Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಟೈಪ್ 1 ಮಧುಮೇಹ ಪತ್ತೆಯಾಗುವ ಮುನ್ನ ನನ್ನ ದೇಹದಲ್ಲಿ ಈ 4 ಬದಲಾವಣೆಗಳಾಗಿತ್ತು: ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್
ಖ್ಯಾತ ಅಮೆರಿಕನ್ ಗಾಯಕ, ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ತಮಗೆ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಟೈಪ್ 1 ಮಧುಮೇಹದ ಸಮಸ್ಯೆ ಇರುವುದಾಗಿ ಈ ಹಿಂದೆಯೇ ಹೇಳಿದ್ದರು. ಇದೀಗ ಟೈಪ್ 1 ಮಧುಮೇಹದ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾ ಜನರಿಗೆ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ನಿಕ್ ಜೋನಸ್ ಅವರಿಗೆ ಟೈಪ್ 1ಮಧುಮೇಹ ಪತ್ತೆಯಾಗುವ ಮೊದಲೇ ಅವರ ದೇಹದಲ್ಲಿ 4 ಪ್ರಮುಖ ಬದಲಾವಣೆಗಳು ಕಂಡು ಬಂದಿತ್ತು ಎಂಬುವುದಾಗಿ ಹೇಳಿದ್ದಾರೆ. ಮಧುಮೇಹ ಪತ್ತೆಯಾಗುವ ಮುನ್ನವೇ ಅವರ ಆರೋಗ್ಯದಲ್ಲಿ ಯಾವ ಬದಲಾವಣೆಗಳಾಗಿತ್ತು, ಈ ಬಗೆಯ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಮಧುಮೇಹದ ಪರೀಕ್ಷೆ ಅವಶ್ಯಕ, ಏಕೆ ಎಂದು ನೋಡೋಣ ಬನ್ನಿ:

13 ವರ್ಷವಿದ್ದಾಗಲೇ ನಿಕ್ ಜೋನಸ್‌ಗೆ ಟೈಪ್ 1 ಮಧುಮೇಹ
ಇದೀಗ ಈ ಗಾಯಕನಿಗೆ 30 ಹರೆಯ. ಅವರಿಗೆ 13 ವರ್ಷವಿದ್ದಾಗಲೇ ಟೈಪ್ 1 ಮಧುಮೇಹ ಕಾಣಿಸಿಕೊಂಡಿತ್ತು.
ವಿಶ್ವದಲ್ಲಿ ಸುಮಾರು 29 ಮಿಲಿಯನ್ ಜನರಲ್ಲಿ ಈ ಟೈಪ್ 1 ಮಧುಮೇಹವಿದೆ.
ಟೈಪ್ 1 ಮಧುಮೇಹದ ಲಕ್ಷಣಗಳು
* ತೂಕ ಇಳಿಕೆ
* ತುಂಬಾ ಬಾಯಾರಿಕೆ
* ಆಗಾಗ ಮೂತ್ರವಿಸರ್ಜನೆ
* ಒಂದು ರೀತಿಯ ಕಿರಿಕಿರಿ
ನಿಕ್ ಜೋನಸ್ ನನಗೆ ಈ ಬಗೆಯ ಲಕ್ಷಣಗಳು ನನಗೆ ಕಾಣಿಸಿಕೊಂಡಾಗ ಮೊದಲು ಪೋಷಕರಿಗೆ ತಿಳಿಸಿದೆ ಅವರು ಮಕ್ಕಳ ತಜ್ಞರ ಬಳ ಕರೆದುಕೊಂಡು ಹೋದರು ಆಗ ನನಗೆ ಟೈಪ್ 1 ಮಧುಮೇಹವಿರುವುದು ಪತ್ತೆ ಮಾಡಿದರು ಎಂಬುವುದಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಮಕ್ಕಳಲ್ಲಿ ಟೈಪ್ 1 ಮಧುಮೇಹ ಪತ್ತೆಗೆ ತಡ ಏಕೆ?
ಸಾಕಷ್ಟು ಬಾರಿ ಮಕ್ಕಳಲ್ಲಿ ಟೈಪ್ 1 ಮಧುಮೇಹದ ಲಕ್ಷಣಗಳಿದ್ದರೆ ಪೋಷಕರ ಗಮನಕ್ಕೆ ಬೇಗನೆ ಬಂದಿರುವುದಿಲ್ಲ. ಮಕ್ಕಳ ಓಡಾಡಿ ಆಟ ಆಡುವುದು ಅಧಿಕ ಅವರು ಆಗಾಗ ಬಂದು ನೀರು ಕುಡಿಯುತ್ತಾರೆ, ಹಾಗಾಗಿ ಆಗಾಗ ಮೂತ್ರ ವಿಸರ್ಜನೆಗೆ ಹೋಗುತ್ತಿರಬಹುದು ಎಂದು ಭಾವಿಸಿ ಸುಮ್ಮನಾಗುತ್ತಾರೆ. ಹೀಗಾಗಿ ಟೈಪ್ 1 ಮಧುಮೇಹದ ಲಕ್ಷಣಗಳು ಪ್ರಾರಂಭದಲ್ಲಿಯೇ ತಿಳಿಯದೇ ಹೋಗಬಹುದು.
ಸೂಕ್ತ ಚಿಕಿತ್ಸೆ ದೊರೆಯದೇ ಹೋದರೆ ಅಪಾಯ
ಮಕ್ಕಳಿಗೆ ಟೈಪ್ 1 ಮಧುಮೇಹ ಬಂದಾಗ ಅದಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಹೋದರೆ ಡಯಾಬಿಟಕ್ ಕೋಮಾ ಉಂಟಾಗಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಟೈಪ್ 1 ಮಧುಮೇಹ ಎಂದರೇನು?
ಟೈಪ್ 1 ಮಧುಮೇಹದಲ್ಲಿ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ (ವೈರಸ್, ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ವ್ಯವಸ್ಥೆ) ತಪ್ಪಾಗಿ ಇನ್ಸುಲಿನ್ ಉತ್ಪತ್ತಿ ಮಾಡುವ ಮೇಧೋಜೀರಕ ಗ್ರಂಥಿ ಮೇಲೆ ದಾಳಿ ಮಾಡುತ್ತದೆ. ಆಗ ಟೈಪ್ 1 ಮಧುಮೇಹ ಉಂಟಾಗುವುದು.
ಯಾರಿಗೆ ಟೈಪ್ 1 ಮಧುಮೇಹದ ಅಪಾಯ ಅಧಿಕ?
ಕುಟುಂಬದಲ್ಲಿ ಟೈಪ್ 1 ಮಧುಮೇಹದ ಇತಿಹಾಸವಿದ್ದರೆ ಅಂದರೆ ತಂದೆ-ತಾಯಿ, ಸಹೋದರ-ಸಹೋದರಿ ಅವರಿಗೆ ಮಧಮೇಹವಿದ್ದರೆ (ಟೈಪ್ 1 ಅಥವಾ ಟೈಪ್ 2) ಟೈಪ್ 1 ಮಧುಮೇಹ ಬರಬಹುದು.

