For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ, ಯಾವ ಬಗೆಯ ಚರ್ಮದ ಸಮಸ್ಯೆಯೂ ಬಾರದು

|

ಮುಖದ ಮೇಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ತ್ವಚೆಯ ಆರೈಕೆಯು ಅತೀ ಅಗತ್ಯವಾಗಿರುವುದು. ಬೇಸಗೆಯ ಬಿರು ಬಿಸಿಲು, ಮಳೆಗಾಲದ ಕಲುಷಿತ ನೀರು ಮತ್ತು ಚಳಿಗಾಲದ ಶೀತ ಗಾಳಿಯು ತ್ವಚೆಯ ಮೇಲೆ ಹಲವಾರು ರೀತಿಯಿಂದ ಹಾನಿ ಉಂಟು ಮಾಡುವುದು. ಅದರಲ್ಲೂ ಚಳಿಗಾದಲ್ಲಿ ತ್ವಚೆಗೆ ಹೆಚ್ಚಿನ ಹಾನಿಯಾಗುವುದು.

ಯಾಕೆಂದರೆ ತ್ವಚೆಯು ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದಾಗಿ ಅದು ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳದೆ ಇರುವುದು. ಇದರ ಪರಿಣಾಮ ಚರ್ಮವು ಒಣಗುವುದು ಮತ್ತು ಕೆಲವೊಂದು ಸಲ ನೆರಿಗೆ ಕೂಡ ಕಾಣಿಸಿಕೊಳ್ಳುವುದು. ಚಳಿಗಾಲದಲ್ಲಿ ಚರ್ಮವು ಮೊಶ್ಚಿರೈಸ್ ಕಳೆದುಕೊಳ್ಳುವುದು ಕೂಡ ಇದಕ್ಕೆ ಕಾರಣವಾಗಿದೆ. ಮುಖದ ಚರ್ಮಕ್ಕಾಗಿ ಚಳಿಗಾಲದಲ್ಲಿ ತಯಾರಿಸಿಕೊಳ್ಳಬಹುದಾದ ಹಲವಾರು ರೀತಿಯ ಫೇಶಿಯಲ್ ಗಳ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ. ಇದರಿಂದ ತ್ವಚೆಯ ಆರೈಕೆ ಮಾಡಬಹುದು.

ತೇವಾಂಶ ನೀಡಿ

ತೇವಾಂಶ ನೀಡಿ

ವರ್ಷದ ಯಾವುದೇ ಸಮಯವಾದರೂ ದೇಹಕ್ಕೆ ಸರಿಯಾದ ತೇವಾಂಶವು ಸಿಗದೆ ಇದ್ದರೆ ಆಗ ಆರೋಗ್ಯಕರ, ಮೊಶ್ಚಿರೈಸ್ ಮತ್ತು ನಯವಾದ ಮುಖದ ಚರ್ಮವನ್ನು ಪಡೆಯಲು ಸಾಧ್ಯವಿಲ್ಲ. ಚರ್ಮಕ್ಕೆ ತೇವಾಂಶ ನೀಡಲು ವರ್ಷಪೂರ್ತಿ ಪ್ರಯತ್ನಿಸುತ್ತಾ ಇರಬೇಕು. ಅದರಲ್ಲೂ ಚಳಿಗಾಲದಲ್ಲಿ ನೀವು ಇದರ ಬಗ್ಗೆ ಸ್ವಲ್ಪ ಹೆಚ್ಚು ಮುತುವರ್ಜಿ ವಹಿಸಬೇಕು. ತೇವಾಂಶವೆನ್ನುವುದು ಒಳಗಿನಿಂದ ಹೊರಗೆ ಬರುವುದು. ನಮ್ಮ ದೇಹದ ಹೆಚ್ಚಿನ ಭಾಗವು ನೀರಿನಿಂದ ಕೂಡಿದೆ. ಇದರಿಂದಾಗಿ ನಾವು ಹೆಚ್ಚು ನೀರನ್ನು ಸೇವನೆ ಮಾಡಬೇಕು. ಯಾಕೆಂದರೆ ನಮ್ಮ ದೇಹದಿಂದ ನೀರಿನ ಅಂಶವು ಬೆವರು, ಕಲ್ಮಶ ಹಾಗೂ ಶಕ್ತಿಯ ಮೂಲಕ ಹೊರಹೋಗುವುದು.

