For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೋಗ್ಯಕ್ಕೆ ಹಾಗೂ ತ್ವಚೆಯ ಕಾಂತಿಗೆ ಖರ್ಬೂಜ ಹಣ್ಣು ಬಹಳ ಒಳ್ಳೆಯದು

|

ಮಸ್ಕ್ಮೆಲಾನ್ ಅಥವಾ ಖರ್ಬೂಜ ಹಣ್ಣು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವಂತಹ ಹಣ್ಣು. ಇದು ದೇಹಕ್ಕೆ ತುಂಬಾ ತಂಪನ್ನು ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ಇದರ ಜ್ಯೂಸ್ ನ್ನು ಕುಡಿದರೆ ಆಗ ದೇಹಕ್ಕೆ ತುಂಬಾ ತೇವಾಂಶ ಸಿಗುವುದು ಮತ್ತು ಇದು ರುಚಿಕರ ಕೂಡ. ಇದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಹೆಚ್ಚಾಗಿ ಜನರು ಇದನ್ನು ಬಳಕೆ ಮಾಡುವರು. ಕಸ್ತೂರಿ ಕಲ್ಲಂಗಡಿ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಇವೆ.

ಇದರಲ್ಲಿ ಮುಖ್ಯವಾಗಿ ವಿಟಮಿನ್ ಎ, ವಿಟಮಿನ್ ಬಿ6 ಮತ್ತು ಇತರ ಪ್ರಮುಖ ವಿಟಮಿನ್ ಗಳು ಇವೆ. ಇದರಲ್ಲಿ ಆಹಾರದ ನಾರಿನಾಂಶ, ಫಾಲಿಕ್ ಆಮ್ಲ ಮತ್ತು ಇತರ ಕೆಲವು ಖನಿಜಾಂಶಗಳಿದ್ದು, ಹಲವಾರು ವಿಧದಿಂದ ಇದು ನಮಗೆ ನೆರವಾಗುವುದು. ನಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಈ ಹಣ್ಣನ್ನು ಸೇರಿಸಿಕೊಂಡರೆ ಅದರಿಂದ ಚರ್ಮ ಹಾಗೂ ಕೂದಲಿನ ಆರೈಕೆ ಕೂಡ ಮಾಡಬಹುದು. ಕಸ್ತೂರಿ ಕಲ್ಲಂಗಡಿ ಹಣ್ಣನ್ನು ಫೇಸ್ ಮಾಸ್ಕ್ ಅಥವಾ ಹೇರ್ ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಇದಕ್ಕಾಗಿ ನೀವು ಬೇರೆ ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಜತೆ ಸೇರಿಸಿಕೊಳ್ಳಬೇಕು. ಖರ್ಬೂಜ ಹಣ್ಣಿನಿಂದ ತ್ವಚೆಗೆ ಸಿಗುವ ಲಾಭಗಳು

ಚರ್ಮಕ್ಕೆ ಪುನರ್ಶ್ಚೇತನ ಮತ್ತು ತೇವಾಂಶ ನೀಡುವುದು

ಚರ್ಮಕ್ಕೆ ಪುನರ್ಶ್ಚೇತನ ಮತ್ತು ತೇವಾಂಶ ನೀಡುವುದು

ಒಣ ಹಾಗೂ ನಿಸ್ಥೇಜ ಚರ್ಮದ ಮೇಲೆ ಈ ಹಣ್ಣನ್ನು ಬಳಕೆ ಮಾಡುವುದು ಅದ್ಭುತ ಆಲೋಚನೆ ಆಗಿದೆ. ಇದು ಚರ್ಮವನ್ನು ಪುನರ್ಶ್ಚೇತನಗೊಳಿಸಿ, ತಾಜಾವಾಗಿ ಇರುವಂತೆ ಮಾಡುವುದು. ಅಧಿಕ ಮಟ್ಟದ ಆಹಾರದ ನಾರಿನಾಂಶ ಮತ್ತು ವಿಟಮಿನ್ ಒಳಗೊಂಡಿ ರುವ ಕಸ್ತೂರಿ ಕಲ್ಲಂಗಡಿ ಹಣ್ಣು ಚರ್ಮವನ್ನು ಪುನರ್ಶ್ಚೇತನಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಈ ಹಣ್ಣಿನಲ್ಲಿ ಅಧಿಕ ನೀರನಾಂಶವು ಇರುವ ಕಾರಣದಿಂದಾಗಿ ಅದು ಚರ್ಮಕ್ಕೆ ತೇವಾಂಶ ನೀಡುವುದು. ಮಸ್ಕ್ಮೆಲಾನ್ ಮತ್ತು ರೋಸ್ ವಾಟರ್ ಬಳಸಿಕೊಂಡು ಮನೆಯಲ್ಲಿ ನೀವು ಒಂದು ಫೇಸ್ ಮಾಸ್ಕ್ ತಯಾರಿಸಿ ಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು

ಒಂದು ಚಮಚ ಮಸ್ಕ್ಮೆಲಾನ್ ತಿರುಳು

ಒಂದು ಚಮಚ ರೋಸ್ ವಾಟರ್

ಫೇಸ್ ಮಾಸ್ಕ್ ತಯಾರಿಸುವ ವಿಧಾನ

•ಎರಡನ್ನು ಜತೆಗೆ ಸೇರಿಸಿಕೊಂಡು ಸ್ವಲ್ಪ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.

•ಈ ಪೇಸ್ಟ್ ನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

•ಪ್ರತಿನಿತ್ಯ ನೀವು ಹೀಗೆ ಮಾಡಿದರೆ, ಆಗ ಉತ್ತಮ ಫಲಿತಾಂಶವು ಸಿಗುವುದು.

ಚರ್ಮಕ್ಕೆ ಪುನರ್ಶ್ಚೇತನ ನೀಡುವುದು

ಚರ್ಮಕ್ಕೆ ಪುನರ್ಶ್ಚೇತನ ನೀಡುವುದು

ಮಸ್ಕ್ಮೆಲಾನ್ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಎ ಮತ್ತು ಸಿ ಅಂಶವು ಚರ್ಮವನ್ನು ಪುರ್ನಶ್ಚೇತನಗೊಳಿಸಲು ನೆರವಾಗುವುದು. ಈ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಸಿ ಅಂಶಗವು ದೇಹದಲ್ಲಿ ಕಾಲಜನ್ ಉತ್ಪತ್ತಿ ಮಾಡಲು ನೆರವಾಗುವುದು. ಇದರಿಂದ ಚರ್ಮ ವು ಯೌವನಯುತವಾಗಿ ಕಾಣುವುದು. ಮಸ್ಕ್ಮೆಲಾನ್ ಮತ್ತು ಕಿತ್ತಳೆ ಹಣ್ಣಿನ ತಿರುಳನ್ನು ಬಳಸಿಕೊಂಡರೆ ಆಗ ನಿಮ್ಮ ಚರ್ಮವು ಕಾಂತಿಯುತ ಆಗುವುದು ಮತ್ತು ಇದು ದೀರ್ಘಕಾಲ ತನಕ ಉಳಿಯುವುದು.

ಬೇಕಾಗುವ ಸಾಮಗ್ರಿಗಳು

*ಒಂದು ಚಮಚ ಮಸ್ಕ್ಮೆಲಾನ್ ತಿರುಳು

*ಒಂದು ಚಮಚ ಕಿತ್ತಳೆ ತಿರುಳು

ತಯಾರಿಸುವ ವಿಧಾನ

•ಎರಡನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.

•ಈ ಪೇಸ್ಟ್ ನ್ನು ನೀವು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•20 ನಿಮಿಷ ಕಾಳ ನೀವು ಹಾಗೆ ಇದನ್ನು ಬಿಡಿ ಮತ್ತು ಸಂಪೂರ್ಣವಾಗಿ ಒಣಗಲಿ.

•ಇದರ ಬಳಿಕ ಉಗುರುಬೆಚ್ಚಗಿನ ನೀರು ಬಳಸಿಕೊಂಡು ಮುಖ ತೊಳೆಯಿರಿ.

•ನಿಮಗೆ ಬೇಕಾಗಿರುವ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಅಥವಾ ಎರಡು ಸಲ ನೀವು ಇದನ್ನು ಪುನರಾವರ್ತಿಸಿ.

Most Read: ಖರ್ಬೂಜ ಹಣ್ಣಿನ ಗುಣಗಳು ಒಂದಾ ಎರಡಾ...

ಅಕಾಲಿಕ ವಯಸ್ಸಾಗುವ ಲಕ್ಷಣ ತಡೆಯುವುದು

ಅಕಾಲಿಕ ವಯಸ್ಸಾಗುವ ಲಕ್ಷಣ ತಡೆಯುವುದು

ಮಸ್ಕ್ಮೆಲಾನ್ ನಲ್ಲಿ ಫಾಲಿಕ್ ಆಮ್ಲವು ಸಮೃದ್ಧವಾಗಿರುವ ಕಾರಣದಿಂದಾಗಿ ಇದು ಅಂಗಾಂಶಗಳು ಪುನರ್ಶ್ಚೇತನ ಗೊಳ್ಳಲು ನೆರವಾಗುವುದು. ಇದರಿಂದಾಗಿ ಇದು ಚರ್ಮಕ್ಕೆ ಆರೋಗ್ಯ ಮತ್ತು ಕಾಂತಿ ನೀಡುವುದು. ಇದು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ಕಾಪಾಡುವುದು ಮತ್ತು ನೆರಿಗೆ ಮತ್ತು ಚರ್ಮದ ಗೆರೆಗಳನ್ನು ದೂರ ಮಾಡುವುದು. ಇದೇ ರೀತಿಯಾಗಿ ಚರ್ಮದಲ್ಲಿನ ಸ್ಥಿತಿಸ್ಥಾಪಕತ್ವನ್ನು ಇದು ಕಾಪಾಡುವುದು. ಇದರಿಂದ ಮಸ್ಕ್ಮೆಲಾನ್ ಅಕಾಲಿಕ ವಯಸ್ಸಾಗುವುದನ್ನು ತಪ್ಪಿಸುವ ಪ್ರಮುಖ ಹಣ್ಣಾಗಿದೆ.

ಬೇಕಾಗುವ ಸಾಮಗ್ರಿಗಳು

*2 ಚಮಚ ಮಸ್ಕ್ಮೆಲಾನ್ ಹಣ್ಣಿನ ತಿರುಳು

ಬಳಸುವ ವಿಧಾನ

•ಮಸ್ಕ್ಮೆಲಾನ್ ಜ್ಯೂಸ್ ನಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

•ಕೆಲವು ನಿಮಿಷ ಕಾಲ ನಯವಾಗಿ ಕೈಬೆರಳುಗಳಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.

•ಇದು ಹಾಗೆ ಮುಖದ ಮೇಲೆ ಒಣಗಲಿ.

•ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮುಖ ಒಣಗಲು ಬಿಡಿ.

•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಅಥವಾ ಎರಡು ಸಲ ನೀವು ಇದನ್ನು ಬಳಸಿ.

ಇಸಬು ಮತ್ತು ಇತರ ಚರ್ಮದ ಸಮಸ್ಯೆಗಳ ನಿವಾರಣೆ

ಇಸಬು ಮತ್ತು ಇತರ ಚರ್ಮದ ಸಮಸ್ಯೆಗಳ ನಿವಾರಣೆ

ಇಸಬು ಮತ್ತು ಚರ್ಮದ ಇತರ ಕೆಲವೊಂದು ಸಮಸ್ಯೆ ನಿವಾರಣೆ ಮಾಡಲು ಮಸ್ಕ್ಮೆಲಾನ್ ನ್ನು ತುಂಬಾ ಪರಿಣಾಮಕಾರಿ ಚಿಕಿತ್ಸಕವಾಗಿ ಬಳಸಿಕೊಳ್ಳಲಾಗುತ್ತಿದೆ. ಮುಖದ ಮೇಲಿನ ಮುಳ್ಳುಗಂಟಿಗಳನ್ನು ಇದು ತೆಗೆಯುವುದು. ಇದನ್ನು ಸುಟ್ಟ ಮತ್ತು ತರುಚಿದ ಗಾಯಕ್ಕೆ ಪ್ರಥಮ ಚಿಕಿತ್ಸೆಯಾಗಿ ಬಳಸಿಕೊಳ್ಳಬಹುದು. ಇದನ್ನು ನೀವು ಲಿಂಬೆ ಜತೆಗೆ ಸೇರಿಸಿಕೊಂಡು ಬಳಸಬಹುದು. ಲಿಂಬೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಮಸ್ಕ್ಮೆಲಾನ್ ಹಣ್ಣಿನ ತಿರುಳು

1 ಚಮಚ ಲಿಂಬೆರಸ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಸ್ವಲ್ಪ ಮಸ್ಕ್ಮೆಲಾನ್ ತಿರುಳು ಮತ್ತು ಲಿಂಬೆ ರಸ ಹಾಕಿಕೊಂಡು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•10-12 ನಿಮಿಷ ಕಾಲ ಮುಖದಲ್ಲಿ ಇದು ಹಾಗೆ ಇರಲಿ. ಬಳಿಕ ನೀವು ಮುಖ ಒರೆಸಿಕೊಳ್ಳಿ.

•ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಒಡೆದ ತುಟಿಗಳಿಗೆ ಚಿಕಿತ್ಸೆ

ಒಡೆದ ತುಟಿಗಳಿಗೆ ಚಿಕಿತ್ಸೆ

ಮಸ್ಕ್ಮೆಲಾನ್ ನಲ್ಲಿ ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡು ವಂತಹ ಗುಣವು ಇದೆ. ಇದರಿಂದ ಇದು ಬಿಸಿಲಿನಿಂದ ಚರ್ಮದ ಬಣ್ಣ ಕುಂದಿರುವ ಸಮಸ್ಯೆ ನಿವಾರಣೆ ಮಾಡುವುದು. ಈ ಹಣ್ಣಿನಲ್ಲಿ ಇರುವಂತಹ ಕಿತ್ತುಹಾಕುವಂತಹ ಗುಣದಿಂದಾಗಿ ಸತ್ತ ಚರ್ಮವನ್ನು ತೆಗೆಯುವುದು ಮತ್ತು ಒಡೆದ ತುಟಿಗಳಿಗೂ ಇದು ಪರಿಣಾಮಕಾರಿ. ಮಸ್ಕ್ಮೆಲಾನ್ ಬಳಕೆ ಮಾಡುವ ಕಾರಣದಿಂದಾಗಿ ತುಟಿಗಳು ತುಂಬಾ ನಯ, ತೇವಾಂಶ ಮತ್ತು ಸುಂದರವಾಗಿ ಕಾಣುವುದು.

ಬೇಕಾಗುವ ಸಾಮಗ್ರಿಗಳು

*ಒಂದು ಚಮಚ ಮಸ್ಕ್ಮೆಲಾನ್ ತಿರುಳು

*ಒಂದು ಚಮಚ ಪೆಟ್ರೋಲಿಯಂ ಜೆಲ್ಲಿ

ತಯಾರಿಸುವ ವಿಧಾನ

•ಎರಡನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.

•ಸ್ವಲ್ಪ ಪ್ರಮಾಣದ ಮಿಶ್ರಣವನ್ನು ಬೆರಳಿನಿಂದ ತೆಗೆದುಕೊಂಡು ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ ಮತ್ತು 3-5 ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.

•ಉಗುರು ಬೆಚ್ಚಗಿನ ನೀರು ಬಳಸಿಕೊಂಡು ತುಟಿಗಳನ್ನು ತೊಳೆಯಿರಿ.

