For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಐಬ್ರೋ ಮಾಡಿಕೊಳ್ಳುವಾಗ ಈ ಬಗ್ಗೆ ಇರಲಿ ಎಚ್ಚರ

|

ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಯಾವುದೇ ಕ್ರಮಗಳು ಎಂದಿಗೂ ಮುಂದೂಡಬಾರದ ಅಗತ್ಯತೆಗಳಾಗಿವೆ. ಆದರೆ ಇಂದಿನ ಸಾಂಕ್ರಾಮಿಕ ದಿನಗಳಲ್ಲಿ ನಿಮ್ಮ ನಿತ್ಯದ ಸೌಂದರ್ಯ ಸೇವೆಗಳನ್ನು ನೀಡುವ ಮಳಿಗೆಗಳು ಮುಚ್ಚಿರುವ ಕಾರಣ ಇವುಗಳನ್ನು ಪಡೆದುಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ವಿಶೇಷವಾಗಿ ಹುಬ್ಬುಗಳ ಕೂದಲುಗಳನ್ನು ಅಚ್ಚುಕಟ್ಟಾಗಿರಿಸದಿದ್ದರೆ ಇದು ಸುಲಭವಾಗಿ ಇತರರ ಗಮನಕ್ಕೆ ಬರುತ್ತದೆ.

 Eyebrows At Home

ಕಾಲು ಮತ್ತು ಇತರ ಭಾಗಗಳ ವ್ಯಾಕ್ಸಿಂಗ್ ಅನ್ನು ಮುಂದೂಡಬಹುದು, ಆದರೆ ಹುಬ್ಬುಗಳು? ಇವು ಮಾಸ್ಕ್ ನಿಂದಲೂ ಮುಚ್ಚದೇ ಇರುವ ಕಾರಣ ಇವುಗಳಿಗೆ ನೀಡಬೇಕಾದ ಆರೈಕೆಯನ್ನು ನೀಡಲೇಬೇಕಾಗುತ್ತದೆ. ಅನಿವಾರ್ಯವಾಗಿ ನೀವೇ ಸ್ವತಃ ಮನೆಯಲ್ಲಿಯೇ ಈ ಸೇವೆಯನ್ನು ನೀಡಿಕೊಳ್ಳಬೇಕಾದರೆ ನೀವು ಕೆಲವು ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕಾಗುತ್ತದೆ.

ನಿಮ್ಮ ಹುಬ್ಬಿನ ಕೂದಲುಗಳನ್ನು ಕತ್ತರಿಸಿಕೊಳ್ಳುವುದು ತಲೆ ಕೂದಲನ್ನು ಕತ್ತರಿಸುವುದಕ್ಕಿಂತ ಭಿನ್ನವಾಗಿದೆ, ಮನೆಯಲ್ಲಿ ನಿಮ್ಮ ಹುಬ್ಬುಗಳ ಆರೈಕೆಗೆ ಅತ್ಯಂತ ನಿಖರತೆಯ ಅಗತ್ಯವಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಸೌಂದರ್ಯ ಮಳಿಗೆಯಲ್ಲಿ ಪರಿಣಿತರ ಸೇವೆಯಷ್ಟು ಚೆನ್ನಾಗಿ ಬರದೇ ಇದ್ದರೂ ಸರಿ, ಅಗತ್ಯವಿದ್ದಷ್ಟು ಮಟ್ಟಿಗೆ ನೀವು ಸ್ವತಃ ಈ ಆರೈಕೆಯನ್ನು ಪಡೆದುಕೊಳ್ಳಬಹುದು.

ನಿಮ್ಮ ಹುಬ್ಬುಗಳ ಆರೈಕೆಯನ್ನು ಮನೆಯಲ್ಲಿಯೇ ಮಾಡಲು ನೀವು ಯೋಜಿಸುತ್ತಿದ್ದರೆ, ಈ ಸಲಹೆಗಳನ್ನು ತಿಳಿದುಕೊಳ್ಳುವುದು ನಿಮಗೆ ಅಗತ್ಯವಾಗಿದೆ:

