For Quick Alerts
ALLOW NOTIFICATIONS  
For Daily Alerts

ತ್ವಚೆಯ ಉಪವಾಸ ಎಂದರೇನು? ಮಾಡುವುದು ಹೇಗೆ ಮತ್ತು ಪ್ರಯೋಜನಗಳೇನು?

|

ಪ್ರತಿಯೊಬ್ಬರು ಒಂದಿಲ್ಲೊಂದು ರೀತಿಯಲ್ಲಿ ನಿತ್ಯ ತಮ್ಮ ತ್ವಚೆಯ ಆರೈಕೆ ಅಥವಾ ಕಾಳಜಿಯನ್ನು ಮಾಡುತ್ತಾರೆ. ಹೀಗೆ ಹಲವು ಕ್ರಮಗಳನ್ನು ಅನುಸರಿಸಿ ಅಂತಿಮವಾಗಿ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು, ತ್ವಚೆಗೆ ಹೊಂದುವಂಥ ಆರೈಕೆಯನ್ನು ನಿರಂತರವಾಗಿ ಅನುಸರಿಸುತ್ತಾರೆ.

Skin Fasting

ಆದರೆ "ತ್ವಚೆಯ ಉಪವಾಸ'' ಎಂಬ ಅಪರೂಪದ ಆರೈಕೆ ಬಗ್ಗೆ ಕೇಳಿದ್ದೀರಾ. ಏನಿದು ತ್ವಚೆಯ ಉಪವಾಸ. ಇದೇನಾದರೂ ನಮ್ಮ ಕಲ್ಪನೆಯಂತೆ ತ್ವಚೆಗೆ ಮ್ಯಾಜಿಕ್ ಮಾಡಬಹುದೇ. ಇದನ್ನು ಹೇಗೆ ಅನುಸರಿಸುವುದು?, ನೀವು ಸಹ ಇದನ್ನು ಪ್ರಯತ್ನಿಸಲು ಬಯಸಿದ್ದೀರಾ? ಹಾಗಿದ್ದರೆ ಈ ಲೇಖನವನ್ನು ಪೂರ್ಣ ಓದಿ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ತ್ವಚೆಯ ಉಪವಾಸ ಎಂದರೇನು?

ತ್ವಚೆಯ ಉಪವಾಸ ಎಂದರೇನು?

ದಿನನಿತ್ಯ ನಮ್ಮ ತ್ವಚೆಯ ಕಾಳಜಿ ಮಾಡಲು ನಾವು ಬಳಸುವ ಎಲ್ಲಾ ವಿಧದ ಕ್ರೀಂ ಅಥವಾ ಇತರ ಉತ್ಪನ್ನಗಳಿಂದ ನಮ್ಮ ತ್ವಚೆಯನ್ನು ದೂರವಿರಿಸಿ, ಅದಕ್ಕೂ ಉಸಿರಾಡಲು ಅವಕಾಶ ಮಾಡಿಕೊಡುವುದೇ ತ್ವಚೆಯ ಉಪವಾಸ.

ಕಡಿಮೆಯೇ ಹೆಚ್ಚು ಎಂಬ ಜಪಾನ್ ಪರಿಕಲ್ಪನೆ

ಕಡಿಮೆಯೇ ಹೆಚ್ಚು ಎಂಬ ಜಪಾನ್ ಪರಿಕಲ್ಪನೆ

ತ್ವಚೆಯ ಉಪವಾಸ ಎಂಬ ಕಲ್ಪನೆ ಮೊದಲು ಆರಂಭವಾಗಿದ್ದೇ ಜಪಾನ್ ದೇಶದಲ್ಲಿ. ಇಲ್ಲಿನ ಮಿರೈ ಕ್ಲಿನಿಕಲ್ ಎಂಬ ಬ್ಯೂಟಿ ಪ್ರಾಡಕ್ಟ್ ಕಂಪನಿ ಈ ಹೊಸ ಪರಿಕಲ್ಪನೆಯನ್ನು ಆರಂಭಿಸಿತು. ಈ ಮೂಲಕ ಯಾವುದೇ ಖರ್ಚಿಲ್ಲದೆ ಅಪರೂಪದ ತ್ವಚೆಯ ಕಾಳಜಿಯನ್ನು ಹೇಗೆ ಮಾಡಿಕೊಳ್ಳಬಹುದು ಎಂದು ಹೇಳಿಕೊಟ್ಟಿದೆ. ಇವರ ಪ್ರಕಾರ "ಕಡಿಮೆಯೇ ಹೆಚ್ಚು'' ಎಂಬ ಧ್ಯೇಯದಡಿ ತ್ವಚೆಯ ಉಪವಾಸ ಎಂಬ ಪರಿಕಲ್ಪನೆಯನ್ನು ಪ್ರಖ್ಯಾತಿಗೊಳಿಸಲಾಗುತ್ತಿದೆ.

ತ್ವಚೆಯ ಉಪವಾಸ ಮಾಡುವುದು ಹೇಗೆ?

