For Quick Alerts
ALLOW NOTIFICATIONS  
For Daily Alerts

ವ್ಯಾಕ್ಸಿಂಗ್‌ನಿಂದ ಉಂಟಾಗುವ ಈ ತೊಂದರೆಗಳನ್ನು ತಡೆಯುವುದು ಹೇಗೆ?

|

ದೇಹದಲ್ಲಿ ಬೇಡದ ಕೂದಲುಗಳನ್ನು ಹೆಚ್ಚಿನವರು ಹಾಗೇ ಇಡಲು ಇಷ್ಟಪುಡವುದಿಲ್ಲ. ಮಾಡರ್ನ್ ಡ್ರೆಸ್‌ಗಳನ್ನು ಧರಿಸಲು ಇಚ್ಛೆ ಪಡುವವರು ಬೇಡದ ಕೂದಲನ್ನು ತೆಗೆಯಲೇಬೇಕು, ಇನ್ನು ಶುಚಿತ್ವದ ದೃಷ್ಟಿಯಿಂದ ನೋಡುವುದಾದರೂ ಬೇಡದ ಕೂದಲನ್ನು ತೆಗೆಯಲೇಬೇಕು. ಅದಕ್ಕಾಗಿ ನಾನಾ ವಿಧಾನಗಳಿವೆ. ಹೆಚ್ಚಾಗಿ ರೇಝರ್ ಜಾಗೂ ವ್ಯಾಕ್ಸಿಂಗ್ ಬಳಸಲಾಗುವುದು.

waxing

ವ್ಯಾಕ್ಸಿಂಗ್ ಮಾಡಿಸಿದಾಗ ಬೇಗನೆ ಕೂದಲು ಬೆಳೆಯುವುದಿಲ್ಲ, ಆದ್ದರಿಂದ ದೇಹದ ಅಂದಕ್ಕಾಗಿ ವ್ಯಾಕ್ಸಿಂಗ್ ಮಾಡಲು ಹಚ್ಚಿನವರು ಬಯಸುತ್ತಾರೆ. ಹೀಗೆ ವ್ಯಾಕ್ಸಿಂಗ್‌ ಮಾಡಿಸಿದಾಗ ಕೆಲವೊಂದು ಅಡ್ಡಪರಿಣಾಮಗಳು ಉಂಟಾಗುತ್ತದೆ. ಅದರ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಕೂದಲು ತುಂಡಾಗುವುದು

ಕೂದಲು ತುಂಡಾಗುವುದು

ಶೇವಿಂಗ್‌ ಮಾಡುವಾಗ ಕೂದಲು ತುಂಡಾಗುತ್ತದೆ. ಇದರಿಂದ ಬೇಗನೆ ಬೆಳೆಯುವುದು. ವ್ಯಾಕ್ಸಿಂಗ್ ಮಾಡುವಾಗ ಚೆನ್ನಾಗಿ ಆಗದಿದ್ದರೆ, ಕೂದಲು ತುಂಡಾದರೆ ಅದನ್ನು ತೆಗೆಯಲು ಆಗುವುದಿಲ್ಲ, ತೆಗೆಯಲು ಪ್ರಯತ್ನಿಸಿದರೆ ತುಂಬಾ ನೋವಾಗುವುದು ಹಾಗೂ ಬೇಗನೆ ಬೆಳೆಯುವುದು.

ಕೆಂಪು ಗುಳ್ಳೆಗಳು ಮತ್ತು ತುರಿಕೆ

ಕೆಂಪು ಗುಳ್ಳೆಗಳು ಮತ್ತು ತುರಿಕೆ

ತುಂಬಾ ಸೂಕ್ಷ್ಮ ತ್ವಚೆಯವರಿಗೆ ವ್ಯಾಕ್ಸಿಂಗ್ ಮಾಡಿಸಿದ ಬಳಿಕ ತುರಿಕೆ ಉಂಟಾಗುವುದು, ಇನ್ನು ಕೆಲವರಿಗೆ ಕೆಂಪು-ಕೆಂಪು ಗುಳ್ಳೆಗಳು ಏಳುವುದು. ಕೆಲವರಿಗೆ ಒಂದೆರಡು ದಿನದಲ್ಲಿ ಇದು ಸರಿ ಹೋದರೆ, ಇನ್ನು ಕೆಲವರಿಗೆ ಒಂದು ವಾರಕ್ಕಿಂತ ಹೆಚ್ಚು ದಿನ ಇರುತ್ತದೆ, ಇದರಿಂದಾಗಿ ಮೈ ಮೇಲೆ ಕಲೆಗಳು ಉಳಿಯುವ ಸಾಧ್ಯತೆಯೂ ಇದೆ.

ಏನು ಮಾಡಬಹುದು?

ಸೆನ್ಸಿಟಿವ್ ಅಂದರೆ ತುಂಬಾ ಸೂಕ್ಷ್ಮ ತ್ವಚೆಯವರು ವ್ಯಾಕ್ಸಿಂಗ್ ಮಾಡುವ ಮುನ್ನ ಪ್ಯಾಚ್‌ ಟೆಸ್ಟ್ ಮಾಡುವುದು ಒಳ್ಳೆಯದು. ಸಾಮಾನ್ಯ ತ್ವಚೆಯವರು ವ್ಯಾಕ್ಸಿಂಗ್‌ ಮಾಡಿದ ಬಳಿಕ ಮಾಯಿಶ್ಚರೈಸರ್‌ ಹಚ್ಚಿದರೆ ಸಾಕು. ಇನ್ನು ವ್ಯಾಕ್ಸಿಂಗ್ ಮಾಡಿ ಬಂದ ಬಳಿಕ ಬಿಸಿ ನೀರು ಹಾಕುವುದು, ಸೋಪು ಹಚ್ಚುವುದು ಮಾಡಬಾರದು. ಎರಡರಿಂದ ಮೂರು ದಿನದವರೆಗೆ ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ.

ತ್ವಚೆ ನೇತು ಬೀಳುವುದು

ತ್ವಚೆ ನೇತು ಬೀಳುವುದು

ವ್ಯಾಕ್ಸಿಂಗ್‌ ಮಾಡುವುದರಿಂದ ತ್ವಚೆ ಸಡಿಲವಾಗುವ ಸಾಧ್ಯತೆ ಇದೆ. ವ್ಯಾಕ್ಸಿಂಗ್‌ ಮಾಡುವಾಗ ಕೂದಲನ್ನು ಎಳೆಯುತ್ತೇವೆ. ಹೀಗೆ ಎಳೆಯುವುದರಿಂದ ತ್ವಚೆ ಸಡಿಲವಾಗುವುದು.

ಏನು ಮಾಡಬಹುದು?

ಆಗಾಗ ವ್ಯಾಕ್ಸಿಂಗ್ ಮಾಡಬೇಡಿ, ತಿಂಗಳಿಗೊಮ್ಮೆ ಮಾಡಿಸಿ. ವ್ಯಾಕ್ಸಿಂಗ್‌ ಮಾಡಿದ ಬಳಿಕ ಮಾಯಿಶ್ಚರೈಸರ್ ಹಚ್ಚಿ ಆರೈಕೆ ಮಾಡಿ.

ತ್ವಚೆ ಕಪ್ಪಾಗುವುದು

ತ್ವಚೆ ಕಪ್ಪಾಗುವುದು

ವ್ಯಾಕ್ಸಿಂಗ್ ಮಾಡುವುದರಿಂದ ತ್ವಚೆಯುರಿ ಉಂಟಾಗಿ, ತ್ವಚೆ ಕಪ್ಪಾಗುವ ಸಾಧ್ಯತೆ ಇದೆ. ಹಾಟ್‌ ವ್ಯಾಕ್ಸ್ ಹಾಕಿ ಕೂದಲನ್ನು ಎಳೆದು ತೆಗೆಯುವುದರಿಂದ ಅಲ್ಲಲ್ಲಿ ಚಿಕ್ಕ-ಚಿಕ್ಕ ಬೊಬ್ಬೆಗಳು ಎದ್ದು ಅವುಗಳು ಕಲೆಯಾಗುವುದು. ಕೈ ವ್ಯಾಕ್ಸ್ ಮಾಡಿದಾಗ, ಕಾಲಿನಲ್ಲಿ ಈ ರೀತಿ ಉಂಟಾಗುವುದು.

ಏನು ಮಾಡಬಹುದು?

ವ್ಯಾಕ್ಸ್ ಮಾಡಿದ ಬಳಿಕ ಮಾಯಿಶ್ಚರೈಸರ್ ಹಚ್ಚಬೇಕು. ಕೆಲವು ದಿನಗಳ ಬಳಿಕ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಬೇಕು. ಹೀಗೆ ಮಾಡಿದರೆ ತ್ವಚೆ ಹೊಳಪನ್ನು ಪಡೆಯುತ್ತದೆ.

ಸೂರ್ಯನ ಬಿಸಿಲಿಗೆ ಹೋಗಲು ಸಾಧ್ಯವಾಗುವುದಿಲ್ಲ

ಸೂರ್ಯನ ಬಿಸಿಲಿಗೆ ಹೋಗಲು ಸಾಧ್ಯವಾಗುವುದಿಲ್ಲ

ವ್ಯಾಕ್ಸಿಂಗ್ ಮಾಡಿದ ಬಳಿಕ ಬಿಸಿಲಿನಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಟ್ರಿಪ್ ಹೋಗುವಾಗ, ಬೀಚ್ ಕಡೆ ಹೋಗುವಾಗ ವ್ಯಾಕ್ಸಿಂಗ್‌ ಮಾಡಿದ ವಾರದೊಳಗೆ ಹೋದರೆ ಸನ್‌ಟ್ಯಾನ್ ಆಗುವ ಸಾಧ್ಯತೆ ಹೆಚ್ಚು. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಂತರೂ ಉರಿ ಉಂಟಾಗುವುದು ಹಾಗೂ ತ್ವಚೆ ಕಲೆಯುಂಟಾಗುವುದು.

ಏನು ಮಾಡಬಹುದು?

ವ್ಯಾಕ್ಸಿಂಗ್ ಮಾಡಿದ ಬಳಿಕ ಬಿಸಿಲಿನಲ್ಲಿ ಓಡಾಡುವಾಗ ಸನ್‌ಸ್ಕ್ರೀನ್ ಹಚ್ಚಲು ಮರೆಯಬಾರದು.

ತ್ವಚೆ ಕಿತ್ತು ಬರುವುದು

ತ್ವಚೆ ಕಿತ್ತು ಬರುವುದು

ವ್ಯಾಕ್ಸಿಂಗ್ ಮಾಡುವಾಗ ಸ್ವಲ್ಪ ಯಡವಟ್ಟಾದರೂ ತ್ವಚೆ ಕಿತ್ತು ಬರುವ ಸಾಧ್ಯತೆ ಇದೆ. ಇದರಿಂದ ಗಾಯವಾಗಿ ಆ ಭಾಗದಲ್ಲಿ ಕಲೆ ಉಳಿಯುವುದು. ವ್ಯಾಕ್ಸ್ ತುಂಬಾ ಬಿಸಿಯಾಗಿದ್ದಾಗ ಬಳಸಿದರೆ ಈ ರೀತಿ ಉಂಟಾಗುತ್ತದೆ. ಹಾಟ್‌ ವ್ಯಾಕ್ಸ್ ಹಚ್ಚಿ ಬೇಡದ ಕೂದಲನ್ನು ತೆಗೆದಾಗ ಗಾಯವಾಗುವ ಸಾಧ್ಯತೆ ಹೆಚ್ಚು.

ಏನು ಮಾಡಬಹುದು?

ವ್ಯಾಕ್ಸ್ ತುಂಬಾ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು. ವ್ಯಾಕ್ಸ್ ತುಂಬಾ ಬಿಸಿಯಾಗಿದ್ದರೆ ಬಳಸಬೇಡಿ. ಇನ್ನು ವ್ಯಾಕ್ಸ್ ಮಾಡಿದ ಬಳಿಕ ಬೊಬ್ಬೆ ಬರುವುದನ್ನು ತಡೆಯಲು ಮಾಯಿಶ್ಚರೈಸರ್ ಹಚ್ಚಿ.

English summary

Side Effects Of Waxing You Should Know About

Here are side affect of waxing you should know about, Read on.
X
Desktop Bottom Promotion