For Quick Alerts
ALLOW NOTIFICATIONS  
For Daily Alerts

ಎಚ್ಚರ: ಇಂತಹ ಆಹಾರ ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು!

|

ಸಾಮಾನ್ಯವಾಗಿ ಅಜೀರ್ಣ ಸಮಸ್ಯೆ ಹಲವಾರು ಕಾರಣಗಳಿಂದ ಬರಬಹುದು. ಇದರಲ್ಲಿ ಸಾಮಾನ್ಯ ಕಾರಣವೆಂದರೆ ದೈಹಿಕ ಮತ್ತು ಮಾನಸಿಕ ಒತ್ತಡ. ಆಘಾತ ಅಥವಾ ಒತ್ತಡವು ಜಠರದ ಲೋಳೆಯ ಹುಣ್ಣಿಗೆ ಕಾರಣವಾಗಬಹುದು. ಕೆಲವೊಂದು ಕಾರಣ ಜಠರದ ಒಳಪದರದ ತೀವ್ರ ಉರಿಯೂತ ಉಂಟಾಗಬಹುದು. ಇದಕ್ಕೆ ಕಾರಣವೆಂದರೆ ಆ್ಯಸಿಡಿಟಿ ಉಂಟುಮಾಡುವ ಆಹಾರ ಸೇವನೆ, ಡ್ರಗ್ಸ್, ಧೂಮಪಾನ ಮತ್ತು ಆಲ್ಕೋಹಾಲ್. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆಉರಿ, ಆ್ಯಸಿಡಿಟಿ, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಉಂಟಾಗಬಹುದು. ಗಡ್ಡೆಗಳು, ಕಿಡ್ನಿಯಲ್ಲಿ ಕಲ್ಲು, ಮಲಬದ್ಧತೆ, ಆಹಾರ ವಿಷವಾಗುವುದು, ಬ್ಯಾಕ್ಟೀರಿಯಾ ಸೋಂಕು, ಅಲ್ಸರ್ ಮತ್ತು ಪ್ಯಾಂಕ್ರಿಯಾಟಿಟಿಸ್ ಹೊಟ್ಟೆಯ ಸಮಸ್ಯೆಗೆ ಕಾರಣವಾಬಹುದು.

ಅಜೀರ್ಣವಾದರೆ ಹೊಟ್ಟೆಯಲ್ಲಿನ ತಳಮಳ ಹೇಳತೀರದು. ಹುಳಿತೇಗು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಒಂದಕ್ಕೊಂದು ಜೊತೆ ನಡೆಯುವ ಹೊಟ್ಟೆ ಸಮಸ್ಯೆಗಳು. ಅಸಮರ್ಪಕ ಮತ್ತು ಅನಾರೋಗ್ಯಕರ ಆಹಾರ ಅಜೀರ್ಣವನ್ನು ಸುಲಭವಾಗಿ ತಂದೊಡ್ಡುತ್ತದೆ. ಅತಿಯಾದ ಆಸಿಡ್ ಹೊಟ್ಟೆಯಲ್ಲಿ ಉತ್ಪತ್ತಿಯಾದಾಗ ಅಜೀರ್ಣತೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ತೇಗು ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಯಾವ ರೀತಿಯ ಆಹಾರ ಸೇವನೆ ಅಜೀರ್ಣತೆಗೆ ಕಾರಣವಾಗುತ್ತವೆ ಎಂದು ತಿಳಿದುಕೊಂಡರೆ ಈ ಸಮಸ್ಯೆಯಿಂದ ದೂರವುಳಿಯಬಹುದು. ಅಜೀರ್ಣ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

ಖಾರಾ ಪದಾರ್ಥ

ಖಾರಾ ಪದಾರ್ಥ

ಅತಿ ಖಾರವಾದ ಪದಾರ್ಥಗಳು ಅಜೀರ್ಣ ಮತ್ತು ಗ್ಯಾಸ್ ತುಂಬಿಕೊಳ್ಳಲು ಕಾರಣ. ಅದರಲ್ಲೂ ಬೀದಿ ಬದಿಯ ಖಾರದ ಪದಾರ್ಥಗಳು ಹೊಟ್ಟೆಗೆ ತಂಪಲ್ಲ. ಕೆಂಪು ಮೆಣಸಿನಕಾಯಿ ಪುಡಿ, ಚಾಟ್ ಮಸಾಲಾ ಪುಡಿ ಇವುಗಳ ಬೆರೆಸಿದ ಆಹಾರದ ಅತಿಯಾದ ಸೇವನೆ ಮಾಡಬಾರದು. ಏಕೆಂದರೆ ಖಾರ ಮತ್ತು ಸಾಂಬಾರು ಪದಾರ್ಥಗಳು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ.