ತ್ವಚೆಯ ಉಪವಾಸ ಮಾಡುವುದು ಹೇಗೆ?

ಈ ಕ್ರಮವನ್ನು ಅನುಸರಿಸುವವರು ನಿತ್ಯ ನಿಮ್ಮ ತ್ವಚೆಗೆ ಬಳಸುತ್ತಿದ್ದ ಕ್ರೀಮ್ ಗಳು, ಸೋಪು, ಮ್ಯಾಶ್ಚಿರೈಸರ್, ಸಿರಮ್ ಯಾವುದನ್ನು ಬಳಸದೇ, ಕೇವಲ ನೀರಿನಲ್ಲಿ ತೊಳೆದು ತ್ವಚೆಯನ್ನು ರಾಸಾಯನಿಕ ಮುಕ್ತವಾಗಿ ಉಸಿರಾಡಲು ಅವಕಾಶ ಮಾಡಿಕೊಡಬೇಕು.

ಈ ಮೂಲಕ ತ್ವಚೆಯು ಯಾವುದೇ ಬಹಿರಂಗ ಪ್ರಾಡಕ್ಟ್ ಇಲ್ಲದೆ ಅಂತರ್ಮುಖಿಯಾಗಿ ಸ್ವತಃ ಕಾಳಜಿ ವಹಿಸಿಕೊಳ್ಳುತ್ತದೆ. ಇದನ್ನು ಕನಿಷ್ಠ 2ರಿಂದ 3 ದಿನದಿಂದ ಒಂದು ವಾರದವರೆಗೆ ಅನುಸರಿಸಬಹುದು.

ತ್ವಚೆಯ ಉಪವಾಸ ಪ್ರಯೋಜನಕಾರಿಯೇ?

ತ್ವಚೆಯ ಉಪವಾಸ ಪ್ರಯೋಜನಕಾರಿಯೇ?

ಕೇಳಲು ಬಹಳ ವಿಶಿಷ್ಟ ಹಾಗೂ ಆಕರ್ಷಕ ಎನಿಸಿದರೂ ಇದನ್ನು ಪ್ರಾಯೋಗಿಕವಾಗಿ ಅನುಸರಿಸಲು ತುಸು ಕಷ್ಟಕರ. ಇದನ್ನು ಮೊದಲ ಬಾರಿಗೆ ಕೇಳಿದಾಗ ನಾವು ಒಮ್ಮೆ ಪ್ರಯತ್ನಿಸೋಣ ಎನಿಸುತ್ತದೆ, ಆದರೆ ಹಲವು ಸಮಸ್ಯೆಗಳಿಂದಾಗಿ ಇದನ್ನು ಪಾಲಿಸುವುದು ಕಷ್ಟಸಾಧ್ಯವಾಗಿದೆ.

ತ್ವಚೆಯ ಉಪವಾಸದ ದುಷ್ಪರಿಣಾಮಗಳು?

ತ್ವಚೆಯ ಉಪವಾಸದ ದುಷ್ಪರಿಣಾಮಗಳು?

ತ್ವಚೆಯ ಉಪವಾಸ ಪಾಲನೆಯಿಂದ ತ್ವಚೆಗೆ ಸಮಸ್ಯೆ ಆಗಬಹುದು. ಪರಿಸರ ಮಾಲಿನ್ಯ, ನೇರ ಸೂರ್ಯನ ಕಿರಣಗಳಿಂದ, ತ್ವಚೆ ಒಣಗುವುದರಿಂದ, ಸೂಕ್ಷ್ಮ ತ್ವಚೆ ಉಳ್ಳವರ ತ್ವಚೆಯ ಮೇಲೆ ಇದು ದುಷ್ಪರಿಣಾಮ ಬೀರಬಹುದು. ನಿತ್ಯ ನಾವು ಬಳಸುವ ಕ್ರೀಮ್ ಗಳು ನಮ್ಮ ತ್ವಚೆಯನ್ನು ಕಾಳಜಿ ಮಾಡುತ್ತಿರುತ್ತದೆ, ಇದ್ದಕ್ಕಿಂದ್ದಂತೆ ಬಳಕೆ ನಿಲ್ಲಿಸುವುದು ಸಹ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು.

ತ್ವಚೆಯ ಉಪವಾಸ ಯಾವಾಗ ಸಹಕಾರಿ?

ತ್ವಚೆಯ ಉಪವಾಸ ಯಾವಾಗ ಸಹಕಾರಿ?

