For Quick Alerts
ALLOW NOTIFICATIONS  
For Daily Alerts

ಅತಿಯಾದ ಮಾಯಿಶ್ಚರೈಸರ್‌ನಿಂದ ನಿಮ್ಮ ಚರ್ಮದ ಮೇಲಾಗುವ ಪರಿಣಾಮಗಳು

|

ಒಣ ತ್ವಚೆ ಯಾರಿಗೆ ತಾನೆ ಇಷ್ಟವಾಗುತ್ತೆ, ತ್ವಚೆ ಕೋಮವಾಗಿರಬೇಕು, ಕಾಂತಿಯುತವಾಗಿರಬೇಕೆಂದೇ ಎಲ್ಲರು ಬಯಸುವುದು, ವಾತಾವರಣದಲ್ಲಿ ಬದಲಾವಣೆಗಳಾದಾಗ ಅದು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಬಿಸಿಲು, ಚಳಿಯಿಂದ ತ್ವಚೆಯನ್ನು ರಕ್ಷಣೆ ಮಾಡುವಲ್ಲಿ ಮಾಯಿಶ್ಚರೈಸರ್ ಸಹಾಯ ಮಾಡುವುದು. ಹಾಗಂತ ತ್ವಚೆ ನಯವಾಗಿ, ಆಕರ್ಷಕವಾಗಿ ಕಾಣಬೇಕೆಂದು ಆಗಾಗ ಮಾಯಿಶ್ಚರೈಸರ್ ಹಚ್ಚುವುದು ಮಾಡುತ್ತಿದ್ದೀರಾ? ಹಾಗಾದರೆ ಈ ಲೇಖನ ಓದಿದ ಮೇಲೆ ಮುಂದೆ ತ್ಚಚೆಗೆ ಆ ತಪ್ಪು ಮಾಡಲ್ಲ ನೋಡಿ.

ತ್ವಚೆ ಆರೈಕೆಯಲ್ಲಿ ಮಾಯಿಶ್ಚರೈಸರ್ ಪ್ರಮುಖ ಪಾತ್ರ ವಹಿಸುತ್ತದೆ. ಮಾಯಿಶ್ಚರೈಸರ್‌ ತ್ವಚೆಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುವುದರಿಂದ ಒಣ ತ್ವಚೆಯ ಸಮಸ್ಯೆ ಕಾಡುವುದಿಲ್ಲ. ಅಲ್ಲದೆ ತ್ವಚೆಯಲ್ಲಿ ತೇವಾಂಶವಿರುವುದರಿಂದ ಅಕಾಲಿಕ ನೆರಿಗೆ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಆದರೆ ಮಾಯಿಶ್ಚರೈಸರ್ ಒಳ್ಳೆಯದೆಂದು ನೀವು ತುಂಬಾ ಹಚ್ಚಲು ಶುರು ಮಾಡಿದರೆ ಇದರಿಂದ ನಿಮ್ಮ ತ್ವಚೆಗೆ ಹಾನಿ ತಪ್ಪಿದ್ದಲ್ಲ ನೋಡಿ, ಅತಿಯಾಗಿ ಮಾಯಿಶ್ಚರೈಸರ್‌ ಮಾಡಿದರೆ ತ್ವಚೆ ಮೇಲಾಗುವ ಪರಿಣಾಮಗಳೇನು ಎಂದು ನೋಡೋಣ ಬನ್ನಿ:

Moisturizing

ತ್ವಚೆ ಆಕರ್ಷಕವಾಗಿ ಕಾಣಲು ಮಾಯಿಶ್ಚರೈಸರ್ ಬೇಕು, ಇನ್ನು ಚಳಿಗಾಲದಲ್ಲಿ ತ್ವಚೆ ಒಣಗದಿರಲು ಮಾಯಿಶ್ಚರೈಸರ್‌ ಅವಶ್ಯಕವಾಗಿದೆ. ಆದರೆ ಅತಿಯಾಗಿ ಮಾಯಿಶ್ಚರೈಸರ್ ಬಳಸಿದರೆ ತ್ವಚೆ ಮಂಕಾಗುವುದು, ತ್ವಚೆಯ ಕಾಂತಿ ಕಳೆಗುಂದುವುದು. ನಿಮ್ಮ ತ್ವಚೆಯಲ್ಲಿರುವ ಸೆಬಮ್ ನಿಮ್ಮ ತ್ವಚೆಯಲ್ಲಿ ತೇವಾಂಶ ಕಾಪಾಡಿ, ನಿಮ್ಮ ತ್ವಚೆ ತುಂಬಾ ಒಣಗುವುದನ್ನು ತಡೆಗಟ್ಟುವುದು. ಆದರೆ ನೀವು ಅತಿಯಾಗಿ ಮಾಯಿಶ್ಚರೈಸರ್ ಮಾಡಿದಾಗ ಆರೊಗ್ಯಕರ ತ್ವಚೆಗೆ ಅಗ್ಯತವಾದಷ್ಟು ಸೆಬಮ್ ಉತ್ಪತ್ತಿಯಾಗುವುದಿಲ್ಲ, ಇದರಿಂದ ತ್ವಚೆ ಮಂಕಾಗುವುದು.

ಇನ್ನು ತುಂಬಾ ಮಾಯಿಶ್ಚರೈಸರ್ ಮಾಡಿದಾಗ ತ್ವಚೆ ರಂಧ್ರಗಳು ಮುಚ್ಚಿ ಹೋಗುವುದರಿಂದ ತ್ವಚೆಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು, ಇದರ ಪರಿಣಾಮ ಮೊಡವೆ ಮುಖದಲ್ಲಿ ಬ್ಲ್ಯಾಕ್‌ ಹೆಡ್ಸ್, ನಿರ್ಜೀವ ತ್ವಚೆ ಮುಂತಾದ ತೊಂದರೆಗಳು ಉಂಟಾಗುವುದು. ಆದ್ದರಿಂದ ಗಂಟೆಗೊಮ್ಮೆ ಮಾಯಿಶ್ಚರೈಸರ್ ಹಚ್ಚುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ.

ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು?

ಮಾಯಿಶ್ಚರೈಸರ್ ಎಷ್ಟು ಬಾರಿ ಮಾಡಿದರೆ ಒಳ್ಳೆಯದು?

ಆರೋಗ್ಯಕರ ಹಾಗೂ ಆಕರ್ಷಕ ತ್ವಚೆಗಾಗಿ ಪ್ರತಿದಿನ ಮಾಯಿಶ್ಚರೈಸರ್ ಮಾಡಬೇಕು, ಆದರೆ ದಿನದಲ್ಲಿ ಎರಡು ಬಾರಿ ಮಾಡಿದರೆ ಸಾಕಾಗುವುದು. ಬೆಳಗ್ಗೆ ಹಚ್ಚಿದರೆ ಇನ್ನು ಮಲಗುವ ಮುನ್ನ ಮಾಡಿದರೆ ಸಾಕು. ಚಳಿಗಾಲದಲ್ಲಿ ತ್ವಚೆ ಒಡೆಯುವುದರಿಂದ ಮಧ್ಯದಲ್ಲಿ ಒಮ್ಮೆ ಬಳಸಿ. ಗಂಟೆಗೊಮ್ಮೆ ಮಾಯಿಶ್ಚರೈಸರ್ ಮಾಡಿದರೆ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ.

ನೀವು ನಿಮ್ಮ ಮುಖಕ್ಕೆ ಹೆಚ್ಚು ಮಾಯಿಶ್ಚರೈಸರ್ ಮಾಡುತ್ತಿದ್ದೀರಿ ಎಂದು ಗೊತ್ತಾಗುವುದು ಹೇಗೆ?

ನೀವು ನಿಮ್ಮ ಮುಖಕ್ಕೆ ಹೆಚ್ಚು ಮಾಯಿಶ್ಚರೈಸರ್ ಮಾಡುತ್ತಿದ್ದೀರಿ ಎಂದು ಗೊತ್ತಾಗುವುದು ಹೇಗೆ?

* ನಿಮ್ಮ ತ್ವಚೆ ಎಣ್ಣೆ-ಎಣ್ಣೆಯಾಗಿ ಕಾಣುವುದು

* ಮಾಯಿಶ್ಚರೈಸರ್ ಹೆಚ್ಚಾದರೆ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ

* ನಿಮ್ಮ ಮುಖದ ಕಾಂತಿ ಮಂಕಾಗುವುದು

* ತ್ವಚೆ ಉರಿ ಕೂಡ ಉಂಟಾಗಬಹುದು

* ಮುಖಕ್ಕೆ ಮೇಕಪ್ ಹಚ್ಚಿದಾಗ ಮುಖಕ್ಕೆ ಎಣ್ಣೆ ಹಚ್ಚಿ ಮೇಕಪ್ ಮಾಡಿದ ರೀತಿಯಲ್ಲಿ ಕಾಣುವುದರಿಂದ ಮುಖದ ಹೊಳಪು ಕಡಿಮೆಯಾಗುವುದು.

