Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
20 ಅಡಿಯ ಡ್ರೆಸ್ ಧರಿಸಿ ಕೇನ್ ಚಲನಚಿತ್ರೋತ್ಸವದಲ್ಲಿ ಹವಾ ಎಬ್ಬಿಸಿದ ಐಶ್ವರ್ಯ ರೈ ಬಚ್ಚನ್…

ಕೇನ್ ಫಿಲ್ಮ್ ಫೆಸ್ಟಿವಲ್ ಮತ್ತೆ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐಶ್ವರ್ಯ ರೈ ಬಚ್ಚನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು, ರಂಗುರಂಗಾದ ಮತ್ತು ಎಲ್ಲರನ್ನೂ ಸೆಳೆಯುವಂತಿದ್ದ ಭವ್ಯವಾದ, ವರ್ಣರಂಜಿತವಾದ, ಧಿರಿಸು ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಇದು 17 ನೇ ಬಾರಿ ಐಶ್ವರ್ಯ ರೈ ಬಚ್ಚನ್ ಕೇನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದು, ತನ್ನ ವಯಸ್ಸಿಗೆ ಮೀರಿದ ಆಕರ್ಷಣೆಯನ್ನು ಪಡೆದಿದ್ದಾರೆ. ಈ ಕ್ಯೂಟ್ ತಾಯಿ 20 ಅಡಿಯ ಉದ್ದನೆಯ , ಮೈ ತುಂಬಾ ಎಂಬ್ರಾಯಡರಿ ಇರುವ ಕೇಪ್ ಗೌನ್ ಧರಿಸಿದ್ದಾಳೆ! ಪ್ರಪಂಚದ ಅತ್ಯಂತ ದೊಡ್ಡ ಗೌನ್ ನ್ನು ಈಕೆ ಧರಿಸಿದ್ದು, ಅದೆಷ್ಟು ಸುಲಭವಾಗಿ ಅದನ್ನು ನಿಭಾಯಿಸಿದರು ಎಂದರೆ ಪ್ರತಿದಿನವೂ ಆಕೆ ಆ ಬಟ್ಟೆಯನ್ನು ತೊಡುತ್ತಾಳೆಯೆನೋ ಎಂಬಂತಿತ್ತು.
ಬ್ಯೂಟಿ ಕ್ವೀನ್ ಐಶ್ವರ್ಯಗಾಗಿ ಈ ಅಧ್ಬುತ ಬಟ್ಟೆಯನ್ನು ಡಿಸೈನ್ ಮಾಡಿದ್ದು ಬೇರೆ ಯಾರೂ ಅಲ್ಲ, ಫೇಮಸ್ ಡಿಸೈನರ್ ಆಗಿರುವ ಮೈಕೆಲ್ ಸಿಂಕೋ. ಐಶ್ವರ್ಯ ರೈಗಾಗಿ ಬಟ್ಟೆಯನ್ನು ಮೈಕಲ್ ಸಿಂಕೋ ಡಿಸೈನ್ ಮಾಡಿದ್ದು ಇದೇ ಮೊದಲೇನಲ್ಲ. ಮೈಕಲ್ ಸಿಂಕೋ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿದ ಐಶ್ವರ್ಯ ರೈ ಫೋಟೋಗಳು ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಕಳೆದ ವರ್ಷ ಐಸಿ ಬ್ಲೂ ಬಾಲ್ ಗೌನ್ ನ್ನು ಮೈಕೆಲ್ ಸಿಂಕೋ ತನ್ನ 'Impalpable Dream of Versailles Collection' ಸಂಸ್ಥೆಯಿಂದ ತಯಾರಿಸಿದ್ದ ಮತ್ತು ಅದನ್ನು ಧರಿಸಿದ್ದ ಐಶ್ ಕೇನ್ ಚಿತ್ರೋತ್ಸವದಲ್ಲಿ ಅತೀ ಸುಂದರ ಬಟ್ಟೆ ಧರಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಈ ಬಾರಿಯೂ ಕೂಡ ಕೇನ್ 2018 ಚಿತ್ರೋತ್ಸವದ ಅತ್ಯುತ್ತಮ ಧಿರಿಸು ಧರಿಸಿದವರ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿ ಐಶ್ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ಬಾರಿ ಧರಿಸಿದ ಬಟ್ಟೆಯನ್ನು ತಯಾರಿಸಲು 3000 ಗಂಟೆಗಳ ಕಾಲ ಶ್ರಮ ಪಡಬೇಕಾಯಿತಂತೆ. ನಂಬಲು ಅಸಾಧ್ಯ. ಚಿಟ್ಟೆಯಿಂದ ಪ್ರೇರಿತಗೊಂಡು ರಚಿಸಿರುವ ಈ ಕಲಾತ್ಮಕ ಬಟ್ಟೆಯಲ್ಲಿ ಸ್ವರೋಕ್ಷಿ ಕ್ರಿಸ್ಟಲ್ ಗಳನ್ನು ಬಳಸಲಾಗಿದೆ ಮತ್ತು ಸಿಲ್ಕ್ ಥ್ರೆಡ್ ವರ್ಕ್ ಕೂಡ ಮಾಡಲಾಗಿದೆ.
ಬಟ್ಟೆಗೆ ಮ್ಯಾಚಿಂಗ್ ಆಗುವಂತೆ ಒಂದು ಪರ್ಪಲ್ ಬಣ್ಣದ ಕಿವಿಯೋಲೆಯನ್ನು ಕೂಡ ಧರಿಸಿದ್ದಳು ಐಶ್. ಕೆಂಪು ಬಣ್ಣ ತುಟಿಬಣ್ಣವನ್ನು ಆಯ್ಕೆ ಮಾಡಿದ್ದ ಐಶ್ ಪರ್ಫೆಕ್ಟ್ ಮೇಕಪ್ ಮಾಡಿಕೊಂಡಿದ್ದರು. ಐಶ್ವರ್ಯಳ ಬಟ್ಟೆಯ ಆಯ್ಕೆಯ ವಿಚಾರದಲ್ಲಿ ಕೆಟ್ಟದಾಗಿರುವುದು ಬಹಳ ಕಡಿಮೆ. ಆಕೆ ಯಾವಾಗಲೂ ನೋಡುಗರ ಕಣ್ಣಿಗೆ ಚಿಟ್ಟೆಯಂತೆಯೇ. ನೋಡೋಣ ಮುಂದಿನ ದಿನಗಳಲ್ಲಿ ಐಶ್ವರ್ಯ ಇನ್ನೂ ಹೇಗೆಲ್ಲ ಮಿಂಚುತ್ತಾರೆ ಎನ್ನುವುದನ್ನು.



Click it and Unblock the Notifications
