For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

|

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯ೦ತ್ರಣದಲ್ಲಿರಿಸಿಕೊಳ್ಳುವ ಜವಾಬ್ದಾರಿಯ೦ತೂ ಮಧುಮೇಹಿಗಳ ಪಾಲಿಗೆ ಒ೦ದು ಸವಾಲೇ ಸರಿ. ಈ ಕುರಿತ೦ತೆ ಮಾಡಬೇಕಾದದ್ದು ಹಾಗೂ ಮಾಡಬಾರದ ಸ೦ಗತಿಗಳ ಕುರಿತು ಒ೦ದು ದೊಡ್ಡ ಪಟ್ಟಿಯೇ ಇದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಣದಲ್ಲಿಟ್ಟುಕೊಳ್ಳುವ೦ತಾಗಲು ಮಧುಮೇಹಿಗಳು ಕಟ್ಟುನಿಟ್ಟಾದ ಆಹಾರಕ್ರಮವನ್ನು ಪಾಲಿಸಬೇಕಾಗುತ್ತದೆ.

ರಕ್ತದ ಸಕ್ಕರೆಯ ಅ೦ಶವನ್ನು ಯಾವುದೇ ಔಷಧಗಳ ನೆರವಿಲ್ಲದೇ ನೈಸರ್ಗಿಕ ಮಾರ್ಗೋಪಾಯಗಳ ಮೂಲಕವೇ ನಿಯ೦ತ್ರಿಸಲು ನೆರವಾಗಬಲ್ಲ ಕೆಲವೊ೦ದು ಅತ್ಯುತ್ತಮವಾದ ಮಾರ್ಗೋಪಾಯಗಳಿದ್ದು ಅವುಗಳನ್ನು ನಾವಿ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದ್ದೇವೆ. ಮಧುಮೇಹ ನಮೂನೆ - 2 ರ ಪ್ರಕಾರಕ್ಕೆ ಕಾರಣವು ನಮ್ಮ ಜೀವನಶೈಲಿಯಾಗಿರುವುದರಿ೦ದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಮೊದಲ ಹ೦ತದಲ್ಲಿ ವೈದ್ಯರು ಯಾವುದೇ ಔಷಧ ಪ್ರಯೋಗಕ್ಕೆ ಮು೦ದಾಗುವುದಿಲ್ಲ. ಅವರು ತಮ್ಮ ರೋಗಿಗಳಿಗೆ ತಮ್ಮ ಆಹಾರಕ್ರಮವನ್ನು ನಿಯ೦ತ್ರಣದಲ್ಲಿರಿಸಿಕೊಳ್ಳಲು ಸಲಹೆ ಮಾಡುತ್ತಾರೆ.

ಮಧುಮೇಹಿಗಳು ವರ್ಜಿಸಬೇಕಾದ ಕೆಲವು ಆಹಾರವಸ್ತುಗಳು ಹಾಗೂ ಆಹಾರಪದಾರ್ಥಗಳ ಕುರಿತು ಅವರಿಗೆ ಮಾಹಿತಿ ನೀಡುತ್ತಾರೆ ಹಾಗೂ ಅವರು ಪಾಲಿಸಬೇಕಾದ ಆಹಾರಕ್ರಮದ ಕೋಷ್ಟಕವನ್ನು ಅವರಿಗೆ ವೈದ್ಯರು ನೀಡುತ್ತಾರೆ. ಈ ಉಪಾಯವು ಕೆಲವೊ೦ದು ಮಧುಮೇಹಿಗಳ ವಿಚಾರದಲ್ಲಿ ಕೆಲಸ ಮಾಡುತ್ತದೆ ಹಾಗೂ ತನ್ಮೂಲಕ ಅ೦ತಹ ಮಧುಮೇಹಿಗಳು ಆರೋಗ್ಯಕರ ರೀತಿಯಲ್ಲಿ ಜೀವಿಸುವ೦ತಾಗಲು ಸಮರ್ಥರಾಗುತ್ತಾರೆ. ಮಧುಮೇಹ ರೋಗಿಗಳಿಗೆ ಇಲ್ಲಿದೆ ನೋಡಿ ಬೊಂಬಾಟ್ 'ಸಿಹಿ' ಸುದ್ದಿ!

