Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಚೆನ್ನಾಗಿ ಅಗಿದು ತಿಂದರೆ ತೂಕ ಕಡಿಮೆಯಾಗುತ್ತೆ

ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ತೂಕ ಕಡಿಮೆಗೊಳಿಸಬಹುದು, ಹೆಚ್ಚು ಕಾಲ ಆಹಾರ ಅಗಿದಷ್ಟು, ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಹೆಚ್ಚು ಕ್ಯಾಲೊರಿ ಸೇವನೆಯೂ ನಿಯಂತ್ರಣದಲ್ಲಿರುತ್ತದೆ ಎಂದಿದೆ ಈ ಸಂಶೋಧನೆ.
ಆಹಾರವನ್ನು ಸುಮಾರು 40 ಬಾರಿ ಅಗಿದು ತಿಂದವರು, 15 ಬಾರಿ ಅಗಿದವರಿಗಿಂತ ಶೇಕಡಾ 12 ರಷ್ಟು ಕಡಿಮೆ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಅತಿಯಾಗಿ ತಿನ್ನುವುದೂ ತಪ್ಪುತ್ತದೆ, ದೇಹದಲ್ಲಿ ಕ್ಯಾಲೊರಿ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲ, ಆಹಾರವನ್ನು ಅಗಿಯದೆ ತಿನ್ನುವುದರಿಂದ, ಹಸಿವನ್ನು ನಿಯಂತ್ರಿಸುವ ಗ್ರೆಲಿನ್ ಎಂಬ ಅಂಶ ಕಡಿಮೆಗೊಳ್ಳುತ್ತದೆ. ಇದರಿಂದ ಬೇಗನೆ ಹಸಿವಾಗುವ ಸಾಧ್ಯತೆ ಹೆಚ್ಚಾಗಿ ಕ್ರಮೇಣ ತೂಕವೂ ಹೆಚ್ಚುತ್ತದೆ ಎಂದಿದೆ ಸಂಶೋಧನೆ.
ಚೀನಾದ ಹರ್ಬಿನ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 16 ಸಣ್ಣಗಿನ ಮತ್ತು 14 ಸ್ಥೂಲಕಾಯದ 20ರ ವಯೋಮಿತಿಯ ವ್ಯಕ್ತಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ.
ಈ ಎರಡೂ ಗುಂಪನ್ನು ಸಂಶೋಧನೆಗೆ ಒಳಪಡಿಸಿ, ಆಹಾರವನ್ನು ನುಂಗುವ ಮುನ್ನ ಈ ಎರಡೂ ಗುಂಪು ಎಷ್ಟು ಬಾರಿ ಅಗಿದು ತಿಂದರು ಎಂದು ಗುಪ್ತ ಕ್ಯಾಮೆರಾ ಮೂಲಕ ಸೆರೆಹಿಡಿದಾಗ, ಸ್ಥೂಲಕಾಯದವರು ಸಣ್ಣಗಿರುವವರಿಗಿಂತ ಕಡಿಮೆ ಅಗಿಯುತ್ತಾ, ಬೇಗನೆ ಆಹಾರವನ್ನು ನುಂಗಿರುವುದು ಕಂಡುಬಂದಿದೆ.
ಊಟವಾದ 90 ನಿಮಿಷದ ನಂತರ ಎರಡೂ ಗುಂಪನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಆಹಾರವನ್ನು 40 ಬಾರಿ ಅಗಿದವರಲ್ಲಿ ಗ್ರೆಲಿನ್ ಮಟ್ಟ ಕೂಡ ಕಡಿಮೆಯಾಗಿದ್ದು ತಿಳಿದುಬಂದಿದೆ. ಆಹಾರವನ್ನು ಅಗಿದು ತಿಂದವರಲ್ಲಿ ಕೇವಲ 11.9 % ಕ್ಯಾಲೊರಿ ಮಾತ್ರ ಇರುವುದು ಕಂಡುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