ಸೂಕ್ಷ್ಮವಾದ ಚಿಮಟಗಳೊಂದಿಗೆ (Tweezers) ಪ್ರಾರಂಭಿಸಿ

ಸೂಕ್ಷ್ಮವಾದ ಚಿಮಟಗಳೊಂದಿಗೆ (Tweezers) ಪ್ರಾರಂಭಿಸಿ

ಒಂದು ವೇಳೆ ನಿಮ್ಮ ನಿಯಮಿತ ಹುಬ್ಬಿನ ಆರೈಕೆಯ ದಿನ ಈಗಾಗಲೇ ಕಳೆದು ಹೋಗಿದ್ದರೆ ನಿಮ್ಮ ಹುಬ್ಬುಗಳು ಬಹುತೇಕ ಪೊದೆಯಂತೆ ಬೆಳೆಯತೊಡಗಿರುವುದನ್ನು ನೀವು ಗಮನಿಸಬಹುದು. ಇವನ್ನು ಸರಿಪಡಿಸಲು ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ನಿಮ್ಮ ಹುಬ್ಬುಗಳನ್ನು ಪರಿಪೂರ್ಣತೆಗೆ ಅಲಂಕರಿಸಲು ಒಂದು ಜೋಡಿ ಚಿಮಟಗಳು ಅಥವಾ ಟ್ವೀಜರ್ ಸಾಕಾಗುತ್ತದೆ. ಸಾಕು. ನೀವು ಬಳಸುವ ಟ್ವೀಜರ್ ಹೊಸದಾಗಿದೆ ಅಥವಾ ಸಾಕಷ್ಟು ಹರಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊಂಡಾದ ಟ್ವೀಜರ್ ನಿಂದ ಕೂದಲು ಸರಿಯಾಗಿ ಕತ್ತರಿಸದೇ ಎಳೆದಾಗ ನಿಮ್ಮ ಕಣ್ಣಿನ ಮೇಲ್ಭಾಗದ ಸೂಕ್ಷ್ಮ ಚರ್ಮಕ್ಕೆ ಹಾನಿಯುಂಟಾಗಬಹುದು.

ಪರಿಪೂರ್ಣತೆಗಾಗಿ ಮೊದಲು ಹುಬ್ಬುಗಳನ್ನು ಬಾಚಿಕೊಳ್ಳಿ

ಪರಿಪೂರ್ಣತೆಗಾಗಿ ಮೊದಲು ಹುಬ್ಬುಗಳನ್ನು ಬಾಚಿಕೊಳ್ಳಿ

ಹುಬ್ಬುಗಳಿಗೆ ಯಾವುದೇ ಆರೈಕೆ ನೀಡುವ ಮುನ್ನ ಕೂದಲುಗಳನ್ನು ಅವುಗಳ ಬೆಳವಣಿಗೆಯ ದಿಕ್ಕಿನತ್ತಲೇ ಸಾಗುವಂತೆ ಹುಬ್ಬಿನ ಬಾಚಣಿಗೆ (eyebrow brush) ಬಳಸಿ ಚೆನ್ನಾಗಿ ಬಾಚಿಕೊಳ್ಳಿ. ಈ ಮೂಲಕ ಹುಬ್ಬಿನ ಕೂದಲುಗಳು ಮೃದುವಾಗಿದ್ದು ಸ್ವಾಭಾವಿಕ ದಿಕ್ಕಿನತ್ತ ಚಾಚಿಕೊಂಡಿರುತ್ತವೆ. ಈಗ ನಿಮ್ಮ ಕಣ್ಣುಗಳಿಗೆ ಹುಬ್ಬಿನ ಕೂದಲುಗಳು ಎಷ್ಟು ಉದ್ದಕ್ಕೆ ಬೇಕು, ಎಲ್ಲಿ ಕತ್ತರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಗುರುತು ಹಾಕಿಕೊಳ್ಳಬಹುದು.

