For Quick Alerts
ALLOW NOTIFICATIONS  
For Daily Alerts

ಲೈಂಗಿಕ ಸಾಮಾರ್ಥ್ಯದಿಂದ ಹಿಡಿದು ಕೂದಲ ಆರೋಗ್ಯವರೆಗೆ ಹಸಿ ಈರುಳ್ಳಿಯ ಪ್ರಯೋಜನಗಳಿವು

|

ಈರುಳ್ಳಿಯನ್ನು ಸಾಮಾನ್ಯವಾಗಿ ಅಡುಗೆ ಮಾಡುವಾಗ ಬಳಸುತ್ತೇವೆ. ಆದರೆ ಕೆಲವರಿಗಷ್ಟೇ ಅದನ್ನು ಹಸಿ ತಿನ್ನುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಹಸಿ ತಿಂದರೆ ಬಾಯ ವಾಸನೆ ಬರುತ್ತದೆ ಎಂದು ತಿನ್ನುವುದಿಲ್ಲ. ಆದರೆ ಈರುಳ್ಳಿ ಹಸಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ನಿಮಗೆ ತಿಳಿದರೆ ಇನ್ನು ಮುಂದೆ ದಿನಾ ಹಸಿ ಈರುಳ್ಳಿ ತಿನ್ನಲು ಪ್ರಾರಂಭಿಸುತ್ತೀರಿ.

ದಿನಾ ಒಂದು ತುಂಡು ಹಸಿ ಈರುಳ್ಳಿ ತಿನ್ನುವುದರಿಂದ ಲೈಂಗಿಕ ಸಮಸ್ಯೆಯಿದ್ದರೆ ಅದನ್ನು ಹೋಗಲಾಡಿಸುವುದರಿಂದ ಹಿಡಿದು ತ್ವಚೆ ಹೊಳಪು ಕಾಪಾಡುವವರಿಗೆ ಈರುಳ್ಳಿ ಪ್ರಮುಖ ಪಾತ್ರವಹಿಸುತ್ತದೆ. ಬನ್ನಿ ಇದರ ಪ್ರಯೋಜನಗಳ ಬಗ್ಗೆ ನೋಡೋಣ:

1. ಹಸಿ ಈರುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು

1. ಹಸಿ ಈರುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಈರುಳ್ಳಿಯಲ್ಲಿ ಫ್ಲೇವೋನಾಯ್ಡ್ ಮತ್ತು ಥಿಯೋಸಲ್ಪೇನೇಟ್ ಅಂಶವಿದೆ. ಫ್ಲೇವೋನಾಯ್ಡ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿದರೆ ಥಿಯೋಸ್ಳೇನೇಟ್ ರಕ್ತದ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ, ಅಂದರೆ ಇದು ರಕ್ತ ತೆಳುಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಪಾರ್ಶ್ವವಾಯು ಉಂಟಾಗುವ ಅಪಾಯ ತಪ್ಪಿಸಬಹುದು.

2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿಯ ಬಗ್ಗೆ ಜನ ಹೆಚ್ಚು ಮಾತನಾಡುತ್ತಾರೆ. ಈರುಳ್ಳಿಗೆ ಆ ಗುಣವಿದೆ. ಮೀಡಿಯೇಟರ್‌ ಆಫ್‌ ಇನ್‌ಫ್ಲೇಮೇಷನ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿಯು ಇದರಲ್ಲಿರುವ ರಾಸಾಯನಿಕ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಪ್ಪಿಸುತ್ತದೆ ಎಂದು ಹೇಳಿದೆ.

3. ಇನ್ನು ಉಸಿರಾಟದ ತೊಂದರೆ ಹೋಗಲಾಡಿಸುತ್ತದೆ

3. ಇನ್ನು ಉಸಿರಾಟದ ತೊಂದರೆ ಹೋಗಲಾಡಿಸುತ್ತದೆ

ಹೆಚ್ಚಿನವರಿಗೆ ಅಲರ್ಜಿಯಿಂದಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಈರುಳ್ಳಿ ಅಲರ್ಜಿ ಉಂಟಾಗುವುದನ್ನು ತಡೆಗಟ್ಟಿ ಉಸಿರಾಟದ ತೊಂದರೆಯಿಂದ ರಿಲೀಫ್ ನೀಡುತ್ತದೆ. DARU Journal of Pharmaceutical Sciences ವರದಿಯು ಈರುಳ್ಳಿಯನ್ನು ಹಸಿ ತಿನ್ನುವುದು ಅಸ್ತಮಾ ರೋಗಿಗಳಿಗೆ ತುಂಬಾನೇ ಒಳ್ಳೆಯದು ಎಂದು ಹೇಳಿದೆ.

4. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

4. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ಯುಎಸ್ ಡಿಪಾರ್ಟ್‌ಮೆಂಟ್ ಆಫ್‌ ಅಗ್ರಿಕಲ್ಚರ್‌ ಈರುಳ್ಳಿಯಲ್ಲಿ 25.3ಮಿಗ್ರಾಂ ಕ್ಯಾಲ್ಸಿಯಂ ಇದೆ. ಇದರಿಂದ ಇದನ್ನು ತಿನ್ನುವುದರಿಂದ ಮೂಳೆಗಳು ಬಲವಾಗುತ್ತದೆ ಎಂದು ಹೇಳಿದೆ.

