For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯಕ್ಕೆ-ಹಣ್ಣುಗಳಿಂದ ತಯಾರಿಸಿರುವಂತಹ 'ಪೀಲ್ ಆಫ್ ಫೇಸ್ ಮಾಸ್ಕ್'

|

ಸೌಂದರ್ಯವರ್ಧನೆ ಮಾಡಿಕೊಳ್ಳಲು ಹಲವಾರು ರೀತಿಯ ಫೇಸ್ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸಿಕೊಂಡು ಮಹಿಳೆಯರು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವರು. ಆದರೆ ಕೆಲವೊಂದು ಉತ್ಪನ್ನಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳು ಇರುವ ಕಾರಣದಿಂದಾಗಿ ಇದು ಅಡ್ಡಪರಿಣಾಮಗಳನ್ನು ಬೀರುವುದು ಎಂದು ಪರಿಗಣಿಸಲಾಗಿದೆ. ಆದರೆ ಪೀಲ್ ಆಫ್ ಮಾಸ್ಕ್ ಗಳು ಇದು ನಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ತುಂಬಾ ಆಕರ್ಷಣೀಯ ಮತ್ತು ಇದನ್ನು ಬಳಸುವ ರೀತಿ ಕೂಡ ತುಂಬಾ ಒಳ್ಳೆಯದಲ್ಲವೇ?
ಪೀಲ್ ಆಫ್ ಮಾಸ್ಕ್ ಗಳು ಸಾಮಾನ್ಯವಾಗಿ ಚರ್ಮದಲ್ಲಿನ ಧೂಳು ಮತ್ತು ಕಲ್ಮಷವನ್ನು ಹೊರಗೆ ಹಾಕಲು ಬಳಸಲಾಗುತ್ತದೆ ಮತ್ತು ಇದು ತುಂಬಾ ನಯ ಹಾಗೂ ಕಾಂತಿಯುತ ಚರ್ಮವನ್ನು ನೀಡುವುದು. ಯಾವುದೇ ಕಲೆಗಳು ಇಲ್ಲದೆ ಇರುವ ಮತ್ತು ಕಾಂತಿಯುತ ತ್ವಚೆಯು ಪ್ರತಿಯೊಬ್ಬರ ಕನಸಾಗಿರುವುದು. ಈ ಮಾಸ್ಕ್ ಗಳು ಅಂತಹ ತ್ವಚೆ ಒದಗಿಸಿಕೊಡುವುದು.

ಪೀಲ್ ಆಫ್ ಮಾಸ್ಕ್ ಗಳು ನಮಗೆ ನೀಡುವಂತಹ ಲಾಭವನ್ನು ಪಡೆಯಲು ತುಂಬಾ ಹಣ ವೆಚ್ಚ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಹಣ್ಣುಗಳನ್ನು ಬಳಸಿಕೊಂಡು ಪೀಲ್ ಆಫ್ ಮಾಸ್ಕ್ ತಯಾರಿಸಿಕೊಂಡು ಸೌಂದರ್ಯ ವೃದ್ಧಿಸಬಹುದು. ಹಣ್ಣುಗಳು ತ್ವಚೆಗೆ ತುಂಬಾ ಲಾಭಕಾರಿ ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ವಿಟಮಿನ್ ಸಿ ಕಾಲಜನ್ ಉತ್ಪತ್ತಿ ಮಾಡಿ ಚರ್ಮವನ್ನು ಬಿಗಿಗೊಳಿಸುವುದು. ಇದೇ ರೀತಿಯಲ್ಲಿ ಬಣ್ಣ ಕುಂದುವುದನ್ನು ತಡೆಯುವುದು. ಇಷ್ಟು ಮಾತ್ರವಲ್ಲದೆ, ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು ಮತ್ತು ಇದರಿಂದ ಆಗಿರುವಂತಹ ಹಾನಿಯನ್ನು ಕೂಡ. ಇಂದಿನ ಲೇಖನದಲ್ಲಿ ನಾವು ನಿಮಗೆ ಹಣ್ಣುಗಳಿಂದ ತಯಾರಿಸಿರುವಂತಹ ಪೀಲ್ ಆಫ್ ಮಾಸ್ಕ್ ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಚರ್ಮಕ್ಕೆ ತಾಜಾತನ ನೀಡುವುದರ ಜತೆಗೆ ಚರ್ಮವನ್ನು ಆರೋಗ್ಯ ಮತ್ತು ಕಾಂತಿಯುತವಾಗಿಸುವುದು.

