read on to know the foods that may help get rid of muscle cramps.
X
Desktop Bottom Promotion