For Quick Alerts
ALLOW NOTIFICATIONS  
For Daily Alerts

ಸನ್ ಬರ್ನ್‌ ನಿವಾರಣೆ ಮಾಡುವಲ್ಲಿ 'ತೆಂಗಿನ ಎಣ್ಣೆ' ತುಂಬಾ ಪರಿಣಾಮಕಾರಿ!

|

ಬಿಸಿಲಿಗೆ ವೈಯೊಡ್ಡಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಬಿಸಿಲಿಗೆ ಮೈಯೊಡ್ಡಬೇಕು ಎಂದು ಹೇಳಲಾಗುತ್ತದೆ. ಯಾಕೆಂದರೆ ಬೇರೆ ಸಮಯದಲ್ಲಿ ಬಿಸಿಲಿನಲ್ಲಿ ಇರುವಂತಹ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುವುದು. ದೀರ್ಘಕಾಲ ತನಕ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಪರಿಣಾಮವಾಗಿ ತ್ವಚೆಯಲ್ಲಿ ಸುಟ್ಟ ಸಮಸ್ಯೆಯು ಕಾಣಿಸಬಹುದು. ಬಿಸಿಲಿನಿಂದ ಆಗಿರುವಂತಹ ಸುಟ್ಟ ಗಾಯಗಳು ತುಂಬಾ ನೋವು ಹಾಗೂ ಇದನ್ನು ನಿಭಾಯಿಸುವುದು ತುಂಬಾ ಕಠಿಣವಾಗಿರುವುದು. ಚರ್ಮವು ಕೆಂಪು ಮತ್ತು ಉರಿಯೂತದಿಂದ ಕೂಡಿರುವುದು. ಇದರಿಂದ ಬೊಕ್ಕೆಗಳು, ಚರ್ಮ ಎದ್ದು ಬರುವುದು, ವಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸುವುದು ಮತ್ತು ಅತಿಯಾದ ನೋವು ಕಂಡುಬರಬಹುದು. ಅತಿಯಾಗಿ ಬಿಸಿಲಿಗೆ ಮೈಯೊಡ್ಡುವ ಪರಿಣಾಮ ಚರ್ಮದ ಕ್ಯಾನ್ಸರ್ ಕೂಡ ಬರುವಂತಹ ಸಾಧ್ಯತೆಗಳು ಇವೆ.

Sunburn

ಬಿಸಿಲಿನಿಂದ ಆಗಿರುವಂತಹ ಗಾಯಕ್ಕೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿರುವುದು. ಇದಕ್ಕೆ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಹೆಚ್ಚಿನ ಸಮಸ್ಯೆಯು ಕಾಡದು. ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಬಿಸಿಲಿನ ಸುಟ್ಟ ಗಾಐವನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ. ತೆಂಗಿನ ಎಣ್ಣೆಯು ಇಂತಹ ಒಂದು ಅಮೂಲ್ಯ ನೈಸರ್ಗಿಕ ಸಾಮಗ್ರಿಯಾಗಿದೆ. ಇದರಲ್ಲಿ ವಿಟಮಿನ್ ಗಳು ಹಾಗೂ ಕೊಬ್ಬಿನಾಮ್ಲಗಳು ಇವೆ. ಇದು ಬಿಸಿಲಿನ ಸುಟ್ಟ ಗಾಯವನ್ನು ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಆಗಿರಲಿದೆ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆಯು ಚರ್ಮಕ್ಕೆ ತೇವಾಂಶವನ್ನು ನೀಡುವುದು ಮತ್ತು ಚರ್ಮಕ್ಕೆ ತುಂಬಾ ತಂಪಾದ ಪರಿಣಾಮ ಬೀರುವುದು. ಲೌರಿಕ್ ಆಮ್ಲವು ತೆಂಗಿನ ಎಣ್ಣೆಯಲ್ಲಿ ಇದ್ದು, ಇದರಿಂದಾಗಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳಿಂದಾಗಿ ಚರ್ಮಕ್ಕೆ ಶಮನ ನೀಡುವುದು ಮತ್ತು ಆರೋಗ್ಯಕಾರಿ ಚರ್ಮವನ್ನು ಕಾಪಾಡಲು ನೆರವಾಗುವುದು. ತೆಂಗಿನ ಎಣ್ಣೆಯು ಚರ್ಮಕ್ಕೆ ಶಮನ ನೀಡುವುದು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಬಿಸಿಲಿನಿಂದ ಸುಟ್ಟ ಗಾಯಕ್ಕೆ ತೆಂಗಿನ ಎಣ್ಣೆ ಬಳಸಿಕೊಂಡು ತಯಾರಿಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ....