ಥ್ರೆಡಿಂಗ್ ಸುರಕ್ಷಿತ ವಿಧಾನವಾಗಿದೆ

ಥ್ರೆಡಿಂಗ್ ಸುರಕ್ಷಿತ ವಿಧಾನವಾಗಿದೆ

ಸರಳವಾದ ನೂಲಿನಿಂದ ಅನಗತ್ಯ ಕೂದಲುಗಳನ್ನು ನಿವಾರಿಸುವ ವಿಧಾನ ಸಾಕಷ್ಟು ಜನಪ್ರಿಯವಾಗಿದೆ. ಇದು ಹೆಚ್ಚುವರಿ ಕೂದಲನ್ನು ಹುಬ್ಬಿನ ಚರ್ಮಕ್ಕೆ ಯಾವುದೇ ಹಾನಿ ಎಸಗದೇ ನಿರ್ವಹಿಸುತ್ತದೆ. ಥ್ರೆಡಿಂಗ್ ನಿಂದ ಎರಡೂ ಹುಬ್ಬುಗಳಿಗೆ ಏಕಸಮಾನ ಆಕಾರವನ್ನು ನೀಡಬಹುದು. ಆದರೆ ಈ ಕ್ರಿಯೆಗೆ ಕೊಂಚ ತರಬೇತಿ ಹಾಗೂ ವೃತ್ತಿಪರತೆಯ ಅಗತ್ಯವಿರುವ ಕಾರಣ ಈ ಕಾರ್ಯ ಎಲ್ಲರಿಂದಲೂ ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದರೆ ಇದೇನೂ ಕಲಿಯಸಾಧ್ಯವಾದ ರಾಕೆಟ್ ವಿಜ್ಞಾನವಂತೂ ಅಲ್ಲ. ಇದನ್ನು ಇಂದು ಯೂಟ್ಯೂಬ್ ಗಳಲ್ಲಿ ಲಭ್ಯವಿರುವ ಸುಲಭ ವೀಡಿಯೋಗಳನ್ನು ನೋಡಿಯೇ ಕಲಿತುಕೊಳ್ಳಬಹುದು. ಮೊದಲು ಕೈ ಅಥವಾ ಇತರ ಭಾಗದ ಮೇಲೆ ಥ್ರೆಡಿಂಗ್ ವಿದ್ಯೆಯನ್ನು ಬಳಸಿ ಕೊಂಚ ಆತ್ಮವಿಶ್ವಾಸ ಪಡೆದ ಬಳಿಕವೇ ಹುಬ್ಬುಗಳನ್ನು ನೀವಾಗಿಯೇ ಸರಿಪಡಿಸಿಕೊಳ್ಳಬಹುದು.

ಹುಬ್ಬುಗಳಿಗೆ ಎಂದಿಗೂ ವ್ಯಾಕ್ಸಿಂಗ್ ಮಾಡದಿರಿ

ಹುಬ್ಬುಗಳಿಗೆ ಎಂದಿಗೂ ವ್ಯಾಕ್ಸಿಂಗ್ ಮಾಡದಿರಿ

ಕೂದಲುಗಳನ್ನು ನಿವಾರಿಸುವ ಕೊಂಚ ನೋವಿನಿಂದ ಕೂಡಿದ ವಿಧಾನವೆಂದರೆ ವ್ಯಾಕ್ಸಿಂಗ್. ಇದು ಅತಿ ಶೀಘ್ರವಾಗಿ ಆಗುತ್ತದೆ ಎಂಬ ಒಂದೇ ಕಾರಣಕ್ಕೆ ಹಲವು ಮಹಿಳೆಯರು ಹಾಗೂ ಹಲವು ಸೌಂದರ್ಯ ಮಳಿಗೆಗಳ ವೃತ್ತಿಪರರು ಈ ವಿಧಾನವನ್ನು ಅಪೇಕ್ಷಿಸುತ್ತಾರೆ. ಆದರೆ ಈ ವಿಧಾನ ಅನುಸರಿಸಲು ಅತ್ಯಂತ ನೈಪುಣ್ಯದ ಅಗತ್ಯವಿದ್ದು ಕೇವಲ ನುರಿತ ವೃತ್ತಿಪರರಿಂದ ಮಾತ್ರವೇ ಸುರಕ್ಷಿತವಾದ ಸೇವೆ ಲಭ್ಯವಿದೆ. ಹಾಗಾಗಿ, ಮನೆಯಲ್ಲಿ ನೀವು ಹುಬ್ಬುಗಳಿಗೆ ಆರೈಕೆ ಮಾಡಿಕೊಳ್ಳುವುದಿದ್ದರೆ ವ್ಯಾಕ್ಸಿಂಗ್ ಮಾತ್ರ ನೀವೆಂದೂ ಸ್ವತಃ ಅನುಸರಿಸಕೂಡದು! ನಿಮಗೆ ಟ್ವೀಜರ್ ಮತ್ತು ಥ್ರೆಡಿಂದ್ ವಿಧಾನಗಳೇ ಸೂಕ್ತ.

