ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರಗಳು-ತಪ್ಪದೇ ಸೇವಿಸಿ

Posted By: Arshad
Subscribe to Boldsky

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರವಿದ್ದರೆ ಮಾತ್ರ ಸಾಲದು, ಬದಲಿಗೆ ಇವುಗಳನ್ನು ಸರಿಯಾದ ಪ್ರಮಾಣ ಹಾಗೂ ಸಮಯಗಳಲ್ಲಿ ಸೇವಿಸುವ ಕ್ರಮವೂ ಇದ್ದರೆ ಮಾತ್ರ ಆಹಾರಸೇವನೆಯ ಅತ್ಯುತ್ತಮ ಪ್ರಯೋಜನ ಪಡೆಯಬಹುದು. ನಿಸರ್ಗ ನಮಗೆ ನೀಡಿರುವ ಆಹಾರಗಳಲ್ಲಿ ಕೆಲವು ಅದ್ಭುತವಾಗಿದ್ದರೂ ರುಚಿ ಅಥವಾ ಆಕರ್ಷಣೆ ಇಲ್ಲವೆಂದು ಅಲಕ್ಷಿಸದೇ ನಿಯಮಿತವಾಗಿ ಸೇವಿಸುವ ಕ್ರಮವನ್ನು ರೂಢಿಸಿಕೊಳ್ಳುವುದು ಅಗತ್ಯ.

ಇಂದಿನ ದಿನಗಳಲ್ಲಿ ಬದಲಾಗಿರುವ ಜೀವನಶೈಲಿಯ ಪರಿಣಾಮವಾಗಿ ಎಲ್ಲೆಲ್ಲೂ ಸ್ಥೂಲಕಾಯ ಕಾಣಬರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ನಿತ್ಯವೂ ಒಂದಲ್ಲಾ ಒಂದು ರೀತಿಯ ದೈಹಿಕ ವ್ಯಾಯಮಗಳಲ್ಲಿ ತೊಡಗಿರುವವರು ಶೇ ಐವತ್ತಕ್ಕೂ ಕಡಿಮೆ ಇದ್ದಾರೆ. ಪರಿಣಾಮವಾಗಿ ಸ್ಥೂಲಕಾಯದವರ ಪ್ರಮಾಣ ಆತಂಕಕಾರಿ ವೇಗದಲ್ಲಿ ಏರುತ್ತಿದೆ.  

ಪುರುಷರ ಆರೋಗ್ಯ ಸಪ್ತಾಹ: ಮಿಸ್ ಮಾಡದೇ ಓದಿ..!

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಸ್ಥೂಲಕಾಯಕ್ಕೆ ಕಾರಣವಾಗುವ ಅಭ್ಯಾಸಗಳನ್ನು ಹಿರಿಯರಿಂದ ಮಕ್ಕಳೂ ಕಲಿತುಕೊಳ್ಳುತ್ತಾ ಶೀಘ್ರವೇ ಮಕ್ಕಳೂ ಸ್ಥೂಲದೇಹಿಗಳಾಗುತ್ತಾರೆ. ಉದಾಹರಣೆಗೆ ವಾರದಲ್ಲಿ ಹಲವು ಬಾರಿ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವುದು, ಬೆಳಿಗ್ಗೆ ತಡವಾಗಿ ಏಳುವುದು, ಕೊಬ್ಬು, ಸಕ್ಕರೆ ಹೆಚ್ಚಿರುವ ಸಿದ್ಧ ಆಹಾರಗಳ ವ್ಯಾಮೋಹ, ವ್ಯಾಯಾಮವಿಲ್ಲದ ಜೀವನ, ಸೋಮಾರಿತನ ಮೊದಲಾದವು ಸ್ಥೂಲದೇಹವನ್ನು ಹೆಚ್ಚಿಸಿ ಆರೋಗ್ಯವನ್ನು ಕುಂದಿಸುತ್ತದೆ.

