For Quick Alerts
ALLOW NOTIFICATIONS  
For Daily Alerts

ತ್ವಚೆಯ ಟ್ಯಾನ್‌ ನಿವಾರಿಸುವ ಸೀಬೆಕಾಯಿ ಫೇಸ್‌ಪ್ಯಾಕ್‌

|

ಮಧುಮೇಹಿಗಳ ಪಾಲಿನ ಅಮೃತ ಸೀಬೆಕಾಯಿ. ಸೀಬೆಕಾಯಿ ಭಾರತದ ಬಹುತೇಕರ ಮನೆಗಳಲ್ಲಿ ಬೆಳೆಯುವ ಮತ್ತು ಇಷ್ಟಪಡುವ ಪೋಷಕಾಂಶಯುಕ್ತ ಹಣ್ಣು. ನಮ್ಮ ದೇಹಕ್ಕೆ ಅಗತ್ಯವಾದ ಬಹುತೇಕ ಪೋಷಕಾಂಶ ಹಾಗೂ ವಿಟಮಿನ್‌ಗಳು ಸೀಬೆಕಾಯಿಯಲ್ಲಿ ಹೇರಳವಾಗಿದೆ. ಸಕ್ಕರೆ ಕಾಯಿಲೆ ಜತೆಗೆ, ರೋಗನಿರೋಧಕ ಶಕ್ತಿ ವೃದ್ಧಿಸುವ ಮತ್ತು ಜೀರ್ಣಕ್ರಿಯೆ ಹೆಚ್ಚಿಸುವ ಸಾಮರ್ಥ್ಯ ಸೀಬೆಕಾಯಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

guava face pack

ಆದರೆ ಇದೆಲ್ಲವನ್ನೂ ಮೀರಿ ಸೀಬೆಹಣ್ಣು ನಮ್ಮ ತ್ವಚೆಗೆ ಹೊಳಪು ನೀಡುವ ಗುಣವನ್ನು ಸಹ ಹೊಂದಿದೆ ಎಂದರೆ ನೀವು ಅಚ್ಚರಿಪಡಬೇಕಿಲ್ಲ. ಸೀಬೆಕಾಯಿಯಲ್ಲಿ ವಿಟಮಿನ್‌ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮರುಗು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಗಾಗ್ಗೆ ಸೀಬೆಹಣ್ಣಿನ ಫೇಸ್‌ಪ್ಯಾಕ್‌ ಹಚ್ಚುವುದರಿಂದ ಕಾಲಜನ್‌ ಉತ್ಪಾದನೆ ಹೆಚ್ಚುತ್ತದೆ, ಇದರಿಂದ ತ್ವಚೆಯ ಸ್ಥಿತಿಸ್ಥಾಪಕತ್ವ ಗುಣವು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ಇದಲ್ಲಿರುವ ಕಾಪರ್‌ನ ಅಂಶವು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಕ್ಯಾನ್ಸರ್‌ ಉಂಟುಮಾಡುವ ಕೋಶಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಇಷ್ಟೆಲ್ಲಾ ಅದ್ಭುತ ಗುಣಗಳಿರುವ ಸೀಬೆಕಾಯಿಯ ಫೇಸ್‌ಪ್ಯಾಕ್‌ ಅನ್ನು ಯಾವ ತ್ವಚೆಯವರು ಹೇಗೆ ತಯಾರಿಸಬಹುದು ಎಂಬುದನ್ನು ಮುಂದೆ ತಿಳಿಯೋಣ.

2. ತ್ವಚೆ ಬೆಳ್ಳಗಾಗಲು

2. ತ್ವಚೆ ಬೆಳ್ಳಗಾಗಲು

ಸೀಬೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಅಂಶ ನಮ್ಮ ತ್ವಚೆಯ ಟ್ಯಾನ್‌ ನಿವಾರಿಸಿ ಬೆಳ್ಳಗಾಗುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೆ. ನಯವಾದ ಮತ್ತು ಬೆಳ್ಳಗಾಗಲು ಪೂರಕವಾದ ಚರ್ಮವನ್ನು ಪಡೆಯಲು ಸಹ ಇವು ಸಹಾಯ ಮಾಡುತ್ತವೆ. ಚರ್ಮದ ಸೌಂದರ್ಯ ವೃದ್ಧಿಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಫೇಸ್‌ಪ್ಯಾಕ್‌ ಅನ್ನು ವಾರಕ್ಕೊಮ್ಮೆ ಬಳಸಿನೋಡಿ.