ನೀರು ಸೇವನೆ

ನೀರು ಸೇವನೆ

ನಿಮ್ಮ ತೂಕವನ್ನು ನೋಡಿಕೊಂಡು ನೀರಿನ ಸೇವನೆ ಮಾಡಬೇಕು. ನಿಮ್ಮ ತೂಕವನ್ನು ಎರಡರಿಂದ ಭಾಗಿಸಿದರೆ ಆಗ ಬರುವಂತಹ ಉತ್ತರವೇ ನೀವು ಕುಡಿಯಬೇಕಾಗಿರುವಂತಹ ನೀರು. ಅದು ಔನ್ಸ್ ನಲ್ಲಿ ಇರುವುದು. ನೀವು ಒಳಗಡೆ ಕೆಲಸ ಮಾಡುತ್ತಿದ್ದರೆ ಮತ್ತು ಹೆಚ್ಚಾಗಿ ಜಡವಾಗಿಯೇ ಇದ್ದರೆ ಇಷ್ಟು ಪ್ರಮಾಣದ ನೀರು ಸೇವನೆ ಮಾಡಬೇಕು. ಉದಾಹರಣೆಗೆ ನೀವು 120 ಪೌಂಡ್ ತೂಕ ಹೊಂದಿದ್ದರೆ ಆಗ ನೀವು 60 ಔನ್ಸ್ ನಷ್ಟು ನೀರಿನಾಂಶ ಸೇವನೆ ಮಾಡಬೇಕು.(ಇದು ಆಹಾರ ಮತ್ತು ಬೇರೆ ಪಾನೀಯಗಳಲ್ಲಿ ಸೇರಿರುವ ನೀರನ್ನು ಸೇರಿ). ನೀವು ಅತಿ ಕಠಿಣ ಪರಿಶ್ರಮದ ಕೆಲಸ ಮಾಡುತ್ತಲಿದ್ದರೆ ಅಥವಾ ವ್ಯಾಯಾಮ ಮಾಡುತ್ತಲಿದ್ದರೆ ಆಗ ನೀವು ನೀರಿನ ಸೇವನೆ ಹೆಚ್ಚು ಮಾಡಿಕೊಳ್ಳಿ.