Glowing Skin

ಕಾಂತಿಯುತ ಚರ್ಮಕ್ಕಾಗಿ ಪೀಲ್ ಆಫ್ ಫೇಸ್ ಮಾಸ್ಕ್ ಗಳು

1.ಕಿತ್ತಳೆ ಮತ್ತು ಜೆಲಾಟಿನ್ ಮಾಸ್ಕ್

ಕಿತ್ತಳೆಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ, ಸ್ಥಿತಿಸ್ಥಾಪಕತ್ವವನ್ನು ಕೂಡ ಕಾಪಾಡುವುದು. ಇದರಿಂದ ಚರ್ಮವು ಬಿಗಿ ಹಾಗೂ ಯೌವನಯುತವಾಗಿ ಇರುವುದು. ಕಾಲಜನ್ ನಿಂದ ತಯಾರಿಸಲ್ಪಟ್ಟ ಜೆಲಾಟಿನ್ ಚರ್ಮವು ಬಿಗಿಯಾಗಲು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು ಮತ್ತು ಚರ್ಮದ ರೂಪ ಸುಧಾರಿಸುವುದು.

ಬೇಕಾಗುವ ಸಾಮಗ್ರಿಗಳು

  • 4 ಚಮಚ ತಾಜಾ ಕಿತ್ತಳೆ ಜ್ಯೂಸ್
  • 2 ಚಮಚ ಸುವಾಸನೆ ಇಲ್ಲದ ಜೆಲಾಟಿನ್ ಹುಡಿ

ಬಳಸುವ ವಿಧಾನ

•ಒಂದು ಪಿಂಗಾಣಿಗೆ ಕಿತ್ತಳೆ ಜ್ಯೂಸ್ ಹಾಕಿ.
•ಇದಕ್ಕೆ ಜೆಲಾಟಿನ್ ಹುಡಿ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಇದನ್ನು ಈಗ ಬಿಸಿ ಮಾಡಿಕೊಳ್ಳಿ. ಇದರ ಬಳಿಕ ಮಿಶ್ರಣವನ್ನು ತಿರುಗಿಸುತ್ತಾ ಇರಿ ಮತ್ತು ಜೆಲಾಟಿನ್ ಸಂಪೂರ್ಣವಾಗಿ ಕರಗುವ ತನಕ ಕುದಿಸಿ.
•ಈ ಮಿಶ್ರಣವನ್ನು ಈಗ ತಣ್ಣಗಾಗಲು ಬಿಡಿ.
•ಈ ಮಿಶ್ರಣವನ್ನು ಸರಿಯಾಗಿ ಮುಖಕ್ಕೆ ಹಚ್ಚಿಕೊಳ್ಳಿ.
•ಇದು ಒಣಗುವ ತನಕ ಹಾಗೆ ಬಿಡಿ.
•ಹೀಗೆ ಮಾಡಿದ ಬಳಿಕ ಮುಖಕ್ಕೆ ಅಂಟಿಕೊಂಡ ಪದರ ತೆಗೆಯಿರಿ. ಬಳಿಕ ನೀವು ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಲಿಂಬೆರಸ, ಜೇನುತುಪ್ಪ ಮತ್ತು ಹಾಲಿನ ಮಾಸ್ಕ್