ತ್ವಚೆಯ ಕೋಮಲತೆಗಾಗಿ ಮಾಯಿಶ್ಚರೈಸರ್ ಕೊಳ್ಳುವಾಗ ಈ ಅಂಶಗಳನ್ನು ಗಮನಿಸಿ:

ತ್ವಚೆಯ ಕೋಮಲತೆಗಾಗಿ ಮಾಯಿಶ್ಚರೈಸರ್ ಕೊಳ್ಳುವಾಗ ಈ ಅಂಶಗಳನ್ನು ಗಮನಿಸಿ:

1. ನಿಮ್ಮ ತ್ವಚೆಗೆ ತಕ್ಕಂತಹ ಮಾಯಿಶ್ಚರೈಸರ್ ಖರೀದಿ ಮಾಡಿ ನಿಮ್ಮದು ಒಣ ತ್ವಚೆಯಾಗಿದ್ದರೆ ನಿಮ್ಮ ತ್ವಚೆಯಲ್ಲಿ ತೇವಾಂಶ ಉಳಿಯುವಂತೆ ಮಾಡುವ ಮಾಯಿಶ್ಚರೈಸರ್ ಬಳಸಿ. ಎಣ್ಣೆ ತ್ವಚೆಯಾಗಿದ್ದರೆ ನಾರ್ಮಲ್ ಮಾಯಿಶ್ಚರೈಸರ್ ಸಾಕು. ನಿಮ್ಮದು ಸೆನ್ಸಿಟಿವ್ ಸ್ಕಿನ್ (ಸೂಕ್ಷ್ಮ ತ್ವಚೆ) ಆಗಿದ್ದರೆ ಅದಕ್ಕೆ ಹೊಂದುವಂಥ ಕ್ರೀಮ್ ಬಳಸಿ.

2. ನಿಮ್ಮ ತ್ವಚೆಗೆ ತಕ್ಕಂಥ ಮಾಯಿಶ್ಚರೈಸರ್ ಬಳಸಬೇಕೆ ಹೊರತು ನಿಮ್ಮ ತ್ವಚೆ ಬಣ್ಣಕ್ಕೆ ಹೊಂದುವಂಥ ಮಾಯಿಶ್ಚರೈಸರ್ ಇಲ್ಲ. ನಿಮ್ಮ ತ್ವಚೆ ತುಂಬಾ ಶುಷ್ಕವಾಗುತ್ತಿದ್ದರೆ ಹಾಲಿನಂಶ ಅಧಿಕವಿರುವ ಕ್ರೀಮ್ ಬಳಸಿ. ಒಣ ಚರ್ಮದವರು ಮಾಯಿಶ್ಷರೈಸರ್ ಹಚ್ಚುವುದರಿಂದ ತುರಿಕೆ ಮತ್ತು ಉರಿಯೂತವನ್ನು ಕಡಿಮೆಯಾಗುತ್ತವೆ. ನಿಮ್ಮ ಮಾಯಿಶ್ಚರೈಸರ್‌ನಲ್ಲಿ ಗ್ಲಿಸರಿನ್, ಹೈಲುರಾನಿಕ್ ಆಮ್ಲ, ಸೋಡಿಯಂ ಹೈಲುರೋನೆಟ್, ವಿಟಮಿನ್ ಇ, ಪ್ಯಾಂಥೆನಾಲ್ ಅಂಶಗಳಿದ್ದರೆ ತ್ವಚೆಗೆ ಒಳ್ಳೆಯದು.

ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್

ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್

3. ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್ ಲೋಷನ್ ಬಳಸುವುದಕ್ಕಿಂತ ಕ್ರೀಮ್ ಬಳಸಿದರೆ ಒಳ್ಳೆಯದು. ಹೈರುಲಾನಿಕ್ ಆಮ್ಲ, ಗ್ಲೈಕಾಲ್ ನಿಯಾಸಿನಮೈಡ್ ರೆಟಿನಾಯ್ಡ್ ಸ್ಯಾಲಿಸಿಲಿಕ್ ಆಮ್ಲ, ಸತು, ಪಿಪಿಎ ಲ್ಯಕ್ಟಿಕ್ ಆಮ್ಲ ಇರುವ ಮಾಯಿಸ್ಚರೈಸರ್ ಕ್ರೀಮ್ ಒಳ್ಳೆಯದು.

4. ಸೂಕ್ಷ್ಮ ತ್ವಚೆಯವರು ಮಾಯಿಶ್ಚರೈಸರ್‌ ಅನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಸೂಕ್ಷ್ಮ ತ್ವಚೆಯವರು ಬಳಸುವ ಮಾಯಿಶ್ಚರೈಸರ್‌ಗಳಲ್ಲಿ ಪ್ರಮುಖವಾಗಿ ಟೈಟಾನಿಯಂ, ಡೈಆಕ್ಸೈಡ್, ಶಿಯಾ ಬೆಣ್ಣೆ, ವಿಟಮಿನ್-ಇ, ಹೈಲುರಾನಿಕ್ ಆಮ್ಲ, ಕ್ಯಾಮೊಮೈಲ್ ಸಾರ, ಜೊಜೊಬಾ ಸಾರಗಳು ಇದ್ದರೆ ತ್ವಚೆಗೆ ಒಳ್ಳೆಯದು.

English summary

How Over Moisturizing Will Affect Your Skin?

It is a known fact that how moisturisers help to maintain healthy skin.But Do You know over mosisturizing will affect on your healthy skin. To Know more about Over use moisturizing affect read this article.
X
Desktop Bottom Promotion