ಸನ್ ಸ್ಕ್ರೀನ್ ಬಳಸಿಕೊಳ್ಳಿ

ಸನ್ ಸ್ಕ್ರೀನ್ ಬಳಸಿಕೊಳ್ಳಿ

ನೀವು ವರ್ಷಪೂರ್ತಿ ಮನೆಯಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸಿಕೊಳ್ಳಿ. ಅದರಲ್ಲೂ ತುಂಬಾ ಬಿಸಿಲು ಇರುವಂತಹ ದಿನಗಳಲ್ಲಿ ನೀವು ಇದನ್ನು ಹಚ್ಚಿಕೊಳ್ಳಿ. ಯಾಕೆಂದರೆ ಇದು ಬಿಸಿಲಿನಿಂದ ಆಗುವಂತಹ ಹಾನಿಯನ್ನು ತಡೆಯುವುದು. ಇದು ಚಳಿಗಾಲದಲ್ಲೂ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುವುದು. ನೀವು ಬಿಸಿಲಿಗೆ ಹೆಚ್ಚು ಮೈಯೊಡ್ಡದೆ ಇದ್ದರೆ ಆಗ ನೀವು ದೈನಂದಿನ ಸೌಂದರ್ಯ ಆರೈಕೆಯಲ್ಲಿ ಎಸ್ ಪಿಎಫ್ 15 ಅಥವಾ 30 ಇರುವಂತಹ ಸನ್ ಸ್ಕ್ರೀನ್ ಬಳಸಿಕೊಳ್ಳಿ. ನೀವು ಒಂದು ಗಂಟೆಗಿಂತಲೂ ಹೆಚ್ಚು ಸಮಯ ಹೊರಗಡೆ ಇರುವುದಾದರೆ ಆಗ ನೀವು ಎಸ್ ಪಿಎಫ್ 50 ಸನ್ ಸ್ಕ್ರೀನ್ ಬಳಸಿಕೊಳ್ಳಿ. ಕೆಲವೊಂದು ಮೇಕಪ್ ಉತ್ಪನ್ನಗಳಾಗಿರುವಂತಹ ಫೌಂಡೇಶನ್ ಮತ್ತು ಮೊಶ್ಚಿರೈಸರ್ ಗಳಲ್ಲಿ ಕೂಡ ಸನ್ ಸ್ಕ್ರೀನ್ ಇದೆ. ಆದರೆ ಇದನ್ನು ತುಂಬಾ ತೆಳುವಾಗಿ ಹಚ್ಚಿಕೊಳ್ಳುವ ಕಾರಣದಿಂದಾಗಿ ಇದು ರಕ್ಷಣೆ ನೀಡದು. ಮೇಕಪ್ ಹಚ್ಚಿಕೊಳ್ಳುವ ಮೊದಲು ನೀವು ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಅಂಟು ಅಥವಾ ಒಡೆದಂತೆ ಆಗುತ್ತಲಿದ್ದರೆ ಆಗ ನೀವು ಮೇಕಪ್ ಗೆ ಸನ್ ಸ್ಕ್ರೀನ್ ಬಳಸುವ ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿಡಿ.

Most Read: ಚಳಿಗಾಲದ ಸಮಯದಲ್ಲಿ ತ್ವಚೆಯ ಆರೈಕೆಗೆ ಸರಳ ಬ್ಯೂಟಿ ಟಿಪ್ಸ್

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ನಿಮ್ಮ ತ್ವಚೆಯು ಹಲವಾರು ಅಂಶಗಳನ್ನು ಒಳಗೊಂಡಿರುವುದು. ಇದರಲ್ಲಿ ಮುಖ್ಯವಾಗಿ ನೀವು ಸೇವಿಸುವಂತಹ ಆಹಾರವು ಕೂಡ ಪ್ರಮುಖವಾಗಿದೆ. ಸಮತೋಲಿತವಾಗಿರುವ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಇದು ನಿಮ್ಮ ತ್ವಚೆಯನ್ನು ಚಳಿಗಾಲದಲ್ಲೂ ತುಂಬಾ ಆರೋಗ್ಯವಾಗಿ ಇಡಲು ನೆರವಾಗುವುದು.

ಟ್ಯುನಾ ಮತ್ತು ಸಾಲ್ಮನ್ ಮೀನು

ಟ್ಯುನಾ ಮತ್ತು ಸಾಲ್ಮನ್ ಮೀನು

ನಿಮ್ಮ ಆಹಾರವು ಒಮೆಗಾ-3 ಮತ್ತು ಡಿಎಚ್ ಎಯಿಂದ ಸಮೃದ್ಧವಾಗಿರಲಿ. ಇದನ್ನು ನೀವು ಟ್ಯುನಾ ಮತ್ತು ಸಾಲ್ಮನ್ ನಂತಹ ಮೀನುಗಳಿಂದ ಪಡೆದುಕೊಳ್ಳಬಹುದು. ನೀವು ಮೀನು ಸೇವನೆ ಮಾಡದೆ ಇದ್ದರೆ ಆಗ ನೀವು ಡಿಎಚ್ ಎ ಸಪ್ಲಿಮೆಂಟ್ ತೆಗೆದುಕೊಳ್ಳಿ.

