Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಕಾಂತಿಯುಕ್ತ, ಪ್ರಜ್ವಲಿಸುವ ತ್ವಚೆಗಾಗಿ ಸಂಪೂರ್ಣ ನೈಸರ್ಗಿಕ ಆರೈಕೆಯ ಗುಟ್ಟು
ಸಿನೇಮಾ ತಾರೆಯರನ್ನು ಅವರ ಪ್ರತಿಭೆಗಿಂತಲೂ ಸೌಂದರ್ಯಕ್ಕಾಗಿಯೇ ಹೆಚ್ಚಿನವರು ಮೆಚ್ಚುತ್ತಾರೆ. ಇದೇ ಕಾರಣಕ್ಕೆ ಸಿನೇಮಾತಾರೆಯರು ಪ್ರತಿಭೆಗೂ ಮಿಗಿಲಾಗಿ ತಮ್ಮ ಸೌಂದರ್ಯ ಹಾಗೂ ಅಂಗಸೌಷ್ಠವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕಲೆಯಿಲ್ಲದ ತ್ವಚೆ, ಅದ್ಭುತ ಅಂಗಸೌಷ್ಠವ ಹಾಗೂ ಆಕರ್ಷಕ ಮತ್ತು ಆರೋಗ್ಯಕರ ಕೂದಲಿಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಅಲ್ಲದೇ ಅತ್ಯುತ್ತಮ ಆರೈಕೆ ಪಡೆಯಲು ವೃತ್ತಿಪರರ ನೆರವನ್ನೂ ಪಡೆದುಕೊಳ್ಳುತ್ತಾರೆ. ಸ್ವಾಭಾವಿಕವಾಗಿ ಈ ಆರೈಕೆಗಳು ಅತಿ ದುಬಾರಿಯಾಗಿದ್ದು ಸಾಮನ್ಯರು ಭರಿಸದಂತಿರುತ್ತದೆ.
ಆದರೆ ಈ ವೃತ್ತಿಪರರು ಒದಗಿಸುವ ಆರೈಕೆಗೂ ಮಿಗಿಲಾದ ಆರೈಕೆಯನ್ನು ನಿಸರ್ಗವೇ ನಮಗೆ ಒದಗಿಸಿದ್ದು ಸಿನೇಮಾತಾರೆಯರಿಗೇನೂ ಕಡಿಮೆಯಿಲ್ಲದ ನೈಸರ್ಗಿಕ ತ್ವಚೆ ಮತ್ತು ಕೂದಲ ಸೌಂದರ್ಯವನ್ನು ಈ ನೈಸರ್ಗಿಕ ಪರಿಕರಗಳು ಒದಗಿಸುತ್ತವೆ. ಹಿತ್ತಲ ಗಿಡ ಮದ್ದಲ್ಲ ಎಂಬ ಹಳೆ ಗಾದೆಗೆ ಜೋತುಬಿದ್ದಿರುವವರು ಇಂದಿಗೂ ಈ ದುಬಾರಿ ಪ್ರಸಾದನಗಳೇ ಸಿನೇಮಾತಾರೆಯರ ಸೌಂದರ್ಯಕ್ಕೆ ಕಾರಣ ಎಂಬ ನಂಬಿಕೆಗೆ ಕಟ್ಟುಬಿದ್ದಿದ್ದಾರೆ.

ಸೌಂದರ್ಯಶಾಸ್ತ್ರಜ್ಞರಾಗಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಜ್ಞರಾದ ಕೆರ್ರಿ ಬೆಂಜಮಿನ್ ರವರು ತನ್ನ ಅನುಭವವನ್ನು ಇಂದಿನ ಲೇಖನದಲ್ಲಿ ವಿವರಿಸುತ್ತಾ, ನಿಜವಾದ ಸೌಂದರ್ಯ ಆಂತರಿಕ ಆರೋಗ್ಯವೇ ಹೊರತು ಹೊರಗಿನ ಥಳುಕು ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಬನ್ನಿ, ಇವರ ಸಲಹೆಗಳನ್ನು ಇವರ ಮಾತುಗಳಲ್ಲಿಯೇ ಕೇಳೋಣ.... "ನಿಜ ಹೇಳಬೇಕೆಂದರೆ ನಾನು ಕೇವಲ ತ್ವಚೆಯ ತಪ್ಪುಗಳನ್ನು ಸರಿಪಡಿಸುವುದು ಮಾತ್ರವಲ್ಲ, ನನ್ನ ಗ್ರಾಹಕರಿಗೆ ನಾನು ಅವರ ಆಹಾರಕ್ರಮ ಮತ್ತು ಆರೋಗ್ಯವನ್ನು ಸರಿಪಡಿಸುವ ಮೂಲಕ ಸಹಜ ಸೌಂದರ್ಯವನ್ನು ಪಡೆಯುವಂತೆ ಆಗ್ರಹಿಸುತ್ತೇನೆ. ನನ್ನ ಅನುಭವದ ಮೂಲಕ ಕಂಡುಕೊಂಡ ಹಲವಾರು ವಿಧಾನಗಳನ್ನು ಯಾವುದೇ ಮುಚ್ಚುಮರೆ ಇಲ್ಲದೇ ಇಂದು ವಿವರಿಸುತ್ತಿದ್ದು ನನ್ನ ಗ್ರಾಹಕರು ಪಡೆದಂತಹ ಆರೋಗ್ಯಕರ ತ್ವಚೆಯನ್ನು ಪಡೆಯಬೇಕಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ"

