Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ರಾತ್ರಿ ಮಲಗುವ ಮುನ್ನ ಈ ಫೇಸ್ ಮಾಸ್ಕ್ ಬಳಸಿ-ಬೆಳಿಗ್ಗೆ ಎದ್ದಾಗ ಮುಖ ಇನ್ನಷ್ಟು ಸುಂದರವಾಗಿ ಕಾಣುತ್ತೆ
ನಿತ್ಯದ ಕಾರ್ಯಗಳ ಒತ್ತಡದಿಂದ ರಾತ್ರಿ ಮಲಗಿದರೆ ಸಾಕು ಎನ್ನುವಷ್ಟು ಎದುರಾದ ಆಯಾಸ ನಿಮ್ಮ ಸೌಂದರ್ಯವನ್ನು ಕುಂದಿಸುತ್ತಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಹೀಗನಿಸಿದಾಗ ಕ್ಷಿಪ್ರವಾದ ಫೇಶಿಯಲ್ ಸೇವೆಯನ್ನು ಪಡೆದರೆ ರಾತ್ರಿ ಸುಖವಾಗಿ ನಿದ್ರಿಸುವ ಜೊತೆಗೇ ಸೌಂದರ್ಯವನ್ನೂ ಕಾಪಾಡಿದಂತಾಗುತ್ತದೆ.
ಸಾಮಾನ್ಯವಾಗಿ, ಮನುಷ್ಯರ ತ್ವಚೆ ಸುಮಾರು ನಲವತ್ತರಷ್ಟು ಅತಿತೆಳುವಾದ ಪದರಗಳಿಂದ ಕೂಡಿರುತ್ತದೆ ಹಾಗೂ ಈ ಪದರಗಳಲ್ಲಿರುವ ಸೂಕ್ಷ್ಮರಂಧ್ರಗಳು ನಮ್ಮ ನಿತ್ಯದ ಚಟುವಟಿಕೆಯಿಂದ ಧೂಳು ಮತ್ತು ಬ್ಯಾಕ್ಟೀರಿಯಾಗಳಿಂದ ತುಂಬಿರುತ್ತವೆ. ಇವನ್ನು ನಿವಾರಿಸದೇ ಸೌಂದರ್ಯ ಕಾಪಾಡಲು ಸಾಧ್ಯವಿಲ್ಲ. ಹಾಗಾಗಿ ರಾತ್ರಿ ಸುಖನಿದ್ದೆಯ ಸಮಯದಲ್ಲಿ ಈ ಕೆಲಸ ಸುಸೂತ್ರವಾಗಿ ನಡೆಯಬೇಕೆಂದರೆ ಕೊಂಚ ಆರೈಕೆ ಅಗತ್ಯ. ಈ ಅಗತ್ಯತೆಯನ್ನು ಪೂರೈಸುವ ಮೂರು ಅತ್ಯುತ್ತಮ ಮುಖಲೇಪಗಳನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ಇವುಗಳ ಬಗ್ಗೆ ಇಂದು ಅರಿಯೋಣ:
ಓಟ್ಸ್ ಮತ್ತು ಜೇನಿನ ಮುಖಲೇಪ (ಸಾಮಾನ್ಯವಾದ ಎಲ್ಲಾ ಬಗೆಯ ತ್ವಚೆಗಳಿಗೆ)
*ಎರಡು ಚಿಕ್ಕ ಚಮಚ ಓಟ್ಸ್ ರವೆ
*ಎರಡು ಚಿಕ್ಕ ಚಮಚ ಜೇನು
ಇವೆರಡನ್ನೂ ನೆಚ್ಚಾಗಿ ಮಿಶ್ರಣ ಮಾಡಿ ಸುಮಾರು ಐದು ನಿಮಿಷಗಳವರೆಗೆ ಈ ರವೆ ಮೆತ್ತಗಾಗಲು ಬಿಡಿ. ಬಳಿಕ, ಈ ಲೇಪನವನ್ನು ಚಮಚದಿಂದ ಒತ್ತಿ ನುಣ್ಣನೆಯ ಲೇಪನವನ್ನಾಗಿಸಿ. ಈ ಲೇಪವನ್ನು ಮುಖದ ಮೇಲೆ ಒಂದೆರಡು ಪದರಗಳ ರೂಪದಲ್ಲಿ ತೆಳುವಾಗಿ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಗ್ಗೆದ್ದು ತಣ್ಣೀರಿನಿಂದ ತೊಳೆದುಕೊಳ್ಳಿ. ರಾತ್ರಿಯ ಸಮಯದಲ್ಲಿ ಜರುಗುವ ನೈಸರ್ಗಿಕ ಕ್ರಿಯೆಗಳು ಈ ಲೇಪದಿಂದ ಆರ್ದ್ರತೆಯನ್ನು ಚರ್ಮ ಹೀರಿಕೊಳ್ಳುವಂತೆ ಮಾಡಿ ತ್ವಚೆಗೆ ಆರೈಕೆ ನೀಡುವ ಜೊತೆಗೇ ಹಿಂದಿನ ದಿನಗಳಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ಆಗಿದ್ದ ಘಾಸಿಯನ್ನು ಸರಿಪದಿಸುತ್ತವೆ.
