For Quick Alerts
ALLOW NOTIFICATIONS  
For Daily Alerts

ಕುಂಕುಮಾದಿ ತೈಲ ಬಳಸಿದರೆ ಮುಖದ ಚೆಲುವು ಹೆಚ್ಚುವುದು

|

ತ್ವಚೆ ಆಕರ್ಷಕವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ ಹೇಳಿ? ಯಾವುದೇ ವಯಸ್ಸಿನವರಾಗಲಿ ತಮ್ಮ ತ್ವಚೆ ಆಕರ್ಷಕವಾಗಿ ಕಾಣಬೇಕೆಂದೇ ಬಯಸುತ್ತಾರೆ, ಅದರಲ್ಲೂ ವಯಸ್ಸು ಮೂವತ್ತು ದಾಟುತ್ತಿದ್ದಂತೆ ತ್ವಚೆ ಬಗ್ಗೆ ತುಸು ಹೆಚ್ಚಾಗಿಯೇ ಯೋಚಿಸುತ್ತೇವೆ, ಮೂವತ್ತು ಕಳೆಯುತ್ತಿದ್ದಂತೆ ಮುಖದ ತ್ವಚೆಯಲ್ಲಿ ಬದಲಾವಣೆಯಾಗುವುದು, ಆದರೆ ಯಾರು ತ್ವಚೆಯನ್ನು ಹೆಚ್ಚು ಕಾಳಜಿ ಮಾಡುತ್ತಾರೋ ಅವರ ತ್ವಚೆಯಲ್ಲಿ ವಯಸ್ಸು 40 ದಾಟಿದರೂ ಯೌವನದ ಕಳೆ ಮಾಸುವುದಿಲ್ಲ.

ತ್ವಚೆ ಸೌಂದರ್ಯಕ್ಕಾಗಿ ಕೆಲವರು ಸೌಂದರ್ಯವರ್ಧಕಗಳು, ಕ್ರೀಮ್‌ಗಳನ್ನು ಬಳಸುತ್ತಾರೆ, ಇನ್ನು ಕೆಲವರು ಆಯುರ್ವೇದ, ನೈಸರ್ಗಿಕ ವಿಧಾನಗಳನ್ನು ಬಳಸುತ್ತಾರೆ. ಆಯುರ್ವೇದದಲ್ಲಿ ಕುಂಕುಮಾದಿ ತೈಲವನ್ನು ಸೌಂದರ್ಯವೃದ್ಧಿಗೆ ಬಳಸಲಾಗುವುದು.

Kumkumadi Oil

ಕುಂಕುಮಾದಿ ತೈಲವನ್ನು ತ್ವಚೆ ಸೌಂದರ್ಯ ವೃದ್ಧಿಸಲೆಂದೇ 16-21 ಗಿಡ ಮೂಲಿಕೆಗಳನ್ನು ಬಳಸಿ ಈ ಎಣ್ಣೆ ತಯಾರಿಸಲಾಗಿರುತ್ತದೆ, ಇದರಲ್ಲಿ ಪ್ರಮುಖವಾಗಿ ಕೇಸರಿಯನ್ನು ಬಳಸಲಾಗಿರುತ್ತದೆ. ಕೇಸರಿ ತ್ವಚೆಗೆ ತುಂಬಾ ಒಳ್ಳೆಯದು. ಕೇಸರಿ ಮುಖ ಕಾಂತಿ ಹೆಚ್ಚಿಸುವುದರ ಜತೆಗೆ ಡಾರ್ಕ್‌ಸರ್ಕಲ್, ಮುಖದ ಮೇಲೆ ಬೀಳುವ ಕಪ್ಪು ಕಲೆಗಳು ಇವುಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಆ್ಯಂಟಿಸೆಪ್ಟಿಕ್ ಗುಣ ತ್ವಚೆ ಆರೈಕೆಯಲ್ಲಿ ಸಹಕಾರಿಯಾಗಿದೆ. ಇನ್ನು ಈ ತೈಲದಲ್ಲಿ ಹಾಲು, ಲಾವಂಚ ಇವುಗಳನ್ನು ಬಳಸಲಾಗಿರುತ್ತದೆ, ಆದ್ದರಿಂದ ಈ ಎಣ್ಣೆ ತ್ವಚೆಯನ್ನು ಕ್ಲೆನ್ಸ್ ಮಾಡಿ, ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಿ ಸೌಂದರ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

ಕುಂಕುಮಾದಿ ತೈಲವನ್ನು ಬಳಸುವುದರಿಂದ ಈ ರೀತಿಯ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು:

1. ಮುಖದ ಮೇಲೆ ಬೀಳುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ

ಮುಖದ ಮೇಲೆ, ಮೂಗಿನ ಮೇಲೆ ಕಪ್ಪು ಕಲೆಗಳು ಬಿದ್ದರೆ ಮುಖ ಆಕರ್ಷಕವಾಗಿ ಕಾಣುವುದಿಲ್ಲ, ಆದರೆ ಈ ಕಲೆಗಳು ಯಾವ ಕ್ರೀಮ್ ಹಚ್ಚಿದರೂ ಬೇಗನೆ ಹೋಗುವುದಿಲ್ಲ, ಈ ರೀತಿಯ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಕುಂಕುಮಾದಿ ತೈಲ ತುಂಬಾ ಪರಿಣಾಮಕಾರಿಯಾಗಿದೆ. ಈ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಿ, ಮುಖದ ಹೊಳಪು ಹೆಚ್ಚುವುದು.

2.ಮೊಡವೆ ಹೋಗಲಾಡಿಸುತ್ತದೆ

ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌, ಆ್ಯಂಟಿಬ್ಯಾಕ್ಟಿರಿಯಾ ಹಾಗೂ ಉರಿಯೂತ ಕಡಿಮೆ ಮಾಡುವ ಗುಣಗಳು ಮೊಡವೆ ಸಮಸ್ಯೆ ಹೋಗಲಾಡಿಸಿ, ಮುಖ ಕಾಂತಿ ಹೆಚ್ಚಿಸುತ್ತದೆ. ಇದರಲ್ಲಿರುವ ಹಾಲಿನಂಶ ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ತ್ವಚೆ ಮೃದುವಾಗುವಂತೆ ಮಾಡುತ್ತದೆ. ಇನ್ನು ಮುಖದ ಸೆಬಮ್ ಸಮತೋಲನ ಕಾಪಾಡುವಲ್ಲಿ ಈ ಎಣ್ಣೆ ಪ್ರಯೋಜನಕಾರಿಯಾಗಿದೆ.

3. ಮುಖದ ಕಲೆಗಳು ಮಾಯವಾಗುವುದು

ಮುಖದಲ್ಲಿ ಕಲೆಗಳಿದ್ದರೆ ಸೌಂದರ್ಯ ಎದ್ದು ಕಾಣುವುದಿಲ್ಲ, ಮುಖ ನೋಡಿದಾಗ ಕಲೆಗಳೇ ಕಾಣುತ್ತದೆ, ಕುಂಕುಮಾದಿ ತೈಲ ಹಚ್ಚಿ ಮಸಾಜ್ ಮಾಡುವುದರಿಂದ ಇದು ತ್ವಚೆಯ ಮಾಯಿಶ್ಚರೈಸರ್(ತೇವಾಂಶ) ಕಾಪಾಡುವುದರ ಜತೆಗೆ ಮುಖದ ಕಲೆಗಳು ಮಾಯವಾಗುವುದು, ಮೊಡವೆ, ಬ್ಲ್ಯಾಕ್‌ ಹೆಡ್ಸ್ ಈ ರೀತಿಯ ಸಮಸ್ಯೆಗಳು ಇಲ್ಲವಾಗುವುದು.

4. ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ

ಕುಂಕುಮಾದಿ ತೈಲ ಬಳಸಿ ಮಸಾಜ್‌ ಮಾಡುವುದರಿಂದ ಅಕಾಲಿಕ ನೆರಿಗೆ ತಡೆಗಟ್ಟಬಹುದು. ವಯಸ್ಸಾಗುತ್ತಿದ್ದರೂ ತ್ವಚೆ ಸೌಂದರ್ಯ ಒಂದಿಷ್ಟೂ ಮಂಕಾಗದೆ ಹೊಳಪಿನಿಂದ ಕೂಡಿರಲು ಕುಂಕುಮಾದಿ ತೈಲ ಸಹಾಯ ಮಾಡುತ್ತದೆ. ಕುಂಕುಮಾದಿ ತೈಲ ಬಳಸುವವರ ತ್ವಚೆಯಲ್ಲಿ ಯೌವನದ ಕಲೆ ಎದ್ದು ಕಾಣುತ್ತದೆ.

5. ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಕುಂಕುಮಾದಿ ತೈಲದಲ್ಲಿ ಕೇಸರಿ ಇರುವುದರಿಂದ ಬಿಸಿಲಿಗೆ ಹೋದಾಗ ತ್ವಚೆ ರಕ್ಷಣೆ ಮಾಡುತ್ತದೆ. ಕೇಸರಿ ಮುಖ ಅಂದ ರಕ್ಷಿಸುವುದು ಮಾತ್ರವಲ್ಲ ಸೂರ್ಯ ನೇರಳಾತೀತ ಕಿರಣಗಳಿಂದಲೂ ರಕ್ಷಣೆ ನೀಡುತ್ತದೆ. ಇದು ಬಿಸಿಲಿಗೆ ಹೀದಾಗ ಮುಖ ಕಪ್ಪಾಗುವುದನ್ನು ತಡೆಯುತ್ತದೆ.

ಕುಂಕುಮಾದಿ ಎಣ್ಣೆ ಬಳಸುವುದು ಹೇಗೆ?

* ಮುಖವನ್ನು ತೊಳೆದು ಮೃದವಾದ ಟವಲ್‌ನಿಂದ ಒರೆಸಿ
* ಈಗ ಸ್ವಲ್ಪ ಕುಂಕುಮಾದಿ ತೈಲ ನಿಮ್ಮ ಅಂಗೈಗೆ ಹಾಕಿ ಮುಖದ ಮೇಲೆ 5 ನಿಮಿಷ ಮೆಲ್ಲನೆ ಮಸಾಜ್ ಮಾಡಿ ಎರಡು ತಾಸು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸೂಚನೆ: ಕುಂಕುಮಾದಿ ತೈಲ ಎಲ್ಲಾ ಬಗೆಯ ತ್ವಚೆಯವರು ಬಳಸಬಹುದಾಗಿದ್ದು, ಎಣ್ಣ ತ್ವಚೆಯವರು ಬಳಸಿದರೆ ತ್ವಚೆ ಮತ್ತಷ್ಟು ಎಣ್ಣೆ-ಎಣ್ಣೆಯಾಗುವುದರಿಂದ ತುಂಬಾ ಹೊತ್ತು ಇಡಬೇಡಿ, ಹಚ್ಚಿ 10 ನಿಮಿಷವಾದ ಮೇಲೆ ತೊಳೆದುಬಿಡಿ.

English summary

Kumkumadi Oil Helps To Enhance Your Skin Beauty

Kukmadai Oil is made up of 16-21 natural and powerful ingredients that have a lot of benefits to your skin. Here we have explained howto use kukmadai oil and benefits of this oil.
X
Desktop Bottom Promotion