For Quick Alerts
ALLOW NOTIFICATIONS  
For Daily Alerts

ತ್ವಚೆಯ ವಿವಿಧ ಸಮಸ್ಯೆಗಳ ನಿವಾರಣೆಗೆ ಮುಲ್ತಾನಿ ಮಿಟ್ಟಿ ಬಳಸಿ

|

ಕಲುಷಿತ ವಾತಾವರಣ, ಸರಿಯಾದ ಆರೈಕೆ ಇಲ್ಲದಿರುವುದು, ಜೀವನಶೈಲಿ ಅಥವಾ ಅನುವಂಶೀಯತೆಯಿಂದ ತ್ವಚೆಯ ಸಮಸ್ಯೆಗಳು ಬರಬಹುದು. ಯಾವುದೇ ಚರ್ಮದ ಸಮಸ್ಯೆಯಾದರೂ ಅದಕ್ಕೆ ಪರಿಹಾರ ನೀಡಲು ಕೆಲವೊಂದು ನೈಸರ್ಗಿಕ ವಿಧಾನಗಳು ಇವೆ. ಇಂತಹ ಒಂದು ನೈಸರ್ಗಿಕ ವಿಧಾನವೆಂದರೆ ಅದು ಮುಲ್ತಾನಿ ಮಿಟ್ಟಿ.

ಮುಲ್ತಾನಿ ಮಿಟ್ಟಿಯು ಅದ್ಭುತವಾದ ಹೀರಿಕೊಳ್ಳುವ ಗುಣ ಹೊಂದಿದೆ ಮತ್ತು ಇದು ತ್ವಚೆಗೆ ಪುನರ್ಶ್ಚೇತನ ನೀಡುವಲ್ಲಿ ಅತೀ ಪ್ರಮುಖ ಪಾತ್ರ ನಿರ್ವಹಿಸುವುದು. ಮುಲ್ತಾನಿ ಮಿಟ್ಟಿಯಲ್ಲಿ ಇರುವಂತಹ ಉನ್ನತ ಮಟ್ಟದ ಖನಿಜಾಂಶಗಳು ತ್ವಚೆಯನ್ನು ಶುದ್ಧೀಕರಿಸಲು ಮತ್ತು ಆರೈಕೆ ಮಾಡಲು ನೆರವಾಗಲಿದೆ.

Multani Mitti

ಹೀರಿಕೊಳ್ಳುವ ಅದ್ಭುತ ಗುಣವನ್ನು ಹೊಂದಿರುವಂತಹ ಮುಲ್ತಾನಿ ಮಿಟ್ಟಿಯು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದಲ್ಲಿರುವಂತಹ ಕಲ್ಮಷವನ್ನು ದೂರ ಮಾಡುವುದು. ಇದರಿಂದಾಗಿ ಚರ್ಮವು ತುಂಬಾ ಆರೋಗ್ಯ ಮತ್ತು ಕಾಂತಿಯುತವಾಗಿ ಇರುವುದು. ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಯಾವುದೇ ವಿಧದ ಚರ್ಮವಿದ್ದರೂ ಇದನ್ನು ಬಳಸಿಕೊಳ್ಳಬಹುದು.
ಈ ಲೇಖನದಲ್ಲಿ ಮುಲ್ತಾನಿ ಮಿಟ್ಟಿಯಿಂದ ಚರ್ಮಕ್ಕೆ ಸಿಗುವ ಲಾಭಗಳ ಬಗ್ಗೆ ನಾವು ಚರ್ಚೆ ಮಾಡಲಿದ್ದೇ ಮತ್ತು ಇದು ವಿವಿಧ ರೀತಿಯ ಚರ್ಮದ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಲಿದೆ ಎಂದು ತಿಳಿಯುವ.

