For Quick Alerts
ALLOW NOTIFICATIONS  
For Daily Alerts

ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ

|

ಫ್ಯಾಷನ್‌ ಜಗತ್ತು ಕುತೂಹಲದಿಂದ ನೋಡುತ್ತಿದ್ದ 2019ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಜೋಜಿಬಿನಿ ತುಂಜಿ ಕಿರೀಟವನ್ನು ಮುಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಿಂದ ಸ್ಪರ್ಧಿಸಿದ ಇಂಡಿಯಾ ವರ್ತಿಕಾ ಸಿಂಗ್ ಟಾಪ್‌ 20ರಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದರೆ.

2019ರ ವಿಶ್ವ ಸುಂದರಿ ಕಿರೀಟ ದಕ್ಷಿಣ ಆಫ್ರಿಕಾದ ಪಾಲಾಗಿದೆ. ಜೋಜಿಬಿನಿ ಹಾಗೂ ಪ್ಯೂರೆಟೊ ರಿಕೊ ನಡುವೆ ನಡೆದ ಪೈಪೋಟಿಯಲ್ಲಿ ಕಿರೀಟ ಜೋಜಿಬಿನಿ ಪಾಲಾಗಿದೆ ಮಿಸ್‌ ಯೂನಿವರ್ಸ್ ಮೆಕ್ಸಿಕೋ ರನ್ನರ್ ಅಪ್ ಆಗಿದ್ದಾರೆ. ಈ ಸಮಾರಂಭ ಅಂಟ್ಲಾಂಟದಲ್ಲಿ ನಡೆಯಿತು.

26 ವರ್ಷದ ಜೋಜಿಬಿನಿ ಲಿಂಗತಾರತಮ್ಯದ ಇರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಲಿಂಗ ತಾರತಮ್ಯದ ಬಗ್ಗೆ ಅಭಿಯಾನಕ್ಕಾಗಿಯೇ ತಮ್ಮ ಸಾಮಾಜಿಕ ಜಾಲತಾಣವನ್ನು ಮೀಸಲಿಟ್ಟಿದ್ದಾರೆ. ' ಮಹಿಳೆಯರು ನಾವು ಹೇಗೇ ಇರಲಿ ಮೊದಲು ನಮ್ಮನ್ನು ನಾವು ಪ್ರೀತಿಸಬೇಕು' ಎಂದು ನೈಸರ್ಗಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ.

Miss Universe 2019

2019ರ ವಿಶ್ವ ಸುಂದರಿ ಸ್ಪರ್ಧೆ ಭಾನುವಾರ ರಾತ್ರಿ ಅಂಟ್ಲಾಂಟಾದಲ್ಲಿ ನೆರವೇರಿತು. ಈ ಸ್ಪರ್ಧೆಯಲ್ಲಿ 90 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳಿಗೆ ಸ್ವಿಮ್ ಸೂಟ್, ಗೌನ್ ಹಾಗೂ ಪ್ರಶ್ನೋತ್ತರ ಸುತ್ತುಗಳಿದ್ದೆವು. ಕೊನೆಯ ಸುತ್ತಿನಲ್ಲಿ ಹದಿಹರೆಯ ಹೆಣ್ಮಕ್ಕಳಿಗೆ ನೀವೇನು ಹೇಳಲು ಇಷ್ಟಪಡುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಹೆಣ್ಮಕ್ಕಳು ತಾವು ತಮ್ಮ ನೈಸರ್ಗಿಕವಾದ ಚೆಲುವನ್ನು ಮೊದಲು ಪ್ರೀತಿಸಬೇಕು ಎಂದು ದಕ್ಷಿಣ ಆಫ್ರಿಕಾದ ಸುಂದರಿ ಹೇಳಿದ ಉತ್ತರ ನೆರೆದಿದ್ದ ಜನರ ಹಾಗೂ ತೀರ್ಪುಗಾರರು ಮೆಚ್ಚುಗೆಗೆ ಪಾತ್ರವಾಯಿತು.

Read more about: beauty ಸೌಂದರ್ಯ
English summary

Miss Universe 2019 winner is Miss South Africa Zozibini Tunzi

2019 Miss Universe crown has been won by South Africa's Zozibini Tunzi. 26-year-old Zozibini defeated Miss Universe Puerto Rico to win the crown. India's Vartika Sing not able to wpn the crown.
Story first published: Monday, December 9, 2019, 12:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more