ಕೊನೆಯಲ್ಲಿ ಚಿಕ್ಕ ತುದಿಗಳನ್ನು ಕತ್ತರಿಸಿ

ಕೊನೆಯಲ್ಲಿ ಚಿಕ್ಕ ತುದಿಗಳನ್ನು ಕತ್ತರಿಸಿ

ಹುಬ್ಬುಗಳ ಕೂದಲುಗಳನ್ನು ಕತ್ತರಿಸಿಕೊಳ್ಳುವಾಗ ನೀವು ನಿಗದಿಪಡಿಸಿದ್ದ ಅಂಚಿನಿಂದ ಒಂದೆರಡು ನೂಲಿನಷ್ಟು ಹೆಚ್ಚೇ ಇರುವಂತೆ ಕತ್ತರಿಸಿಕೊಳ್ಳಿ. ಮೊದಲಿಗೆ ಎಲ್ಲಾ ಬದಿಗಳಲ್ಲಿ ಕೊಂಚ ಗಡಸಾಗಿ ಕತ್ತರಿಸಿಕೊಂಡ ಬಳಿಕ ನೀವು ಕೊಂಚ ಹೆಚ್ಚು ಸಮಯ ನೀಡಿ ಈ ಅಂಚುಗಳನ್ನು ಅತಿ ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಾ ಕೂದಲು ಅಂಚುಗಳಿಗೆ ಸರಿಯಾಗಿ ಇರುವಂತೆ ಮತ್ತು ಒಂದೇ ರೇಖೆಯಲ್ಲಿರುವಂತೆ ಕತ್ತರಿಸಿಕೊಳ್ಳಿ. ನೀವು ಸೇವೆ ಪಡೆಯುತ್ತಿದ್ದ ಮಳಿಗೆಯಲ್ಲಿ ವೃತ್ತಿಪರ ಉದ್ಯೋಗಿ ಹೇಗೆ ಕತ್ತರಿಸುತ್ತಿದ್ದರು ಎಂಬುದನ್ನು ಜ್ಞಾಪಿಸಿಕೊಂಡು ಹಾಗೇ ಇರುವಂತೆ ಯತ್ನಿಸಿ. ಧಾವಂತ ಬೇಡ, ಅತಿ ಸಾವಕಾಶವಾಗಿ ಆಗಲಿ. ನಿಜವಾಗಿ ಹೇಳಬೇಕೆಂದರೆ ಈ ಸೂಕ್ಷವಾದ ಕೆಲಸವೇ ಹುಬ್ಬುಗಳಿಗೆ ನಿಜವಾದ ಸೌಂದರ್ಯ ನೀಡುತ್ತದೆ.

ಹುಬ್ಬುಗಳನ್ನು ಅತಿಯಾಗಿ ಸಪೂರವಾಗಿಸದಿರಿ

ಹುಬ್ಬುಗಳನ್ನು ಅತಿಯಾಗಿ ಸಪೂರವಾಗಿಸದಿರಿ

ಅತಿ ಸಪೂರವಾದ ಹುಬ್ಬುಗಳು ಎಂಭತ್ತರ ದಶಕದ ಫ್ಯಾಶನ್ ಆಗಿತ್ತು, ಈಗ ನೈಸರ್ಗಿಕ ದಪ್ಪನೆಯ ಹುಬ್ಬುಗಳ ಕಾಲ. ಹಾಗಾಗಿ, ಎಂದಿಗೂ ನಿಮ್ಮ ಹುಬ್ಬುಗಳನ್ನು ಅತಿಯಾಗಿ ಸಪೂರವಾಗಿಸಲು ಹೋಗದಿರಿ. ಈಗ ನಿಮ್ಮ ಸಾಮಾನ್ಯ ಹುಬ್ಬಿನ ದಪ್ಪಕ್ಕಿಂತಲೂ ಹೊರಗಿಣುಕುತ್ತಿರುವ ಕೂದಲುಗಳ ತುದಿಗಳನ್ನು ಕತ್ತರಿಸಿ ಒಪ್ಪವಾಗಿಸಿದರೆ ಬೇಕಾದಷ್ಟಾಯಿತು. ಕೆಲವೊಮ್ಮೆ ಎರಡೂ ಹುಬ್ಬುಗಳನ್ನು ಏಕಪ್ರಕಾರವಾಗಿ ಇರುವಂತೆ ಮಾಡುವ ಧಾವಂತದಲ್ಲಿ ಒಮ್ಮೆ ಎಡ ಒಮ್ಮೆ ಬಲ ಹೀಗೆ ಎರಡೂ ಬದಿಯ ಹುಬ್ಬುಗಳನ್ನು ಕತ್ತರಿಸಿಕೊಳ್ಳುತ್ತಾ ಯಾವಾಗ ಇದು ನಿಮ್ಮ ಕೈ ಮೀರಿ ತೆಳುವಾಯಿತೋ ಗೊತ್ತಾಗುವುದೇ ಇಲ್ಲ. ಮಂಗಣ್ಣ ತಕ್ಕಡಿಯಲ್ಲಿ ಬೆಣ್ಣೆ ತೂಕ ಮಾಡಿದ ಹಾಗೆ! ಎಂದಿಗೂ ಈ ನಿಟ್ಟಿನಲ್ಲಿ ಮುಂದುವರೆಯದಿರಿ. ಅಲ್ಪ ವ್ಯತ್ಯಾಸ ಕಂಡುಬಂದರೆ ಇರಲಿ, ನೋಡುವವರಿಗೆ ನೀವು ಹೇಳದ ಹೊರತು ಈ ವ್ಯತ್ಯಾಸ ಗೊತ್ತಾಗುವುದೇ ಇಲ್ಲ. ಒಂದೇ ವಾರದಲ್ಲಿ ಈ ಕೂದಲುಗಳು ಬೆಳೆದು ಮೊದಲಿನಂತಾಗುವ ಕಾರಣ ನೀವು ಅಕಸ್ಮಾತ್ ಕೊಂಚ ಹೆಚ್ಚು ಕತ್ತರಿಸಿದ್ದರೆ ಚಿಂತಿಸುವ ಅಗತ್ಯವಿಲ್ಲ.

