ಬ್ಯೂಟಿ ಟಿಪ್ಸ್: ಬೇಸಿಗೆಯಲ್ಲಿ ರಾತ್ರಿ ವೇಳೆ ಚರ್ಮದ ಆರೈಕೆ ಹೀಗಿರಲಿ

Posted By: hemanth
Subscribe to Boldsky

ನಿಮ್ಮ ದೇಹವನ್ನು ಸಂಪೂರ್ಣವಾಗಿ ಹಿಂಡಿ ಹಿಪ್ಪೆ ಮಾಡುವಂತಹ ಬೇಸಿಗೆ ಕಾಲ ಬಂದಿದೆ. ಬಿಸಿಲಿನಿಂದಾಗಿ ಚರ್ಮ ಸುಡುವುದು ಬೇಸಿಗೆ ಕಾಲದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇಂತಹ ಸಮಯದಲ್ಲಿ ಚರ್ಮವು ಒಣಗಿ, ನಿಸ್ತೇಜವಾಗಿ ಜೀವವಿಲ್ಲದಂತೆ ಆಗುವುದು. ಇದರಿಂದ ನೀವು ವಯಸ್ಸಾಗುವಂತೆ ಕಾಣುವಿರಿ. ದಿನಪೂರ್ತಿ ಕೆಲಸ ಮಾಡಿ, ಶಾಲೆ ಅಥವಾ ಶಾಪಿಂಗ್ ಮಾಡಿದ ಬಳಿಕ ಮನೆಗೆ ಮರಳಿದರೆ ಒಮ್ಮೆ ಆರಾಮವೆನಿಸುವುದು.

ಆದರೆ ಬಿಸಿ ಹಾಗೂ ಬೆವರಿಗೆ ನಿಮ್ಮ ಚರ್ಮವು ಅದಾಗಲೇ ಸಿಲುಕಿರುವುದು. ನೀವು ಮನೆಯಲ್ಲಿ ಇರುವಾಗ ಚರ್ಮದ ಕೆಲವೊಂದು ಆರೈಕೆ ಮಾಡಿಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಚರ್ಮದ ಕಾಂತಿ ಹಾಗೂ ಸೌಂದರ್ಯ ಕಾಪಾಡಬಹುದು. ಇದಕ್ಕಾಗಿ ನೀವು ರಾತ್ರಿ ವೇಳೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಸಾಕು. ಅದು ಯಾವುದು ಎಂದು ಈ ಲೇಖನದ ಮೂಲಕ ಹೇಳಿಕೊಡಲಿದ್ದೇವೆ...

ಮೇಕಪ್ ತೆಗೆಯಿರಿ

ಮೇಕಪ್ ತೆಗೆಯಿರಿ

ಬೆಳಗ್ಗೆ ಹಾಕಿಕೊಂಡ ಹೋದ ಮೇಕಪ್ ಅನ್ನು ತೆಗೆಯುವುದು ನೀವು ಮನೆಗೆ ಬಂದು ಮಾಡಬೇಕಾದ ಮೊದಲ ಕೆಲಸ. ಮೇಕಪ್ ನ ತುಂಬಾ ತೆಳು ಪದರವನ್ನು ನೀವು ಕಡೆಗಣಿಸಬಾರದು. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಹ ಮೇಕಪ್ ರಿಮೂವರ್ ಬಳಸಿ. ಮೇಕಪ್ ರಿಮೂವರ್ ಮತ್ತು ಸ್ವಚ್ಛಗೊಳಿಸುವ ಬಟ್ಟೆ ನಿಮ್ಮಲ್ಲಿ ಇರಲಿ. ಆದರೆ ನೀವು ಮನೆಯಲ್ಲೇ ತಯಾರಿಸಿದ ಮೇಕಪ್ ರಿಮೂವರ್ ಬಳಸಬಹುದು. ಇದಕ್ಕೆ ಜೇನುತುಪ್ಪ ಬಳಸಿಕೊಳ್ಳಬೇಕು.

ಮೇಕಪ್ ತೆಗೆಯಿರಿ

ಮೇಕಪ್ ತೆಗೆಯಿರಿ

ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಅಂಗೈಯ ನಡುವೆ ಉಜ್ಜಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ. 5-10 ನಿಮಿಷ ಇದು ಹಾಗೆ ಇರಲಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ.

ಮುಖದ ಸ್ವಚ್ಛಗೊಳಿಸುವುದು

ಮುಖದ ಸ್ವಚ್ಛಗೊಳಿಸುವುದು

ನೀವು ಈಗಾಗಲೇ ಜೇನುತುಪ್ಪ ಹಾಕಿಕೊಂಡು ಮೇಕಪ್ ತೆಗೆದು ಮುಖ ಸ್ವಚ್ಛಗೊಳಿಸಲು ಆರಂಭಿಸಿದ್ದೀರಿ. ಆದರೆ ಇದು ಇಲ್ಲಿಗೆ ಅಂತ್ಯವಾಗುವುದಿಲ್ಲ. ನೀವು ಬಿಸಿನೀರು ಮತ್ತು ಕ್ಲೆನ್ಸರ್ ಹಾಕಿ ಮುಖ ತೊಳೆಯಿರಿ.

ಮೊಸರು

ಮೊಸರು

ನೈಸರ್ಗಿಕ ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಮ್ಲ ಹೊಂದಿರುವ ಮೊಸರು ನೈಸರ್ಗಿಕವಾಗಿ ಮುಖವನ್ನು ಸ್ವಚ್ಛಗೊಳಿಸುವುದು. ಚರ್ಮಕ್ಕೆ ನಿಯಮಿತವಾಗಿ ಲ್ಯಾಕ್ಟಿಕ್ ಆಮ್ಲವನ್ನು ಹಚ್ಚುವುದರಿಂದ ಅದು ಸತ್ತ ಚರ್ಮವನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿನ ಪ್ರೋಟೀನ್ ರಂಧ್ರಗಳನ್ನು ಬಿಗಿಗೊಳಿಸುವುದು. ಇದರಿಂದ ಗೆರೆಗಳು ಮೂಡುವುದಿಲ್ಲ ಮತ್ತು ಚರ್ಮವು ತೇವಾಂಶದಿಂದ ಇರುವುದು. ಮೇಕಪ್ ತೆಗೆದ ಬಳಿಕ ನೀವು ಮಲಗುವ ಮೊದಲು ಮುಖಕ್ಕೆ ಮೊಸರನ್ನು ಹಚ್ಚಿಕೊಳ್ಳಿ.

ಸ್ಕ್ರಬ್ ಮಾಡಿ

ಸ್ಕ್ರಬ್ ಮಾಡಿ

ಸತ್ತ ಚರ್ಮವನ್ನು ತೆಗೆದುಹಾಕಬೇಕೆಂದಿದ್ದರೆ ಆಗ ವಾರದಲ್ಲಿ ಎರಡು ಸಲ ಹಗುರವಾದ ಸ್ಕ್ರಬರ್ ಬಳಸಿ ಹೀಗೆ ಮಾಡಿ. ತಾಜಾ, ಸುಂದರ ತ್ವಚೆ ಬೇಕಾದರೆ ನೀವು ಮೇಲ್ಭಾಗದಲ್ಲಿರುವ ಸತ್ತ ಚರ್ಮ ತೆಗೆಯಬೇಕು. ಗಲ್ಲದಲ್ಲಿರುವ ರಂಧ್ರಗಳ ಕಡೆ ಗಮನಹರಿಸಿ ಮತ್ತು ಮೂಗಿನಲ್ಲಿರುವ ಕಪ್ಪು ಕಲೆಗಳ ಮೇಲೆ ಸ್ಕ್ರಬ್ ಮಾಡಿ. ಆದರೆ ಅತಿಯಾಗಿ ಸ್ಕ್ರಬ್ ಮಾಡಿದರೆ ಅದರಿಂದ ಚರ್ಮವು ಒಣಗುವುದು.

ತೆಂಗಿನೆಣ್ಣೆ ಮತ್ತು ಸಕ್ಕರೆ ಸ್ಕ್ರಬ್

ತೆಂಗಿನೆಣ್ಣೆ ಮತ್ತು ಸಕ್ಕರೆ ಸ್ಕ್ರಬ್

ತೆಂಗಿನೆಣ್ಣೆಯು ನಿಮ್ಮ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು. ಇದರಿಂದ ಚರ್ಮವು ತುಂಬಾ ನಯವಾಗಿರುವುದು. ಒಂದು ಪಿಂಗಾಣಿಗೆ ಮೂರು ಚಮಚ ತೆಂಗಿನೆಣ್ಣೆ, ಎರಡು ಚಮಚ ಜೇನುತುಪ್ಪ ಮತ್ತು ಮೂರು ಚಮಚ ಸಕ್ಕರೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಮಿಶ್ರಣವು ಹೆಚ್ಚು ಒಣಗಿದ್ದರೆ ಸಕ್ಕರೆ ಹಾಕಿ. ಒದ್ದೆಯಾಗಿದ್ದರೆ ತೆಂಗಿನೆಣ್ಣೆ ಹಾಕಿ. ನಿಧಾನವಾಗಿ ಮುಖದ ಮೇಲೆ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ಮುಖ ತೊಳೆಯಿರಿ.

ಟೋನರ್

ಟೋನರ್

ಸ್ಕ್ರಬ್ ಮಾಡಿಕೊಂಡ ಬಳಿಕ ಚರ್ಮದಲ್ಲಿ ಪಿಎಚ್ ಮಟ್ಟ ಕಾಪಾಡಿಕೊಳ್ಳಲು ನೀವು ಟೋನರ್ ಬಳಸಬೇಕು. ಹತ್ತಿ ಉಂಡೆಯನ್ನು ಒದ್ದೆ ಮಾಡಿಕೊಂಡು ಮುಖ ಹಾಗೂ ಕುತ್ತಿಗೆಗೆ ನಿಧಾನವಾಗಿ ಒತ್ತಿಕೊಳ್ಳಿ.