ಅಷ್ಟೇ ಅಲ್ಲ, ಕ್ರಮಬದ್ಧವಾದ ಆಹಾರ ಸೇವನೆ ಇಲ್ಲದಿದ್ದರೆ ಇತರ ಹಲವಾರು ಆರೋಗ್ಯ ಕುರಿತಾದ ವಿಷಯಗಳೂ ಎದುರಾಗಬಹುದು. ಒಂದು ವೇಳೆ ನೀವು ಪುರುಷರಾಗಿದ್ದು ಅರಿವಿಲ್ಲದೇ ಕೆಳಗಿನ ಯಾವುದಾದರೂ ಕ್ರಮವನ್ನು ಅನುಸರಿಸದೇ ಇದ್ದಲ್ಲಿ ತಕ್ಷಣವೇ ತಿದ್ದಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಮತ್ತೆ ಪಡೆಯಲು ಸಾಧ್ಯವಾಗಲಿದೆ.... 

ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳಿರಲಿ

ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳಿರಲಿ

ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳು ಲಭ್ಯವಾಗುತ್ತವೆ. ಏಕೆಂದರೆ ಹಸಿಯಾಗಿ ತಿನ್ನಬಹುದಾದ ತರಕಾರಿ ಹಣ್ಣುಗಳಲ್ಲಿರುವ ಪೋಷಕಾಂಶಗಳು ಬೇಯಿಸಿದ ಆಹಾರದಲ್ಲಿ ದೊರಕಲಾರದು. ಇದಕ್ಕಾಗಿ ಬೆಳಗ್ಗಿನ ಉಪಾಹಾರವನ್ನು ಬೇಯಿಸಿದ ಆಹಾರದ ಬದಲಿಗೆ ಕೆಲವು ಹಣ್ಣುಗಳ ತುಂಡುಗಳನ್ನು ಅಥವಾ ಸೆಲೆರಿ ಕೋಡುಗಳನ್ನು ಪೀನಟ್ ಬೆಣ್ಣೆಯಲ್ಲಿ ಅದ್ದಿಕೊಂಡು ಸೇವಿಸಬಹುದು.

ದೇಹದಾರ್ಢ್ಯತೆಯತ್ತ ಸದಾ ನಿಮ್ಮ ಚಿತ್ತವಿರಲಿ

ದೇಹದಾರ್ಢ್ಯತೆಯತ್ತ ಸದಾ ನಿಮ್ಮ ಚಿತ್ತವಿರಲಿ

ಕೇವಲ ಆಹಾರವನ್ನು ಕಟ್ಟುನಿಟ್ಟಾಗಿಸಿ ಉಳಿದುದೆಲ್ಲಾ ತನ್ನಿಂತಾನೇ ಆಗುತ್ತದೆ ಎಂದು ನಿರೀಕ್ಷಿಸಿದರೆ ಸಾಕಾಗದು. ಬದಲಿಗೆ ದೇಹವನ್ನು ದಷ್ಟಪುಷ್ಟವಾಗಿಸುವತ್ತ ಮನಸ್ಸನ್ನು ಹೊರಳಿಸಬೇಕು. ಇದಕ್ಕಾಗಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ವ್ಯಾಯಾಮಗಳು, ಚಟುವಟಿಕೆಗಳನ್ನು ಆಚರಿಸಿಕೊಳ್ಳಲು ನೀವೇ ಸ್ವತಃ ಮನಸ್ಸು ಮಾಡಬೇಕು. ನಿಮ್ಮ ಮನಸ್ಸಿಗೆ ಮುದನೀಡುವ ಯಾವುದೇ ದೈಹಿಕ ಚಟುವಟಿಕೆಯನ್ನು ದೈನಂದಿನ ಕ್ರಮವಾಗಿಸಬೇಕು ಹಾಗೂ ಇದಕ್ಕೆ ಬದ್ದರಾಗಬೇಕು.