ಕಡೆಯದಾಗಿ ಅಲೋವೆರಾ ಜೆಲ್ ಬಳಸಿ ನೀವಿಕೊಳ್ಳಿ

ಕಡೆಯದಾಗಿ ಅಲೋವೆರಾ ಜೆಲ್ ಬಳಸಿ ನೀವಿಕೊಳ್ಳಿ

ಕಣ್ಣಿನ ಹುಬ್ಬುಗಳಿರುವ ಚರ್ಮ ಅತಿ ಸೂಕ್ಷ್ಮಸಂವೇದಿಯಾಗಿದೆ. ಹುಬ್ಬುಗಳ ಕೂದಲುಗಳನ್ನು ಕೊಂಚ ಎಳೆದರೂ ಇದರ ಅಡಿಯ ಚರ್ಮ ಕೆಂಪಗಾಗಿ ಉರಿಯತೊಡಗುತ್ತದೆ. ಹಾಗಾಗಿ, ನೀವು ಹುಬ್ಬುಗಳಿಗೆ ನೀಡುವ ಆರೈಕೆಯ ಸಮಯದಲ್ಲಿ ಕೊಂಚ ಚರ್ಮಕ್ಕೆ ಘಾಸಿಯಾಗಿ ಉರಿಯುವುದು ಸಹಜವೇ ಆಗಿದೆ. ಇದನ್ನು ಶಮನಗೊಳಿಸಲು ಆಲೋವೆರಾ ಜೆಲ್ (ಲೋಳೆಸರದ ತಿರುಳು) ಕೈಗೆ ಸಿಗುವಂತೆ ತಯಾರಾಗಿ ಇರಿಸಿ. ಇದರ ಉರಿಯೂತ ನಿವಾರಕ ಗುಣ ತಕ್ಷಣವೇ ಉರಿಯುತ್ತಿರುವ ಚರ್ಮವನ್ನು ತಂಪಾಗಿಸಿ ಉರಿಮುಕ್ತವಾಗಿಸುತ್ತದೆ. ಹಾಗಾಗಿ ಹುಬ್ಬಿನ ಆರೈಕೆ ಮುಗಿದ ತಕ್ಷಣವೇ ಕೊಂಚ ಜೆಲ್ ಅನ್ನು ಹುಬ್ಬಿನ ಕೂದಲು ಬೆಳೆಯುವ ದಿಕ್ಕಿನತ್ತಲೇ (ಅಂದರೆ ಹಣೆಯ ನಡುಭಾಗದಿಂದ ಕಿವಿಯತ್ತ ಸಾಗುವಂತೆ) ನೇವರಿಸಿ ಹಚ್ಚಿಕೊಳ್ಳಿ. ಅಷ್ಟೇ ಸಾಕು, ಬೇರೇನೂ ಬೇಕಾಗಿಲ್ಲ.

English summary

Things To Keep In Mind When Doing Your Eyebrows At Home

Here we are discussing about Things To Keep In Mind When Doing Your Eyebrows At Home. If you are planning to do your brows at home, it is important for you to know these tips. Read more.
X
Desktop Bottom Promotion