For Quick Alerts
ALLOW NOTIFICATIONS  
For Daily Alerts

ಐಐಜೆಡಬ್ಲ್ಯೂ: ಸೂಜಿಗಲ್ಲಿನಂತೆ ಸೆಳೆದ ಅಂತಿಮ ದಿನದ ಝಲಕ್!

By manu
|

International Jewellery Week 2015-ಆಭರಣ ಪ್ರದರ್ಶನ ವಾರದ, ಎಲ್ಲರೂ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಅಂತಿಮ ದಿನ ನಿರೀಕ್ಷೆಗೂ ಹೆಚ್ಚಿನ ಸಂಭ್ರಮ ಪಡೆದಿತ್ತು. ಏಕೆಂದರೆ ಆಭರಣ ಲೋಕದ ದಿಗ್ಗಜರಾದ ಬಿರ್ಧಿಚಂದ್ ಘನಶ್ಯಾಮದಾಸ್ ಸಂಸ್ಥೆಯ ಅತ್ಯಂತ ಶ್ರೇಷ್ಠ ಮತ್ತು ಬೆರಗುಗೊಳಿಸುವ ನೂತನ ವಿನ್ಯಾಸದ ಆಭರಣಗಳು ವೇದಿಕೆಯಲ್ಲಿ ಪ್ರಜ್ವಲಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿತು.

ಬಿರ್ಧಿಚಂದ್ ಘನಶ್ಯಾಮದಾಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಶ್ರೇಣಿಯಾದ 'ಅದಾ' ಆಭರಣಗಳು ಮಹಿಳೆಯರ ಕನಸಿನ ಆಯ್ಕೆಯಾಗಿದ್ದು ಅಂತಿಮ ದಿನದ ನಿರೀಕ್ಷೆಯನ್ನು ನಿಜವಾಗಿಸಿದವು. 'ಅದಾ' ಶ್ರೇಣಿಯ ಆಭರಣಗಳು ಓರ್ವ ಮಹಿಳೆಯ ವ್ಯಕ್ತಿತ್ವ ಮತ್ತು ವೈಯಕ್ತಿಕ ಆಯ್ಕೆಯನ್ನು ಅವಲಂಬಿಸಿದ್ದು ಆ ನಿಟ್ಟಿನಲ್ಲಿಯೇ ವಿನ್ಯಾಸಗೊಳಿಸಲಾಗಿದೆ.

ಇತಿಹಾಸದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿಯಾಗಿಸಿದ, ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅಪ್ರತಿಮ ಮಹಿಳೆಯರ ಹೆಸರನ್ನು ಈ ಶ್ರೇಣಿಯ ವಿವಿಧ ವಿನ್ಯಾಸಗಳಿಗೆ ನೀಡಲಾಗಿದ್ದು ಆಯಾ ಮಹಿಳೆಯ ವ್ಯಕ್ತಿತ್ವವನ್ನು ಹೋಲುವವರು ಇಚ್ಚಿಸುವಂತೆ ವಿನ್ಯಾಸಗೊಳಿಸಲಾಗಿರುವುದು ವಿಶೇಷವಾಗಿದೆ. ಸಾಕ್ಷಾತ್ ದೇವತೆಗಳಂತೆಯೇ ಕಂಗೊಳಿಸಿದ ಸೆಲೆಬ್ರಿಟಿಗಳು!

ಅಂತಿಮ ದಿನವಾದುದರಿಂದ ನಿರೀಕ್ಷೆಯಂತೆಯೇ ಹಲವಾರು ಗಣ್ಯರು ಮತ್ತು ಚಿತ್ರನಟನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರತಿವರ್ಷವೂ ಬಿರ್ಧಿಚಂದ್ ಘನಶ್ಯಾಮದಾಸ್ ಸಂಸ್ಥೆಯ ನೂತನ ವಿನ್ಯಾಸಗಳನ್ನು ಈ ಕಾರ್ಯಕ್ರಮದ ಅಂತಿಮ ದಿನದಲ್ಲಿ ಪ್ರದರ್ಶಿಸುವುದು ಮತ್ತು ಈ ವಿನ್ಯಾಸಗಳನ್ನು ಖ್ಯಾತ ಚಿತ್ರತಾರೆಯರು ಬಿಡುಗಡೆಗೊಳಿಸುವುದೂ ಒಂದು ಸಂಪ್ರದಾಯವೆಂಬಂತೆ ನಡೆದು ಬರುತ್ತಿದೆ.

