For Quick Alerts
ALLOW NOTIFICATIONS  
For Daily Alerts

ಮೇಘಾ ಶೆಟ್ಟಿಯ ಗ್ಲಾಮರಸ್ ಲುಕ್: ಫ್ಯಾಷನ್ ಪ್ರಿಯರು ಮೆಚ್ಚುವ ಲುಕ್‌ಗಳಿವು

|

ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ಈ ನಟಿ ಕನ್ನಡದ ಮನೆ-ಮನೆಗಳಲ್ಲಿ ಚಿರಪರಿಚಿತ. ಜೊತೆ-ಜೊತೆಯಲ್ಲಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿರುವ ಈ ನಟಿ ಆಗಾಗ ತಮ್ಮ ಸ್ಟೈಲಿಷ್‌ ಫ್ಯಾಷನ್ ಸ್ಟೇಟ್‌ಮೆಂಟ್‌ನಿಂದಲೂ ಗಮನ ಸೆಳೆಯುತ್ತಾರೆ.

ಸಾಂಪ್ರದಾಯಿಕ ಉಡುಗೆಯಾಗಿರಲಿ, ಗ್ಲಾಮರಸ್‌ ಡ್ರೆಸ್‌ ಆಗಿರಲಿ ಮೇಘಾ ಶೆಟ್ಟಿಯವರು ತಮ್ಮ ಫ್ಯಾಷನ್‌ಲುಕ್‌ನಿಂದ ಗಮನ ಸೆಳೆಯುವುದು ಗ್ಯಾರಂಟಿ. ಮೇಘಾ ಶೆಟ್ಟಿಯವರು ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿರುವ ಫೋಟೋಗಳಲ್ಲಿ ಈ ಗ್ಲಾಮರಸ್‌ ಡ್ರೆಸ್‌ಗಳಲ್ಲಿ ಅತ್ಯಾಕರ್ಷವಾಗಿ ಕಂಡಿದ್ದಾರೆ:

ಪರ್ಫೆಕ್ಟ್ ಪಾರ್ಟಿ ಲುಕ್‌

ಪರ್ಫೆಕ್ಟ್ ಪಾರ್ಟಿ ಲುಕ್‌

ನಾವು ಪಾರ್ಟಿಗೆ ಹೋಗುವಾಗ ಯಾವ ರೀತಿಯ ಡ್ರೆಸ್‌ ಧರಿಸಬೇಕೆಂದು ತಲೆ ಕೆಡಿಸಿಕೊಳ್ಳುತ್ತೀವೆ ಅಲ್ವಾ? ಮೇಘಾ ಶೆಟ್ಟಿಯವರ ಈ ಲುಕ್‌ ನೋಡಿ ಪರ್ಫೆಕ್ಟ್‌ ಪಾರ್ಟಿ ಲುಕ್ ಅಲ್ವಾ? ಬ್ಲ್ಯಾಕ್ ಅಂಡ್ ಸಿಲ್ವರ್ ಅಥವಾ ಮೆರೂನ್, ಬ್ಲೂ ಅಂಡ್ ಗೋಲ್ಡನ್ ಹೀಗೆ ವಿವಿಧ ಕಾಂಬಿನೇಷನ್‌ನಲ್ಲಿ ಡ್ರೆಸ್‌ ಅನ್ನು ಈ ರೀತಿ ಸ್ಟಿಚ್‌ ಮಾಡಿಸಿ ಧರಿಸಬಹುದು. ಈ ಶಾರ್ಟ್ ಟಾಪ್ ಅಥವಾ ಲಾಂಗ್‌ ಗೌನ್‌ ಪಾರ್ಟಿಗೆ ಹೇಳಿ ಮಾಡಿಸಿದ ಡ್ರೆಸ್ ಆಗಿದೆ.

ಕ್ಯಾಸ್ಯೂಯಲ್ ಲುಕ್‌

ಕ್ಯಾಸ್ಯೂಯಲ್ ಲುಕ್‌

ಆಫೀಸ್ ಪಾರ್ಟಿ ಅಥವಾ ಅಫೀಷಿಯಲ್ ಮೀಟಿಂಗ್ ಇರುವ ಸ್ಟೈಲಿಷ್‌ ಆಗಿಯೂ ಇರಬೇಕು ಹಾಗೂ ಸ್ಟಾಂಡರ್ಡ್ ಲುಕ್‌ನಲ್ಲಿಯೂ ಕಾಣಬೇಕು, ಆಗ ಈ ರೀತಿಯ ಡ್ರೆಸ್ಸಿಂಗ್ ಮಾಡಬಹುದು. ಇದು ಇತ್ತ ಗೌನ್‌ ಅಲ್ಲ, ಅತ್ತು ಫ್ರಾಕ್‌ ಎರಡರ ಮಧ್ಯದಲ್ಲಿರುವ ಒಂದು ಲುಕ್‌ ಆಗಿದೆ, ಆಫೀಸ್‌ ಪಾರ್ಟಿ ಅಥವಾ ಮೀಟಿಂಗ್‌ಗೆ ಹೇಳಿ ಮಾಡಿಸಿದ ಲುಕ್ ಆಗಿದೆ.