5. ಹಲ್ಲುಗಳ ಆರೋಗ್ಯಕ್ಕೂ ಒಳ್ಳೆಯದು

5. ಹಲ್ಲುಗಳ ಆರೋಗ್ಯಕ್ಕೂ ಒಳ್ಳೆಯದು

ಈರುಳ್ಳಿ ತಿಂದರೆ ಬಾಯಿ ವಾಸನೆ ಬರುವುದು ಆದರೆ ಹಲ್ಲುಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಅಂಶ ಕೂಡ ಇದೆ.

6. ಲೈಂಗಿಕ ಸಾಮಾರ್ಥ್ಯ ವೃದ್ಧಿಸುತ್ತದೆ

6. ಲೈಂಗಿಕ ಸಾಮಾರ್ಥ್ಯ ವೃದ್ಧಿಸುತ್ತದೆ

ಇನ್ನು ಹಸಿ ಈರುಳ್ಳಿ ತಿನ್ನುವುದರಿಂದ ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುತ್ತದೆ. ಈರುಳ್ಳಿಯಲ್ಲಿರುವ ಬಯೋಮಾಲಿಕ್ಯೂಲಸ್ ಲೈಂಗಿಕ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಅಲ್ಲದೆ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಹೆಚ್ಚಾಗುವಂತೆ ಮಾಡುತ್ತದೆ.

7. ತ್ವಚೆಗೆ ತುಂಬಾನೇ ಒಳ್ಳೆಯದು

7. ತ್ವಚೆಗೆ ತುಂಬಾನೇ ಒಳ್ಳೆಯದು

ಮುಖದಲ್ಲಿ ಅಕಾಲಿಕ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಇದರಲ್ಲಿರುವ ವಿಟಮಿನ್ ಎ, ಸಿ ಮತ್ತು ಕೆ ಕಲೆ ರಹಿತ ತ್ವಚೆ ನೀಡುವಲ್ಲಿ ಸಹಾಯ ಮಾಡುತ್ತದೆ. ಇನ್ನು ಮುಖದಲ್ಲಿ ಕಪ್ಪು ಚಿಕ್ಕಿಗಳಿದ್ದರೆ ಅದನ್ನು ಹೋಗಲಾಡಿಸುವಲ್ಲಿಯೂ ಇದು ಸಹಕಾರಿ.

8. ಈರುಳ್ಳಿ ರಸ ಕೂದಲಿನ ಸೌಂದರ್ಯ ಹೆಚ್ಚಿಸುವುದು

8. ಈರುಳ್ಳಿ ರಸ ಕೂದಲಿನ ಸೌಂದರ್ಯ ಹೆಚ್ಚಿಸುವುದು

ಕೂದಲು ಸೊಂಪಾಗಿ ಬೆಳೆಯುವಲ್ಲಿ ಕೂಡ ಈರುಳ್ಳಿ ರಸ ಪರಿಣಾಮಕಾರಿ. ಈರುಳ್ಳಿ ರಸ ಕೂದಲಿಗೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆ ಇಲ್ಲವಾಗುವುದು, ಕೂದಲಿನ ಬುಡ ಬಲವಾಗುವುದು.

9. ಮೆನೋಪಾಸ್ ಸಮಸ್ಯೆ ಕಡಿಮೆ ಮಾಡುತ್ತದೆ

9. ಮೆನೋಪಾಸ್ ಸಮಸ್ಯೆ ಕಡಿಮೆ ಮಾಡುತ್ತದೆ

ಮಹಿಳೆಯರಿಗೆ ಮೆನೋಪಾಸ್‌ ಸಮಯದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಇನ್ನು 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು. ಇವೆಲ್ಲಾ ತಡೆಗಟ್ಟುವಲ್ಲಿ ಈರುಳ್ಳಿ ಸಹಕಾರಿಯಾಗಿದೆ.

10. ಕೆಮ್ಮು ಹೋಗಲಾಡಿಸುತ್ತೆ

10. ಕೆಮ್ಮು ಹೋಗಲಾಡಿಸುತ್ತೆ

ಇನ್ನು ತುಂಬಾ ಕೆಮ್ಮು ಇದ್ದಾದ ಈರುಳ್ಳಿ ಒಂದು ತುಂಡು ಬೆಲ್ಲ ಸೇರಿಸಿ ತಿಂದರೆ ಗಂಟಲು ಕೆರೆತ ಕಡಿಮೆಯಾಗಿ ಕೆಮ್ಮು ಕಡಿಮೆಯಾಗುವುದು.

English summary

Amazing health Benefits Of Eating Raw Onions kin Kannada

If you eat raw onion can get amazing health benefits. It will increase your sexual drive, boost immunity, good for heart on. Here we have mentioned benefits of eating raw onion, have a look.
X
Desktop Bottom Promotion