ತೆಂಗಿನ ಎಣ್ಣೆ, ಅಲೋವೆರಾ ಮತ್ತು ಲ್ಯಾವೆಂಡರ್ ಸಾರಭೂತ ತೈಲ

ತೆಂಗಿನ ಎಣ್ಣೆ, ಅಲೋವೆರಾ ಮತ್ತು ಲ್ಯಾವೆಂಡರ್ ಸಾರಭೂತ ತೈಲ

ಅಲೋವೆರಾವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಉರಿಯೂತವನ್ನು ತಗ್ಗಿಸುವುದು. ಇದು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು. ಲ್ಯಾವೆಂಡರ್ ತೈಲದಲ್ಲಿ ಇರುವಂತಹ ನಂಜುನಿರೋಧಕ ಗುಣವು ಚರ್ಮವು ಚೇತರಿಸಿಕೊಳ್ಳಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ತೆಂಗಿನ ಎಣ್ಣೆ

2-3 ಚಮಚ ಅಲೋವೆರಾ ಲೋಳೆ

ಕೆಲವು ಹನಿ ಲ್ಯಾವೆಂಡರ್ ಸಾರಭೂತ ತೈಲ

ತಯಾರಿಸುವ ವಿಧಾನ

•ಪಿಂಗಾಣಿಯಲ್ಲಿ ತೆಂಗಿನ ಎಣ್ಣೆ ಹಾಕಿಕೊಳ್ಳಿ.

•ಇದಕ್ಕೆ ಅಲೋವೆರಾ ಲೋಳೆ ಮತ್ತು ಲ್ಯಾವೆಂಡರ್ ಸಾರಭೂತ ತೈಲ ಹಾಕಿಕೊಳ್ಳಿ ಮತ್ತು ಸರಿಯಾಗಿ ಇವೆರಡನ್ನು ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•10-15 ನಿಮಿಷ ಕಾಲ ಹಾಗೆ ಬಿಡಿ.

•ಬಳಿಕ ನೀರು ಹಾಕಿ ತೊಳೆಯಿರಿ.

Most Read: ಮೊಟ್ಟೆಯ ಸಿಪ್ಪೆ ಬಳಸಿಕೊಂಡು ತ್ವಚೆಯ ಆರೈಕೆಗೆ ಸರಳ ವಿಧಾನಗಳು

ತೆಂಗಿನ ಎಣ್ಣೆ, ಶ್ರೀಗಂಧದ ಹುಡಿ ಮತ್ತು ಬಾದಾಮಿ ಎಣ್ಣೆ

ತೆಂಗಿನ ಎಣ್ಣೆ, ಶ್ರೀಗಂಧದ ಹುಡಿ ಮತ್ತು ಬಾದಾಮಿ ಎಣ್ಣೆ

ಶ್ರೀಗಂಧವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಇದು ಉರಿಯೂತಕ್ಕೆ ಒಳಗಾಗಿರುವ ಚರ್ಮವನ್ನು ಶಾಂತಗೊಳಿಸುವುದು. ಬಾದಾಮಿ ಎಣ್ಣೆಯಲ್ಲಿ ಅತ್ಯಧಿಕ ಮೊಶ್ಚಿರೈಸ್ ಗುಣಗಳು ಇವೆ ಮತ್ತು ಇದು ಯುವಿಯಿಂದ ಆಗಿರುವ ಹಾನಿ ತಡೆಯುವುದು ಮತ್ತು ಚರ್ಮಕ್ಕೆ ಅಕಾಲಿಕ ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು.

ಬೇಕಾಗುವ ಸಾಮಗ್ರಿಗಳು

*5 ಚಮಚ ತೆಂಗಿನ ಎಣ್ಣೆ

*4 ಚಮಚ ಶ್ರೀಗಂಧದ ಹುಡಿ

*2 ಚಮಚ ಬಾದಾಮಿ ಎಣ್ಣೆ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ತೆಂಗಿನ ಎಣ್ಣೆ ಹಾಕಿ

•ಇದಕ್ಕೆ ಶ್ರೀಗಂಧದ ಹುಡಿ ಮತ್ತು ಬಾದಾಮಿ ಎಣ್ಣೆ ಹಾಕಿ ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.

•ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•ಇದು ಒಣಗುವ ತನಕ ಹಾಗೆ ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

ತೆಂಗಿನ ಎಣ್ಣೆ ಮತ್ತು ಆಪಲ್ ಸೀಡರ್ ವಿನೇಗರ್

ತೆಂಗಿನ ಎಣ್ಣೆ ಮತ್ತು ಆಪಲ್ ಸೀಡರ್ ವಿನೇಗರ್

ತೆಂಗಿನ ಎಣ್ಣೆ ಮತ್ತು ಆಪಲ್ ಸೀಡರ್ ವಿನೇಗರ್ ನ್ನು ಜತೆಯಾಗಿ ಸೇರಿಸಿಕೊಂಡರೆ ಇದು ಉರಿಯೂತ ಶಮನ ಮಾಡುವುದು ಮತ್ತು ಬಿಸಿಲಿನಿಂದ ಸುಟ್ಟ ಗಾಯದಿಂದಾಗಿ ಆಗುವ ಕಿರಿಕಿರಿ ಕಡಿಮೆ ಮಾಡುವುದು. ಆಪಲ್ ಸೀಡರ್ ವಿನೇಗರ್ ಚರ್ಮದಲ್ಲಿನ ಪಿಎಚ್ ಸಮತೋಲನ ಕಾಪಾಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

*ತೆಂಗಿನ ಎಣ್ಣೆ(ಅಗತ್ಯವಾಗಿ ಬೇಕು)

*¼ ಕಪ್ ಆಪಲ್ ಸೀಡರ್ ವಿನೇಗರ್

*1 ಕಪ್ ನೀರು

ತಯಾರಿಸುವ ಹಾಗೂ ಬಳಸುವ ವಿಧಾನ

•ಒಂದು ಕಪ್ ನೀರಿಗೆ ಆಪಲ್ ಸೀಡರ್ ವಿನೇಗರ್ ಹಾಕಿ ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಒಂದು ಸ್ಪ್ರೇ ಬಾಟಲಿಗೆ ಈ ಮಿಶ್ರಣ ಹಾಕಿಕೊಳ್ಳಿ ಮತ್ತು ಸರಿಯಾಗಿ ಕಲುಕಿಸಿ.

•ಈಗ ಬಾಧಿತ ಜಾಗಕ್ಕೆ ಇದನ್ನು ಸ್ಪ್ರೇ ಮಾಡಿ.

•ಇದನ್ನು ಕೆಲವು ನಿಮಿಷ ಕಾಲ ಒಣಗಲು ಬಿಡಿ.

•ತೆಂಗಿನ ಎಣ್ಣೆಯನ್ನು ಇದರ ಮೇಲೆ ನಿಧಾನವಾಗಿ ಮಸಾಜ್ ಮಾಡಿ ಮತ್ತು ಹಾಗೆ ಬಿಡಿ.

ತೆಂಗಿನ ಎಣ್ಣೆ ಮತ್ತು ಟ್ರೀ ಟ್ರೀ ಎಣ್ಣೆ

ತೆಂಗಿನ ಎಣ್ಣೆ ಮತ್ತು ಟ್ರೀ ಟ್ರೀ ಎಣ್ಣೆ

ಬಿಸಿಲಿನಿಂದ ಆಗಿರುವ ಗಾಯವನ್ನು ನಿವಾರಣೆ ಮಾಡಲು ತೆಂಗಿನ ಎಣ್ಣೆ ಮತ್ತು ಟ್ರೀ ಟ್ರೀ ಎಣ್ಣೆಯು ಅತ್ಯುತ್ತಮ ಮಿಶ್ರಣವಾಗಿದೆ. ಚಾ ಮರದ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಚರ್ಮವನ್ನು ಶುದ್ಧೀಕರಿಸಿ, ಚರ್ಮವು ಉರಿಯೂತ ಮತ್ತು ಅಸ್ವಸ್ಥತೆಯಿಂದ ಪಾರಾಗುವಂತೆ ಮಾಡುವುದು. ತೆಂಗಿನ ಎಣ್ಣೆಯು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಗುಣಮುಖವಾಗುವ ಪ್ರಕ್ರಿಯೆಯನ್ನು ವೇಗಗೊಳಿಸುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ತೆಂಗಿನ ಎಣ್ಣೆ

2-3 ಚಮಚ ಟ್ರೀ ಟ್ರೀ ಎಣ್ಣೆ

ತಯಾರಿಸುವ ವಿಧಾನ

•ಎರಡನ್ನು ಒಂದು ಪಿಂಗಾಣಿಯಲ್ಲಿ ಹಾಕಿ ಮಿಶ್ರಣ ಮಾಡಿ.

•ಇದನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•10-15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

•ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

Most Read: ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನಾಲ್ಕು ಚಾಕಲೇಟ್‌ ಫೇಸ್ ಮಾಸ್ಕ್‌ಗಳು