ತ್ಚಚೆಯ ಉಪವಾಸದಿಂದ ಹಲವು ದುಷ್ಪರಿಣಾಮಗಳು ಇರುವಂತೆ, ತ್ವಚೆಗೆ ಸಹಕಾರಿಯಾಗುವಂಥ ಗುಣಗಳನ್ನು ಸಹ ಈ ಪರಿಕಲ್ಪನೆ ಹೊಂದಿದೆ. ಹಲವು ಪ್ರಾಡಕ್ಟ್ ಗಳನ್ನು ಬಳಸಿ ನಿಮ್ಮ ತ್ವಚೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದ್ದರೆ, ಈ ವೇಳೆ ನೀವು ಈ ಕ್ರಮವನ್ನು ಅನುಸರಿಸಿ ಯಾವ ಕ್ರೀಂ ನಿಂದ ಸಮಸ್ಯೆ ಉಂಟಾಗುತ್ತಿದೆ ಹಾಗೂ ಯಾವ ಕ್ರೀಂ ನಿಮ್ಮ ತ್ವಚೆಗೆ ಒಪ್ಪುತ್ತದೆ ಎಂಬುದನ್ನು ತಿಳಿಯಬಹುದು. ಹೊಸ ಪ್ರಾಡಕ್ಟ್ ಬಳಕೆ ವೇಳೆಯೂ ನೀವುನೀ ಕ್ರಮವನ್ನು ಅನುಸರಿಸಬಹುದು.

ಯಾವಾಗ ಇದನ್ನು ಅನುಸರಿಸಲೇಬಾರದು?

ಯಾವಾಗ ಇದನ್ನು ಅನುಸರಿಸಲೇಬಾರದು?

ಮೇಲಿನ ಎಲ್ಲ ಸಲಹೆ ಸೂಚನೆಗಳನ್ನು ಹೊರತುಪಡಿಸಿಯೂ ನೀವು ಈ ತ್ವಚೆಯ ಉಪವಾಸವನ್ನು ಅನುಸರಿಸಲು ಇಚ್ಚಿಸುತ್ತೀರಾ. ಆದರೆ ಎಚ್ಚರ ನೀವು ಯಾವುದೇ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ತ್ವಚೆಗೆ ವಿಶೇಷ ಚಿಕಿತ್ಸೆ ಪಡೆಯುತ್ತಿದ್ದರೆ, ವೈದ್ಯರು ನಿಗದಿತ ಕ್ರೀಂಗಳನ್ನು ಬಳಸಲು ಸೂಚಿಸಿದ್ದರೆ ಈ ಕ್ರಮ ಅನುಸಿರುವುದು ಸೂಕ್ತವಲ್ಲ. ಇದನ್ನೂ ಮೀರಿ ಉಪವಾಸ ಮಾಡಿದರೆ ತ್ವಚೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಬಹುದು.

ತ್ವಚೆಯ ಉಪವಾಸಕ್ಕೆ ಪರ್ಯಾಯವೇನು?

ತ್ವಚೆಯ ಉಪವಾಸಕ್ಕೆ ಪರ್ಯಾಯವೇನು?

ತ್ವಚೆಯ ಉಪವಾಸದ ಪರ್ಯಾಯ ಹಲವು ಕ್ರಮಗಳನ್ನು ಸಹ ನಾವು ಅನುಸರಿಸಬಹುದು. ನಿತ್ಯ ತ್ವಚೆಗೆ ಬಳಸುವ ಕ್ರೀಂ ಗಳ ಬಳಕೆ ಸಹ ಅತಿಯಾಗದೇ, ನಿಯಮಿತವಾಗಿರಲಿ.

ಅತಿಯಾದ ಮೇಕಪ್ ಸಹ ತ್ವಚೆಯ ರಂಧ್ರಗಳನ್ನು ಮುಚ್ಚಿ ಹಲವು ಸಮಸ್ಯೆಗಳಿಗೆ ಆಹ್ವಾನ ನೀಡಬಹುದು. ತ್ವಚೆಯು ವಯಸ್ಸಾದಂತೆ ಅದರ ವಿನ್ಯಾಸ ಸಹ ಬದಲಾಗುತ್ತದೆ ಮತ್ತು ಹಾನಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ, ನಿಮ್ಮ ಸೌಂದರ್ಯ ಇಮ್ಮಡಿಗೊಳಿಸುವ ತ್ವಚೆಯ ರಕ್ಷಣೆಗೆ ನಿತ್ಯ ಅದನ್ನು ಕಾಳಜಿ ಮಾಡುವ ನಿಯಮಿತ ದಿನಚರಿ ಅಗತ್ಯ. ಆದರೆ ಅದಕ್ಕೂ ಮುನ್ನ ದೀರ್ಘಾವಧಿಯಲ್ಲಿ ನಿಮ್ಮ ತ್ವಚೆಗೆ ಹಾನಿಯುಂಟಾಗಬಲ್ಲ, ಬದಲಾಯಿಸಲಾಗದಂಥ ಸಮಸ್ಯೆ ಉಂಟು ಮಾಡುವ ಯಾವುದೇ ಉತ್ಪನ್ನವನ್ನು ನೀವು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

English summary

What Is Skin Fasting: Uses, Effects And Does Your Skin Need It?

A skincare routine is specific to each individual. Through various hits and misses, we develop a skincare routine that works for our skin and helps to maintain healthy skin. So, what about this insane concept of 'skin fasting' that keeps popping up in our social media feeds and is supposed to work like magic to give you the skin of your dreams?
Story first published: Thursday, September 5, 2019, 14:54 [IST]
X
Desktop Bottom Promotion