ಆಹಾರದ ಪ್ರಮಾಣ ಮತ್ತು ಪೋಷಕಾಂಶಗಳ ಕಡೆಗೂ ಗಮನವಿರಲಿ

ಆಹಾರದ ಪ್ರಮಾಣ ಮತ್ತು ಪೋಷಕಾಂಶಗಳ ಕಡೆಗೂ ಗಮನವಿರಲಿ

ಸಾಮಾನ್ಯವಾಗಿ ಇಂದು ಸಿದ್ಧ ಆಹಾರಗಳು ಅನಿವಾರ್ಯ ಆಯ್ಕೆಯಾಗುತ್ತಿವೆ. ಇವನ್ನು ಸೇವಿಸುವ ಮುನ್ನ ಪ್ಯಾಕೆಟ್ಟುಗಳ ಮೇಲೆ ಮುದ್ರಿಸಿರುವ ಪೋಷಕಾಂಶಗಳ ವಿವರಗಳನ್ನು ಗಮನಿಸಿ ಆ ಪ್ರಕಾರವೇ ಮಿತವಾಗಿ ಸೇವಿಸಿ. ಅಷ್ಟೇ ಅಲ್ಲ, ದಿನದಲ್ಲಿ ಸೇವಿಸುವ ಇತರ ಆಹಾರಗಳ ಪ್ರಮಾಣದ ಮೇಲೂ ಗಮನವಿರಲಿ. ಇದು ನಿಮ್ಮ ಹೊಟ್ಟೆಯನ್ನು ಅಗತ್ಯವಿದ್ದಷ್ಟು ಮಾತ್ರವೇ ತುಂಬಿಸುವಷ್ಟಿರಲಿ.

ಏಕತಾನತೆ ಕಳೆಯಲು ಭಿನ್ನ ಆಹಾರ ಪ್ರಯತ್ನಿಸಿ

ಏಕತಾನತೆ ಕಳೆಯಲು ಭಿನ್ನ ಆಹಾರ ಪ್ರಯತ್ನಿಸಿ

ಸದಾ ಒಂದೇ ಬಗೆಯ ಆಹಾರ ಸೇವಿಸುವ ಏಕತಾನತೆಯಿಂದ ಹೊರಬಂದು ಇದುವರೆಗೆ ನೀವು ಅಲಕ್ಷಿಸಿದ್ದ ಆರೋಗ್ಯಕರ ಆಹಾರಗಳನ್ನು ಸೇವಿಸುವತ್ತ ಚಿತ್ತ ಹರಿಸಿ. ಈ ಮೂಲಕ ವಿವಿಧ ಆಹಾರಗಳ ಮೂಲದ ವಿವಿಧ ಬಗೆಯ ಪೋಷಕಾಂಶಗಳು ಲಭ್ಯವಾಗಿ ಆರೋಗ್ಯವೂ ವೃದ್ದಿಸುತ್ತದೆ ಹಾಗೂ ಏಕತಾನತೆಯ ಆಹಾರ ಸೇವನೆಯಿಂದಾಗಿ ಉಂಟಾಗುವ ಪೋಷಕಾಂಶಗಳ ಕೊರತೆಯನ್ನೂ ಪೂರೈಸಲು ಸಾಧ್ಯ. ಅಲ್ಲದೇ ಭಿನ್ನವಾದ ರುಚಿಯಿಂದ ಆಹಾರಸೇವನೆಯಲ್ಲಿ ವೈವಿಧ್ಯತೆಯೂ ಲಭ್ಯವಾಗುತ್ತದೆ.

