For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

|

ದಿನಾಲೂ ಬೆಳಗ್ಗೆ ಎದ್ದ ಮೇಲೆ ನಿಮ್ಮ ಮುಖವು ತುಂಬಾ ನಿದ್ರೆಯಲ್ಲಿ ಇರುವಂತೆ ಇರುವುದೇ? ಕಣ್ಣುಗಳ ಕೆಳಗಡೆ ಕಪ್ಪು ಕಲೆಗಳು ಕೂಡ ಮೂಡಿದೆಯಾ? ಹಾಗಾದರೆ ನೀವು ಖಂಡಿತವಾಗಿಯೂ ಸ್ವಲ್ಪ ಹೆಚ್ಚು ಮೇಕಪ್ ಹಚ್ಚಿಕೊಂಡು ಕಚೇರಿಗೆ ಹೊರಡಲು ಸಜ್ಜಾಗುವಿರಿ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ನಿಮಗೆ ನೀವೇ ಕೇಳಿಕೊಳ್ಳಬೇಕು.

Glowing skin

ಯಾಕೆಂದರೆ ಮೇಕಪ್ ಎನ್ನುವುದು ತಾತ್ಕಾಲಿಕವಾಗಿ ಈ ಕಪ್ಪು ಕಲೆಯನ್ನು ಮರೆಮಾಚಬಹುದು. ಆದರೆ ಶಾಶ್ವತವಾಗಿ ಪರಿಹಾರವೇನು? ಹಾಗಾದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಬೇಕು. ಯಾಕೆಂದರೆ ನಾವು ನಿಮಗೆ ಇಲ್ಲಿ ಕೆಲವೊಂದು ವಿಧಾನಗಳನ್ನು ಸೂಚಿಸಿದ್ದೇವೆ. ಇದನ್ನು ನೀವು ರಾತ್ರಿ ಮಲಗುವ ಮೊದಲು ಬಳಸಿಕೊಂಡರೆ ಆಗ ಬೆಳಗ್ಗೆ ಏಳುವಾಗ ಮುಖವು ತಾಜಾವಾಗಿರುವುದು.
ತ್ವಚೆಗೆ ಪ್ರಬಲ ನಿದ್ರೆ ನೀಡಿ

ತ್ವಚೆಗೆ ಪ್ರಬಲ ನಿದ್ರೆ ನೀಡಿ

ಹೆಚ್ಚಿನವರು ವಾರಾಂತ್ಯದಲ್ಲಿ ಸರಿಯಾಗಿ ನಿದ್ರೆ ಮಾಡಿಕೊಂಡು ಭಾನುವಾರ ಬೆಳಗ್ಗೆ ತುಂಬಾ ಉಲ್ಲಾಸದಿಂದ ಎದ್ದೇಳಬೇಕೆಂದು ಬಯಸುತ್ತೇವೆ. ಆದರೆ ನಿಮ್ಮ ತ್ವಚೆಗೂ ಸರಿಯಾದ ನಿದ್ರೆ ಬೇಕು ಎಂದು ನಿಮಗೆ ತಿಳಿದಿದೆಯಾ? ಹಾಗಾದರೆ ನೀವು ನೈಸರ್ಗಿಕವಾಗಿ ಮೊಶ್ಚಿರೈಸರ್ ನೀಡುವಂತಹ ಎಸ್ಟೀ ಲೌಡೆರ್ ನ ನೈಟ್ ರಿಪೇರ್ ಪವರ್ ಫೊಯಿಲ್ ಮಾಸ್ಕ್ ನ್ನು ಹಚ್ಚಬೇಕು. ಈ ಮಾಸ್ಕ್ ನಿಂದ ರಾತ್ರಿ ವೇಳೆ ಚರ್ಮವು ಒಳಗಿನಿಂದಲೇ ತುಂಬಾ ಬಲ ನೀಡುವುದು. ಇದರಿಂದ ಹೊರಗಿನಿಂದ ಚರ್ಮವು ತುಂಬಾ ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು.