ತೆಂಗಿನ ಎಣ್ಣೆ ಮತ್ತು ಜೇನುತುಪ್ಪ

ತೆಂಗಿನ ಎಣ್ಣೆ ಮತ್ತು ಜೇನುತುಪ್ಪ

ಜೇನುತುಪ್ಪವು ಚರ್ಮದಲ್ಲಿ ಮೊಶ್ಚಿರೈಸ್‌ನ್ನು ಕಾಪಾಡುವುದು ಮತ್ತು ಬಿಸಿಲಿನಿಂದ ಸುಟ್ಟ ಚರ್ಮವನ್ನು ಪುನರ್ ನಿರ್ಮಿಸುವುದು. ತೆಂಗಿನ ಎಣ್ಣೆ ಮತ್ತು ಜೇನುತುಪ್ಪ ಮಿಶ್ರಣ ಮಾಡಿದರೆ ಆಗ ಚರ್ಮದ ಉರಿಯೂತ ಕಡಿಮೆ ಆಗುವುದು ಮತ್ತು ಗುಣಮುಖವಾಗುವ ಪ್ರಕ್ರಿಯೆಯು ವೇಗ ಪಡೆಯುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ತೆಂಗಿನ ಎಣ್ಣೆ

*ಒಂದು ಚಮಚ ಜೇನುತುಪ್ಪ

ತಯಾರಿಸುವ ವಿಧಾನ

•ಎರಡು ಸಾಮಗ್ರಿಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•30-35 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

•ಬಿಸಿ ನೀರು ಬಳಸಿಕೊಂಡು ಇದನ್ನು ತೊಳೆಯಿರಿ.

ತೆಂಗಿನ ಎಣ್ಣೆ ಮತ್ತು ಕರ್ಪೂರ

ತೆಂಗಿನ ಎಣ್ಣೆ ಮತ್ತು ಕರ್ಪೂರ

ತೆಂಗಿನ ಎಣ್ಣೆಯನ್ನು ಕರ್ಪೂರದ ಜತೆಗೆ ಮಿಶ್ರಣ ಮಾಡಿಕೊಂಡು ಬಳಸಿದಾಗ ಅದು ನೋವಿನಿಂದ ಮತ್ತು ಬಿಸಿಲಿನಿಂದ ಆದ ಸುಟ್ಟ ಗಾಯದ ತುರಿಕೆ ಕಡಿಮೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ತೆಂಗಿನ ಎಣ್ಣೆ

*2 ಚಮಚ ಹುಡಿ ಮಾಡಿ ಕರ್ಪೂರ

ತಯಾರಿಸುವ ಮತ್ತು ಬಳಸುವ ವಿಧಾನ

•ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳೀ.

•ಇದನ್ನು ಒಂದು ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿಡಿ

•ಸ್ವಲ್ಪ ಹೊತ್ತು ಈ ಗಾಜಿನ ಡಬ್ಬವನ್ನು ಸೂರ್ಯನ ಬಿಸಿಲಿಗೆ ಇಡಿ ಮತ್ತು ಇದರಿಂದ ಕರ್ಪೂರವು ಎಣ್ಣೆಯೊಂದಿಗೆ ಸರಿಯಾಗಿ ಮಿಶ್ರಣ ಆಗುವುದು.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•5-10 ನಿಮಿಷ ಕಾಲ ಹಾಗೆ ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ

ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ

ತೆಂಗಿನ ಎಣ್ಣೆ ಮತ್ತು ಹರಳೆಣ್ಣೆಯು ಚರ್ಮಕ್ಕೆ ಅತ್ಯುತ್ತಮವಾಗಿ ಮೊಶ್ಚಿರೈಸ್ ಮಾಡುವುದು ಮತ್ತು ಅದು ಚರ್ಮವನ್ನು ತೇವಾಂಶದಿಂದ ಇರುವಂತೆ ಮಾಡುವುದು. ಹರಳೆಣ್ಣೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮಕ್ಕೆ ಶಮನ ನೀಡುವುದು ಮತ್ತು ಬಿಸಿಲಿನ ಸುಟ್ಟ ಗಾಯದಿಂದ ಆಗಿರುವಂತಹ ನೋವು ಮತ್ತು ಉರಿಯೂತವನ್ನು ಇದು ಕಡಿಮೆ ಮಾಡುವುದು. ಇದರಿಂದ ಇದು ಬಾಧಿತ ಜಾಗಕ್ಕೆ ಪರಿಹಾರ ನೀಡುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ತೆಂಗಿನ ಎಣ್ಣೆ

*1 ಚಮಚ ಹರಳೆಣ್ಣೆ

ತಯಾರಿಸುವ ವಿಧಾನ

•ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಇದನ್ನು ನಿಧಾನವಾಗಿ ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•10-15 ನಿಮಿಷ ಕಾಲ ಹಾಗೆ ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

English summary

Effective Coconut Oil Remedies To Treat Sunburn

A long and relaxing sunbath sure does seem like a great idea and we all enjoy it. But do you know how harmful the UV rays of the sun can be for your skin? Exposing your skin to the sun for long can lead to sunburns. Sunburns can be really painful and difficult to handle. Your skin becomes red and inflamed. It can also lead to blisters, rashes, premature ageing of the skin and immense pain. Frequently sunburned skin becomes prone to skin cancer.
X
Desktop Bottom Promotion