For Quick Alerts
ALLOW NOTIFICATIONS  
For Daily Alerts

ಫೇಸ್ ಪ್ಯಾಕ್ ತಯಾರಿಸಲು ಈ ಪದಾರ್ಥಗಳನ್ನ ಸೇರಿಸುತ್ತಿದ್ದರೆ, ಈಗಲೇ ನಿಲ್ಲಿಸಿ..

|

ತ್ವಚೆಯ ಸಮಸ್ಯೆಗಳಿಗೆ, ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವುದಕ್ಕಿಂತ, ನಾವೇ ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳೇ ಉತ್ತಮ ಎಂಬ ನಂಬಿಕೆ ನಮ್ಮದು. ಅದಕ್ಕೆ ಈಗೀಗ ಹೆಚ್ಚಿನವರು ತಮ್ಮ ತ್ವಚೆಯ ಸಮಸ್ಯೆಗಳಾದ ಮೊಡವೆ, ಡಲ್ ನೆಸ್ ಮೊದಲಾದವುಗಳಿಗೆ ಅಡುಗೆಮನೆಯ ಪದಾರ್ಥಗಳನ್ನೇ ಬಳಸಿ ಫೇಸ್ ಪ್ಯಾಕ್‌ಗಳನ್ನ ಮಾಡಿಕೊಳ್ಳುತ್ತಾರೆ. ಆದರೆಈ ಪದಾರ್ಥಗಳ ಬಗ್ಗೆ ತುಂಬಾ ಜಾಗರೂಕರಾಗಿಬೇಕು.

ನಾವು ತ್ವಚೆಗೆ ಉತ್ತಮವೆಂದು ನಂಬಿರುವ ಕೆಲವು ವಸ್ತುಗಳು ನಿಜವಾಗಿಯೂ ತ್ವಚೆಗೆ ಉತ್ತಮವಾಗಿರುವುದಿಲ್ಲ, ಅವು ಪರಿಹಾರ ನೀಡುವುದಕ್ಕಿಂತ ಹೆಚ್ಚು ಸಮಸ್ಯೆಗಳನ್ನೇ ಉಂಟುಮಾಡುತ್ತವೆ. ಹಾಗಾದರೆ ಅಂತಹ ವಸ್ತುಗಳಾವುವು ನೋಡಿಕೊಂಡು ಬರೋಣ.

ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ ಗಳಿಗೆ ಬಳಸಬಾರದ ಅಡುಗೆಮನೆಯ ಪದಾರ್ಥಗಳನ್ನು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅಡುಗೆ ಸೋಡಾ:

ಅಡುಗೆ ಸೋಡಾ:

"ಬೇಕಿಂಗ್ ಸೋಡಾ? ಯಾರ ಬಳಿ ಆದರೂ ಅಡುಗೆ ಸೋಡಾವನ್ನು ಮುಖಕ್ಕೆ ಏಕೆ ಹಚ್ಚುತ್ತಾರೆ ಎಂದು ಕೇಳಿದರೆ, ಅವರ ಉತ್ತರ, ಮೊಡವೆಗಳನ್ನು, ಕಪ್ಪು ಕಲೆಗಳನ್ನು ಕಡಿಮೆ ಮಾಡಲು ತೆಗೆದುಹಾಕಲು ಬಳಸುತ್ತಾರೆ ಎಂಬುದು. ಆದು ಇದು ಖಂಡಿತವಾಗಿಯೂ ಸುರಕ್ಷಿತವಲ್ಲ. ಏಕೆಂದರೆ ಅಡುಗೆ ಸೋಡಾದಲ್ಲಿ ನಿಮ್ಮ ಚರ್ಮವನ್ನು ಹಾಳುಮಾಡುವ, ಚರ್ಮದ ಅಲರ್ಜಿಗೆ ಕಾರಣವಾಗುವ ಹಲವಾರು ಸಂಯುಕ್ತಗಳಿವೆ ಎಂದು ತಜ್ಞರು ಹೇಳುತ್ತಾರೆ.

 ನಿಂಬೆ ರಸ:

ನಿಂಬೆ ರಸ:

ನಿಂಬೆಯನ್ನು ಸಾಮಾನ್ಯವಾಗಿ ಹೆಚ್ಚಿನ ಮನೆಮದ್ದುಗಳಲ್ಲಿ ಬಳಕೆ ಮಾಡುವ ಸಾಮಾನ್ಯ ಅಂಶ. ಆದರೆ ಇದು ನಿಮ್ಮ ಚರ್ಮಕ್ಕೆ ಸುರಕ್ಷಿತವೇ? ತಜ್ಞರ ಪ್ರಕಾರ, ಅಲ್ಲ, ಏಕೆಂದರೆ ನಿಂಬೆಯು ಹೆಚ್ಚು ಆಮ್ಲೀಯವಾಗಿದ್ದು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಇದಲ್ಲದೆ, ಅದರ ತೈಲವು ಯುವಿ ಕಿರಣಗಳಿಗೆ ಒಡ್ಡಿಕೊಂಡಾಗ ತ್ವಚೆಯ ಮೇಲೆ ಫೋಟೊಟಾಕ್ಸಿಕ್ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಅಂದರೆ ಇದು ಗುಳ್ಳೆಗಳು ಅಥವಾ ದದ್ದುಗಳಿಗೆ ಕಾರಣವಾಗಬಹುದು.