ಕುಡಿಯುವಾಗ ಯೋಚಿಸಿ

ಕುಡಿಯುವಾಗ ಯೋಚಿಸಿ

ನಿದ್ರಾಹೀನತೆಯಿಂದಾಗಿ ತ್ವಚೆಯು ತುಂಬಾ ಒಣ ಹಾಗೂ ನಿರ್ಜಲೀಕರಣದಿಂದ ಬಳಲುವುದು. ಇದಕ್ಕಾಗಿ ನೀವು ಅತಿಯಾಗಿ ಕುಡಿಯಬಾರದು.ನೀವು ಅತಿಯಾಗಿ ಕುಡಿದಿದ್ದರೆ ಆಗ ನೀವು ಲಿಂಬೆರಸದೊಂದಿಗೆ ಸೋಡಾ ಬೆರೆಸಿ ಕುಡಿಯಿರಿ ಅಥವಾ ಎಳನೀರು ಕುಡಿಯಿರಿ. ಇದು ನಿರ್ಜಲೀಕರಣವನ್ನು ನಿವಾರಣೆ ಮಾಡುವುದು. ಸಕ್ಕರೆ ಅಥವಾ ಕೆಫಿನ್ ಇರುವಂತಹ ಪಾನೀಯಗಳಾದ ತಂಪು ಪಾನೀಯಗಳು, ಹಣ್ಣಿನ ಜ್ಯೂಸ್ ಮತ್ತು ಶಕ್ತಿಪೇಯ ಸೇವನೆ ಮಾಡಲು ಹೋಗಬೇಡಿ. ಇದರಿಂದಾಗಿ ನಿದ್ರಾಹೀನತೆ ಉಂಟಾಗಬಹುದು ಮತ್ತು ಚರ್ಮವು ನಿರ್ಜಲೀಕರಣಕ್ಕೆ ಒಳಗಾಗುವುದು.
ನಿದ್ರೆಗೆ ಜಾರುವ ಮೊದಲು ನೀರು ಕುಡಿಯಬೇಡಿ

ನಿದ್ರೆಗೆ ಜಾರುವ ಮೊದಲು ನೀರು ಕುಡಿಯಬೇಡಿ

ನಿದ್ರೆಗೆ ಜಾರುವ ಮೊದಲು ನೀವು ನೀರು ಕುಡಿಯಲು ಹೋದರೆ ಆಗ ನಿಮಗೆ ರಾತ್ರಿಯಿಡಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ ಬೇಕಾಗುತ್ತದೆ. ತರಕಾರಿ ಮತ್ತು ಬೀಜಗಳಲ್ಲಿ ಇರುವಂತಹ ನೀರಿನಾಂಶವು ನಿಧಾನವಾಗಿ ದೇಹಕ್ಕೆ ತೇವಾಂಶ ನೀಡುವುದು. ಇದರಿಂದಾಗಿ ಉಪ್ಪಿನಾಂಶ ಇರುವಂತಹ ಸಂಸ್ಕರಿತ ತಿಂಡಿಗಳನ್ನು ರಾತ್ರಿ ವೇಳೆ ಸೇವಿಸಬೇಡಿ. ಹೀಗೆ ಮಾಡಿದರೆ ತ್ವಚೆಯು ನಿಮಗೆ ಧನ್ಯವಾದ ಹೇಳುವುದು

ಮೇಕಪ್ ತೆಗೆದು ಮಲಗಲು ಮರೆಯಬೇಡಿ

ಮೇಕಪ್ ತೆಗೆದು ಮಲಗಲು ಮರೆಯಬೇಡಿ

ನೀವು ರಾತ್ರಿ ವೇಳೆ ಎಷ್ಟೇ ಬಳಲಿದ್ದರೂ ಮಲಗುವ ಮೊದಲು ಮೇಕಪ್ ತೆಗೆಯಲು ಮರೆಯಬೇಡಿ. ಯಾಕೆಂದರೆ ಇದರಿಂದ ಬೆಳಗ್ಗೆ ಪರಿಸ್ಥಿತಿಯು ಕೆಟ್ಟದಾಗುವುದು. ಚರ್ಮದ ರಂಧ್ರಗಳು ತುಂಬುವುದು, ಕಣ್ಣುಗಳಿಗೆ ಕಿರಿಕಿರಿಯಾಗುವುದು, ಅದೇ ರೀತಿ ಮೇಕಪ್ ತಲೆದಿಂಬಿಗೂ ತಾಗಬಹುದು. ಇದರಿಂದಾಗಿ ನೀವು ತುಂಬಾ ಒಳ್ಳೆಯ ಮೇಕಪ್ ತೆಗೆಯುವ ಸಾಮಗ್ರಿಗಳನ್ನು ಬಳಸಿಕೊಳ್ಳಿ. ನೀವು ಬಟ್ಟೆ ಬಳಸಿಕೊಂಡು ಒರೆಸಿಕೊಳ್ಳುವುದು ಸರಿಯಾದ ವಿಧಾನವಲ್ಲ.