ಇತರ ಕೆಲವೊಂದು ಆರೋಗ್ಯಕಾರಿ ಎಣ್ಣೆಯಂಶ ಹೊಂದಿರುವಂತಹ ಆಹಾರಗಳಾಗಿರುವಂತಹ ಬೀಜಗಳು, ಆಲಿವ್ ತೈಲ, ತೆಂಗಿನಕಾಯಿ ಮತ್ತು ತೆಂಗಿನೆಣ್ಣೆ ಮತ್ತು ಬೆಣ್ಣೆ ಸೇವನೆ ಮಾಡಿ. ಕರಿದ ಆಹಾರ, ಸಂಸ್ಕರಿತ ಕೊಬ್ಬು ಮತ್ತು ಅತಿಯಾದ ಸಕ್ಕರೆ ಅಂಶ ಇರುವಂತಹ ಆಹಾರವನ್ನು ಕಡೆಗಣಿಸಿ. ಇದು ನಿಮ್ಮ ಚರ್ಮದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.

ಸೆಲೆನಿಯಂ ಇರುವ ಆಹಾರ ಸೇವಿಸಿ

ಸೆಲೆನಿಯಂ ಇರುವ ಆಹಾರ ಸೇವಿಸಿ

ಸೆಲೆನಿಯಂ ಒಂದು ಖನಿಜಾಂಶವಾಗಿದ್ದು, ಇದು ಫ್ರೀ ರ್ಯಾಡಿಕಲ್ ನಿಂದ ಉಂಟಾಗುವಂತಹ ಚರ್ಮದ ಮೇಲಿನ ಹಾನಿಯಿಂದ ರಕ್ಷಿಸುವುದು. ಬ್ರೆಜಿಲ್ ನಟ್, ಸಿಗಡಿ, ಮಾಂಸ ಮತ್ತು ಬಟನ್ ಮಶ್ರೂಮ್ ನಲ್ಲಿ ಸೆಲೆನಿಯಂ ಅಧಿಕವಾಗಿರುವುದು. ನೀವು ಸೆಲೆನಿಯಂ ಸಪ್ಲಿಮೆಂಟ್ ಗಳನ್ನು ಕೂಡ ತೆಗೆದುಕೊಳ್ಳಬಹುದು.

ಚಳಿಗಾಲದಲ್ಲಿ ಚರ್ಮದ ಆರೈಕೆ

ಚಳಿಗಾಲದಲ್ಲಿ ಚರ್ಮದ ಆರೈಕೆ

ನಿಮ್ಮ ಮುಖ ತೊಳೆಯುವ ವಿಧಾನವನ್ನು ಬದಲಾಯಿಸಿಕೊಳ್ಳಿ. ಇದಕ್ಕಾಗಿ ನೀವು ಕೆಲವೊಂದು ಪ್ರಯೋಗ ಮಾಡಬೇಕು ಮತ್ತು ನಿಮ್ಮ ಚರ್ಮಕ್ಕೆ ಅದು ಹೇಗೆ ಹೊಂದಿಕೊಳ್ಳುವುದು ಎಂದು ತಿಳಿಯಿರಿ. ಗಡುಸಾಗಿರುವಂತಹ ಸೋಪ್ ಗಳನ್ನು ನೀವು ಮುಖಕ್ಕೆ ಬಳಸಿ ಕೊಳ್ಳಬಾರದು. ಅದರಲ್ಲೂ ಚಳಿಗಾಲದಲ್ಲಿ ಇದು ನಿಷಿದ್ಧ.