ಅಗತ್ಯ ವಸ್ತುಗಳು

* ಸೀಬೆಹಣ್ಣು ಸಿಪ್ಪೆ

* 1 ಟೀ ಸ್ಪೂನ್ ಜೇನುತುಪ್ಪ

ಫೇಸ್ ಪ್ಯಾಕ್‌ ತಯಾರಿಸುವ ವಿಧಾನ

1. ಸೀಬೆಹಣ್ಣಿನ ಸಿಪ್ಪೆಯನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ.

2. ಪೇಸ್ಟ್‌ನಲ್ಲಿ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

3. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ.

4. 20 ನಿಮಿಷಗಳ ನಂತರ ಅದನ್ನು ನೀರಿನಿಂದ ತೊಳೆಯಿರಿ.

3. ಹೊಳೆಯುವ ತ್ವಚೆಗೆ

3. ಹೊಳೆಯುವ ತ್ವಚೆಗೆ

ಸೀಬೆಹಣ್ಣಿನಲ್ಲಿರುವ ವಿಟಮಿನ್‌ಗಳು ಚರ್ಮವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ ಅಲ್ಲದೆ ಹೊಳೆವಂತೆ ಮಾಡುತ್ತದೆ. ಈ ಫೇಸ್‌ಪ್ಯಾಕ್‌ ತ್ವಚೆ ತಾಜಾ ಅಗಿಡಲು ಮತ್ತು ಒತ್ತಡ ತ್ವಚೆಗೆ ಕಾಂತಿ ನೀಡಲು ಸಹಾಯ ಮಾಡುತ್ತದೆ. ತಾಜಾ ಮತ್ತು ಹೊಳೆಯುವ ಚರ್ಮ ಪಡೆಯಲು ಇಂದೇ ಫೇಸ್‌ಪ್ಯಾಕ್‌ ಟ್ರೈ ಮಾಡಿ ನೋಡಿ.

ಬೇಕಾಗುವ ವಸ್ತುಗಳು

* 1 ಸೀಬೇಹಣ್ಣು

* 1 ಕಪ್ ನೀರು

ತಯಾರಿಸುವ ವಿಧಾನ

1. ಸೀಬೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.

2. ಸ್ವಲ್ಪ ನೀರು ಸೇರಿಸಿ ಒಟ್ಟಿಗೆ ಚೆನ್ನಾಗಿ ಮಿಶ್ರಣ ಮಾಡಿ.

3. ಇದನ್ನು ನಿಮ್ಮ ಮುಖದ ಮೇಲ ನಯವಾಗಿ ಹಚ್ಚಿ 20 ನಿಮಿಷಗಳ ಕಾಲ ಬಿಡಿ.

4. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಈ ಫೇಸ್‌ ಪ್ಯಾಕ್‌ ಅನ್ನು ಒಮ್ಮೆ ಪ್ರಯತ್ನಿಸಿ ನೋಡಿ ಮೊದಲ ಬಾರಿಯೇ ನಿಮಗೆ ಅಚ್ಚರಿಯಾಗುವಂಥ ವ್ಯತ್ಯಾಸ ಕಂಡು ಬರುತ್ತದೆ.

1. ಮೊಡವೆ ನಿವಾರಿಸುವ ಸೀಬೆಕಾಯಿ ಪೇಸ್‌ಪ್ಯಾಕ್‌

1. ಮೊಡವೆ ನಿವಾರಿಸುವ ಸೀಬೆಕಾಯಿ ಪೇಸ್‌ಪ್ಯಾಕ್‌

ಸೀಬೆಹಣ್ಣು ಗುಳ್ಳೆ ಅಥವಾ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವಂಥ ಏಜೆಂಟ್‌ಗಳನ್ನು ಹೊಂದಿದೆ. ಈ ಸೀಬೆಹಣ್ಣಿನ ಫೇಸ್‌ ಪ್ಯಾಕ್‌ ಅನ್ನು ಕೇಳಗೆ ವಿವರಿಸಿದಂತೆ ತ್ವಚೆಗೆ ಹಚ್ಚಿಕೊಂಡರೆ ಮೊಡವೆ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಇದನ್ನು ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಬಳಸಿ.

