ಕಾಲಿನ ನೋವು ಕಡೆಗಣಿಸಿದರೆ, ಇಂತಹ ಖತರ್ನಾಕ್ ಕಾಯಿಲೆಗಳು ಬರಬಹುದು!!

By: Hemanth
Subscribe to Boldsky

ದೇಹದ ಯಾವುದಾದರೂ ಭಾಗದಲ್ಲಿ ಸ್ವಲ್ಪ ನೋವು ಅಥವಾ ಬದಲಾವಣೆ ಕಾಣಿಸಿಕೊಂಡಾಗ ಅದನ್ನು ನಾವು ಕಡೆಗಣಿಸುವುದೇ ಹೆಚ್ಚು. ಈ ನೋವು ತೀವ್ರವಾಗಿ ಕಾಡಲು ಆರಂಭಿಸಿದಾಗ ಮಾತ್ರ ಎಚ್ಚೆತ್ತುಕೊಂಡು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋಗುತ್ತೇವೆ. ಕಾಲು ಹಾಗೂ ಪಾದದಲ್ಲಿಯೂ ಕೆಲವೊಂದು ಸಲ ನೋವು ಕಾಣಿಸಿಕೊಳ್ಳಬಹುದು. ಪೋಷಕಾಂಶಗಳ ಕೊರತೆ, ಕಠಿಣ ಕೆಲಸ ಮತ್ತು ಒತ್ತಡದಿಂದ ಹೀಗೆ ಆಗಲೂ ಬಹುದು. ಆದರೆ ಕೆಲವೊಂದು ಸಲ ಕಾಲಿನ ನೋವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸೂಚನೆಯಾಗಿರಬಹುದು.

ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

ಕಾಲಿನಲ್ಲಿ ಕಾಣಿಸಿಕೊಳ್ಳುವ ನೋವನ್ನು ನೀವು ಕಡೆಗಣಿಸಿದರೆ ಅದರಿಂದ ಮುಂದೆ ಗಂಭೀರ ಸಮಸ್ಯೆಯಾಗಬಹುದು. ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಮತ್ತು ಪಾದದ ಥ್ರಂಬೋಸಿಸ್ ಇತ್ಯಾದಿಯಿಂದ ಕಾಲಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ಪಾದ ಹಾಗೂ ಕಾಲಿನಲ್ಲಿ ಯಾವುದೇ ಬದಲಾವಣೆ ಆದರೆ ಅದರ ಬಗ್ಗೆ ತಕ್ಷಣ ಗಮನಹರಿಸಬೇಕು..

ಕಾಲು ನೋವು: ಸ್ಟೆಪ್ ಬೈ ಸ್ಟೆಪ್ ಟಿಪ್ಸ್, ಪ್ರಯತ್ನಿಸಿ ನೋಡಿ...

ಇಂತಹ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸುವ ಕಾರಣದಿಂದ ಮುಂದೆ ಎದುರಾಗುವ ಗಂಭೀರ ಸಮಸ್ಯೆಯಿಂದ ಪಾರಾಗಬಹುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಕಾಲಿನಲ್ಲಿ ಆಗುವ ಕೆಲವು ಬದಲಾವಣೆ ಬಗ್ಗೆ ತಿಳಿಸಲಿದೆ. ಇದನ್ನು ತಿಳಿದುಕೊಂಡು ಮುಂದೆ ಆಗಬಹುದಾದ ಗಂಭೀರ ಆರೋಗ್ಯ ಸಮಸ್ಯೆ ತಪ್ಪಿಸಿ....

 ಕಿಡ್ನಿ ಸಮಸ್ಯೆ

ಕಿಡ್ನಿ ಸಮಸ್ಯೆ

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ದೇಹದಲ್ಲಿ ನೀರು ಅತಿಯಾಗಿ ಶೇಖರಣೆಯಾಗುವ ಕಾರಣ ಕೆಲವು ಸಮಸ್ಯೆ ಕಾಣಿಸಿಕೊಳ್ಳುವುದು. ಇದು ಎಡಿಮಾ ಉಂಟು ಮಾಡುವುದು. ವಿದ್ಯುತ್ ಆಘಾತದಿಂದ ಆಗುವಂತಹ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಅದರ ಲಕ್ಷಣವಾಗಿದೆ. ಕಿಡ್ನಿಯ ಸಮಸ್ಯೆಯನ್ನು ನೀವು ಕಡೆಗಣಿಸಬಾರದು.

ಅಭಿದಮನಿಯ ಸಮಸ್ಯೆ

ಅಭಿದಮನಿಯ ಸಮಸ್ಯೆ

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ದೇಹದಲ್ಲಿ ನೀರು ಅತಿಯಾಗಿ ಶೇಖರಣೆಯಾಗುವ ಕಾರಣ ಕೆಲವು ಸಮಸ್ಯೆ ಕಾಣಿಸಿಕೊಳ್ಳುವುದು. ಇದು ಎಡಿಮಾ ಉಂಟು ಮಾಡುವುದು. ವಿದ್ಯುತ್ ಆಘಾತದಿಂದ ಆಗುವಂತಹ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಅದರ ಲಕ್ಷಣವಾಗಿದೆ. ಕಿಡ್ನಿಯ ಸಮಸ್ಯೆಯನ್ನು ನೀವು ಕಡೆಗಣಿಸಬಾರದು.