ಕ್ಲೆನ್ಸರ್

ಕ್ಲೆನ್ಸರ್

ಲಘು ಕ್ಲೆನ್ಸರ್ ನ್ನು ಬಳಸಿಕೊಳ್ಳಿ. ಇದು ಆಲ್ಕೋಹಾಲ್ ಮತ್ತು ಸಲ್ಫೇಟ್ ನಿಂದ ಮುಕ್ತವಾಗಿರಲಿ. ಚಳಿಗಾಲದಲ್ಲಿ ಚರ್ಮವು ತುಂಬಾ ಅಮೂಲ್ಯವಾಗಿರುವುದು. ಇದರಿಂದಾಗಿ ನೀವು ಸೂಕ್ಷ್ಮ ಚರ್ಮಕ್ಕೆ ಬಳಸುವ ವಿಧಾನವನ್ನು ಬಳಸಿಕೊಳ್ಳಿ. ನಿಮ್ಮ ಚರ್ಮವು ಸೂಕ್ಷ್ಮವಲ್ಲದೆ ಇದ್ದರೂ ಇದು ಸಹಕಾರಿಯಾಗಲಿದೆ.

Most Read: ಚಳಿಗಾಲದಲ್ಲಿ ಒಡೆದ ಹಿಮ್ಮಡಿಗಳಿಗೆ ಕೆಲವು ನೈಸರ್ಗಿಕ ದೇಸೀ ಮನೆಮದ್ದುಗಳು

ಸೋಪ್

ಸೋಪ್

ಮುಖಕ್ಕೆ ಬಳಸುವಂತಹ ಸೋಪ್ ಚರ್ಮವನ್ನು ತುಂಬಾ ಬಿಗಿ, ಒಣ ಹಾಗೂ ಸರಿಯಾಗಿ ಶುಚಿಗೊಳಿಸದೆ ಇದ್ದರೆ ಆಗ ನೀವು ಬೇರೆ ಸೋಪ್ ನ್ನು ಬಳಸಿಕೊಳ್ಳಿ. ನೈಸರ್ಗಿಕವಾಗಿ ಸಿಗುವಂತಹ ಎಣ್ಣೆಯಿಂದ ಚರ್ಮಕ್ಕೆ ಸಿಗುವಂತಹ ರಕ್ಷಣೆಯನ್ನು ಇದು ಹಾನಿ ಮಾಡುತ್ತಿದೆ ಎಂದು ಹೇಳಬಹುದು.

ಚರ್ಮವು ತುಂಬಾ ಎಣ್ಣೆಯಂಶ ಅಥವಾ ಮೊಡವೆಯಿಂದ ಕೂಡಿದ್ದರೆ

ಚರ್ಮವು ತುಂಬಾ ಎಣ್ಣೆಯಂಶ ಅಥವಾ ಮೊಡವೆಯಿಂದ ಕೂಡಿದ್ದರೆ

ನಿಮ್ಮ ಚರ್ಮವು ತುಂಬಾ ಎಣ್ಣೆಯಂಶ ಅಥವಾ ಮೊಡವೆಯಿಂದ ಕೂಡಿದ್ದರೆ ಮಾತ್ರ ಫೇಶ್ ವಾಶ್ ಬಳಸಿ. ಇಲ್ಲವಾದಲ್ಲಿ ಕೇವಲ ನೀರಿನಿಂದ ಮುಖ ತೊಳೆಯಿರಿ. ಸೋಪ್ ನಿಂದ ಮುಖದಲ್ಲಿರುವಂತಹ ನೈಸರ್ಗಿಕ ಎಣ್ಣೆಯ ಪದರವು ಕಳೆದುಹೋಗುವುದು. ಇದರಿಂದ ಚರ್ಮವು ಎದ್ದು ಬರುವುದು ಮತ್ತು ಬೆಳಗ್ಗೆ ನೀವು ಎದ್ದ ಬಳಿಕ ಚರ್ಮವು ಅಷ್ಟಾಗಿ ಕಲ್ಮಷದಿಂದ ಕೂಡಿರದು. ಇದರಿಂದಾಗಿ ನೀವು ಖಾಲಿ ನೀರಿನಿಂದ ತೊಳೆಯಿರಿ.