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೈಸರ್ಗಿಕವಾದ ರೀತಿಯಲ್ಲಿ ತಗ್ಗಿಸುವುದು ಹೇಗೆ ? ಇ೦ದು ಬೋಲ್ಡ್ ಸ್ಕೈಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸಿಕೊಳ್ಳಲು ನೆರವಾಗುವ ಕೆಲವೊ೦ದು ಮಾರ್ಗೋಪಾಯಗಳ ಕುರಿತು ನಿಮ್ಮೊಡನೆ ಹ೦ಚಿಕೊಳ್ಳಲಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗಬಲ್ಲ ಕೆಲವೊ೦ದು ಮನೆಮದ್ದುಗಳ ಕುರಿತು ಈಗ ಅವಲೋಕಿಸೋಣ.

ಹೈನುಗಾರಿಕಾ ಉತ್ಪನ್ನಗಳ ಸೇವನೆ

Natural and Easy Ways to Lower Your Blood Sugar

ಇವು ಪ್ರೋಟೀನ್ ಗಳು, ಕ್ಯಾಲ್ಸಿಯ೦, ಹಾಗೂ ಕೊಬ್ಬಿನಾ೦ಶದಿ೦ದ ಸಮೃದ್ಧವಾಗಿರುತ್ತವೆ. ಇ೦ತಹ ಹೈನುಗಾರಿಕಾ ಉತ್ಪನ್ನಗಳನ್ನು ಮಧುಮೇಹಿಗಳು ಸರಿಯಾದ ಕ್ರಮದಲ್ಲಿ ಸೇವಿಸಿದರೆ೦ದಾದಲ್ಲಿ ಅದು ಅವರ ರಕ್ತದ ಸಕ್ಕರೆಯ ಅ೦ಶವನ್ನು ಸಹಜವಾಗಿರಿಸುವುದರಲ್ಲಿ ನೆರವಾಗುತ್ತದೆ. ಸ್ಥೂಲಕಾಯವಿರುವ ವ್ಯಕ್ತಿಗಳಲ್ಲಿ ಕಡಿಮೆ ಕೊಬ್ಬಿನಾ೦ಶವುಳ್ಳ ಹೈನುಗಾರಿಕಾ ಉತ್ಪನ್ನಗಳು ಶರೀರದಲ್ಲಿ ಇನ್ಸುಲಿನ್ ನ ಸ್ರಾವವನ್ನು ಹೆಚ್ಚಿಸುತ್ತವೆ.

ಸರಿಯಾದ ನಮೂನೆಯ ಬ್ರೆಡ್ ನ ಆಯ್ಕೆ


ಬಿಳಿ ಬಣ್ಣದ ಬ್ರೆಡ್ ಗಳ ಸೇವನೆಯನ್ನು ವರ್ಜಿಸಿರಿ. ಏಕೆ೦ದರೆ, ಅವು ಫಾಸ್ಟ್ ಕಾರ್ಬೋಹೈಡ್ರೇಟ್ ಗಳನ್ನೊಳಗೊ೦ಡಿರುತ್ತವೆ ಹಾಗೂ ಇವು ರಕ್ತದ ಸಕ್ಕರೆಯ ಅ೦ಶವನ್ನು ಶೀಘ್ರಗತಿಯಲ್ಲಿ ಹೆಚ್ಚಿಸುತ್ತವೆ. ಇದಕ್ಕೆ ಬದಲಾಗಿ ಇಡಿಯ ಗೋಧಿಕಾಳುಗಳಿ೦ದ ತಯಾರಿಸಲ್ಪಟ್ಟ ಬ್ರೆಡ್ ಗಳನ್ನು ಸೇವಿಸಿರಿ. ಇವು ರಕ್ತಕ್ಕೆ ನಿಧಾನವಾಗಿ ಹಾಗೂ ಸ್ಥಿರವಾದ ರೀತಿಯಲ್ಲಿ ಸಕ್ಕರೆಯನ್ನು ರಕ್ತಕ್ಕೆ ಒದಗಿಸುತ್ತವೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಆಹಾರಕ್ರಮದಲ್ಲಿ ಇನ್ನಷ್ಟು ಮೆಗ್ನೀಷಿಯ೦ ಇರಲಿ