ಫಂಕ್ಷನ್ ಲುಕ್‌

ಫಂಕ್ಷನ್ ಲುಕ್‌

ಗೆಳತಿಯ ಅಥವಾ ಸಂಬಂಧಿಕರ ಮದುವೆ ಇದೆ, ಆ ಮದುವೆಯಲ್ಲಿ ನಾನೂ ಮಿಂಚಬೇಕು ಎಂದು ಹೆಣ್ಮಕ್ಕಳು ಬಯಸುವುದು ಸಹಜ. ಅಂಥ ಮದುವೆ ಪಾರ್ಟಿಗಳಿಗೆ ಈ ಡ್ರೆಸ್ಸಿಂಗ್ ಮಾಡಬಹುದು. ಇವರು ಪರ್ಪಲ್‌ ಲೆಹಂಗಾಗೆ ವೈಟ್ ಅಂಡ್‌ ಸಿಲ್ವರ್ ಮ್ಯಾಚ್ ಮಾಡಿದ್ದಾರೆ, ಅದರ ಜೊತೆಗೆ ಸೊಂಟದ ಪಟ್ಟಿ ಹಾಗೂ ಮೂಗುತಿ ಈ ಡ್ರೆಸ್ಸಿಂಗ್‌ನ ಹೈಲೈಟ್ಸ್

ಬ್ಲ್ಯಾಕ್‌ ಟಾಪ್

ಬ್ಲ್ಯಾಕ್‌ ಟಾಪ್

ಬ್ಲ್ಯಾಕ್‌ ಡ್ರೆಸ್‌ ಯಾವತ್ತಿಗೂ ಹಾಟ್ ಲುಕ್ ನೀಡುತ್ತೆ, ಇಲ್ಲಿ ಮೇಘಾ ಶೆಟ್ಟಿ ಬ್ಲ್ಯಾಕ್‌ ಡ್ರೆಸ್‌ಗೆ ವೈಟ್‌ ಬೆಲ್ಟ್ ಧರಿಸಿದ್ದಾರೆ. ಬೆಲ್ಟ್‌ಗೆ ಮ್ಯಾಚ್‌ ಆಗುವಂತೆ ಕೈ ಉಂಗುರ ಹಾಗೂ ಕಿವಿಯೋಲೆ ಧರಿಸಿ ಹಾಟ್ ಅಂಡ್ ಡೀಸೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ.

ಪಿಂಕ್ ಸ್ಲೀವ್‌ಲೆಸ್ ಗೌನ್

ಪಿಂಕ್ ಸ್ಲೀವ್‌ಲೆಸ್ ಗೌನ್

ಈ ರೀತಿಯ ಗೌನ್‌ ಹೆಚ್ಚಿನವರ ಫೇವರೆಟ್‌ ಕಲೆಕ್ಷನ್‌ಗಳಲ್ಲಿ ಒಂದಾಗಿರುತ್ತದೆ. ಈ ರೀತಿಯ ಗೌನ್‌ನ advantage ಎಂದರೆ ಟ್ರಿಪ್ ಹೋಗುವಾಗಲೂ ಹಾಕಬಹುದು, ಹಾಗೇ ಸುಮ್ಮನೆ ಶಾಪಿಂಗ್ ಅಮತ ಸುತ್ತಾಡುವಾಗಲೂ ಧರಿಸಬಹುದು. ಮೇಘಾ ಶೆಟ್ಟಿ ಪಿಂಕ್ ಬಣ್ಣದ ಸ್ಲೀವ್‌ಲೆಸ್‌ ಗೌನ್‌ನಲ್ಲಿ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ ಅಲ್ವಾ?

ಸ್ಲೀವ್‌ಲೆಸ್ ಗೌನ್

ಸ್ಲೀವ್‌ಲೆಸ್ ಗೌನ್

ಫಂಕ್ಷನ್‌ಗಳಿಗೆ ಹೇಳಿ ಮಾಡಿಸಿದ ಡ್ರೆಸ್ಸಿಂಗ್‌ ಇದಾಗಿದೆ. ಮದುವೆ ರಿಸೆಪೆಕ್ಷನ್ ಮುಂತಾದ ಪಾರ್ಟಿಗೆ ಹೋಗುವಾಗ ಇಂಥ ಡ್ರೆಸ್ಸಿಂಗ್ ಚೆನ್ನಾಗಿ ಒಪ್ಪುತ್ತೆ. ಹೆಚ್ಚೇನು ಆಭರಣ ಬೇಕಾಗಿಲ್ಲ, ಡ್ರೆಸ್‌ಗೆ ಸರಿಹೊಂದುವ ಕಿವಿಯೋಲೆ ಧರಿಸಿ, ಕೈಗೆ ಒಂದು ವಾಚ್‌ ಕಟ್ಟಿದರೆ ಸಾಕು ಲುಕ್ ಸೂಪರ್ ಆಗಿರುತ್ತೆ.

All Photo courtesy : Megha Shetty Instagram

English summary

Jothe Jotheyali serial actress Megha Shetty Glamourous fashion Statement/look

Megha Shetty Glamourous fashion Statement/look, have a look,
X