ಅಗತ್ಯ ಪದಾರ್ಥಗಳು

* 1 ಸೀಬೆಹಣ್ಣು

* 1 ಟೀಸ್ಪೂನ್ ಜೇನುತುಪ್ಪ

* 1 ಟೀಸ್ಪೂನ್ ನಿಂಬೆ ರಸ

ಬಳಸುವ ವಿಧಾನ

1. ಒಂದು ಸೀಬೆಕಾಯಿಯನ್ನು ತುರಿಯಿರಿ.

2. ತುರಿದ ಸೀಬೆಕಾಯಿಯನ್ನು ಚೆನ್ನಾಗಿ ಹಿಂಡಿ ಅದರಿಂದ ರಸವನ್ನು ಹೊರತೆಗೆಯಿರಿ.

3. ಅದರಲ್ಲಿ 1 ಚಮಚ ಜೇನುತುಪ್ಪ ಮತ್ತು1 ಚಮಚ ನಿಂಬೆ ರಸವನ್ನು ಸೇರಿಸಿ.

4. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಸಂಪೂರ್ಣ ಅಥವಾ ಮೊಡವೆ,ಕಪ್ಪು ಕಲೆ ಇರುವ ಜಾಗದಲ್ಲಿ ಅನ್ವಯಿಸಿ 20 ನಿಮಿಷಗಳ ಕಾಲ ಬಿಡಿ.

5. ನೀವು ಅದನ್ನು 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬಹುದು.

4. ಒಣ ಚರ್ಮ ನಿವಾರಣೆಗೆ

4. ಒಣ ಚರ್ಮ ನಿವಾರಣೆಗೆ

ಸೀಬೆಕಾಯಿಯಲ್ಲಿರುವ ಹೈಡ್ರೇಟಿಂಗ್ ಏಜೆಂಟ್‌ಗಳು ಚರ್ಮದಲ್ಲಿ ನೈಸರ್ಗಿಕವಾಗಿ ತೇವಾಂಶ ಕಾಪಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದನ್ನು ಬಳಸಿದರೆ ಇವುಗಳು ಮೃದುವಾದ, ಆರ್ಧ್ರಕ ಮತ್ತು ಆರೋಗ್ಯಕರ ಚರ್ಮವನ್ನು ನಿಮಗೆ ನೀಡುತ್ತದೆ.

ಅಗತ್ಯ ವಸ್ತುಗಳು

* ½ ಸೀಬೆಕಾಯಿ

* 1 ಚಮಚ ಓಟ್ ಮೀಲ್

* 1 ಚಮಚ ಜೇನು

* 1 ಚಮಚ ಮೊಟ್ಟೆಯ ಹಳದಿ ಲೋಳೆ

ಫೇಸ್‌ ಪ್ಯಾಕ್‌ ತಯಾರಿಸುವ ವಿಧಾನ

1. ಸೀಬೆಹಣ್ಣನ್ನು ತುರಿದುಕೊಳ್ಳಿ.

2. ಪುಡಿ ಮಾಡಿದ ಓಟ್ ಮೀಲ್ ಅನ್ನು ಸೀಬೆಹಣ್ಣಿನ ಜತೆ ಮಿಶ್ರಣ ಮಾಡಿ.

3. ಜೇನುತುಪ್ಪ ಮತ್ತು ಮೊಟ್ಟೆಯ ಹಳದಿ ಲೋಳೆಯನ್ನು ಮಿಶ್ರಣಕ್ಕೆ ಸೇರಿಸಿ ಎಲ್ಲವೂ ಬ್ಲೆಂಡ್ ಆಗುವಂತೆ ಚೆನ್ನಾಗಿ ಕಲಸಿ.

4. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಬಿಡಿ.

5. 20 ನಿಮಿಷಗಳ ನಂತರ ತಣ್ಣೀರಿನಲ್ಲಿ ಅದನ್ನು ತೊಳೆಯಿರಿ ಮತ್ತು ಒಣಗಿಸಿ.

6. ಶೀಘ್ರ ಮತ್ತು ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಇದನ್ನು ಪುನರಾವರ್ತಿಸಿ.

English summary

How To Make Skin Brightening Guava Face Packs At Home

you know how guavas can help you in getting a beautiful skin if used externally? Vitamins A, B and C contained in guavas work best for the skin. These help in retaining the elasticity of the skin by increasing the production of collagen. The copper which is contained in guavas protect the skin from the harmful ultraviolet rays of the sun. Guavas also contain vitamin A which protects our skin from cancer-causing cells.
X
Desktop Bottom Promotion