ಸರಿಯಾದ ಮೊಶ್ಚಿರೈಸರ್

ಸರಿಯಾದ ಮೊಶ್ಚಿರೈಸರ್

ನಿಮ್ಮ ಚರ್ಮಕ್ಕೆ ಅನುಗುಣವಾಗಿ ಇದು ಭಿನ್ನವಾಗಿರುವುದು. ಆದರೆ ಸಾಮಾನ್ಯವಾಗಿ ಒಣ ಮತ್ತು ಚಳಿಗಾಲದ ತಿಂಗಳುಗಳಲ್ಲಿ ತುಂಬಾ ಗಾಢವಾದ ಕ್ರೀಮ್ ಗಳು ಒಲ್ಳೆಯದು. ಚಳಿಗಾಲದ ತಿಂಗಳಲ್ಲಿ ನಿಮಗೆ ಬೇಸಿಗೆ ಕಾಲದಷ್ಟು ಹೆಚ್ಚು ಬಿಸಿಯಾದರು. ಇದರಿಂದ ಮೊಶ್ಚಿರೈಸರ್ ಗೆ ಹಾನಿಯಾಗದು. ಕೆಲವು ಜನರು ಮಳೆಗಾಲ ಮತ್ತು ಬೇಸಿಗೆಯಲ್ಲಿ ಲಘು ಮೊಶ್ಚಿರೈಸರ್ ಮತ್ತು ಚಳಿಗಾಲದಲ್ಲಿ ತುಂಬಾ ಗಾಢವಾದ ಮೊಶ್ಚಿರೈಸರ್ ನ್ನು ಬಳಸಿಕೊಳ್ಳುವರು.

ಮುಖದ ಮೇಲೆ ಎಣ್ಣೆ

ಮುಖದ ಮೇಲೆ ಎಣ್ಣೆ

ಮುಖದ ಮೇಲೆ ಎಣ್ಣೆ ಬಳಸಿಕೊಳ್ಳಲು ನೀವು ಯಾವತ್ತೂ ಹಿಂಜರಿಯಬೇಡಿ. ಕೆಲವು ವರ್ಷಗಳ ಹಿಂದೆ ಮುಖದ ಉತ್ಪನ್ನಗಳಲ್ಲಿ ಇರುವಂತಹ ಎಣ್ಣೆಯಂಶವು ಮೊಡವೆಗಳನ್ನು ಉಂಟು ಮಾಡುವುದು ಎಂದು ನಂಬಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಮುಖದ ಉತ್ಪನ್ನಗಳಲ್ಲಿ ಹೆಚ್ಚಾಗಿ ಜೊಜೊಬಾ, ಸಿಹಿ ಬಾದಾಮಿ, ಅರ್ಗನ್, ಅವಕಾಡೋ ಮತ್ತು ತೆಂಗಿನೆಣ್ಣೆಯು ಇದೆ. ಎಣ್ಣೆಯುಕ್ತವಾಗಿರುವ ಕ್ರೀಮ್ ನ್ನು ನೀವು ಮುಖಕ್ಕೆ ಬಳಸಿಕೊಳ್ಳಿ. ಇದರಿಂದ ಚಳಿಗಾಲದಲ್ಲಿ ತ್ವಚೆಗೆ ಹೆಚ್ಚಿನ ಮೊಶ್ಚಿರೈಸರ್ ಸಿಗುವುದು.

English summary

Ways to Care for the Face in Winter

Facial skin is sensitive and delicate, but takes quite a beating in terms of exposure to weather, chemicals, and pollution. The wintertime is particularly harsh to skin in cold climates, as the skin tends to lose moisture. There are several ways to prepare for winter's effects on facial skin, as well as dealing with wintertime skincare.
X
Desktop Bottom Promotion