Most Read: ಪುರಾತನ ಕಾಲದ ಸೌಂದರ್ಯ ರಹಸ್ಯ-ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯ ಲಾಭಗಳು

•ಎಣ್ಣೆಯುಕ್ತ ಚರ್ಮಕ್ಕೆ ಇದು ನೆರವಾಗುವುದು.
•ಮೊಡವೆ ನಿವಾರಿಸುವುದು.
•ಚರ್ಮದ ವಿನ್ಯಾಸ ಸುಧಾರಿಸುವುದು.
•ಚರ್ಮಕ್ಕೆ ಪೋಷಣೆಯನ್ನು ನೀಡುವುದು.
•ಬಿಸಿಲಿನ ಸುಟ್ಟ ಕಲೆಗಳಿಗೆ ಶಮನ ನೀಡುವುದು.
•ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು.
•ಕಲೆ ಮತ್ತು ಗಾಯದ ಕಲೆ ತೆಗೆಯುವುದು.
•ಚರ್ಮವನ್ನು ಮೃಧುವಾಗಿಸುವುದು.
•ಮೊಡವೆ ಕಲೆಗಳ ನಿವಾರಣೆ ಮಾಡಲು ನೆರವಾಗುವುದು.

ಚರ್ಮಕ್ಕೆ ಮುಲ್ತಾನಿ ಮಿಟ್ಟಿ ಬಳಸುವುದು ಹೇಗೆ

1.ಎಣ್ಣೆಯುಕ್ತ ಚರ್ಮಕ್ಕೆ

ಶ್ರೀಗಂಧವು ಸಂಕೋಚನ ಗುಣ ಹೊಂದಿದೆ. ಇದು ಚರ್ಮದ ರಂಧ್ರವನ್ನು ಮುಚ್ಚುವುದು ಮತ್ತು ಚರ್ಮವನ್ನು ಬಿಗಿಯಾಗಿಸುವುದು. ಚರ್ಮದಲ್ಲಿ ಮೇಧೋಸ್ರಾದ ಉತ್ಪತ್ತಿಯನ್ನು ನಿಯಂತ್ರಿಸುವುದು.

ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•ಒಂದು ಚಮಚ ಶ್ರೀಗಂಧದ ಹುಡಿ
•ನೀರು(ಬೇಕಾದಷ್ಟು)

ಬಳಸುವ ವಿಧಾನ
•ಮುಲ್ತಾನಿ ಮಿಟ್ಟಿಯನ್ನು ಒಂದು ಪಿಂಗಾಣಿಗೆ ಹಾಕಿಕೊಳ್ಳಿ.
•ಇದಕ್ಕೆ ಶ್ರೀಗಂಧದ ಹುಡಿ ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳಿ.
•ಬೇಕಾದಷ್ಟು ನೀರು ಹಾಕಿಕೊಂಡು ದಪ್ಪದ ಪೇಸ್ಟ್ ಮಾಡಿಕೊಳ್ಳಿ.
•ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ಸರಿಯಾಗಿ ತೊಳೆಯಿರಿ.

2. ಒಣ ಚರ್ಮಕ್ಕಾಗಿ

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಕಿತ್ತು ಹಾಕುವ ಗುಣ ಹೊಂದಿದೆ ಮತ್ತು ಚರ್ಮಕ್ಕೆ ಮೊಶ್ಚಿರೈಸ್ ನೀಡಿ ಒಣ ಚರ್ಮದ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಚರ್ಮದ ಸೌಂದರ್ಯವು ಹೆಚ್ಚಾಗುವಂತೆ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು
•ಒಂದು ಚಮಚ ಮುಲ್ತಾನಿ ಮಿಟ್ಟಿ
•11/2 ಚಮಚ ಮೊಸರು

Most Read: ಮುಖದ ಅಂದಕ್ಕೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ತಯಾರಿಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿ.
•ಇದಕ್ಕೆ ಮೊಸರು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.
•ಮುಖ ತೊಳೆಯಿರಿ ಮತ್ತು ಒರೆಸಿಕೊಳ್ಳಿ.
•ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
•ಒಣಗಲು 15 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆದು. ಸ್ವಚ್ಛ ಬಟ್ಟೆ ಬಳಸಿಕೊಂಡು ಮುಖ ಒರೆಸಿಕೊಳ್ಳಿ.

3.ಕಾಂತಿಯುತ ಚರ್ಮಕ್ಕಾಗಿ

ಚರ್ಮಕ್ಕೆ ಕಾಂತಿ ನೀಡುವಂತಹ ಅರಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದು. ಟೊಮೆಟೊ ರಸದಲ್ಲಿ ಒಳ್ಳೆಯ ಬ್ಲೀಚಿಂಗ್ ಗುಣಗಳು ಇವೆ ಮತ್ತು ಇದು ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಚರ್ಮದ ಬಣ್ಣ ಸುಧಾರಿಸುವುದು.

ಬೇಕಾಗುವ ಸಾಮಗ್ರಿಗಳು
•2 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಟೊಮೆಟೊ ರಸ
•½ ಚಮಚ ಶ್ರೀಗಂಧದ ಹುಡಿ

ಬಳಸುವ ವಿಧಾನ
•ಪಿಂಗಾಣಿಗೆ ಮುಲ್ತಾನಿ ಮಿಟ್ಟಿ ಹಾಕಿ.
•ಇದಕ್ಕೆ ಶ್ರೀಗಂಧದ ಹುಡಿ ಮತ್ತು ಅರಶಿನ ಹುಡಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈಗ ಇದಕ್ಕೆ ಟೊಮೆಟೊ ರಸ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ.
•ಈ ಪೇಸ್ಟ್ ನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•10-15 ನಿಮಿಷ ಕಾಲ ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

4.ಬಿಸಿಲಿನ ಕಲೆಗಳಿಗೆ

ಪಪ್ಪಾಯಿಯಲ್ಲಿ ಉನ್ನತ ಮಟ್ಟ ಆಂಟಿಆಕ್ಸಿಡೆಂಟ್ ಗುಣಗಳು ಇವೆ ಮತ್ತು ಇದು ಬಿಸಿಲಿನಿಂದಾಗಿ ಆಗಿರುವಂತಹ ಚರ್ಮದಲ್ಲಿನ ಸತ್ತ ಕೋಶಗಳು, ಧೂಳು ಮತ್ತು ಕಲ್ಮಷವನ್ನು ತೆಗೆಯಲು ನೆರವಾಗುವುದು.

Most Read: ಅಪ್ಸರೆಯಂತಹ ತ್ವಚೆಗಾಗಿ ಬಳಸಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್‍

ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•2-3 ತುಂಡು ಪಪ್ಪಾಯಿ.

ಬಳಸುವ ವಿಧಾನ
•ಪಪ್ಪಾಯಿ ತುಂಡುಗಳನ್ನು ಜಜ್ಜಿಕೊಳ್ಳಿ.
•ಇದಕ್ಕೆ ಮುಲ್ತಾನಿ ಮಿಟ್ಟಿ ಹಾಕಿ ಮತ್ತು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಇದನ್ನು ಹಾಗೆ ಒಣಗಲು ಬಿಡಿ.
•ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದ ಬಳಿಕ ಒರೆಸುವ ಬಟ್ಟೆ ಬಳಸಿಕೊಂಡು ಒರೆಸಿ.

5.ಮೊಡವೆಯ ಕಲೆಗಳಿಗೆ

ಬ್ಲೀಚಿಂಗ್ ಗುಣವನ್ನು ಹೊಂದಿರುವಂತಹ ಲಿಂಬೆಯಲ್ಲಿರುವ ವಿಟಮಿನ್ ಸಿ ಅಂಶವು ಚರ್ಮಕ್ಕೆ ಚಿಕಿತ್ಸಕ ಮತ್ತು ಮೊಡವೆ ಕಲೆಗಳನ್ನು ನಿವಾರಣೆ ಮಾಡುವುದು. ರೋಸ್ ವಾಟರ್ ಸಂಕೋಚನ ಗುಣವನ್ನು ಹೊಂದಿದೆ ಮತ್ತು ಇದು ಚರ್ಮವನ್ನು ಬಿಗಿಯಾಗಿಸುವುದು.

