Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳು ಪಪ್ಪಾಯ ಹಣ್ಣು ತಿನ್ನಬಹುದೇ? ತಿಂದರೆ ಸಮಸ್ಯೆ ಆಗುವುದೇ?
ಇಂದಿನ ದಿನದಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿ ಬಿಟ್ಟಿದೆ. ಒಂದು ಮಾಹಿತಿಯ ಪ್ರಕಾರ ಶೇ.100 ರಷ್ಟು ಜನರಲ್ಲಿ ಶೇ. 50ರಷ್ಟು ಮಂದಿಗೆ ಸಕ್ಕರೆ ಕಾಯಿಲೆಯಿದೆ. ಮಧುಮೇಹ ರೋಗಿಯು ತನ್ನ ಆಹಾರ ಸೇವನೆಯಲ್ಲಿ ಸೂಕ್ತ ಕ್ರಮ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ರೋಗ ಉಲ್ಬಣವಾಗುವುದು.
ಜೀರ್ಣಾಂಗ ವ್ಯವಸ್ಥೆ ಹಾಗೂ ಮೂತ್ರ ಪಿಂಡಗಳ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುವುದು. ಹಾಗಾಗಿ ಅದೆಷ್ಟೇ ಇಷ್ಟಪಟ್ಟ ತಿಂಡಿ ಅಥವಾ ಹಣ್ಣಾಗಿದ್ದರೂ ಸೇವಿಸುವ ಹಾಗಿಲ್ಲ. ಇನ್ನೊಂದು ವಿಚಾರವೆಂದರೆ, ಮಧುಮೇಹದಿಂದ ಬಳಲುತ್ತಿದ್ದೀರಿ ಎಂದಾದರೆ ಜನರೆಲ್ಲರೂ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಾರೆ. ಆ ಹಣ್ಣು, ಈ ತಿಂಡಿ ತಿನ್ನಬಾರದು ಎನ್ನುತ್ತಾರೆ.
ಏಕೆಂದರೆ ಅದು ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಿಸುತ್ತದೆ ಎನ್ನುವ ಉದ್ದೇಶವಷ್ಟೇ. ಈ ನಿಟ್ಟಿನಲ್ಲೇ ಹಣ್ಣನ್ನು ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ನಿಮಗೊಂದು ಸತ್ಯ ತಿಳಿದಿರಲಿ. ಮಧುಮೇಹಿಗಳು ಪಪ್ಪಾಯ ಹಣ್ಣನ್ನು ನಿಯಮಿತವಾಗಿಯೇ ಸೇವಿಸಬಹುದು. ಇದು ಮಧುಮೇಹಕ್ಕೆ ಒಳ್ಳೆಯದು. ಅದು ಹೇಗೆ ಎನ್ನುವ ವಿವಿರಣೆ ಇಲ್ಲಿದೆ ನೋಡಿ....

ಕಡಿಮೆ ಸಕ್ಕರೆ ಪ್ರಮಾಣ
ಪಪ್ಪಾಯ ಹಣ್ಣಿನಲ್ಲಿ 8.3ರಷ್ಟು ಸಕ್ಕರೆ ಪ್ರಮಾಣವಿದೆ. ಸೂಕ್ತ ಅಧ್ಯಯನವೊಂದು ಹೇಳುವ ಪ್ರಕಾರ ಪಪ್ಪಾಯದಲ್ಲಿರುವ ಸಂಯುಕ್ತಗಳು ಮಧುಮೇಹದ ಮಟ್ಟವನ್ನು ತಗ್ಗಿಸುತ್ತದೆ. ಇದರಲ್ಲಿರುವ ಪಪೈನ್ ಎನ್ನುವ ಕಿಣ್ವ ಅಧಿಕ ಪ್ರಮಾಣದಲ್ಲಿರುವುದರಿಂದ ದೇಹದಲ್ಲುಂಟಾಗುವ ಗಾಯ ಗುಣಮಪಡಿಸುತ್ತದೆ.

ಅಧಿಕ ಪ್ರಮಾಣದ ವಿಟಮಿನ್‍ಗಳು
ವಿಟಮಿನ್ ಎ ಮತ್ತು ಸಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿದೆ. ಹೈಪೊಗ್ಲೈಸೆಮಿಕ್ ಪ್ರಕ್ರಿಯೆಯಿಂದ ಮಧುಮೇಹಿ ಸಂಬಂಧಿತ ಹೃದಯ ಕಾಯಿಲೆ ತಡೆಯುತ್ತದೆ.

ಉತ್ತಮ ನಾರಿನಂಶ
ಪಪ್ಪಾಯವು ಅಧಿಕ ಪ್ರಮಾಣದ ನಾರಿನಂಶದಿಂದ ಕೂಡಿದೆ. ಇದರ ಸೇವನೆಯಿಂದ ಸೂಕ್ತ ರೀತಿಯಲ್ಲಿ ಚಯಾಪಚಯ ಕ್ರಿಯೆ ನಡೆಯುತ್ತದೆ.

ಗ್ಲೈಸೆಮಿಕ್ ಸೂಚಿಯಲ್ಲಿ ಕಡಿಮೆ
ಗ್ಲೈಸೆಮಿಕ್ ಸೂಚಿಯ ಪ್ರಕಾರ ಪಪ್ಪಾಯ ಹಣ್ಣು ನೈಸರ್ಗಿಕವಾಗಿ ನಿಧಾನ ರೀತಿಯಲ್ಲೇ ಸಕ್ಕರೆ ಪ್ರಮಾಣವನ್ನು ಬಿಡುಗಡೆಮಾಡುತ್ತದೆ. ಹಾಗಾಗಿ ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದು. ಅಷ್ಟೇ ಅಲ್ಲದೆ ಬೆರಿ ಹಣ್ಣು, ಅವಕಾಡೂಗಳು, ಕಲ್ಲಂಗಡಿ, ಪ್ಲಮ್ ಮತ್ತು ಪೇರಳೆ ಹಣ್ಣುಗಳನ್ನು ಸಹ ನಿಮ್ಮ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.



Click it and Unblock the Notifications