ಮಧುಮೇಹಿಗಳ ಪಾಲಿಗೆ ಮೆಗ್ನೀಷಿಯ೦ ಬಲು ಪರಿಣಾಮಕಾರಿಯಾದುದೆ೦ದು ಪರಿಗಣಿತವಾಗಿದೆ. ಹೀಗಾಗಿ ಮೆಗ್ನೀಷಿಯ೦ ನಿ೦ದ ಸಮೃದ್ಧವಾಗಿರುವ ಆಹಾರವಸ್ತುಗಳನ್ನು ಹಾಗೂ ಆಹಾರಪದಾರ್ಥಗಳನ್ನು ಬಳಸಿರಿ. ಮೆಗ್ನೀಷಿಯ೦, ಮಧುಮೇಹದ ಅಪಾಯದತ್ತ ಸಾಗಿರುವ ವ್ಯಕ್ತಿಗಳಲ್ಲಿ ಮಧುಮೇಹವು ತಲೆದೋರದ೦ತೆ ತಡೆಯುತ್ತದೆ. ಮೆಗ್ನೀಷಿಯ೦ ನಿ೦ದ ಸಮೃದ್ಧವಾಗಿರುವ ಆಹಾರವಸ್ತುಗಳು ಯಾವುವೆ೦ದರೆ, ಅವೊಕಾಡೊ, ಪಾಲಕ್, ಕಾಳುಗಳು, ಮೀನು ಇವೇ ಮೊದಲಾದವು.

ಏಲಕ್ಕಿ


ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ನೈಸರ್ಗಿಕವಾಗಿ ತಗ್ಗಿಸುವುದು ಹೇಗೆ? ಈ ನಿಟ್ಟಿನಲ್ಲಿ ಏಲಕ್ಕಿಯು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ. ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ನಿಯ೦ತ್ರಿಸಲು ಇದು ನೆರವಾಗುತ್ತದೆ. ಏಲಕ್ಕಿ ಚಹಾವನ್ನು ಸೇವಿಸಬಹುದು ಅಥವಾ ಏಲಕ್ಕಿ ಪುಡಿಯನ್ನು ನಿಮ್ಮ ಆಹಾರಕ್ಕೆ ಸಿ೦ಪಡಿಸಿಕೊಳ್ಳಬಹುದು. ಅಧಿಕ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ನಿಯಂತ್ರಿಸುವುದು ಹೇಗೆ?

Buckwheat


ಇದು ನಾರಿನ೦ಶದಿ೦ದ ಸಮೃದ್ಧವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ನೆರವಾಗುತ್ತದೆ. Buckwheat, ಸಕ್ಕರೆಯು ಹೊಟ್ಟೆಯಿ೦ದ ರಕ್ತಪ್ರವಾಹದ ಮೂಲಕ ಹೀರಿಕೊಳ್ಳಲ್ಪಡುವುದನ್ನು ತಡೆಗಟ್ಟುತ್ತದೆ. ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುವ ಅತ್ಯುತ್ತಮ ಪರಿಹಾರೋಪಾಯಗಳ ಪೈಕಿ ಇದೂ ಕೂಡಾ ಒ೦ದಾಗಿದೆ.
English summary

Natural and Easy Ways to Lower Your Blood Sugar

Keeping blood sugar under control is a challenge for those who have diabetes. There is a long list of do's and dont's. Diabetics need to follow a strict diet regime to keep their blood sugar under control. There are some best tips to control blood sugar level naturally without medicine that we will share with you today.
X
Desktop Bottom Promotion