•ಉತ್ತಮ ಫಲಿತಾಂಶ ಸಿಗಬೇಕಾದರೆ ನೀವು ಇದನ್ನು ವಾರದಲ್ಲಿ ಒಂದು ಸಲ ಬಳಸಿಕೊಳ್ಳಿ. ಕೂದಲಿಗೆ ಮಸ್ಕ್ಮೆಲಾನ್ ನ ಲಾಭಗಳು ಮಸ್ಕ್ಮೆಲಾನ್ ಹಣ್ಣಿನಲ್ಲಿ ಇನೊಸಿಟಾಲ್ ಎನ್ನುವ ಅಂಶವಿದೆ. ಇದು ಕೂದಲು ಉದುರುವಿಕೆ ಮತ್ತು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಅಂಶವು ಹೆಚ್ಚಿನ ಸಿಟ್ರಸ್ ಹಣ್ಣಿನಲ್ಲಿ ಕಂಡುಬರುವುದು. ಅದೇ ರೀತಿಯಾಗಿ ಮಸ್ಕ್ಮೆಲಾನ್ ನಲ್ಲಿ ಕೂಡ. ಕೂದಲು ಉದುರುವಿಕೆ ತಡೆಯಲು ಈ ಅಂಶವು ಅತೀ ಮುಖ್ಯವಾಗಿದೆ. ತೆಂಗಿನ ಎಣ್ಣೆ ಕೂಡ ಕೂದಲು ಉದುರುವಿಕೆ ತಡೆಯುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ಮಸ್ಕ್ಮೆಲಾನ್ ತಿರುಳು

*3-4 ಸ್ಟ್ರಾಬೆರಿ

*1 ಚಮಚ ತೆಂಗಿನ ಎಣ್ಣೆ

ತಯಾರಿಸುವ ವಿಧಾನ

•ಎಲ್ಲವನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಒಂದು ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ನಿಧಾನವಾಗಿ ತಲೆಬುರುಡೆ ಹಾಗೂ ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ.

•ಇದರ ಬಳಿಕ ಶಾವರ್ ಕ್ಯಾಪ್ ಹಾಕಿ ಮತ್ತು ಒಂದು ಗಂಟೆ ಕಾಲ ಹಾಗೆ ಬಿಡಿ.

•ಶಾಂಪೂ ಅಥವಾ ಕಂಡೀಷನರ್ ಬಳಸಿಕೊಂಡು ಕೂದಲು ತೊಳೆಯಿರಿ.

•ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ನೈಸರ್ಗಿಕ ಕಂಡೀಷನರ್

ನೈಸರ್ಗಿಕ ಕಂಡೀಷನರ್

ಮಸ್ಕ್ಮೆಲಾನ್ ನಿಂದ ಕೂದಲಿಗೆ ಸಿಗುವಂತಹ ಲಾಭವೆಂದರೆ ಅದು ಮುಖ್ಯವಾಗಿ ಕೂದಲನ್ನು ಕಂಡೀಷನ್ ಮಾಡುವುದು. ತಲೆಬುರುಡೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಂಡು ಕೂದಲು ತುಂಬಾ ನಯವಾಗಿ ಇರುವಂತೆ ಮಾಡುವುದು. ಮಸ್ಕ್ಮೆಲಾನ್ ನ್ನು ನೀವು ಬಾಳೆಹಣ್ಣು ಮತ್ತು ಮೊಸರಿನ ಜತೆಗೆ ಸೇರಿಸಿ, ಮನೆಯಲ್ಲೇ ಕೂದಲಿನ ಕಂಡೀಷರ್ ಆಗಿ ಬಳಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ, ನೈಸರ್ಗಿಕ ತೈಲ, ಕಾರ್ಬೊಹೈಡ್ರೇಟ್ಸ್ ಮತ್ತು ವಿಟಮಿನ್ ಗಳು ಇವೆ. ಇದು ಕೂದಲನ್ನು ನಯವಾಗಿಸುವುದು.

ಬೇಕಾಗುವ ಸಾಮಗ್ರಿಗಳು

ಎರಡು ಚಮಚ ಮಸ್ಕ್ಮೆಲಾನ್ ತಿರುಳು

*2 ಚಮಚ ಬಾಳೆಹಣ್ಣಿನ ತಿರುಳು

*1 ಚಮಚ ಮೊಸರು

ತಯಾರಿಸುವ ವಿಧಾನ

•ಸ್ವಲ್ಪ ಮಸ್ಕ್ಮೆಲಾನ್ ತಿರುಳು ಮತ್ತು ಬಾಳೆಹಣ್ಣಿನ ತಿರುಳನ್ನು ಜತೆಗೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಇದರ ಬಳಿಕ ನೀವು ಇದಕ್ಕೆ ಮೊಸರನ್ನು ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

•ಬೇಕಾದಷ್ಟು ಪ್ರಮಾಣದಲ್ಲಿ ಈ ಮಿಶ್ರಣ ತೆಗೆದುಕೊಂಡು ಅದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.