ಚರ್ಮಕ್ಕೆ ಇದು ಅದ್ಭುತವಾಗಿರುವಂತಹ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಲಿಂಬೆಯಲ್ಲಿ ಇರುವಂತಹ ಸಿಟ್ರಸ್ ಅಂಶವು ಚರ್ಮವನ್ನು ಬಿಳಿಯಾಗಿಸುವುದು ಮತ್ತು ಚರ್ಮದ ಬಣ್ಣ ಕುಂದಿರುವುದನ್ನು ಸರಿಪಡಿಸುವುದು. ಜೇನುತುಪ್ಪವು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಮತ್ತು ನಯವಾಗಿಸುವುದು. ಹಾಲು ಚರ್ಮದಲ್ಲಿ ಇರುವಂತಹ ಚರ್ಮದ ಸತ್ತ ಕೋಶಗಳನ್ನು ಹಾಗೂ ಧೂಳನ್ನು ತೆಗೆಯುವುದು ಮತ್ತು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ಹಾಲು
*1 ಚಮಚ ಜೇನುತುಪ್ಪ
*1 ಚಮಚ ಲಿಂಬೆರಸ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಹಾಲು ಹಾಕಿ.
•ಇದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಹದ ಬೆಂಕಿಯಲ್ಲಿ ಇಡಿ ಮತ್ತು ಸರಿಯಾಗಿ ದಪ್ಪ ಆಗುವ ತನಕ ಹಾಗೆ ಇದನ್ನು ಕುದಿಸುತ್ತಾ ಇರಿ.
•ಈಗ ಇದನ್ನು ತಣ್ಣಗಾಗಲು ಬಿಡಿ.
•ಮುಖಕ್ಕೆ ಈಗ ಒಂದು ಪದರವನ್ನು ಹಾಗೆ ಹಚ್ಚಿಕೊಳ್ಳಿ.
•15-20 ನಿಮಿಷ ಇದನ್ನು ಒಣಗಲು ಬಿಡಿ.
•ಇದರ ಬಳಿಕ ಪದರವನ್ನು ಕಿತ್ತು ತೆಗೆಯಿರಿ ಮತ್ತು ತಣ್ಣೀರಿನಿಂದ ಮುಖ ತೊಳೆಯಿರಿ.

Most Read: ಮುಖದ ಕೂದಲು ತೆಗೆಯಲು ಹೇಳಿ ಮಾಡಿಸಿದ ಫೇಸ್ ಪ್ಯಾಕ್ ಅಂದರೆ ಅದು ಪಪ್ಪಾಯ ಫೇಸ್ ಪ್ಯಾಕ್

ಲಿಂಬೆ ಮತ್ತು ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ವಯಸ್ಸಾಗುವ ಲಕ್ಷಣಗಳಾಗಿರುವಂತಹ ನೆರಿಗೆ, ಗೆರೆ ಇತ್ಯಾದಿಗಳನ್ನು ತಡೆಯಲು ನೆರವಾಗುವಂತಹ ಮೊಟ್ಟೆಯ ಬಿಳಿ ಲೋಳೆಯು ಹಾನಿಕಾರಕ ಯುವಿ ಕಿರಣಗಳಿಂದಲೂ ಚರ್ಮವನ್ನು ಇದು ರಕ್ಷಿಸುತ್ತದೆ.

ಬೇಕಾಗುವ ಸಾಮಗ್ರಿಗಳು

  • 2 ಮೊಟ್ಟೆಯ ಬಿಳಿ ಲೋಳೆ
  • ಒಂದು ಚಮಚ ಲಿಂಬೆರಸ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿಕೊಳ್ಳಿ.
•ಇದಕ್ಕೆ ಲಿಂಬೆರಸ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
•30 ನಿಮಿಷಗಳ ಕಾಲ ಹಾಗೆ ಒಣಗಲು ಬಿಡಿ.
•ಇದು ಸಂಪೂರ್ಣವಾಗಿ ಒಣಗಿದ ಬಳಿಕ ಮಾಸ್ಕ್ ನ್ನು ಪೀಲ್ ಆಫ್ ಮಾಡಿ.
•ಮುಖವನ್ನು ಸರಿಯಾಗಿ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಸೌತೆಕಾಯಿ, ಜೆಲಾಟಿನ್ ಮತ್ತು ರೋಸ್ ವಾಟರ್ ಮಾಸ್ಕ್

