For Quick Alerts
ALLOW NOTIFICATIONS  
For Daily Alerts

ಇತ್ತೀಚೆಗೆ ಚಿಕ್ಕ ಪ್ರಾಯದಲ್ಲೇ ಟೈಪ್‌ 2 ಮಧುಮೇಹ ಬರುತ್ತಿದೆ ಏಕೆ? ಮಧುಮೇಹ ಬಾರದಂತೆ ತಡೆಗಟ್ಟಬಹುದೇ?

|

2 ದಶಕಗಳ ಹಿಂದೆ ಟೈಪ್‌ 2 ಶುಗರ್‌ ಮಧ್ಯ ವಯಸ್ಸು ದಾಟಿದವರಲ್ಲಿ ಮಾತ್ರ ಕಂಡು ಬರುವ ಕಾಯಿಲೆ ಎಂಬ ಕಲ್ಪನೆ ಜನರಲ್ಲಿತ್ತು, ಆದರೆ ಈಗ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಟೈಪ್‌ 2 ಮಧುಮೇಹ ಕಂಡು ಬರುತ್ತಿದೆ.

Why Is Diabetes Affecting More Young Adults in Kannada

ತುಂಬಾ ಚಿಕ್ಕ ಪ್ರಾಯದಲ್ಲಿಯೇ ಮಧುಮೇಹದ ಅಪಾಯದ ಸಾಧ್ಯತೆ ಹೆಚ್ಚುತ್ತಿರುವುದಕ್ಕೆ ಕಾರಣವೇನು? ಇದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಒಬೆಸಿಟಿ: ದಶಕಗಳ ಹಿಂದೆ ಈಗಿರುವಷ್ಟು ಒಬೆಸಿಟಿ ಸಮಸ್ಯೆ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ3/4 ಮಕ್ಕಳಲ್ಲಿ ಒಬೆಸಿಟಿ ಕಂಡು ಬರುತ್ತಿದೆ, ಅದೇ 2 ದಶಕಗಳ ಹಿಂದೆ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಕಡಿಮೆ ಇತ್ತು.

ಕೊರೊನಾ ಬಂದ ಮೇಲೆ ಹೆಚ್ಚಾದ ಒಬೆಸಿಟಿ

ಕೊರೊನಾ ಬಂದ ಹಲವಾರು ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಕಂಡು ಬಂದಿದೆ. ಕೊರೊನಾ ಲಾಕ್‌ಡೌನ್‌ ಜನರ ಆರೋಗ್ಯದ ಮೇಲೆ ಅದರಲ್ಲೂ ಮೈ ತೂಕದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ.

ಚಿಕ್ಕ ಪ್ರಾಯದ ಹೆಣ್ಮಕ್ಕಳಲ್ಲಿ ಮಧುಮೇಹ ಹೆಚ್ಚಾಗುತ್ತಿದೆ

40-60 ವರ್ಷದ ಮಹಿಳೆಯರಿಗೆ ಹೋಲಿಸಿದರೆ 18-40 ವರ್ಷದ ಮಹಿಳೆಯರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಮಧುಮೇಹದ ಸಮಸ್ಯೆಯು ವಯಸ್ಸಾದ ಮಹಿಳೆಯರಿಗಿಂತ 6 ಹೆಚ್ಚು ಯೌವನ ಪ್ರಾಯದ ಮಹಿಳೆಯರಲ್ಲಿ ಕಂಡು ಬರುತ್ತಿದೆ.

ಚಿಕ್ಕ ಪ್ರಾಯದಲ್ಲಿಯೇ ಮಧುಮೇಹದ ಅಪಾಯ ತಡೆಗಟ್ಟುವುದು ಹೇಗೆ?

1. ಆಹಾರಕ್ರಮ

ಸಸ್ಯಾಹಾರ ಅತೀ ಹೆಚ್ಚು ಬಳಸಿ, ಅದರಲ್ಲೂ ನಾರಿನ ಪದಾರ್ಥ ತುಂಬಾ ತಿನ್ನಬೇಕು. ಚಿಕನ್, ಟರ್ಕಿ, ಮೀನು ಇವುಗಳನ್ನು ಸೇವಿಸಬಹುದು, ಆದರೆ ಅಧಿಕ ಕೊಬ್ಬಿನಂಶವಿರುವ ಆಹಾರಗಳು (ಪೋರ್ಕ್, ಬೀಫ್, ಮಟನ್, ಕುರಿ) ಈ ಬಗೆಯ ಆಹಾರ ಸೇವನೆ ಕಡಿಮೆ ಮಾಡಬೇಕು.

* ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ ಸೇವಿಸಿ. ಈ ಬಗೆಯ ಆಹಾರಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ.
* ಸಸ್ಯಾಹಾರಗಳು: ಬ್ರೊಕೋಲಿ, ಟೊಮೆಟೊ, ದುಂಡು ಮೆಣಸು, ಲೆಟ್ಯೂಸೆ, ಬದನೆಕಾಯಿ, ನಾರು ಪದಾರ್ಥ ಅಧಿಕವಿರುವ ತರಕಾರಿಗಳು
* ಪಿಯರ್ಸ್, ಸೇಬು, ಸ್ಟ್ರಾಬೆರ್ರಿ, ಕಿತ್ತಳೆ ಈ ಬಗೆಯ ಹಣ್ಣುಗಳು
* ಡಾರ್ಕ್‌ ಚಾಕೋಲೆಟ್ ಸೇವನೆ ಒಳ್ಳೆಯದು.
* ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು.
* ಬಟಾಣ, ಚೆನ್ನಾ, ಮೊಳಕೆ ಕಾಳುಗಳನ್ನು ಸೇವಿಸಿ.

ದೈಹಿಕ ವ್ಯಾಯಾಮ

ನಿಮ್ಮ ಜೀವನಶೈಲಿಯಲ್ಲಿ ದೈಹಿಕ ವ್ಯಾಯಾಮ ಇಲ್ಲದಿದ್ದರೆ ಕಾಯಿಲೆ ಬರುವ ಅಪಾಯ ಅಧಿಕ. ಒಂದು ಕಡೆಯೇ ಕೂತು ಕೆಲಸ ಮಾಡುವುದು, ಟಿವಿ, ಮೊಬೈಲ್‌ ನೋಡುವುದು ಈ ಎಲ್ಲಾ ಅಭ್ಯಾಸಗಳು ಮಧುಮೇಹದ ಅಪಾಯ ಹೆಚ್ಚಿಸುತ್ತದೆ.
ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ, ಸಾಧ್ಯವಾದಷ್ಟು ನಡೆದಾಡಿ. ಆಫೀಸ್‌ ಸಮೀಪದಲ್ಲಿದ್ದರೆ ಬೈಕ್, ಕಾರು ಬಿಟ್ಟು ಸೈಕಲ್‌ನಲ್ಲಿ ಹೋಗಿ, ಒಟ್ಟಿನಲ್ಲಿ ದೈಹಿಕ ವ್ಯಾಯಾಮ ಕಡೆ ಗಮನ ನೀಡಿ.
* ನಿಯಮಿತ ಪರೀಕ್ಷೆ ಮಾಡಿಸಿ

English summary

Why Is Diabetes Affecting More Young Adults in Kannada

Diabetes In Young age: why diabetes affecting more young adult, read on....
Story first published: Wednesday, December 14, 2022, 18:00 [IST]
X
Desktop Bottom Promotion