ಮಲಗುವ ಮಾಡಬೇಕಾದ ಚರ್ಮದ ಆರೈಕೆಗಳು

ಮಲಗುವ ಮಾಡಬೇಕಾದ ಚರ್ಮದ ಆರೈಕೆಗಳು

ನೀವು ದಿನವಿಡಿ ದುಡಿದು ಬಸವಳಿದಿರುವ ಕಾರಣದಿಂದಾಗಿ ರಾತ್ರಿ ವೇಳೆ ಚರ್ಮವು ಆಗಿರುವಂತಹ ಹಾನಿಯನ್ನು ಸರಿಪಡಿಸುವುದು. ಇದರಿಂದಾಗಿ ನೀವು ರಾತ್ರಿ ವೇಳೆ ತ್ವಚೆಯ ಆರೈಕೆಗೆ ಬೇಕಾಗಿರುವ ಸರಿಯಾದ ಉತ್ಪನ್ನಗಳನ್ನು ಬಳಸಿಕೊಂಡರೆ ಆಗ ನಿಮಗೆ ಕಾಂತಿಯುತ ಹಾಗೂ ಹೊಳೆಯುವ ತ್ವಚೆಯನ್ನು ಬೆಳಗ್ಗೆ ಪಡೆಯಲು ನೆರವಾಗುವುದು. ಉತ್ತಮ ಗುಣಮಟ್ಟದ ಉತ್ಪನ್ನ ಬಳಸಿಕೊಂಡರೆ ಅದರಿಂದ ನಿಮ್ಮ ತ್ವಚೆಗೆ ಒಳ್ಳೆಯ ಪರಿಣಾಮವಾಗುವುದು.

ದಿಂಬಿಗೆ ಮುಖಕೊಟ್ಟು ಮಲಗಬೇಡಿ

ದಿಂಬಿಗೆ ಮುಖಕೊಟ್ಟು ಮಲಗಬೇಡಿ

ನಿದ್ರೆಯಿಂದಾಗಿ ಮುಖದ ಮೇಲೆ ನೆರಿಗೆಗಳು ಮೂಡುವುದು. ದಿಂಬಿನಿಂದಾಗಿ ಮೂಡುವಂತಹ ತಾತ್ಕಾಲಿಕವಾದ ನೆರಿಗೆಗಳು ಅಲ್ಲ. ಆದರೆ ನಿದ್ರೆಯ ನೆರಿಗೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ದಿಂಬಿಗೆ ಚರ್ಮವನ್ನು ಒತ್ತಿ ಹಿಡಿದು ಮತ್ತು ತೆಗೆದಾಗ ಹೀಗೆ ಆಗುವುದು ಇದೆ. ಇದರಿಂದಾಗಿ ಚರ್ಮದಲ್ಲಿನ ಕಾಲಜನ್ ಮೇಲೆ ಪರಿಣಾಮ ಬೀರುವುದು. ನೀವು ಬೆನ್ನ ಮೇಲೆ ಮಲಗಿಕೊಳ್ಳಿ. ದಿಂಬಿನ ಮೇಲೆ ಮುಖವಿಟ್ಟು ಮಲಗಿದರೆ ಆಗ ನೆರಿಗೆ ಮೂಡುವುದು.

ತೆಳ್ಳಗಿನ ಹೈ ಮಾಸ್ಕ್ ಹಾಕಿಕೊಳ್ಳಿ

ತೆಳ್ಳಗಿನ ಹೈ ಮಾಸ್ಕ್ ಹಾಕಿಕೊಳ್ಳಿ

ಹೈ ಮಾಸ್ಕ್ ಹಾಕಿಕೊಳ್ಳುವಂತಹ ಮುಖ್ಯ ಉದ್ದೇಶವೆಂದರೆ ಬೆಳಕನ್ನು ನಿರ್ಬಂಧಿಸುವುದು ಮತ್ತು ನಿದ್ರೆಗೆ ಸರಿಯಾದ ಸಮಯ ನೀಡುವುದು. ದಿಂಬು ನಿಮ್ಮ ಮುಖಕ್ಕೆ ಒತ್ತಿದಾಗ ಅದು ಚರ್ಮಕ್ಕೆ ಹಾನಿಯಾಗದಂತೆ ತಡೆಯುವುದು. ಚರ್ಮವು ಇಷ್ಟಪಡುವಂತಹ ಸಿಲ್ಕ್ ಮಾಸ್ಕ್ ನ್ನು ಹಾಕಿಕೊಳ್ಳಿ. ಇದರಿಂದ ಮೊಶ್ಚಿರೈಸರ್ ಉಳಿಯುವುದು ಮತ್ತು ನಿರ್ಜಲೀಕರಣವನ್ನು ತಡೆಯಬಹುದು.

