For Quick Alerts
ALLOW NOTIFICATIONS  
For Daily Alerts

ಧೂಮಪಾನ; ಮಹಿಳಿಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ ಏಕೆ?

By Super
|

ವಿಶ್ವದ ಯಾವುದೇ ದೇಶವನ್ನು ಪರಿಗಣಿಸಿದರೂ ಆರೋಗ್ಯಕ್ಕೆ ಮಾರಕವಾದ ಧೂಮಪಾನ ಹೆಚ್ಚಾಗಿ ಕಂಡುಬರುವುದು ಪುರುಷರಲ್ಲಿ. ಧೂಮಪಾನ ಪ್ರಾರಂಭವಾದ ಕಾಲದಿಂದಲೇ ಈ ಚಟಕ್ಕೆ ಪುರುಷರೇ ಹೆಚ್ಚಾಗಿ ವ್ಯಸನಿಗಳಾಗಿರುವುದು ಇತಿಹಾಸದಿಂದ ಕಂಡುಬಂದಿರುವ ಸತ್ಯ. ಈ ಅಂತರವನ್ನು ಅರಿಯುವ ಮುನ್ನ ಮಹಿಳೆಯರು ಏಕೆ ಧೂಮಪಾನ ಮಾಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯ.

ಪುರುಷರಿಗೆ ಸಮಾನಸ್ಕಂದಳಾಗಲು ಪ್ರಯತ್ನಿಸುವ ಮಹಿಳೆ ಪುರುಷರಿಗೆ ಮೀಸಲಾದ ಹಲವು ವಿಷಯಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಾಳೆ. ಉದಾಹರಣೆಗೆ ಪುರುಷರಿಗೆ ಮೀಸಲಾದ ವಾಹನ ಚಾಲನೆ, ಯಂತ್ರದ ಕೆಲಸ ಮೊದಲಾದವು. ಅಂತೆಯೇ ಧೂಮಪಾನ ಪುರುಷರಿಗೆ ಮಾತ್ರ ಏಕೆ ಮೀಸಲಿರಬೇಕು? ನಾವೇನು ಕಮ್ಮಿ ಎಂದು ಹೆಚ್ಚಿನ ಮಹಿಳಾ ಧೂಮಪಾನಿಗಳ ಅನಿಸಿಕೆ ಎಂದು ಸಂಶೋಧನೆ ತಿಳಿಸುತ್ತದೆ.

ಧೂಮಪಾನ ದೇಹದಲ್ಲಿ ಉಂಟುಮಾಡುವ ಪರಿಣಾಮಗಳ ಕುರಿತು ಪುರುಷರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಹೆಚ್ಚಿನ ಪುರುಷರು ಧೂಮಪಾನದ ಮಾರಕತೆಯ ಬಗ್ಗೆ ಅರಿವಿದ್ದರೂ ಸೊಪ್ಪು ಹಾಕದೇ ಧೂಮಪಾನ ಮುಂದುವರೆಸಿದರೆ ಹೆಚ್ಚಿನ ಧೂಮಪಾನ ಮಾಡುವ ಮಹಿಳೆಯರು ವ್ಯಸನ ತ್ಯಜಿಸುವ ಬಗ್ಗೆ ಚಿಂತಿಸುತ್ತಾರೆ. ಆದರೂ ಧೂಮಪಾನ ಲಿಂಗಬೇಧವಿಲ್ಲದೇ ತನ್ನ ತೆಕ್ಕೆಗೆ ಬರುವವರ ಪ್ರಾಣವನ್ನು ಹಿಂಡುತ್ತಲೇ ಬಂದಿದೆ. ಆದರೂ ಇದರ ತೆಕ್ಕೆಗೆ ಬಿದ್ದವರಲ್ಲಿ ಗಂಡಸರ ಸಂಖ್ಯೆ ಹೆಚ್ಚು ಏಕೆ ಎಂದು ಕೆದಕಿದರೆ ಹಲವು ಸ್ವಾರಸ್ಯಕರ ವಿಷಯಗಳು ಹೊರಬರುತ್ತವೆ.