ಬೇಕಾಗುವ ಸಾಮಗ್ರಿಗಳು
•2 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಲಿಂಬೆ ರಸ
•1 ಚಮಚ ರೊಸ್ ವಾಟರ್

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿಕೊಳ್ಳಿ.
•ಇದಕ್ಕೆ ಲಿಂಬೆರಸ ಮತ್ತು ರೋಸ್ ವಾಟರ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿ.
•ಮುಖ ತೊಳೆಯರಿ ಮತ್ತು ಒರೆಸಿಕೊಳ್ಳಿ.
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.

6.ಬೊಕ್ಕೆಗಳಿಗೆ

ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ಚರ್ಮದಲ್ಲಿ ಮೆಲನಿನ್ ಜಮೆ ಆಗುವುದನ್ನು ತಡೆಯುತ್ತದೆ ಮತ್ತು ಇದರಿಂದ ಬೊಕ್ಕೆಗಳು ನಿರ್ಮಾಣವಾಗದಂತೆ ತಡೆಯುತ್ತದೆ. ಆಲಿವ್ ತೈಲವು ಚರ್ಮಕ್ಕೆ ಮೊಶ್ಚಿರೈಸ್ ನಿಡುವುದು ಮತ್ತು ಚರ್ಮವನ್ನು ತುಂಬಾ ಮೃಧು ಮತ್ತು ಸುಂದರವಾಗಿಸುವುದು.

ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ತುರಿದ ಕ್ಯಾರೆಟ್
•1 ಚಮಚ ಆಲಿವ್ ತೈಲ

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿಕೊಳ್ಳಿ.
•ಇದಕ್ಕೆ ಈಗ ಕ್ಯಾರೆಟ್ ಹಾಕಿಕೊಳ್ಳಿ ಮತ್ತು ಸರಿಯಾಗಿ ಕಲಸಿಕೊಳ್ಳಿ.
•ಇದಕ್ಕೆ ಈಗ ಆಲಿವ್ ತೈಲ ಹಾಕಿ ಮತ್ತು ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•15 ನಿಮಿಷಗಳ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆದುಕೊಳ್ಳಿ.

7. ಅಸಮ ಚರ್ಮದ ಬಣ್ಣಕ್ಕಾಗಿ

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮದ ಕಿತ್ತು ಹಾಕುವ ಗುಣ ಹೊಂದಿದೆ ಮತ್ತು ಚರ್ಮದಲ್ಲಿರುವ ಸತ್ತ ಕೋಶ, ಕಲ್ಮಶ ತೆಗೆದು ಚರ್ಮಕ್ಕೆ ಬಣ್ಣ ನೀಡುವುದು. ಮೊಟ್ಟೆಯ ಬಿಳಿ ಲೋಳೆಯು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು ಮತ್ತು ವಯಸ್ಸಾಗುವ ಲಕ್ಷಣಗಳಾಗಿರುವಂತಹ ನೆರಿಗೆ ಮತ್ತು ಗೆರೆಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು
•¼ ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಮೊಸರು
•1 ಮೊಟ್ಟೆಯ ಬಿಳಿ ಲೋಳೆ

ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿಕೊಳ್ಳಿ ಮತ್ತು ಇದನ್ನು ಸರಿಯಾಗಿ ಕಲಸಿಕೊಂಡು ಮೆತ್ತಗಿನ ಮಿಶ್ರಣ ಮಾಡಿಕೊಳ್ಳಿ.
•ಇದಕ್ಕೆ ಮೊಸರು ಮತ್ತು ಮುಲ್ತಾನಿ ಮಿಟ್ಟಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮೆತ್ತಗಿನ ಪೇಸ್ಟ್ ಮಾಡಿ.
•ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ.

8.ಒರಟು ಚರ್ಮಕ್ಕಾಗಿ

ಸಕ್ಕರೆಯಲ್ಲಿ ಕಿತ್ತುಹಾಕುವಂತೆ ಒಳ್ಳೆಯ ಗುಣಗಳು ಇವೆ. ಅದೇ ರೀತಿಯಾಗಿ ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ ಇದ್ದು, ಕಾಲಜನ್ ಉತ್ಪತ್ತಿಯನ್ನು ಇದು ಉತ್ತೇಜಿಸುವುದು. ಇದರಿಂದ ಚರ್ಮವು ಮೃಧು ಮತ್ತು ಬಿಗಿಯಾಗುವುದು.