ಓಟ್ಸ್ ಮತ್ತು ಜೇನಿನ ಮುಖಲೇಪ (ಸಾಮಾನ್ಯವಾದ ಎಲ್ಲಾ ಬಗೆಯ ತ್ವಚೆಗಳಿಗೆ)
ಸೂಚನೆ: ಮಲಗುವ ಮುನ್ನ ನಿಮ್ಮ ತಲೆದಿಂಬನ್ನು ಒಂದು ದಪ್ಪ ಟವೆಲ್ಲಿನಿಂದ ಆವರಿಸಿ, ಇದರಿಂದ ಮುಖಕ್ಕೆ ಹಚ್ಚಿಕೊಂಡ ಲೇಪ ತಲೆದಿಂಬನ್ನು ತೋಯಿಸುವುದರಿಂದ ತಪ್ಪಿಸಬಹುದು.
Most Read:ದಿನ ಪೂರ್ತಿ ತ್ವಚೆ ಕಾಂತಿಯಿಂದ ಹೊಳೆಯುತ್ತಲೇ ಇರಬೇಕೆಂದರೆ, ತಪ್ಪದೇ ಈ ಟ್ರಿಕ್ಸ್ ಅನುಸರಿಸಿ
ಲಿಂಬೆ, ಹಾಲಿನ ಕ್ರೀಂ ಮುಖಲೇಪ (ಒಣ ಮತ್ತು ಸಾಮಾನ್ಯ ತ್ವಚೆಯವರಿಗೆ)
ಒಂದು ಚಿಕ್ಕಚಮಚ ಡೈರಿ ಕ್ರೀಂ
ಕಾಲು ಚಿಕ್ಕ ಚಮಚ ಲಿಂಬೆರಸ
ಲಿಂಬೆ, ಹಾಲಿನ ಕ್ರೀಂ ಮುಖಲೇಪ (ಒಣ ಮತ್ತು ಸಾಮಾನ್ಯ ತ್ವಚೆಯವರಿಗೆ)
ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ತೆಳುವಾಗಿ ಒಂದೆರಡು ಪದರಗಳ ರೂಪದಲ್ಲಿ ಮುಖದ ಮೇಲೆ ಹಚ್ಚಿಕೊಳ್ಳಿ. ಇಡಿಯ ರಾತ್ರಿ ಹಾಗೇ ಬಿಟ್ಟು ಮರುದಿನ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕ್ರೀಂ ನಲ್ಲಿ ನೈಸರ್ಗಿಕ ಕೊಬ್ಬಿನ ಆಮ್ಲಗಳಿರುತ್ತವೆ. ಇವು ತ್ವಚೆಯ ಆಳಕ್ಕಿಳಿದು ಅರ್ದ್ರತೆಯನ್ನು ಒದಗಿಸುತ್ತವೆ ಹಾಗೂ ಲಿಂಬೆರಸ ತ್ವಚೆಯನ್ನು ಬಿಳಿಚಿಸಲು ಮತ್ತು ಸಹಜವರ್ಣವನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಈ ನಿಯಮಿತವಾಗಿ ಈ ಮುಖಲೇಪವನ್ನು ಬಳಸುವ ಮೂಲಕ ಹಳೆಯ ಗಾಯ, ಮೊಡವೆಗಳು, ಕಲೆಗಳು ಮೊದಲಾದ ಗುರುತುಗಳನ್ನೂ ಶಾಶ್ವತವಾಗಿ ಅಳಿಸಲು ನೆರವಾಗುತ್ತದೆ.