ಅಡೆತಡೆ ನಿವಾರಣೆ ಮಾಡಿ

ಅಡೆತಡೆ ನಿವಾರಣೆ ಮಾಡಿ

ಮಲಗುವ ಮೊದಲು ಕೋಣೆಯ ದೀಪಗಳನ್ನು ಆರಿಸಿದ ಬಳಿಕವೂ ನಾವು ಮೊಬೈಲ್ ನಲ್ಲಿ ಹುಡುಕಾಡುತ್ತಾ ಇರುತ್ತೇವೆ. ಆದರೆ ಮೊಬೈಲ್ ನ್ನು ನೀವು ಕಡೆಗಣಿಸಿ. ಯಾಕೆಂದರೆ ಇದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಹಾರ್ಮೋನುಗಳು ಉತ್ತೇಜನಗೊಂಡು ಬೆಳಗ್ಗೆ ಏಳುವಾಗ ಕಣ್ಣುಗಳು ನಿದ್ರಿಸಿದಂತೆ ಇರುವುದು. ನೀವು ಬೆಳಗ್ಗೆ ಎದ್ದ ಬಳಿಕವೂ ಮೊಬೈಲ್ ನ್ನು ನೋಡಬಹುದು. ನಾಳೆ ಬೆಳಗ್ಗೆ ಮಾಡಬೇಕಾದ ಕಾರ್ಯಗಳನ್ನು ನೀವು ಮೊಬೈಲ್ ನಲ್ಲಿ ಗುರುತಿಸಿಕೊಳ್ಳುತ್ತಾ ಇದ್ದರೆ ಆಗ ಮೊಬೈಲ್ ಬದಲಿಗೆ ನೀವು ಒಂದು ಪೇಪರ್ ನಲ್ಲಿ ಇದನ್ನು ಬರೆಯಿರಿ. ಇದು ತುಂಬಾ ಹಳೆಯ ವಿಧಾನವೆಂದು ನಿಮಗನಿಸಬಹುದು. ಆದರೆ ಇದು ಕಣ್ಣುಗಳಿಗೆ ಆರಾಮ ನೀಡುವುದು.

ಸುಂದರ ವಾತಾವರಣ ನಿರ್ಮಾಣ ಮಾಡಿ

ಸುಂದರ ವಾತಾವರಣ ನಿರ್ಮಾಣ ಮಾಡಿ

ನೀವು ನಿದ್ರೆಗೆ ತೆರಳುವ ಮೊದಲು ಸುಂದರ ವಾತಾವರಣ ನಿರ್ಮಾಣ ಮಾಡಬೇಕು. ಹಾಗಾಗಿ ನೀವು ಧಾನ್ಯದ ಸಂಗೀತ ಕೇಳಿಕೊಳ್ಳಿ. ಇದನ್ನು ನೀವು ಮೊಬೈಲ್ ನಲ್ಲಿ ಕೇಳುತ್ತಲಿದ್ದರೆ ಬೆಳಕು ಬರದಂತೆ ಮಾಡಿ. ತಲೆದಿಂಬಿಗೆ ನಿಮಗೆ ತುಂಬಾ ಇಷ್ಟವಾಗುವಂತಹ ಸುಗಂಧ ದ್ರವ್ಯ ಹಾಕಿ. ಹೀಗೆ ಮಾಡಿದಾಗ ನೀವು ತುಂಬಾ ಗಾಢವಾಗಿ ನಿದ್ರೆಗೆ ಜಾರುವಿರಿ. ಇಂತಹ ಸಮಯದಲ್ಲಿ ನಿಮಗೆ ಎಂಟು ಗಂಟೆಗಳ ಬದಲಿಗೆ ಐದು ಗಂಟೆಗಳ ಕಾಲ ನಿದ್ರೆ ಬಂದರೂ ಅದು ಸಾಕು.

English summary

beauty-sleep tips so you wake up looking amazing

Tired of looking tired EVERY morning? Full-coverage concealer may mask under-eye shadows, but you can't cheat eight hours of shut-eye by caking on the makeup alone — not to mention your skin can actually age before its time from lack of sleep. It's the stuff of nightmares. So, wanna look fresh-faced even if you've been working hard all day and playing hard all night? Put a knackered complexion and excess baggage to bed with these sleep-friendly tips for instant happy face
Story first published: Monday, January 14, 2019, 8:10 [IST]
X
Desktop Bottom Promotion