ಅಡುಗೆ ಸರಳವಾಗಿರಲಿ

ಅಡುಗೆ ಸರಳವಾಗಿರಲಿ

ನಿಮ್ಮ ಅಡುಗೆಯ ವಿಧಾನಗಳು ಸರಳವಾಗಿರಲಿ. ಇವುಗಳಲ್ಲಿ ಸಾಧ್ಯವಾದಷ್ಟು ಹೆಚ್ಚಾಗಿ ನೀರಿನಲ್ಲಿ ಬೇಯಿಸಿದ ಅಥವಾ ಹಬೆಯಲ್ಲಿ ಬೇಯಿಸಿದ ಆಹಾರಗಳು ಹೆಚ್ಚಾಗಿರಲಿ. ಉದಾಹರಣೆಗೆ ಅನ್ನ, ಇಡ್ಲಿ ಇತ್ಯಾದಿ. ಗಾಢವಾಗಿ ಹುರಿದ, ಕರಿದ ಆಹಾರಗಳು ಮಿತವಾಗಿರಲಿ. ನಿಮ್ಮ ನಿತ್ಯದ ಅಡುಗೆ ಎಣ್ಣೆಯ ಬದಲಿಗೆ ಆಲಿವ್ ಎಣ್ಣೆ ಬಳಸಿ. ಇದರಿಂದ ಪುರುಷರ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಕಂಡುಬರುವುದು ಖಂಡಿತ.

ಪುರುಷರಿಗೆ ಈ ಆಹಾರಗಳೇ ಅತ್ಯುತ್ತಮ

ಪುರುಷರಿಗೆ ಈ ಆಹಾರಗಳೇ ಅತ್ಯುತ್ತಮ

ಮೂತ್ರಕೋಶದ ಕ್ಯಾನ್ಸರ್ ತಡೆಗಟ್ಟಲು ಬ್ರೋಕೋಲಿ..

ಹೂವಿನಂತೆ ಕಾಣುವ ಬ್ರೋಕೋಲಿ ಹಾಗೂ ಹೂಕೋಸು ಮೂತ್ರಕೋಶದ ಕ್ಯಾನ್ಸರ್ ತಡೆಗಟ್ಟಲು ಉತ್ತಮ ಆಹಾರಗಳಾಗಿವೆ. ಈ ಕ್ಯಾನ್ಸರ್ ಹೆಚ್ಚಾಗಿ ಪುರುಷರಿಗೇ ಆವರಿಸುತ್ತದೆ. ಬ್ರೋಕೋಲಿ ಲಭ್ಯವಿಲ್ಲದಿದ್ದರೆ ಎಲೆಕೋಸು ಸಹಾ ಸಾಕಷ್ಟು ಮಟ್ಟಿಗೆ ಈ ಕ್ಯಾನ್ಸರ್ ನಿಂದ ರಕ್ಷಣ ಒದಗಿಸುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಟೊಮೇಟೊ

ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಟೊಮೇಟೊ

ತಮ್ಮ ಆಹಾರದಲ್ಲಿ ಸಾಕಷ್ಟು ಟೊಮೇಟೊ ಸೇವಿಸುವ ಪುರುಷರು ನೈಸರ್ಗಿಕವಾಗಿ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಣೆಯನ್ನು ಪಡೆದಿರುತ್ತಾರೆ. ಈ ಬಗ್ಗೆ ಅಧ್ಯಯನ ನಡೆಸಿದ ತಜ್ಞರ ಪ್ರಕಾರ ವಾರಕ್ಕೆ ಎರಡರಿಂದ ನಾಲ್ಕು ಹೊತ್ತಾದರೂ ಟೊಮಾಟೋ ಹಣ್ಣನ್ನು ಸೇವಿಸಿದ ಪುರುಷರಲ್ಲಿ ಇತರರಿಗಿಂತಲೂ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆ 35% ಕಡಿಮೆ ಇರುತ್ತದೆ.

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಸಾಗರೋತ್ಪನ್ನಗಳು

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಸಾಗರೋತ್ಪನ್ನಗಳು

ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ವಾತಾವರಣದ ಕೊಡುಗೆ ಪ್ರಮುಖವಾಗಿದೆ. ಇದನ್ನು ಸರಿಪಡಿಸಲು ಸಾಗರ ಉತ್ಪನ್ನಗಳು ಹೆಚ್ಚು ಸಮರ್ಥವಾಗಿವೆ. ಉದಾಹರಣೆಗೆ ಚಿಪ್ಪು ಹಾಗೂ ಏಡಿಗಳಲ್ಲಿ ಅತ್ಯುತ್ತಮ ಪ್ರಮಾಣದ ಸತು ಇದ್ದು ಇವುಗಳ ಸೇವನೆಯಿಂದ ಪುರುಷರಲ್ಲಿ ಜನನಾಂಗಗಳ ಕ್ಷಮತೆ ಹೆಚ್ಚುತ್ತದೆ.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಎಂಟು ಆಹಾರ ಪದಾರ್ಥಗಳು

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಕಲ್ಲಂಗಡಿ ಹಣ್ಣು

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ನಿಯಮಿತವಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾ ಬರುವ ಮೂಲಕ ಅಧಿಕ ರಕ್ತದೊತ್ತಡದಿಂದ ರಕ್ಷಣೆ ಪಡೆಯಬಹುದು.