ನೀವು ಊಹಿಸಿರದ ಧೂಮಪಾನದ 6 ಪರಿಣಾಮಗಳು

ಪುರುಷರ ಸಂಖ್ಯೆ ಹೆಚ್ಚಿರುವುದು

ಪುರುಷರ ಸಂಖ್ಯೆ ಹೆಚ್ಚಿರುವುದು

ವಿಶ್ವದ ಜನಸಂಖ್ಯೆಯಲ್ಲಿ ಗಂಡು ಹೆಣ್ಣಿನ ಅನುಪಾತ ಗಣನೆಗೆ ತೆಗೆದುಕೊಂಡರೆ ಗಂಡಿನ ಸಂಖ್ಯೆ ಹೆಚ್ಚು. ಸ್ವಾಭಾವಿಕವಾಗಿ ಧೂಮಪಾನಿಗಳ ಸಂಖ್ಯೆಯೂ ಗಂಡಸರಲ್ಲಿಯೇ ಹೆಚ್ಚು.

ಪುರುಷರು ಮೋಜಿಗಾಗಿ ಧೂಮಪಾನ ಮಾಡುತ್ತಾರೆ

ಪುರುಷರು ಮೋಜಿಗಾಗಿ ಧೂಮಪಾನ ಮಾಡುತ್ತಾರೆ

ಹೆಚ್ಚಿನ ಪುರುಷರು ಶೋಕಿಗಾಗಿ, ಬೇಸರ ಕಳೆಯಲು, ಒತ್ತಡದಿಂದ ಕೊಂಚ ಹೊರಬರಲು ಅಥವಾ ಮೋಜಿಗಾಗಿ ಧೂಮಪಾನವನ್ನು ಆಲಂಗಿಸಿಕೊಂಡರೆ ಮಹಿಳೆಯರು ತಮ್ಮ ಬೇಗುದಿಯನ್ನು ಕಡಿಮೆಮಾಡಿಕೊಳ್ಳಲು ಧೂಮಪಾನದ ಆಶ್ರಯ ಪಡೆಯುತ್ತಾರೆ.

ಒತ್ತಡವನ್ನು ಮಹಿಳೆಯರು ಸಮರ್ಥವಾಗಿ ತಡೆದುಕೊಳ್ಳಬಲ್ಲರು

ಒತ್ತಡವನ್ನು ಮಹಿಳೆಯರು ಸಮರ್ಥವಾಗಿ ತಡೆದುಕೊಳ್ಳಬಲ್ಲರು

ದೈನಂದಿನ ಕೆಲಸಗಳಲ್ಲಿ ಎದುರಾಗುವ ಒತ್ತಡಗಳಿಂದ ಪಾರಾಗಲು ಪುರುಷರು ಧೂಮಪಾನದ ಮೊರೆಹೊಕ್ಕರೆ ಮಹಿಳೆಯರಲ್ಲಿ ವ್ಯಸನಿಗಳಾದವರು ಮಾತ್ರ ಧೂಮಪಾನದ ಮೊರೆ ಹೋಗುತ್ತಾರೆ. ಸ್ವಾಭಾವಿಕವಾಗಿ ಒತ್ತಡವನ್ನು ಎದುರಿಸುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಬಲರಾಗಿದ್ದಾರೆ.

ಕಳೆಗುಂದುವ ಸೌಂದರ್ಯ

ಕಳೆಗುಂದುವ ಸೌಂದರ್ಯ

ಸತತ ಧೂಮಪಾನದಿಂದ ದೇಹದ ಒಳಭಾಗದಲ್ಲಿ ಆಗುವ ಹಾನಿಯ ಜೊತೆಗೇ ಸೌಂದರ್ಯವೂ ಕಳೆಗುಂದುತ್ತದೆ. ಕಪ್ಪಗಾಗುವ ತುಟಿಗಳು, ಶೀಘ್ರವಾಗಿ ಆಗಮಿಸುವ ನೆರಿಗೆಗಳು ವೃದ್ದಾಪ್ಯವನ್ನು ಹತ್ತಿರಕ್ಕೆ ಕರೆಯುತ್ತವೆ. ಇದಕ್ಕೆ ಸೊಪ್ಪು ಹಾಕದ ಪುರುಷರು ಧೂಮಪಾನವನ್ನು ಮುಂದುವರೆಸಿದರೆ ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮಹಿಳೆಯರು ನಿಧಾನಕ್ಕೆ ಧೂಮಪಾನದಿಂದ ದೂರ ಸರಿಯುತ್ತಾರೆ.