ಸೌತೆಕಾಯಿಯು ಶಮನ ನೀಡುವುದು ಮತ್ತು ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಇದರಲ್ಲಿ ಇರುವಂತಹ ಉನ್ನತ ಮಟ್ಟದ ನೀರಿನಾಂಶವು ಒಣ ಚರ್ಮವನ್ನು ತೆಗೆಯುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ಹಾಗೂ ಕಾಂತಿ ನೀಡುವುದು. ರೋಸ್ ವಾಟರ್ ನಲ್ಲಿ ಸಂಕೋಚನ ಗುಣವಿದ್ದು, ಇದು ಚರ್ಮದ ರಂಧ್ರವನ್ನು ಕುಗ್ಗಿಸುವುದು. ಇದರಿಂದ ಚರ್ಮವು ಬಿಗಿ ಹಾಗೂ ನಯವಾಗುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ಸೌತೆಕಾಯಿ ಜ್ಯೂಸ್
  • 1 ಚಮಚ ಜೆಲಾಟಿನ್ ಹುಡಿ.
  • 1 ಚಮಚ ರೋಸ್ ವಾಟರ್
  • 10 ಹನಿ ಲಿಂಬೆರಸ

ಬಳಸುವ ವಿಧಾನ

•ಒಂದು ಪಿಂಗಾಣಿಗೆ ಸೌತೆಕಾಯಿ ಜ್ಯೂಸ್ ಹಾಕಿ.
•ಇದಕ್ಕೆ ಜಿಲಾಟಿನ್ ಹುಡಿ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಈಗ ರೋಸ್ ವಾಟರ್ ಮತ್ತು ಲಿಂಬೆ ರಸ ಹಾಕಿ ಮತ್ತು ಎಲ್ಲವೂ ಸರಿಯಾಗಿ ಮಿಶ್ರಣ ಆಗುವ ತನಕ ಕಲಸಿಕೊಳ್ಳಿ. ಈಗ ದಪ್ಪಗಿನ ಪೇಸ್ಟ್ ಮಾಡಿ.
•ಮುಖ ತೊಳೆದು, ಒರೆಸಿಕೊಳ್ಳಿ.
•ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
•ಇದನ್ನು ಒಣಗಲು ಬಿಡಿ ಮತ್ತು ಚರ್ಮವು ಬಿಗಿಯಾಗಿದೆ ಎಂದು ಅನಿಸಿದರೆ ಪೀಲ್ ಆಫ್ ಮಾಡಿ.
•ನಿಧಾನವಾಗಿ ಇದನ್ನು ತೆಗೆದ ಬಳಿಕ ಮುಖವನ್ನು ಸರಿಯಾಗಿ ತೊಳೆಯಿರಿ.

Most Read: ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ-ಕಡಿಮೆ ಖರ್ಚಿನ ಬ್ಯೂಟಿ ಟಿಪ್ಸ್!

ಅನಾನಸು, ಜೇನುತುಪ್ಪ ಮತ್ತು ಜೆಲಾಟಿನ್ ಮಾಸ್ಕ್

ಅನಾನಸು ಚರ್ಮದ ಸ್ಥಿತಿಸ್ಥಾಪಕತ್ವನ್ನು ಸುಧಾರಣೆ ಮಾಡಲು ನೆರವಾಗುವುದು ಮತ್ತು ಇದರಲ್ಲಿ ಚರ್ಮವನ್ನು ಬಿಳಿ ಹಾಗೂ ಕಾಂತಿಯುತಗೊಳಿಸುವಂತಹ ಅಂಶಗಳು ಇವೆ. ಇದರಿಂದಾಗಿ ಇದು ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು

  • ¼ ಕಪ್ ಅನಾನಸು ಜ್ಯೂಸ್
  • 1 ಚಮಚ ಜೇನುತುಪ್ಪ
  • 2 ಚಮಚ ಜೆಲಾಟಿನ್ ಹುಡಿ

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಅನಾನಸು ಜ್ಯೂಸ್ ಹಾಕಿ.
•ಇದಕ್ಕೆ ಜೇನುತುಪ್ಪ ಬೆರೆಸಿ ಮತ್ತು ಸರಿಯಾಗಿ ಹದ ಬೆಂಕಿಯನ್ನು ಕುದಿಸಿ.
•ಇದಕ್ಕೆ ಜೆಲಾಟಿನ್ ಸೇರಿಸಿಕೊಳ್ಳಿ ಮತ್ತು ಮಿಶ್ರಣವನ್ನು ಸರಿಯಾಗಿ ಕಲಸಿಕೊಂಡು ಜೆಲಾಟಿನ್ ಕರಗುವ ತನಕ ಕುದಿಸಿ.
•ಬಿಸಿಯಿಂದ ತೆಗೆದ ಬಳಿಕ ಮಿಶ್ರಣವು ಸರಿಯಾಗಿ ತಣ್ಣಗಾಗಲಿ.
•ಇದನ್ನು ಮುಖದ ಮೇಲೆ ಸರಿಯಾದ ಪದರದಲ್ಲಿ ಬ್ರಷ್ ಬಳಸಿ ಹಚ್ಚಿಕೊಳ್ಳಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ಮತ್ತೊಂದು ಪದರವನ್ನು ಹಚ್ಚಿಕೊಳ್ಳಿ.
•ಈ ಮಾಸ್ಕ್ ಸಂಪೂರ್ಣವಾಗಿ ಒಣಗಲಿ ಮತ್ತು ಬಳಿಕ ಪದರ ಕಿತ್ತು ತೆಗೆಯಿರಿ.
•ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಪೀಲ್ ಆಫ್ ಮಾಸ್ಕ್ ಬಳಸುವಾಗ ಕೆಲವು ಸಲಹೆಗಳು

ನೀವು ಪೀಲ್ ಆಫ್ ಮಾಸ್ಕ್ ಬಳಸುವ ಮೊದಲು ಕೆಲವೊಂಧು ಸಲಹೆಗಳು ನಿಮಗಾಗಿ ನೀಡಲಿದ್ದೇವೆ.
•ಉತ್ತಮ ಫಲಿತಾಂಶಕ್ಕಾಗಿ ಮಾಸ್ಕ್ ನ್ನು ಬಳಸುವ ಮೊದಲು ಇದನ್ನು ಸರಿಯಾಗಿ ತೊಳೆಯಿರಿ.
•ಮಾಸ್ಕ್ ನ್ನು ಹಚ್ಚಿಕೊಳ್ಳಲು ಬೆರಳಿನ ಬದಲಿಗೆ ಬ್ರಷ್ ಬಳಸಿಕೊಳ್ಳಿ.
•ಮಾಸ್ಕ್ ಹಚ್ಚಿಕೊಳ್ಳುವ ಮೊದಲು ಮುಖಕ್ಕೆ ಹಬೆಯಾಡಿಸಿದರೆ ಅತ್ಯುತ್ತಮ ಫಲಿತಾಂಶವು ನಿಮ್ಮದಾಗುವುದು.
•ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ಮಾತನಾಡಬೇಡಿ. ಇದರಿಂದ ಮುಖದ ಮೇಲೆ ನೆರಿಗೆ ಮೂಡಬಹುದು.
•ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ನೀವು ಈ ಮಾಸ್ಕ್ ನ್ನು ತೆಗೆಯಿರಿ.
•ನೀವು ಈ ಮಾಸ್ಕ್ ಬಳಸಿಕೊಂಡ ಬಳಿಕ ಮುಖ ಸರಿಯಾಗಿ ತೊಳೆಯಿರಿ, ಒರೆಸಿಕೊಳ್ಳಿ ಮತ್ತು ಮೊಶ್ಚಿರೈಸರ್ ಹಚ್ಚಿಕೊಳ್ಳಿ.
•ಈ ಮಾಸ್ಕ್ ನ್ನು ನೀವು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿಕೊಳ್ಳಿ.
•ಹುಬ್ಬುಗಳ ಮೇಲೆ, ಕಣ್ಣಿನ ಬದಿ ಮತ್ತು ಬಾಯಿಗೆ ಇದನ್ನು ಹಚ್ಚಿಕೊಳ್ಳಬೇಡಿ.

English summary

Home-made Fruit Peel Off Face Masks To Give You Glowing Skin

Peel-off masks are generally used to pull out the dirt and impurities from your skin and give you soft, glowing skin. We all desire glowing skin and these masks seem to provide us just that. Fortunately, the delicious and juicy fruits like pineapple, lemon, cucumber etc. can be used to whip up some amazing home-made peel-off masks to give you glowing skin.
X
Desktop Bottom Promotion