ವಾರಕ್ಕೊಮ್ಮೆ ಸತ್ತ ಜೀವಕೋಶಗಳನ್ನು ನಿವಾರಿಸಿ (Exfoliate)
ನಮ್ಮ ಚರ್ಮದ ಜೀವಕೋಶಗಳು ಸತತವಾಗಿ ಸಾಯುತ್ತಾ ಹೊಸ ಜೀವಕೋಶಗಳು ಹುಟ್ಟುತ್ತಿರುತ್ತವೆ. ಹಳೆಯ ಜೀವಕೋಶಗಳು ಒಣಗಿ ಪುಡಿಯಂತೆ ಉದುರುತ್ತವೆ. ಆದರೆ ಮುಖದ ಚರ್ಮದಲ್ಲಿ ಹೆಚ್ಚಾಗಿರುವ ತೈಲದ ಕಾರಣ ಈ ಪುಡಿ ತೆಳುವಾದ ಪದರದಂತೆ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ನೀರು ಮತ್ತು ಸೋಪಿನಿಂದ ಈ ಪದರವನ್ನು ಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಕೆರೆದು ತೆಗೆಯುವ ವಿಧಾನವನ್ನೇ exfoliationಎಂದು ಕರೆಯುತ್ತಾರೆ. ಉತ್ತಮ ಸೌಂದರ್ಯಕ್ಕೆ ವಾರಕ್ಕೊಮ್ಮೆಯಾದರೂ ಈ ವಿಧಾನವನ್ನು ಅನುಸರಿಸಬೇಕು. ಇದಕ್ಕೆ ಅತ್ಯುತ್ತಮವಾದ ವಿಧಾನವೆಂದರೆ ಒಂದು ದೊಡ್ಡ ಚಮಚ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ಒಂದು ಚಿಕ್ಕ ಚಮಚ ಸಕ್ಕರೆಯೊಂದಿಗೆ ಬೆರೆಸಿ ಮುಖ ಮತ್ತು ಕುತ್ತಿಗೆಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಕೊಂಚ ಹೊತ್ತಿನ ಮಸಾಜ್ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ನಿಮ್ಮ ಸ್ನಾನದ ಸಮಯದಲ್ಲಿ ಈ ಕಾರ್ಯವನ್ನು ನಿರ್ವಹಿಸಲು ನಾನು ಸಲಹೆ ಮಾಡುತ್ತೇನೆ ಹಾಗೂ ವಾರಕ್ಕೆ ಕನಿಷ್ಟ ಒಂದು ಬಾರಿ, ಸಾಧ್ಯವಾದರೆ ಎರಡು ಬಾರಿ ಹಾಗೂ ನಿಮ್ಮ ವೃತ್ತಿಪರರ ಭೇಟಿಗೂ ನಡುವಣ ಸಮಯದಲ್ಲಿ ನಿರ್ವಹಿಸಿ.

ರಾತ್ರಿ ಮಲಗುವ ಮುನ್ನ ಸೂಕ್ತ ಲೇಪನ ಹಚ್ಚಿಕೊಂಡು ಮಲಗಿ
ನಮ್ಮ ಚರ್ಮದ ರಿಪೇರಿ ಕೆಲಸ ಬಹುತೇಕವಾಗಿ ನಾವು ಮಲಗಿದ್ದ ಸಮಯದಲ್ಲಿಯೇ ಆಗುತ್ತದೆ. ಹಾಗಾಗಿ ದೇಹದ ಯಾವುದೇ ತ್ವಚೆಯ ಆರೈಕೆಯನ್ನು, ವಿಶೇಷವಾಗಿ ಮುಖದ ತ್ವಚೆಯ ಆರೈಕೆಯನ್ನು ರಾತ್ರಿ ಹೊತ್ತು ನಿರ್ವಹಿಸುವ ಮೂಲಕ ಗರಿಷ್ಟ ಪ್ರಯೋಜನ ದೊರಕುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಅವರ ಆಯ್ಕೆಯ ಸಂಜೆ ಅಥವಾ ರಾತ್ರಿ ಹಚಿಕೊಳ್ಳಬಹುದಾದ ತೇವಕಾರಕ ಲೇಪನವನ್ನು ತೆಳುವಾಗಿ ಹಚ್ಚಿಕೊಂಡು ಮಲಗಲು ನಾನು ಸಲಹೆ ಮಾಡುತ್ತೇನೆ.