ಬೇಕಾಗುವ ಸಾಮಗ್ರಿಗಳು
•2 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಸಕ್ಕರೆ
•2-3 ಚಮಚ ತೆಂಗಿನ ಹಾಲು

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿ.
•ಇದಕ್ಕೆ ಸಕ್ಕರೆ ಮತ್ತು ತೆಂಗಿನ ಹಾಲು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಇದಕ್ಕೆ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಮುಖಕ್ಕೆ ಹಾಗೆ ಸ್ಕ್ರಬ್ ಮಾಡಿಕೊಳ್ಳಿ.
•10-15 ನಿಮಿಷ ಕಾಲ ನೀವು ಇದನ್ನು ಹಾಗೆ ಬಿಡಿ.
•ಇದರ ಬಳಿಕ ಸರಿಯಾಗಿ ತೊಳೆಯಿರಿ.

9. ಮೊಡವೆಗಳಿಗೆ

ವಿಟಮಿನ್ ಗಳು ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿರುವಂತಹ ಅಲೋವೆರಾ ಲೋಳೆಯು ನಂಜುನಿರೋಧಕ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗೂನಗಳನ್ನು ಹೊಂದಿದೆ. ಇದು ಮೊಡವೆ ವಿರುದ್ಧ ಹೋರಾಡುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಅಲೋವೆರಾ ಲೋಳೆ

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿ.
•ಇದಕ್ಕೆ ಅಲೋವೆರಾ ಲೋಳೆ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಒಣಗಲು ಬಿಡಿ.
•ಇದರ ಬಳಿಕ ನೀರಿನಿಂದ ತೊಳೆಯಿರಿ.

10.ಪೇಲವ ಚರ್ಮಕ್ಕಾಗಿ

ಹಾಲಿನಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ ಮತ್ತು ಅಲ್ಪಾ ಹೈಡ್ರಾಕ್ಸಿ ಆಮ್ಲವಿದ್ದು, ಇದು ಚರ್ಮಕ್ಕೆ ಆಳವಾಗಿ ಪೋಷಣೆ ನೀಡುವುದು ಮತ್ತು ಶುದ್ಧ ಮಾಡುವುದು. ಇದರಿಂದ ನಿಸ್ತೇಜ ಮತ್ತು ಹಾನಿಗೀಡಾದ ಚರ್ಮವು ಪುನರ್ಶ್ಚೇತನಗೊಳ್ಳುವುದು.

ಬೇಕಾಗುವ ಸಾಮಗ್ರಿಗಳು
•2 ಚಮಚ ಮುಲ್ತಾನಿ ಮಿಟ್ಟಿ
•ಒಂದು ಚಿಟಿಕೆ ಅರಶಿನ
•ಹಸಿ ಹಾಲು(ಬೇಕಾದಷ್ಟು)

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿ
•ಇದಕ್ಕೆ ಅರಿಶಿನ ಹಾಕಿ ಮತ್ತು ಸರಿಯಾಗಿ ಕಲಸಿ
•ಇದಕ್ಕೆ ಸರಿಯಾಗಿ ಹಾಲು ಹಾಕಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಒಣಗಲು ಬಿಡಿ
•ಇದರ ಬಳಿಕ ತೊಳೆಯಿರಿ

English summary

Use Multani Mitti To Tackle Different Skin Issues

Multani mitti, also known as fuller's earth, is a clay with amazing absorbent properties that have made it an ideal ingredient to rejuvenate the skin. Rich in minerals, multani mitti is effective in cleansing and toning the skin. It can be used with ingredients like curd, aloe vera, sandalwood etc. to improve skin health and combat various skin issues. Here is how!
X
Desktop Bottom Promotion