ಮೂಲಂಗಿ

ಮೂಲಂಗಿ

ಎಲೆ ಕೋಸು ಮತ್ತು ಮೂಲಂಗಿ ಆರೋಗ್ಯಕರ ತರಕಾರಿ. ಆದರೆ ಈ ತರಕಾರಿ ಅಜೀರ್ಣವನ್ನೂ ತಂದೊಡ್ಡಬಹುದು. ಈ ತರಕಾರಿಗಳನ್ನು ಕುದಿಸುವುದಕ್ಕಿಂತ ಪಾತ್ರೆ ಮುಚ್ಚಿ ಆವಿಯಲ್ಲಿ ಬೇಯಿಸಿದರೆ ಪ್ರೊಟೀನ್ ದೊರೆಯುವುದಲ್ಲದೆ ಅಜೀರ್ಣವೂ ಇರುವುದಿಲ್ಲ.

ಕಾಫಿ, ಟೀ

ಕಾಫಿ, ಟೀ

ನೀವು ಕಾಫಿ ಅಥವಾ ಟೀ ಚಟ ಅಂಟಿಸಿಕೊಂಡಿದ್ದರೆ ಎದೆ ಉರಿ ಖಚಿತ. ಆದ್ದರಿಂದ ಹೆಚ್ಚು ಕಾಫಿ ಟೀ ಸೇವನೆ, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆ ಮಾಡಲೇಬಾರದು.

ಪಾನೀಯ

ಪಾನೀಯ

ಕೋಕ್, ಸೋಡಾ ಬೆರೆಸಿರುವ ಪಾನೀಯ ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆಯಲ್ಲಿರುವ ಆಹಾರವನ್ನು ಮೇಲಕ್ಕೆ ತಳ್ಳುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉತ್ಪಾದನೆಯಾಗಿ ತಳಮಳ ಆರಂಭಗೊಳ್ಳುತ್ತದೆ.

ಹಾಲು

ಹಾಲು

ಅತಿ ಸುಲಭವಾಗಿ ಅಜೀರ್ಣವಾಗುವ ಅಂಶವೆಂದರೆ ಹಾಲು. ಲ್ಯಾಕ್ಟೋಸ್ ಕೊರತೆಯಿದ್ದವರಿಗೆ ಹಾಲನ್ನು ಜೀರ್ಣಗೊಳಿಸಲು ತೊಂದರೆಯುಂಟಾಗಿ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಆಗುತ್ತದೆ. ಆದ್ದರಿಂದ ಹಾಲು ಕುಡಿದ ನಂತರ ಹೊಟ್ಟೆ ತಳಮಳಗೊಂಡರೆ ಲ್ಯಾಕ್ಟೋಸ್ ಇರುವ ಆಹಾರಗಳನ್ನು ಆನಂತರ ಸೇವಿಸುವುದು ಬಿಡಬೇಕು.

ನಟ್ಸ್

ನಟ್ಸ್

ಕೆಲವು ನಟ್ಸ್ ಗಳೂ ಕೂಡ ಅಜೀರ್ಣ ತರುತ್ತದೆ. ನಟ್ಸ್ ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವೆನಿಸದರೆ ಅದರ ಸೇವನೆಯನ್ನು ತ್ಯಜಿಸಬೇಕು. ನಟ್ಸ್‌ಗಳಲ್ಲಿ ಟ್ಯಾನಿಸ್ ಇರುವುದರಿಂದ ಅಜೀರ್ಣತೆ ಕಾರಣವಾಗುತ್ತದೆ.

ವ್ಯಾಯಾಮದ ಕೊರತೆ

ವ್ಯಾಯಾಮದ ಕೊರತೆ

ಕೇವಲ ಆಹಾರವಷ್ಟೇ ಅಲ್ಲ, ವ್ಯಾಯಾಮದ ಕೊರತೆಯೂ ಕೂಡ ಅಜೀರ್ಣತೆಗೆ ಕಾರಣ. ಆದ್ದರಿಂದ ಉತ್ತಮ ಆಹಾರ ಕ್ರಮದೊಂದಿಗೆ ವ್ಯಾಯಾಮವೂ ಇರಬೇಕು.

ಚಿಪ್ಸ್

ಚಿಪ್ಸ್

ಎಣ್ಣೆ ಮತ್ತು ಬೊಜ್ಜಿನಂಶವಿರುವ ಆಹಾರದಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಎಣ್ಣೆ ಗ್ಯಾಸ್ ಉತ್ಪತ್ತಿ ಮಾಡಿ ತೇಗು ಉಂಟಾಗಿ ಅಜೀರ್ಣತೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡಾ, ಬೆಣ್ಣೆ, ಹುರಿದ ಮಾಂಸ ಇವುಗಳಿಂದ ದೂರವಿರುವುದು ಒಳಿತು.

English summary

Foods that cause indigestion and gastric

Bloating, gastric problems and indigestion go hand in hand. Improper diet and unhealthy food can cause indigestion easily. Which food causes indigestion? Here are foods which can lead to indigestion easily. have a look
Story first published: Monday, January 26, 2015, 15:53 [IST]
X
Desktop Bottom Promotion