ಹಾಲಿನ ಮುಖಲೇಪ (ಎಣ್ಣೆತ್ವಚೆಯವರಿಗಾಗಿ)
*ಎರಡು ಚಿಕ್ಕ ಚಮಚ ಹಾಲು
*ಎರಡರಿಂದ ಮೂರು ತೊಟ್ಟು ಲ್ಯಾವೆಂಡರ್ / ಗಂಧದ ಎಣ್ಣೆ
*ಒಂದು ಹತ್ತಿಯುಂಡೆ
Most Read:ತ್ವಚೆಯ ಕಾಂತಿಯನ್ನು ಹೆಚ್ಚಿಸುವ 'ಉಪ್ಪಿನ ಸ್ಕ್ರಬ್' ಪ್ರಯತ್ನಿಸಿ ನೋಡಿ
ಹಾಲಿನ ಮುಖಲೇಪ (ಎಣ್ಣೆತ್ವಚೆಯವರಿಗಾಗಿ)
ನಿಮ್ಮ ಆಯ್ಕೆಯ ಎಣ್ಣೆಯೊಂದಿಗೆ ಹಾಲನ್ನು ಬೆರೆಸಿ ಈಗತಾನೇ ತಣ್ಣೀರಿನಿಂದ ತೊಳೆದು ಒತ್ತಿ ಒರೆಸಿಕೊಂಡ ಮುಖಕ್ಕೆ ಹಚ್ಚಿಕೊಳ್ಳಿ. ಇದಕ್ಕಾಗಿ ಹತ್ತಿಯುಂಡೆಯನ್ನು ಲೇಪದಲ್ಲಿ ಅದ್ದಿ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳುತ್ತಾ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ. ಬಳಿಕ ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ರಾತ್ರಿಯಿಡೀ ಹಚ್ಚಿಕೊಂಡಿರುವುದು ಇಷ್ಟವಿಲ್ಲದಿದ್ದರೆ ಮಲಗುವ ಕೆಲವು ಘಂಟೆಗಳ ಮುನ್ನ ಹಚ್ಚಿಕೊಂಡು ಮಲಗುವ ಮುನ್ನ ತಣ್ಣೀರಿನಿಂದ ತೊಳೆದುಕೊಂಡ ಬಳಿಕ ಮಲಗಬಹುದು. ಇದೊಂದು ಎಣ್ಣೆ ಮುಕ್ತ ಸ್ವಚ್ಛಕಾರಕ ದ್ರಾವಣವಾಗಿದ್ದು ಎಣ್ಣೆ ತ್ವಚೆಯವರಿಗೆ ಅತಿ ಸೂಕ್ತವಾಗಿದೆ ಹಾಗೂ ಇದು ಎಣ್ಣೆಯ ಪಸೆಯನ್ನು ಪೂರ್ಣವಾಗಿ ಇಲ್ಲವಾಗಿಸಿ ಚರ್ಮದ ಅಡಿಯಲ್ಲಿರುವ ತೈಲಗ್ರಂಥಿಗಳಲ್ಲಿ ಹೆಚ್ಚಿನ ತೈಲ ಸಂಗ್ರಹವಾಗದಂತೆ ತಡೆಯುವ ಮೂಲಕ ಎಣ್ಣೆಪಸೆಯನ್ನು ಕಡಿಮೆಯಾಗಿಸುತ್ತದೆ. ಒಂದು ವೇಳೆ ನಿಮ್ಮ ಟಿ-ಜೋನ್ ಅಥವಾ ಹಣೆಯ ನಡುವಿನಿಂದ ಪ್ರಾರಂಭಿಸಿ ತುಟಿಗಳ ತುದಿಯವರೆಗೆ ಇರುವ ತ್ರಿಭುಜ ಆವರಣದಲ್ಲಿ ಎಣ್ಣೆ ಪಸೆ ಹೆಚ್ಚಿದ್ದರೆ ಈ ವಿಧಾನಗಳನ್ನು ರಾತ್ರಿ ಹಚ್ಚಿಕೊಳ್ಳುವ ಹೊರತಾಗಿ ದಿನದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸಿ.