For Quick Alerts
ALLOW NOTIFICATIONS  
For Daily Alerts

ಸೇಬಿನ ಶಿರ್ಕಾದ ಸೌಂದರ್ಯ ಪ್ರಯೋಜನಗಳು ಹಾಗೂ ಉಪಯೋಗಿಸುವ ವಿಧಾನಗಳು

|

ಸೇಬಿನ ಶಿರ್ಕಾ (Apple Cider Vinegar) ಲಘು ಆಮ್ಲೀಯ ದ್ರವವಾಗಿದ್ದು ಔಷಧೀಯ ರೂಪದಲ್ಲಿಯೂ, ಅಡುಗೆಯ ಸಾಮಾಗ್ರಿಯಾಗಿಯೂ ಕೂದಲ ಮತ್ತು ತ್ವಚೆಯ ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತದೆ. ಇದೇ ಸೌಂದರ್ಯವರ್ಧಕ ಗುಣವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಅದ್ಭುತವಾದ ಪರಿಣಾಮಗಳನ್ನೇ ಪಡೆಯಬಹುದು. ಇದರ ಕೆಲವು ಪ್ರಯೋಜನಗಳಲ್ಲಿ ಪ್ರಮುಖವಾಗಿ ಮೊಡವೆಯ ನಿವಾರಣೆ, ಸೂರ್ಯನ ತಾಪದ ಪರಿಣಾಮ ಪಡೆದ ತ್ವಚೆಯ ಮರುಚೈತನ್ಯ, ತಲೆಹೊಟ್ಟು ನಿವಾರಣೆ ಇತ್ಯಾದಿಗಳಾಗಿವೆ. ಬನ್ನಿ, ಈ ಅದ್ಭತ ದ್ರವವನ್ನು ತ್ವಚೆ ಮತ್ತು ಕೂದಲ ಆರೈಕೆಗಾಗಿ ಸರಿಯಾದ ಕ್ರಮದಲ್ಲಿ ಬಳಸುವುದು ಹೇಗೆ ಹಾಗೂ ಇದರ ಬಳಕೆಯಿಂದ ದೊರಕುವ ಪ್ರಯೋಜನಗಳೇನು ಎಂಬುದನ್ನು ನೋಡೋಣ:

ಸೇಬಿನ ಶಿರ್ಕಾ ಬಳಕೆಯಿಂದ ತ್ವಚೆ ಮತ್ತು ಕೂದಲಿಗೆ ದೊರಕುವ ಪ್ರಯೋಜನಗಳು

*ತ್ವಚೆಯನ್ನು ಶಮನಗೊಳಿಸುತ್ತದೆ

*ಮೊಡವೆಗಳ ವಿರುದ್ದ ಹೋರಾಡುತ್ತದೆ

*ಮೊಡವೆ ಮತ್ತು ಬ್ಲಾಕ್ ಹೆಡ್ ಗಳು ತ್ವಚೆಯಲ್ಲಿ ಮೂಡದಂತೆ ತಡೆಯುತ್ತದೆ

*ಗಾಢವಾಗಿರುವ ತ್ವಚೆಯ ಬಣ್ಣ ಸಹಜವರ್ಣ ಪಡೆಯಲು ನೆರವಾಗುತ್ತದೆ.

*ಸೂರ್ಯನ ಕಿರಣಗಳಿಗೆ ಸಿಲುಕಿದ ತ್ವಚೆಯ ಉರಿಯನ್ನು ಶಮನಗೊಳಿಸುತ್ತದೆ

*ಪಾದಗಳ ಬಿರುಕುಗಳನ್ನು ಮರುದುಂಬಿಸಲು ನೆರವಾಗುತ್ತದೆ

*ದೇಹದಿಂದ ಸೂಸುವ ದುರ್ವಾಸನೆ ನಿವಾರಿಸಲು ನೆರವಾಗುತ್ತದೆ.

*ತಲೆಹೊಟ್ಟು ನಿವಾರಣೆಗೆ ಸಹಕರಿಸುತ್ತದೆ

ಕೂದಲ ಸೊಂಪು ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ.

ಕೂದಲಿಗೆ ಅಂಟಿಕೊಳ್ಳುವ ಕೊಳೆಯಿಂದ ಮುಕ್ತಗೊಳಿಸುತ್ತದೆ.

ತ್ವಚೆಯ ಆರೈಕೆಗಾಗಿ ಸೇಬಿನ ಶಿರ್ಕಾ ಬಳಸುವ ವಿಧಾನ

ಮೊಡವೆಗಳ ಚಿಕಿತ್ಸೆಗಾಗಿ

ಸೇಬಿನ ಶಿರ್ಕಾ ಬ್ಯಾಕ್ಟೀರಿಯಾ ನಿವಾರಕ ಗುಣ ಹೊಂದಿದ್ದು ಇದರ ಆಮ್ಲೀಯ ವಾತಾವರಣದಲ್ಲಿ ಮೊಡವೆಗಳಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳು ಬದುಕಲಾರವು. ಇದೇ ಮೊಡವೆಗಳನ್ನು ನಿವಾರಿಸುವ ಗುಟ್ಟು. ಇದರೊಂದಿಗೆ ಉತ್ತಮ ತೇವಕಾರಕ ದೊರೆತರೆ ಮೊಡವೆಗಳು ಕಲೆಯಿಲ್ಲದಂತೆ ನಿವಾರಣೆಯಾಗಲು ಸಾಧ್ಯ. ಜೇನು ಅತ್ಯುತ್ತಮವಾದ ನೈಸರ್ಗಿಕ ತೇವಕಾರಕ ಹಾಗೂ ಇದರಲ್ಲಿಯೂ ಅತಿಸೂಕ್ಷ್ಮಕ್ರಿಮಿ ನಿವಾರಕ ಗುಣವಿದ್ದು ಮೊಡವೆಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

*ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ

*ಒಂದು ದೊಡ್ಡ ಚಮಚ ಜೇನು

*ಒಂದು ದೊಡ್ಡ ಚಮಚ ಗೋಧಿ ಹಿಟ್ಟು (ಮೈದಾ ಬೇಡ)

ಬಳಕೆಯ ವಿಧಾನ:

*ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಚಿಕ್ಕ ಬೋಗುಣಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ

*ಈ ಮಿಶ್ರಣವನ್ನು ಈತತಾನೇ ತೊಳೆದು ಒತ್ತಿ ಒರೆಸಿಕೊಂಡ ಮುಖಕ್ಕೆ ದಪ್ಪನಾಗಿ ಲೇಪಿಸಿ

*ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಒಣಗಲು ಬಿಡಿ

*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

Most Read: ಆಪಲ್ ಸೈಡರ್ ವಿನೆಗರ್‌ನ ಹತ್ತಾರು ಅನುಕೂಲಗಳು...

ಬಿಸಿಲಿನ ಪ್ರಭಾವಕ್ಕೆ ಒಳಗಾದ ತ್ವಚೆಯ ಆರೈಕೆಗೆ

ಸೇಬಿನ ಶಿರ್ಕಾ ಅಲ್ಪ ಆಮ್ಲೀಯವಾಗಿದ್ದು ತ್ವಚೆಯ ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಮಟ್ಟ) ವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಇರದ ಉರಿಯೂತ ನಿವಾರಕ ಗುಣ ಬಿಸಿಲಿಗೆ ಒಡ್ಡಿದ್ದ ತ್ವಚೆಯ ಭಾಗದ ಉರಿ ಮತ್ತು ತುರಿಕೆಯನ್ನು ಇಲ್ಲವಾಗಿಸುವ ಮೂಲಕ ಬಿಸಿಲಿನ ಹೊಡೆತ ಪಡೆದ ತ್ವಚೆಯ ಭಾಗವನ್ನು ಶಮನಗೊಳಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*½ ಕಪ್ ಸೇಬಿನ ಶಿರ್ಕಾ

*4 ಕಪ್ ತಣ್ಣೀರು

ಬಳಕೆಯ ವಿಧಾನ:

*ಇವೆರಡನ್ನೂ ಒಂದು ಚಿಕ್ಕ ಬೋಗುಣಿಯಲ್ಲಿ ಮಿಶ್ರಣ ಮಾಡಿ

*ಸ್ವಚ್ಛ ಬಟ್ಟೆಯೊಂದನ್ನು ಈ ದ್ರವದಲ್ಲಿ ಮುಳುಗಿಸಿ ಹಿಂಡಿ ಒದ್ದೆಯಾಗಿಸಿ.

*ಈ ಬಟ್ಟೆಯನ್ನು ಬಿಸಿಲಿಗೆ ಒಡ್ಡಿದ್ದ ತ್ವಚೆಯ ಭಾಗವನ್ನು ಆವರಿಸುವಂತೆ ಇರಿಸಿ.

*ಇದೇ ರೀತಿ ಉಳಿದ ಭಾಗಗಳಿಗೂ ಇನ್ನಷ್ಟು ಒದ್ದೆಬಟ್ಟೆಗಳಿಂದ ಆವರಿಸಿ

*ಕೆಲವು ನಿಮಿಷಗಳವರೆಗೆ ಇರಿಸಿ ಬಳಿಕ ನಿವಾರಿಸಿ.

*ದಿನವಿಡೀ ನಿಮಗೆ ಸಮಯಾವಕಾಶ ಸಿಕ್ಕಿದಂತೆ ಈ ವಿಧಾನವನ್ನು ಅನುಸರಿಸಿ

*ಅಪೇಕ್ಷಿತ ಪರಿಣಾಮ ಪಡೆಯುವವರೆಗೂ ಮುಂದುವರೆಸಿ.

ವಯಸ್ಸಿನ ಪ್ರಭಾವದಿಂದ ಆವರಿಸಿದ ಕಲೆಗಳನ್ನು ತಿಳಿಗೊಳಿಸಲು

ಸೇಬಿನ ಶಿರ್ಕಾದಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಮ್ಲ ಬಿಸಿಲಿನ ಹೊಡೆತಕ್ಕೆ ಸಿಲುಕಿದ ತ್ವಚೆಯನ್ನು ಸರಿಪಡಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಇದೇ ವೃದ್ದಾಪ್ಯದ ಚಿಹ್ನೆಗಳಾದ ನೆರಿಗೆಗಳು, ತ್ವಚೆಯ ಕಲೆಗಳು ಹಾಗೂ ತ್ವಚೆ ಜೋಲುಬೀಳುವುದನ್ನೂ ತಡೆಯುತ್ತದೆ. ಇದರ ಜೊತೆಗೆ ನೀರುಳ್ಳಿಯ ಆಂಟಿ ಆಕ್ಸಿಡೆಂಟ್ ಗುಣಗಳು ಸೇರಿದರೆ ಇದರಿಂದ ತ್ವಚೆ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದಾಗುವ ಆಘಾತದಿಂದ ರಕ್ಷಿಸಲ್ಪಡುತ್ತದೆ ಹಾಗೂ ತಾಜಾತನ ಪಡೆಯಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*ಒಂದು ಚಿಕ್ಕ ಚಮಚ ಸೇಬಿನ ಶಿರ್ಕಾ

*ಒಂದು ಚಿಕ್ಕ ಚಮಚ ನೀರುಳ್ಳಿಯ ರಸ

ಬಳಕೆಯ ವಿಧಾನ:

*ಎರಡನ್ನೂ ಚಿಕ್ಕ ಬೋಗುಣಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ

*ಕಲೆಯಿರುವ ಭಾಗದ ಮೇಲೆ ತೆಳುವಾಗಿ ಲೇಪಿಸಿ

*ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.

*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

ಬಿರುಕುಬಿಟ್ಟ ಪಾದಗಳಿಗೆ

ಸೇಬಿನ ಶಿರ್ಕಾ ಸೌಮ್ಯ ಆಮ್ಲವಾಗಿದ್ದು ಚರ್ಮಕ್ಕೆ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು, ತನ್ಮೂಲಕ ಚರ್ಮದ ಸೂಕ್ಷ್ಮರಂಧ್ರಗಳು ತೆರೆಯಲ್ಪಟ್ಟು ಆರ್ದ್ರತೆ ಪಡೆಯುವಂತಾಗಲು ಸಾಧ್ಯವಾಗುತ್ತದೆ. ಇದೇ ಗುಣ ಬಿರುಕುಬಿಟ್ಟ ಪಾದಗಳನ್ನು ಗುಣಪಡಿಸಲೂ ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*3-4 ಕಪ್ ತಣ್ಣೀರು

*ಒಂದು ಕಪ್ ಸೇಬಿನ ಶಿರ್ಕಾ

ಬಳಕೆಯ ವಿಧಾನ

*ಎರಡನ್ನೂ ಒಂದು ಅಗಲವಾದ ಬಕೆಟ್ಟಿನಲ್ಲಿ ಹಾಕಿ ಮಿಶ್ರಣ ಮಾಡಿ.

*ಈ ಬಕೆಟ್ಟಿನಲ್ಲಿ ಎರಡೂ ಪಾದಗಳನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಮುಳುಗಿಸಿಡಿ

*ಬಳಿಕ ದೊರಗು ಕಲ್ಲು (pumice stone) ಅಥವಾ ಸತ್ತ ಜೀವಕೋಶಗಳನ್ನು ನಿವಾರಿಸುವ ಸೂಕ್ತ ಸಾಧನವೊಂದನ್ನು ಬಳಸಿ ಉಜ್ಜಿ ಗಡಸು *ಚರ್ಮವನ್ನು ತಿಕ್ಕಿ ತೊಳೆಯಿರಿ.

Most Read: ಈ ಮದ್ಯದಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು

ತ್ವಚೆಯ ಬಣ್ಣ ಸಹಜವರ್ಣ ಪಡೆಯಲು

ಸೇಬಿನ ಶಿರ್ಕಾದಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು ತ್ವಚೆಯನ್ನು ಆದ್ರತೆಯುಕ್ತವಾಗಿರಿಸುವ ಜೊತೆಗೇ ವರ್ಣದ್ರವ್ಯಗಳು ತಿಳಿಗೊಂಡು ಸಹಜವರ್ಣ ಪಡೆಯಲೂ ನೆರವಾಗುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು:

*1 ಚಿಕ್ಕ ಚಮಚ ಸೇಬಿನ ಶಿರ್ಕಾ

*2 ಚಿಕ್ಕ ಚಮಚ ನೀರು

ಬಳಕೆಯ ವಿಧಾನ:

*ಚಿಕ್ಕ ಬೋಗುಣಿಯಲ್ಲಿ ಎರಡನ್ನೂ ಮಿಶ್ರಣ ಮಾಡಿ.

*ಹತ್ತಿಯುಂಡೆಯನ್ನು ಈ ದ್ರವದಲ್ಲಿ ಮುಳುಗಿಸಿ ಹಿಂಡಿ ಮುಖದ ತ್ವಚೆಗೆ ಹಚ್ಚಿಕೊಳ್ಳಿ

*ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ

*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ದೇಹದ ದುರ್ವಾಸನೆ ಇಲ್ಲವಾಗಿಸಲು:

ಸೇಬಿನ ಶಿರ್ಕಾದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ತ್ವಚೆಯಿಂದ ನಿವಾರಿಸಿ ದೇಹವನ್ನು ದುರ್ಗಂಧದಿಂದ ಮುಕ್ತಗೊಳಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*1 ಕಪ್ ಸೇಬಿನ ಶಿರ್ಕಾ

*ಒಂದು ಸ್ನಾನದ ತೊಟ್ಟಿಯ ತುಂಬಾ ತಣ್ಣೀರು.

ಬಳಕೆಯ ವಿಧಾನ

*ನೀವು ಸ್ನಾನ ಮಾಡಲಿರುವ ನೀರಿನ ತೊಟ್ಟಿಯಲ್ಲಿ ಸೇಬಿನ ಶಿರ್ಕಾವನ್ನು ಹಾಕಿ ಮಿಶ್ರಣ ಮಾಡಿ.

*ಈ ನೀರಿನಲ್ಲಿ ಸುಮಾರು ಹತ್ತರಿಂದ ಹದಿನೈದು ನಿಮಿಷವಾದರೂ ದೇಹವನ್ನು ಮುಳುಗಿಸಿಡಿ

*ಬಳಿಕ ದಪ್ಪ ಟವೆಲ್ಲೊಂದನ್ನು ಒತ್ತಿ ಒರೆಸಿಕೊಳ್ಳಿ.

*ಬಳಿಕ ತಣ್ಣೀರನ್ನು ಸುರಿದುಕೊಂಡು ದೇಹವನ್ನು ಸ್ವಚ್ಛಗೊಳಿಸಿಕೊಳ್ಳಿ.

ಮುಖದ ಬ್ಲಾಕ್ ಹೆಡ್ ತೊಂದರೆ ನಿವಾರಿಸಲು

ಸೇಬಿನ ಶಿರ್ಕಾ ಮುಖದ ತ್ವಚೆಯಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಹಾಗೂ ಕೊಳೆಯಿಂದ ಮುಚ್ಚಿದ್ದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸುವ ಮೂಲಕ ತ್ವಚೆಗೆ ಅಗತ್ಯ ಆರೈಕೆ ನೀಡುತ್ತದೆ. ಈ ಮೂಲಕ ಸೂಕ್ಷ್ಮರಂಧ್ರಗಳ ಮೂಲಕ ಒಳನುಸುಳಿದ್ದ ಕೊಳೆ ಸಹಾ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*1 ಚಿಕ್ಕ ಚಮಚ ಸೇಬಿನ ಶಿರ್ಕಾ

*1 ಚಿಕ್ಕ ಚಮಚ ಅಡುಗೆ ಸೋಡಾ

ಬಳಕೆಯ ವಿಧಾನ:

*ಎರಡನ್ನೂ ಕೊಂಚವೇ ನೀರಿನೊಂದಿಗೆ ಬೆರೆಸಿ ದಪ್ಪನೆಯ ಲೇಪವಾಗಿಸಿ

*ಈ ಲೇಪವನ್ನು ಬ್ಲಾಕ್ ಹೆಡ್ ಇರುವ ತ್ವಚೆಯ ಮೇಲೆ ದಪ್ಪನಾಗಿ ಲೇಪಿಸಿ

*ಸುಮಾರು ಅರ್ಧ ಘಂಟೆ ಹಾಗೇ ಬಿಡಿ

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ನಂತರ ಉತ್ತಮ ಗುಣಮಟ್ಟದ ತೇವಕಾರಕ (ಮಾಯಿಶ್ಚರೈಸರ್) ಹಚ್ಚಿಕೊಳ್ಳಿ.

ಉಗುರಿನ ಆರೈಕೆ ಹೆಚ್ಚು ಕಾಲ ಉಳಿಯುವಂತಾಗಲು

ಉಗುರಿಗೆ ಪಡೆದಿದ್ದ ಮ್ಯಾನಿಕ್ಯೂರ್ ಸೇವೆ ಹೆಚ್ಚು ಕಾಲ ಉಳಿಯುವಂತಾಗಲೂ ಸೇಬಿನ ಶಿರ್ಕಾವನ್ನು ಬಳಸಬಹುದು.

ಅಗತ್ಯವಿರುವ ಸಾಮಾಗ್ರಿಗಳು:

*ಅಗತ್ಯವಿರುವಷ್ಟು ಪ್ರಮಾಣದ ಸೇಬಿನ ಶಿರ್ಕಾ

ಬಳಕೆಯ ವಿಧಾನ:

*ಒಂದು ಬೋಗುಣಿಯಲ್ಲಿ ಸೇಬಿನ ಶಿರ್ಕಾ ಸಂಗ್ರಹಿಸಿ

*ಈ ಬೋಗುಣಿಯಲ್ಲಿ ನಿಮ್ಮ ಉಗುರುಗಳನ್ನು ಮುಳುಗಿಸಿ

*ಸುಮಾರು ಐದು ನಿಮಿಷಗಳ ಕಾಲ ಹಾಗೇ ಮುಳುಗಿಸಿಡಿ

*ಬಳಿಕ ಬೆರಳುಗಳನ್ನು ಹೊರತೆಗೆದು ತಾನಾಗಿಯೇ ಒಣಗುವಂತೆ ಮಾಡಿ.

*ಪೂರ್ಣವಾಗಿ ಒಣಗಿದ ಬಳಿಕವೇ ಉಗುರುಗಳ ಮ್ಯಾನಿಕ್ಯೂರ್ ಸೇವೆಯನ್ನು ಪ್ರಾರಂಭಿಸಿ.

ಕೂದಲ ಆರೈಕೆಗಾಗಿ:

*ಕೂದಲನ್ನು ಸ್ವಚ್ಛಗೊಳಿಸಲು

ಕೂದಲನ್ನು ಸ್ವಚ್ಛಗೊಳಿಸಲು ಸೇಬಿನ ಶಿರ್ಕಾ ಉತ್ತಮ ಮಾಧ್ಯಮವಾಗಿದೆ. ಇದರ ಸೌಮ್ಯ ಆಮ್ಲೀಯ ಗುಣ ನೆತ್ತಿಯ ಚರ್ಮದಲ್ಲಿ ಪಿ ಎಚ್ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಹಾಗೂ ಕೂದಲ ಬುಡದಲ್ಲಿ ಸಂಗ್ರಹವಾಗಿದ್ದ ಅಪಾಯಕಾರಿ ರಾಸಾಯನಿಕಗಳನ್ನು ನಿವಾರಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*1 ದೊಡ್ಡ ಚಮಚ ಸೇಬಿನ ಶಿರ್ಕಾ

*1 ಕಪ್ ನೀರು

ಬಳಕೆಯ ವಿಧಾನ:

*ಒಂದು ಬೋಗುಣಿಯಲ್ಲಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.

*ಮೊದಲು ಶಾಂಪೂ ಉಪಯೋಗಿಸಿ ಎಂದಿನಂತೆ ಸ್ನಾನ ಮಾಡಿ.

*ಬಳಿಕ ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ

*ಕೆಲವು ಸೆಕೆಂಡುಗಳ ಕಾಲ ಹಾಗೇ ಬಿಡಿ.

*ಬಳಿಕ ಕೇವಲ ತಣ್ಣೀರಿನ ಮೂಲಕ ಕೂದಲನ್ನು ತೊಳೆದುಕೊಳ್ಳಿ.

ಕೂದಲ ಬೆಳವಣಿಗೆಗಾಗಿ

ತಲೆಯ ಚರ್ಮದಲ್ಲಿ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ಹಾಗೂ ಸ್ವಚ್ಛಗೊಳಿಸಲು ನೆರವಾಗುವ ಮೂಲಕ ಸೇಬಿನ ಶಿರ್ಕಾ ಉತ್ತಮ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಹರಳೆಣ್ಣೆಯಲ್ಲಿರುವ ರಿಸಿನೋಲೀಕ್ ಆಮ್ಲ, ಒಮೆಗಾ -6 ಮತ್ತು 9 ಕೊಬ್ಬಿನ ಆಮ್ಲಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಪ್ರಬಲವಾಗಿದ್ದು ನೆತ್ತಿಯ ಚರ್ಮವನ್ನು ರಕ್ಷಿಸುವ ಜೊತೆಗೇ ಕೂದಲ ಉದುರುವಿಕೆಯನ್ನೂ ತಡೆಯುತ್ತದೆ.ಮೊಟ್ಟೆಯಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನ್ ಕೂದಲ ಬುಡಕ್ಕೆ ಅತ್ಯುತ್ತಮ ಪೋಷಣೆ ಒದಗಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*1 ದೊಡ್ಡ ಚಮಚ ಸೇಬಿನ ಶಿರ್ಕಾ

*1 ಚಿಕ್ಕ ಚಮಚ ಹರಳೆಣ್ಣೆ

*1 ಮೊಟ್ಟೆಯ ಬಿಳಿಭಾಗ

ಬಳಕೆಯ ವಿಧಾನ

*ಒಂದು ಬೋಗುಣಿಯಲ್ಲಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ.

*ಸುಮಾರು ಒಂದು ಘಂಟೆಯ ಕಾಲ ಹಾಗೇ ಬಿಡಿ

*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ತಲೆಹೊಟ್ಟು ನಿವಾರಿಸಲು

ಸೇಬಿನ ಶಿರ್ಕಾದಲ್ಲಿರುವ ಬ್ಯಾಕ್ಟೀರಿಯಾನಿವಾರಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣಗಳು ನೆತ್ತಿಯ ಚರ್ಮ ಒಣಗದಂತೆ ಕಾಪಾಡುತ್ತದೆ ಹಾಗೂ ಆರೋಗ್ಯಕರ ಮತ್ತು ಸ್ವಚ್ಛ, ಆರೋಗ್ಯಕರ ತ್ವಚೆ ಉಳಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಉರಿಯೂತ ನಿವಾರಕ ಗುಣ ತುರಿಕೆಯನ್ನು ಶಮನಗೊಳಿಸಲು ನೆರವಾಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಅತಿಸೂಕ್ಷ್ಮಜೀವಿ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ನೆತ್ತಿಯ ಚರ್ಮವನ್ನು ಸ್ವಚ್ಛಗೊಳಿಸುವ ಜೊತೆಗೇ ತಲೆಹೊಟ್ಟಿನಿಂದಾಗಿದ್ದ ಕಿರಿಕಿರಿಯನ್ನು ನಿವಾರಿಸಿ ತಲೆಹೊಟ್ಟು ಕಳಚಿಕೊಳ್ಳಲು ನೆರವಾಗುತ್ತದೆ. ಜೇನು ನೆತ್ತಿಯ ಚರ್ಮದಲ್ಲಿ ಸಾಕಷ್ಟು ಆರ್ದ್ರತೆ ಉಳಿಯುವಂತೆ ಮಾಡುತ್ತದೆ ಹಾಗೂ ಹೆಚ್ಚಿನ ಪೋಷಣೆ ಒದಗಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*1 ದೊಡ್ಡ ಚಮಚ ಸೇಬಿನ ಶಿರ್ಕಾ

*1 ದೊಡ್ಡ ಚಮಚ ಕೊಬ್ಬರಿ ಎಣ್ಣೆ

*2 ಚಿಕ್ಕ ಚಮಚ ಜೇನು

ಬಳಕೆಯ ವಿಧಾನ

*ಎಲ್ಲವನ್ನೂ ಒಂದು ಬೋಗುಣಿಯಲ್ಲಿ ಮಿಶ್ರಣ ಮಾಡಿ ತಲೆಗೂದಲ ಬುಡಕ್ಕೆ ಹಚ್ಚಿಕೊಳ್ಳಿ.

*ಸುಮಾರು ಹತ್ತು ನಿಮಿಷ ಕಾಲ ಹಾಗೇ ಬಿಡಿ

*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

English summary

Apple Cider Vinegar: Beauty Benefits & How To Use

Apple cider vinegar is widely known mainly for its benefits for the hair. But, did you know apple cider vinegar has a myriad of benefits for your skin as well? This mildly acidic ingredient can do wonders for your beauty. From treating acne and sunburns to treating dandruff, it has a lot of uses that makes it a deserving candidate in your beauty regime. Now, you may be wondering how to use this amazing ingredient in your skincare and haircare routine. Worry not!
X