ಇಂದು ಖ್ಯಾತ ನಟಿಯರಾದ ಪ್ರೀತಿ ಜಿಂಟಾ ಮತ್ತು 2000 ಇಸವಿಯ ಭಾರತ ಸುಂದರಿ ಮತ್ತು ಮಿಸ್ ಏಶಿಯಾ ಪೆಸಿಫಿಕ್ ಸ್ಪರ್ಧೆಯ ವಿಜೇತೆ ದಿಯಾಮಿರ್ಜಾ ಉಪಸ್ಥಿತರಿದ್ದು ಹಲವು ಆಭರಣಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸುವ ಮೂಲಕ ಹೃನ್ಮನಗಳನ್ನು ಸೂರೆಗೊಂಡರು. 'ಅದಾ' ಶ್ರೇಣಿಯು ರೂಪಕವಾಗಿ ಬಳಸಿರುವ ಇತಿಹಾಸದ ಖ್ಯಾತ ಮಹಿಳೆಯರತ್ತ ಒಂದು ಕಿರುನೋಟ ಇಲ್ಲಿದೆ...

ಉಮ್ರಾವೋ ಜಾನ್

ಉಮ್ರಾವೋ ಜಾನ್

ಕಾರ್ಯಕ್ರಮದ ಪ್ರಾರಂಭದಲ್ಲಿ ಇತಿಹಾಸ ಕಂಡ ಶ್ರೇಷ್ಠ ಕವಿಯಿತ್ರಿ ಮತ್ತು ನರ್ತಕಿ ಉಮ್ರಾವೋ ಜಾನ್ ರನ್ನು ಆಧರಿಸಿ ವಿನ್ಯಾಸಗೊಳಿಸಲಾದ ಆಭರಣಗಳನ್ನು ಪ್ರದರ್ಶಿಸಲಾಯಿತು.

ಮಹಾರಾಣಿ ಗಾಯತ್ರಿ ದೇವಿ

ಮಹಾರಾಣಿ ಗಾಯತ್ರಿ ದೇವಿ

1940 ರಿಂದ 1949ರ ವರೆಗೆ ರಾಜಸ್ಥಾನದ ಜೈಪುರವನ್ನು ಆಳಿದ ಮಹಾರಾಣಿ ಗಾಯತ್ರಿ ದೇವಿ ತನ್ನ ಅಪ್ರತಿಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ವ್ಯಕ್ತಿತ್ವಕ್ಕೆ ಪೂರಕವಾಗುವಂತೆ ಮುತ್ತುಗಳನ್ನು ಅಗಲವಾಗಿ ಹರಡಿರುವಂತೆ ರಚಿಸಿದ ವಿನ್ಯಾಸ ಅದ್ಭುತವಾಗಿದೆ.

ಹೈದರಾಬಾದ್‌ನ ರಾಣಿ ನೀಲೋಫರ್

ಹೈದರಾಬಾದ್‌ನ ರಾಣಿ ನೀಲೋಫರ್

ಹೈದರಾಬಾದ್‌ನ ಕೋಹಿನೂರ್ ಎಂದೂ ಕರೆಯಲ್ಪಡುವ ಈ ವಿನ್ಯಾಸ ಅಂದಿನ ರಾಣಿಯ ಅಭಿವ್ಯಕ್ತಿಯನ್ನು ಚಿರಂತನವಾಗಿಸಿದೆ. ಈ ವಿನ್ಯಾಸವನ್ನು ಧರಿಸಿ ವೇದಿಕೆಗೆ ಆಗಮಿಸಿದ ದಿಯಾ ಮಿರ್ಜಾ ಎಲ್ಲರ ಗಮನ ಈ ಆಭರಣಗಳತ್ತ ಸೆಳೆಯಲು ಸಫಲರಾದರು.

ಜೋಧಾಬಾಯಿ

ಜೋಧಾಬಾಯಿ

ಅಕ್ಬರನನ್ನು ಆಕರ್ಷಿಸಿದ ಜೋಧಾಬಾಯಿಯ ಸೌಂದರ್ಯವನ್ನು ಮತ್ತೊಮ್ಮೆ ನೆನಪಿಸಲು ನೆರವಾಗುವ ಈ ಆಭರಣಗಳನ್ನು ತೊಟ್ಟ ಪ್ರೀತಿ ಜಿಂಟಾ ಸಹಾ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಬ್ಬರದ ಕರತಾಡನಗಳನ್ನು ಪಡೆದರು.

English summary

IIJW Finale: Celebrities Wrap For Birdhichand Ghanshyamdas Jewellers

Birdhichand Ghanshyamdas Jewellers dropped the curtains after their breathtaking show at the finale of India International Jewellery Week 2015. The famous Jewellers concluded the night on a grand note with their alluring collection which left us breathless. Birdhichand Ghanshyamdas Jewellers presented their new collection, 'Adaa' which is an ode to women at IIJW 2015 finale.
Story first published: Friday, August 7, 2015, 10:26 [IST]
X
Desktop Bottom Promotion