ಮಧುಮೇಹದಿಂದ ಬರುವ ಇತರ ಆರೋಗ್ಯ ಸಮಸ್ಯೆಗಳು
ಯಾವುದೇ ಮಧುಮೇಹವಾಗಿದ್ದರೂ ಅದು ನಿಯಂತ್ರಣದಲ್ಲಿ ಇರದಿದ್ದರೆ ಇದರಿಂದ ಕಿಡ್ನಿ ಸಮಸ್ಯೆ ಉಂಡಾಗಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಟೈಪ್ 1 ಮಧುಮೇಹ ನಿಯಂತ್ರಣದಲ್ಲಿಡದಿದ್ದರೆ ಕುರುಡುತನ ಬರಬಹುದು.
ಅಲ್ಲದೆ ಮಧುಮೇಹದಿಂದ ನರಕ್ಕೆ ಸಂಬಂಧಿಸಿದ ಸಮಸ್ಯೆ ಬರಬಹುದು.
ಮಧುಮೇಹವನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಆಹಾರ ಶೈಲಿ, ಜೀವನಶೈಲಿ ಮೂಲಕ ನಿಯಂತ್ರಿಸಬಹುದು. ಕೆಲವರಿಗೆ ಮಾತ್ರೆ ಸಾಕಾಗುವುದು, ಮಧುಮೇಹದ ನಿಯಂತ್ರಣದಲ್ಲಿಡಲು ತುಂಬಾನೇ ಕಷ್ಟವಾದರೆ ಇನ್ಸುಲಿನ್ ಚುಚ್ಚುಮದ್ದು ಪ್ರಾರಂಭಿಸಬೇಕಾಗುತ್ತದೆ.

ಟೈಪ್ 1 ಮಧುಮೇಹ ಬಾರದಂತೆ ತಡೆಗಟ್ಟಬಹುದೇ?
ಟೈಪ್ 1 ಮಧುಮೇಹ ತಡೆಗಟ್ಟುವುದು ಅಸಾಧ್ಯ, ಏಕೆಂದರೆ ಇದು ದೇಹದ ರೋಗ ನಿರೋಧಕ ವ್ಯವಸ್ಥೆ ವಿಚಿತ್ರವಾಗಿ ವರ್ತಿಸಿದಾಗ ಆಗುವ ಸಮಸ್ಯೆಯಾಗಿದೆ. ಟೈಪ್ 1 ಮಧುಮೇಹದ ರೋಗ ಲಕ್ಷಣಗಳು ಹೆಚ್ಚಾಗುವುದನ್ನು ನಿಧಾನ ಮಾಡುವ ಔಷಧ((teplizumab) ಅಮೆರಿಕದಲ್ಲಿ ಕಂಡು ಹಿಡಿಯಲಾಗಿದ್ದು, ಅಮೆರಿಕ ಈ ಔಷಧ ಬಳಕೆಗೆ ಅನುಮತಿ ನೀಡಿದೆ, ಇನ್ನಿತರ ರಾಷ್ಟ್ರಗಳಿಂದ ಒಪ್ಪಿಗೆ ಸಿಗಬೇಕಾಗಿದೆ.



Click it and Unblock the Notifications