 ಅಲೋವೆರಾ ಟೋನರ್

ಅಲೋವೆರಾ ಟೋನರ್

ಅಲೋವೆರಾದ ಲೋಳೆ ತೆಗೆದುಕೊಳ್ಳಿ. ಎರಡು ಚಮಚ ಅಲೋವೆರಾ ಲೋಳೆಗೆ ಒಂದು ಕಪ್ ತಣ್ಣಗಿನ ನೀರು ಹಾಕಿಕೊಳ್ಳಿ. ಹತ್ತಿ ಉಂಡೆ ಬಳಸಿಕೊಂಡು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಬಿಸಿಲಿನಿಂದ ಆಗಿರುವ ಸುಟ್ಟಗಾಯ ಮತ್ತು ಗಾಯಕ್ಕೆ ಶಮನ ನೀಡುವುದು.

ಮಾಯಿಶ್ಚರೈಸರ್ ಹಚ್ಚಿ

ಮಾಯಿಶ್ಚರೈಸರ್ ಹಚ್ಚಿ

ಮೇಕಪ್ ಹಾಕಿ ಅಥವಾ ಹಾಕದೇ ಇರಲಿ, ಮೊಶ್ಚಿರೈಸರ್ ಹಚ್ಚಿಕೊಳ್ಳುವುದು ಅತೀ ಅಗತ್ಯ. ಸಾಮಾನ್ಯ ಮೊಶ್ಚಿರೈಸರ್ ಹಚ್ಚಿಕೊಂಡು ಅದನ್ನು ಮುಖಕ್ಕೆ ಒತ್ತಿಕೊಳ್ಳಿ. ಇದರಿಂದ ಚರ್ಮವು ಅದನ್ನು ಸರಿಯಾಗಿ ಹೀರಿಕೊಳ್ಳುವುದು. ತುಟಿಗಳಿಗೆ ಮೊಶ್ಚಿರೈಸ್ ಮಾಡಲು ಸಾಮಾನ್ಯ ಲಿಪ್ ಮಲಾಮ್ ಬಳಸಬಹುದು. ಕೈ, ಗಂಟುಗಳು, ಮೊಣಕೈ, ಪಾದಗಳಿಗೆ ಮೊಶ್ಚಿರೈಸರ್ ಹಚ್ಚಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಿ.

 ಕೂದಲು ಬಾಚಿಕೊಳ್ಳಿ

ಕೂದಲು ಬಾಚಿಕೊಳ್ಳಿ

ಬಿಡಿಬಿಡಿಯಾಗಿರುವ ಕೂದಲು ಬೆಳಗ್ಗೆ ಏಳುವಾಗ ಬೇಡವೆಂದಾದರೆ ನೀವು ರಾತ್ರಿ ಕೂದಲು ಬಾಚಿಕೊಳ್ಳಬೇಕು. ಕೂದಲನ್ನು ಸುತ್ತುಹಾಕಿಕೊಂಡು ಅದರಿಂದಿಲೇ ಕಟ್ಟಿಕೊಳ್ಳಬೇಡಿ. ಇದರಿಂದ ಕೂದಲು ತುಂಡಾಗುವ ಸಾಧ್ಯತೆಯು ಹೆಚ್ಚಾಗುವುದು.

ಬೆನ್ನ ಮೇಲೆ ಮಲಗಿ

ಬೆನ್ನ ಮೇಲೆ ಮಲಗಿ

ತಲೆದಿಂಬಿಗೆ ಮುಖ ಹಾಕಿಕೊಂಡು ಮಲಗಿದರೆ ಅದರಿಂದ ನೆರಿಗೆಗಳು ಮೂಡುವುದು ಸಾಮಾನ್ಯ. ಇದನ್ನು ತಡೆಯಲು ನೀವು ಯಾವಾಗಲೂ ಬೆನ್ನ ಮೇಲೆ ಮಲಗಿಕೊಳ್ಳಿ. ಯಾವಾಗಲೂ ಬೆನ್ನ ಮೇಲೆ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮುಖದಲ್ಲಿ ನೆರಿಗೆ ಮೂಡುವುದು ಕಡಿಮೆಯಾಗುವುದು. ಇಷ್ಟು ಮಾತ್ರವಲ್ಲದೆ ಮುಖದಲ್ಲಿ ಮೊಡವೆ ಕೂಡ ಮೂಡುವುದಿಲ್ಲ.

English summary

Summer Skin Carte Routine For Night

Worried of taking care of your skin under the scorching sun? Summer time is the crucial season where your skin needs a proper care. Summer can make your skin look dull, dry and lifeless. Here are some important summer skin care skin tips that you should follow for the night.
Story first published: Sunday, April 1, 2018, 7:01 [IST]