ಧೂಮಪಾನಿ ಮಹಿಳೆಗೆ ಹೆಚ್ಚುವ ಸಾಮಾಜಿಕ ವರ್ಚಸ್ಸು

ಧೂಮಪಾನಿ ಮಹಿಳೆಗೆ ಹೆಚ್ಚುವ ಸಾಮಾಜಿಕ ವರ್ಚಸ್ಸು

ಪುರುಷರನ್ನು ಧೂಮಪಾನಿಯಾಗಿರುವದಕ್ಕಿಂತಲೂ ಹೆಚ್ಚಾಗಿ ಅವರ ವ್ಯಕ್ತಿತ್ವಕ್ಕೆ ಮನ್ನಣೆ ನೀಡಲಾಗುತ್ತದೆ. ಆದರೆ ಧೂಮಪಾನಿ ಮಹಿಳೆಯನ್ನು ಮುಂದುವರೆದವರು, ಆವೇಶವುಳ್ಳವರು, ಸ್ವಚ್ಛಂದ ವ್ಯಕ್ತಿತ್ವದವರು ಎಂದು ಬಿಂಬಿಸಲಾಗುತ್ತದೆ.

ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ

ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ

ಧೂಮಪಾನದ ದುಷ್ಪರಿಣಾಮಗಳು ತಮ್ಮ ಮೂಲಕ ತಮ್ಮ ಮಕ್ಕಳಿಗೆ ತಗಲುವ ಸಂಭವ ಮಹಿಳೆಯರಲ್ಲಿರುವ ಕಾರಣ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ವೈದ್ಯರೂ ಸಹಾ ಗರ್ಭಿಣಿಗೆ ಧೂಮಪಾನವನ್ನು ಕೂಡಲೇ ತ್ಯಜಿಸಲು ಸಲಹೆ ನೀಡುತ್ತಾರೆ. ಈ ಸಂಭವ ಇಲ್ಲದ ಗಂಡಸರು ನಿರುದ್ವಿಗ್ನರಾಗಿ ಧೂಮಪಾನವನ್ನು ಮುಂದುವರೆಸುತ್ತಾರೆ.

ಮಹಿಳೆಯರು ಹೆಚ್ಚು ಸ್ವಾಸ್ಥ್ಯಪ್ರಜ್ಞೆಯುಳ್ಳವರಾಗಿದ್ದಾರೆ

ಮಹಿಳೆಯರು ಹೆಚ್ಚು ಸ್ವಾಸ್ಥ್ಯಪ್ರಜ್ಞೆಯುಳ್ಳವರಾಗಿದ್ದಾರೆ

ತಮ್ಮ ಆರೋಗ್ಯದ ಬಗ್ಗೆ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಕಾಳಜಿ ವಹಿಸುತ್ತಾರೆ. ಧೂಮಪಾನ ಅಲ್ಪಕಾಲ ನೀಡುವ ವರ್ಚಸ್ಸಿಗಿಂತಲೂ ಅದು ಉಂಟುಮಾಡುವ ಕ್ಯಾನ್ಸರ್ ಮೊದಲಾದ ಭಯಂಕರ ಕಾಯಿಲೆಗಳು, ಶ್ವಾಸಕೋಶ, ಕಪ್ಪಗಾಗುವ ತುಟಿಗಳಿಗೆ ಅವರು ಹೆಚ್ಚಿನ ಪ್ರಾಧಾನ್ಯತೆ ನೀಡಿ ಧೂಮಪಾನದಿಂದ ದೂರ ಉಳಿಯುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಿಂದೆ ಪುರುಷರು ಯಾವುದೇ ಎಗ್ಗಿಲ್ಲದೇ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದರು. ಆದರೆ ಇಂದು ಜಾಗೃತಿಗೊಂಡಿರುವ ಮಹಿಳೆಯರು ಕೂಡಲೇ ಪ್ರತಿಭಟಿಸಿ ಧೂಮಪಾನಿಗೆ ತಕ್ಕ ಪಾಠ ಕಲಿಸುತ್ತಾರೆ.

English summary

Why Men Smoke More Than Women?

It is a commonly known fact that men smoke more than women. However, it is tough to tell why this discrepancy exists. Ever since the concept of smoking tobacco exists, men usually smoke more than women.
X
Desktop Bottom Promotion