ರಾತ್ರಿ ಮಲಗುವ ಮುನ್ನ ಸೂಕ್ತ ಲೇಪನ ಹಚ್ಚಿಕೊಂಡು ಮಲಗಿ
ವಿಶೇಷವಾಗಿ ಪ್ರಯಾಣದ ಅವಧಿಯಲ್ಲಿ ಬೇರೆ ಹವಾಗುಣದ ಕಾರಣ ತ್ವಚೆ ತೀರಾ ಒಣಗುವ ಅಥವಾ ಉರಿ ತರಿಸುವಂತಿದ್ದರೆ ಈ ಕ್ರಮವನ್ನು ತಪ್ಪದೇ ಅನುಸರಿಸಬೇಕು. ಇದಕ್ಕಾಗಿ ನಾನು ಸ್ವತಃ ತಯಾರಿಸಿಕೊಳ್ಳಬಹುದಾದ ಲೇಪನವನ್ನು ಒಂದು ಬೆಣ್ಣೆಹಣ್ಣಿನಿಂದ ತಯಾರಿಸಿಕೊಳ್ಳುತ್ತೇನೆ. ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ (avocado) ತಿರುಳನ್ನು ಸಂಗ್ರಹಿಸಿ ಕಿವುಚಿ ಲೇಪನವನ್ನಾಗಿಸಿ. ಈ ಲೇಪನವನ್ನು ಮುಖದ ಮೇಲೆ ತೆಳುವಾಗಿ ಏಕಸಮನಾಗಿ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ ಸುಮಾರು ಐದರಿಂದ ಹತ್ತು ನಿಮಿಷ ಒಣಗಲು ಬಿಡಿ. ಬಳಿಕ ಇದನ್ನು ನಿವಾರಿಸಲು ಉಗುರುಬೆಚ್ಚನೆಯ ನೀರಿನಲ್ಲಿ ಅದ್ದಿ ಹಿಂಡಿದ ದಪ್ಪ ಟವೆಲ್ಲಿನಿಂದ ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳಿ.

ಸಾಕಷ್ಟು ಪ್ರಮಾಣದ ಸುಪರ್ ಆಹಾರಗಳನ್ನು ಸೇವಿಸಿ
ನಮ್ಮ ದೇಹ ವಾಸ್ತವವಾಗಿ ನಾವು ಸೇವಿಸುವ ಆಹಾರದಿಂದಲೇ ಮೂಡಿದೆ ಎಂದರೆ ತಪ್ಪಾಗಲಾರದು. ಅಂತೆಯೇ ನಮ್ಮ ತ್ವಚೆ ಆರೋಗ್ಯಕರ, ಕಾಂತಿಯುಕ್ತವಾಗಬೇಕಾದರೆ ನಮ್ಮ ಆಹಾರವೂ ಇದಕ್ಕೆ ಸೂಕ್ತವಾಗಿರಬೇಕು. ಇದರಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು ಇದ್ದು ಉರಿಯೂತ ನಿವಾರಕ ಗುಣ ಮತ್ತು ಗುಣಪಡಿಸುವ ಗುಣಗಳೂ ಇರಬೇಕು. ಹಾಗಾಗಿ ನಿಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಬೆಳೆಯುವ, ಸಾವಯವ ವಿಧಾನದಲ್ಲಿ ಬೆಳೆಸಿದ ತಾಜಾ ಆಹಾರಗಳನ್ನು ಸೇವಿಸಬೇಕು. ಸಕ್ಕರೆಯನ್ನು ಆದಷ್ಟೂ ವರ್ಜಿಸಬೇಕು. ಸಕ್ಕರೆ ಹೆಚ್ಚಿದ್ದಷ್ಟೂ ಉರಿಯೂತ ಆವರಿಸಿಕೊಳ್ಳುವ ಕ್ಷಮತೆ ಹೆಚ್ಚುವ ಕಾರಣ ನಿಮ್ಮ ಆಹಾರದಲ್ಲಿ ಸಕ್ಕರೆ ಆದಷ್ಟೂ ಕಡಿಮೆ ಇರುವುದು ಅಗತ್ಯ. ನೆನಪಿರಲಿ, ಸಹಜ ಸೌಂದರ್ಯ ನಿಜವಾಗಿಯೂ ನಿಮ್ಮ ದೇಹದ ಒಳಗಿನಿಂದ ಪ್ರಾರಂಭವಾಗುತ್ತದೆ!



Click it and Unblock the Notifications