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಪೀನಟ್ ಬಟರ್

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಪೀನಟ್ ಬಟರ್

ಹೃದಯದ ಕ್ಷಮತೆ ಹೆಚ್ಚಲು ಪೀನಟ್ ಬಟರ್ ಅಥವಾ ಶೇಂಗಾಬೀಜದ ಪುಡಿ ಬೆರೆಸಿದ ಬೆಣ್ಣೆಯನ್ನು ಹಚ್ಚಿದ ಬ್ರೆಡ್ ಎಸಳನ್ನು ನವಿರಾಗಿ ಬಿಸಿಮಾಡಿ ಬೆಳಗ್ಗಿನ ಉಪಾಹಾರವಾಗಿ ಸೇವಿಸಬಹುದು. ಈ ಬೆಣ್ಣೆಯಲ್ಲಿರುವ ಕೊಬ್ಬುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ರಕ್ತಪರಿಚಲನೆ ಹೆಚ್ಚಿಸಲು ಓಟ್ಸ್

ರಕ್ತಪರಿಚಲನೆ ಹೆಚ್ಚಿಸಲು ಓಟ್ಸ್

ಓಟ್ಸ್ ರವೆಯಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ ಹಾಗೂ ಈ ಆಹಾರದ ಸೇವನೆಯಿಂದ ರಕ್ತನಾಳಗಳು ಉತ್ತಮಗೊಳ್ಳುತ್ತವೆ ಹಾಗೂ ರಕ್ತಪರಿಚಲನೆ ಸುಗಮಗೊಳ್ಳುವ ಮೂಲಕ ಹೃದಯ ಸಂಬಂಧಿ ರೋಗಗಳು ಆವರಿಸುವ ಸಾಧ್ಯತೆಯನ್ನು 30%ರಷ್ಟು ಕಡಿಮೆಗೊಳಿಸುತ್ತದೆ.

ನಿತ್ರಾಣ ನಿವಾರಿಸಲು ಬೆಳ್ಳುಳ್ಳಿ

ನಿತ್ರಾಣ ನಿವಾರಿಸಲು ಬೆಳ್ಳುಳ್ಳಿ

ದೇಹದ ಹಲವಾರು ತೊಂದರೆಗಳಿಗೆ ಸಿದ್ದೌಷಧವೆಂದರೆ ಬೆಳ್ಳುಳ್ಳಿ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಹಲವು ಕಾಯಿಲೆಗಳಿಂದ ರಕ್ಷಿಸುತ್ತದೆ ಹಾಗೂ ಆಹಾರದ ಮೂಲಕ ಲಭ್ಯವಾದ ವಿಟಮಿನ್ B1 ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಆಹಾರದಲ್ಲಿ ಬೆಳ್ಳುಳ್ಳಿಯನ್ನು ಅಳವಡಿಸಿಕೊಳ್ಳುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಈ ಮೂಲಕ ಕಾರ್ಬೋಹೈಡ್ರೇಟುಗಳನ್ನು ಶಕ್ತಿಯಾಗಿ ಪರಿವರ್ತಿಸಿ ನಿತ್ರಾಣವನ್ನು ದೂರವಾಗಿಸಲು ನೆರವಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Best And Healthy Diet Tips For Men's Health

    In this article, we have mentioned some of the best diet tips to be followed by men. These healthy foods will help men deal with several health problems. So, continue reading to find out about the best healthy diet tips for men.
    Story first published: Saturday, June 10, 2017, 7:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more