ಹೃದಯ ಸಮಸ್ಯೆ

ಹೃದಯ ಸಮಸ್ಯೆ

ಈ ಪರಿಸ್ಥಿತಿಯಲ್ಲಿ ಹೃದಯದ ಒಂದು ಅಥವಾ ಎರಡು ಕವಾಟುಗಳು ರಕ್ತವನ್ನು ಪರಿಣಾಮಕಾರಿಯಾಗಿ ಹೊರಹಾಕುವ ಸಾಮರ್ಥ್ಯ ಕಳೆದುಕೊಳ್ಳುವುದು. ಹೀಗೆ ಆದರೆ ಮೊಣಕಾಲುಗಳಲ್ಲಿ ರಕ್ತವು ಸಂಗ್ರಹವಾಗುವುದು. ಕಾಲಿನ ಊತ ಮತ್ತು ನೋವು ಇದರ ಪ್ರಮುಖ ಲಕ್ಷಣ.

ಥ್ರಂಬೋಸಿಸ್

ಥ್ರಂಬೋಸಿಸ್

ಒಂದು ಅಥವಾ ಎರಡು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಥ್ರಂಬೋಸಿಸ್‌ನ ಲಕ್ಷಣವಾಗಿದೆ. ಇದು ತುಂಬಾ ಗಂಭೀರ ಸಮಸ್ಯೆ ಮತ್ತು ತಕ್ಷಣ ಇದರ ಬಗ್ಗೆ ಗಮನಹರಿಸಬೇಕು. ಥ್ರಂಬೋಸಿಸ್ ನಿಂದ ಪಾದಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ಇದು ಒಂದಾಗಿದೆ.

ಯಕೃತ್ ಸಮಸ್ಯೆ

ಯಕೃತ್ ಸಮಸ್ಯೆ

ಯಕೃತ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಯಲು ಕೆಲವೊಂದು ಸೂಚನೆಗಳಿಂದ ನೀವು ಪತ್ತೆ ಮಾಡಬಹುದು. ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ವೇಳೆ ಮೊಣಕಾಲುಗಳಲ್ಲಿ ಊತ ಕಾಣಿಸಿಕೊಳ್ಳಬಹುದು ಮತ್ತು ನಾಳೀಯ ಜೇಡಗಳು ಕಾಣಿಸಿಕೊಳ್ಳಬಹುದು. ಕರುಳು, ಗುಲ್ಮ, ಮೇಧೋಜೀರಕ ಮತ್ತು ಯಕೃತ್‌ಗೆ ರಕ್ತಸಂಚಾರ ಸರಿಯಾಗಿ ಆಗದೆ ಇರುವಾಗ ಈ ಸಮಸ್ಯೆಯಾಗುವುದು. ಯಕೃತ್‌ನ ಈ ಸಮಸ್ಯೆ ಕಡೆಗಣಿಸಬೇಡಿ.

ಥೈರಾಯ್ಡ್ ಗ್ರಂಥಿ ಸಮಸ್ಯೆಗಳು

ಥೈರಾಯ್ಡ್ ಗ್ರಂಥಿ ಸಮಸ್ಯೆಗಳು

ಕಾಲಿನ ಪರಿಸ್ಥಿತಿ ನೋಡಿಕೊಂಡು ಥೈರಾಯ್ಡ್ ಸಮಸ್ಯೆ ಕಂಡುಹಿಡಿಯಬಹುದು. ಕಾಲಿನ ಊತ, ಸ್ನಾಯು ಸೆಳೆತ ಮತ್ತು ಕಾಲು ತಣ್ಣಗೆ ಆಗುವುದು.

 ಮಧುಮೇಹ

ಮಧುಮೇಹ

ನಿಮಗೆ ಮಧುಮೇಹವಿದ್ದರೆ ಕಾಲಿನ ಸಣ್ಣ ಸಮಸ್ಯೆಯು ದೊಡ್ಡ ಗಾಯ ಉಂಟು ಮಾಡಬಹುದು. ನರಗಳಿಗೆ ಹಾನಿಯಾಗುವುದರಿಂದ ಹೀಗೆ ಆಗುವುದು.

English summary

Changes In Leg/Foot That Can Indicate Serious Health Issues

Some changes in legs or feet can occur due to poor nutrition, hard work or changes in the pressure. Some leg problems can indicate serious health issues. Hence it is recommended that you never overlook the several changes that can occur in your legs. They can be related to many health complications that might be happening in your body. Some of these changes can indicate symptoms of kidney problems, cardiac problems, thrombosis in foot, etc.
Subscribe Newsletter