•ಶಾವರ್ ಕ್ಯಾಪ್ ಹಾಕಿಕೊಂಡು ಕೂದಲನ್ನು ಮುಚ್ಚಿಕೊಳ್ಳಿ.

•ಉಗುರುಬೆಚ್ಚಗಿನ ನೀರಿನಿಂದ ತೊಳೆದು, ಕೂದಲು ಒಣಗಿಸಿಕೊಳ್ಳಿ.

•ಉತ್ತಮ ಫಲಿತಾಂಶ ಬೇಕಿದ್ದರೆ ನೀವು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

Most Read: ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು

ಕೂದಲು ಬಲಿಷ್ಠವಾಗಿಸುವುದು

ಕೂದಲು ಬಲಿಷ್ಠವಾಗಿಸುವುದು

ಮಸ್ಕ್ಮೆಲಾನ್ ನ್ನು ತಲೆಬುರುಡೆ ಮತ್ತು ಕೂದಲಿಗೆ ನಿಯಮಿತವಾಗಿ ಹಚ್ಚಿಕೊಳ್ಳುವ ಕಾರಣದಿಂದಾಗಿ ಕೂದಲು ತುಂಬಾ ಬಲ ಮತ್ತು ಉದ್ದವಾಗುವುದು. ಮಸ್ಕ್ಮೆಲಾನ್ ನ್ನು ಕೂದಲಿಗೆ ಹಚ್ಚಿಕೊಂಡರೆ ಆಗ ಕೂದಲು ತುಂಡಾಗುವುದು ಮತ್ತು ಹಾನಿ ಆಗುವುದನ್ನು ತಡೆಯಬಹುದು. ಒಣ ಹಾಗೂ ನಿಸ್ತೇಜ ಕೂದಲನ್ನು ಇದು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

•2 ಚಮಚ ಮಸ್ಕ್ಮೆಲಾನ್ ತಿರುಳು

•2 ವಿಟಮಿನ್ ಇ ಕ್ಯಾಪ್ಸೂಲ್

•1 ಚಮಚ ಸಿಹಿ ಬಾದಾಮಿ ಎಣ್ಣೆ

•1 ಚಮಚ ತೆಂಗಿನ ಎಣ್ಣೆ

•ಕೆಲವು ಹನಿ ಲ್ಯಾವೆಂಡರ್ ಸಾರಭೂತ ಎಣ್ಣೆ

ತಯಾರಿಸುವ ವಿಧಾನ

•ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ.

•ಬೇಕಾದಷ್ಟು ಪ್ರಮಾಣದ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.

•ತಲೆಗೆ ಶಾವರ್ ಕ್ಯಾಪ್ ಹಾಕಿಕೊಳ್ಳಿ ಮತ್ತು ಒಂದು ಅರ್ಧ ಗಂಟೆ ಕಾಲ ಇದು ಹೀಗೆ ಇರಲು ಬಿಡಿ.

•ಸಾಮಾನ್ಯ ಶಾಂಪೂ ಅಥವಾ ಕಂಡೀಷನರ್ ಹಾಕಿಕೊಂಡು ಕೂದಲು ತೊಳೆಯಿರಿ. ಇದರ ಬಳಿಕ ಕೂದಲು ಒಣಗಿಸಿಕೊಳ್ಳಿ.

•ನಿಮಗೆ ಉತ್ತಮ ಫಲಿತಾಂಶ ಬೇಕಿದ್ದರೆ ಆಗ ನೀವು ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಳ್ಳಿ.

English summary

Muskmelon can help you get a healthy Hair and glowing skin

Muskmelon is a delicious and hydrating fruit that truly deserves a place in your everyday routine! Muskmelons contain a high amount of vitamin A, vitamin B6 and other essential nutrients. You can make a face mask or a hair mask using muskmelons by combining it withingredients like yoghurt, banana, coconut oil, rosewater, orange among others.
X
Desktop Bottom Promotion