ವಿನೆಗರ್:

ವಿನೆಗರ್:

ಹೆಚ್ಚಿನ ಟೋನರುಗಳಲ್ಲಿ ವಿನೆಗರ್ ಇದ್ದರೂ, ತಜ್ಞರು ಪ್ರಕಾರ ಇದು ತ್ವಚೆಗೆ ಉತ್ತಮ ಆಯ್ಕೆಯಲ್ಲ. ಏಕೆಂದರೆ, ವಿನೆಗರ್ ಹೆಚ್ಚಿನ ಪಿಹೆಚ್ ಅನ್ನು ಹೊಂದಿದ್ದು, ಆಮ್ಲೀಯತೆಯನ್ನು ಹೊಂದಿರುತ್ತದೆ. ಇದು ಕಿರಿಕಿರಿ, ಸುಡುವಿಕೆ ಮತ್ತು ಚರ್ಮದ ಡಿಪಿಗ್ಮೆಂಟೇಶನ್ ಕಾರಣವಾಗಬಹುದು.

ಮಸಾಲೆಗಳು:

ಮಸಾಲೆಗಳು:

ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಅರಿಶಿನ ಹೊರತುಪಡಿಸಿ, ದಾಲ್ಚಿನ್ನಿ, ಲವಂಗ, ಮೆಣಸಿನ ಪುಡಿ ಮುಂತಾದ ಮಸಾಲೆಗಳನ್ನು ಫೇಸ್ ಪ್ಯಾಕ್ ಗಳಿಗೆ ಬಳಸಬಾರದು, ಏಕೆಂದರೆ ಅವು ಕಿರಿಕಿರಿ, ಅಲರ್ಜಿ ಅಥವಾ ದದ್ದುಗಳನ್ನು ಉಂಟುಮಾಡಬಹುದು. ಮೊದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಅಥವಾ ಮೊದಲು ಸ್ಪಾಟ್ ಟೆಸ್ಟ್ ಮಾಡಿ.

ಟೂತ್ ಪೇಸ್ಟ್:

ಟೂತ್ ಪೇಸ್ಟ್:

ಟೂತ್ಪೇಸ್ಟ್ ಅನ್ನು ಸುಟ್ಟಗಾಯದ ಮೇಲೆ ಹಚ್ಚುವುದು ಒಂದು ಹ್ಯಾಕ್ ಆಗಿದ್ದು, ನಾವೆಲ್ಲರೂ ಕೇಳಿದ್ದೇವೆ ಆದರೆ ಸೌಂದರ್ಯ ತಜ್ಞರು ಇದಕ್ಕೆ ವಿರುದ್ಧವಾಗಿದ್ದಾರೆ. ಟೂತ್ಪೇಸ್ಟ್ ನಿಮ್ಮ ಚರ್ಮದ ಮೇಲೆ ಹಾನಿ ಉಂಟುಮಾಡುವ ಪುದೀನ, ಪೆರಾಕ್ಸೈಡ್ ಮತ್ತು ಮದ್ಯದಂತಹ ಪದಾರ್ಥಗಳಿಂದ ತುಂಬಿದ್ದು, ಚರ್ಮಕ್ಕೆ ಕಿರಿಕಿರಿಯುಂಟುಮಾಡುತ್ತದೆ ಎಂಬುದ ತಜ್ಞರ ಅಭಿಪ್ರಾಯವಾಗಿದೆ.

ಈ ಎಲ್ಲಾ ವಿಷಯಗಳು ಸಂಪೂರ್ಣವಾಗಿ ಅಂತರ್ಜಾಲದಲ್ಲಿ ಲಭ್ಯವಿರುವ ಸಂಶೋಧನೆ ಮತ್ತು ಡೇಟಾವನ್ನು ಆಧರಿಸಿವೆ. ಆದ್ದರಿಂದ, ಇದನ್ನು ವೃತ್ತಿಪರ ವೈದ್ಯಕೀಯ ಸಲಹೆಯೆಂದು ಪರಿಗಣಿಸಬೇಡಿ ಮತ್ತು ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

English summary

Kitchen Ingredients to Avoid Adding In Your Homemade Face Packs

You can't believe everything you have seen on the internet. We all know this, but when it comes to DIY face packs we all follow it blindly. Sure, some ingredients are safe to use, but relying on baking soda and other such ingredients to prevent acne, is something that you should definitely not do.Here we talking about Kitchen Ingredients to Avoid Adding In Your Homemade Face Packs, read on
Story first published: Monday, August 23, 2021, 13:34 [IST]
X
Desktop Bottom Promotion